ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಅಧಿನಿಯಮ'' ಎಂದರೆ 1 [ಕರ್ನಾಟಕ ನೀರಾವರಿ ಅಧಿನಿಯಮ, 1965 (1965ರ ಕರ್ನಾಟಕ ಅಧಿನಿಯಮ 16);
(ಬಿ) ‘‘ಕಾರ್ಯನಿರ್ವಾಹಕ ಇಂಜಿನಿಯರ್'' ಎಂದರೆ ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್;
(ಸಿ) ‘‘ನಮೂನೆ'' ಎಂದರೆ ಈ ನಿಯಮಗಳಿಗೆ ಅನುಬಂಧಿಸಲಾದ ನಮೂನೆ ;
(ಡಿ) ‘‘ಬೃಹತ್ ನೀರಾವರಿ ಕಾಮಗಾರಿ'' ಎಂದರೆ ಐದು ಕೋಟಿಗಿಂತಲೂ ಹೆಚ್ಚು ವೆಚ್ಚದ ನೀರಾವರಿ ಕಾಮಗಾರಿ;
(ಇ) ‘‘ಹೊರ ಗಂಡಿ'' ಎಂದರೆ ಒಂದು ಕೆರೆ, ಕಾಲುವೆ, ಶಾಖಾ ಕಾಲುವೆ, ಕಾಲುವೆ ಅಥವಾ ನೀರಿನ ಹರಿವು ಹೊಲ-ಕಾಲುವೆಗೆ ನೀರು ಹರಿದುಬರುವ ಕಂಡಿ ;
(ಎಫ್) ‘‘ಪ್ರಕರಣ'' ಎಂದರೆ ಈ ಅಧಿನಿಯಮದ ಪ್ರಕರಣ;
(ಜಿ) ‘‘ಶಾಖಾಧಿಕಾರಿ'' ಎಂದರೆ ಸಹಾಯಕ ಇಂಜಿನಿಯರ್ ಅವರಿಗೆ ಅಧೀನನಾಗಿರುವ ಮತ್ತು ನೀರಾವರಿ ಕಾಮಗಾರಿಗಳ ಪ್ರಭಾರದಲ್ಲಿರುವ ಜೂನಿಯರ್ ಇಂಜಿನಿಯರ್ ಅಥವಾ ಸೂಪರ್ವೈಸರ್ ದರ್ಜೆಯ ಲೋಕೋಪಯೋಗಿ ಇಲಾಖೆಯ ಒಬ್ಬ ಅಧಿಕಾರಿ;
(ಎಚ್) ‘‘ಬಾವಿ'' ಎಂದರೆ, ನೀರಿನ ಮೇಲ್ಮೈ ಹರಿವನ್ನು ಪಲ್ಲಟಗೊಳಿಸುವ ಮತ್ತು ಸಂಗ್ರಹಿಸುವ ಉದ್ದೇಶಕ್ಕಾಗಿ, ಅಂತರ್ಜಲ ಮೂಲದ ನೀರನ್ನು ಮೇಲೆತ್ತುವ ಉದ್ದೇಶಕ್ಕಾಗಿ ನಿರ್ಮಿಸಲಾದ ಒಂದು ರಚನೆ.