(1) ರಿಜಿಸ್ಟ್ರಾರರವರು ಪ್ರಾಧಿಕಾರದ ದಾಖಲೆಗಳನ್ನು ಮತ್ತು ಸಾಮಾನ್ಯ ಮೊಹರನ್ನು ಯಥೋಚಿತವಾಗಿ ತನ್ನ ವಶದಲ್ಲಿರಿಸಿಕೊಳ್ಳಲು ಜವಾಬ್ದಾ ರನಾಗಿರತಕ್ಕದ್ದು. ಆತನು ಕಾರ್ಯನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು. ಆತನು ವ್ಯವಹಾರಗಳ ಕಾರ್ಯನಿರ್ವಹಣೆಗೆ ಅಗತ್ಯವಾಗಬಹುದಾದಂತೆ ಅಂತಹ ಎಲ್ಲಾ ಮಾಹಿತಿಯನ್ನು ಪ್ರಾಧಿಕಾರದ ಮತ್ತು ಕಾರ್ಯನಿರ್ವಹಣಾ ಸಮಿತಿಯ ಮುಂದೆ ಮಂಡಿಸತಕ್ಕದ್ದು.
(2) ಆತನು ಅಗತ್ಯಪಡಿಸಲಾದಂತೆ ಎಲ್ಲಾ ಕೋರ್ಸುಗಳ, ಪಠ್ಯಕ್ರಮಗಳ ಮತ್ತು ಇತರ ಮಾಹಿತಿಯ ಶಾಶ್ವತ ದಾಖಲೆಯನ್ನು ನಿರ್ವಹಿಸತಕ್ಕದ್ದು.
(3) ಆತನು ಪ್ರಾಧಿಕಾರವು ಅಥವಾ ಕಾರ್ಯನಿರ್ವಾಹಣಾ ಅಧಿಕಾರಿಯು ಗೊತ್ತುಪಡಿಸಬಹುದಾದಂತಹ ಇತರ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.
(4) ಆತನು ಸಂಲಗ್ನತೆ ಹೊಂದಿರುವ ಎಲ್ಲಾ ಶಾಲೆಗಳು/ಕಾಲೇಜುಗಳಲ್ಲಿ ನಿಯಮಿತ/ಅಚ್ಚರಿ ಣೆಯನ್ನು ನಡೆಸಲು ಜವಾಬ್ದಾ ಪರಿವೀಕ್ಷ ರನಾಗಿರತಕ್ಕದ್ದು.
(5) ಆತನು ಪ್ರಾಧಿಕಾರ ರಚನೆಯನ್ನು ಧ್ಯೇಯೋದ್ದೇಶವನ್ನು ಅನುಷ್ಠಾನಗೊಳಿಸುವುದಕ್ಕೆ ಜವಾಬ್ದಾರನಾಗಿರತಕ್ಕದ್ದು.
(6) ಆತನು ಪ್ರಾಧಿಕಾರದ ಅಡಿಯಲ್ಲಿ ಬರುವ ಘಟಕ ಶಾಲೆ/ಕಾಲೇಜುಗಳ ಸಂಲಗ್ನತೆ, ದಾಖಲಾತಿ ಮತ್ತು ಅನು ಮೋದನೆ ಮತ್ತು ಇತರ ಸಂಬಂಧಿತ ಕೆಲಸಗಳಿಗೆ ಜವಾಬ್ದಾ ರನಾಗಿರತಕ್ಕದ್ದು.
(7) ಆತನು ಕಾರ್ಯನಿರ್ವಹಣಾ ನಿರ್ದೇಶಕರ ನಿರ್ದೇಶನದಡಿಯ ಲ್ಲಿ ಅರೆವೈದ್ಯಕೀಯ ಮತ್ತು ನರ್ಸಿಂಗ್ ಕೌನ್ಸಿಲಿಂಗನ್ನು ನಡೆಸಲು ಜವಾಬ್ದಾ ರನಾಗಿರತಕ್ಕದ್ದು.