(1) ಒಂದು ಜಲಾಶಯ, ಕೆರೆ, ಅಣೆಕಟ್ಟು, [XXX ಭಾಂದಾರ, ಕೊಳ, ಚಿಲುಮೆ ಕೊಳ, ಕಾಲುವೆ, 1 ತಲಪರಿಗೆ, ನಾಲೆ ಅಥವಾ ಮೇಲು ಕಾಲುವೆ, ಇವುಗಳನ್ನು ನಿರ್ಮಿಸಲು, ನಿಯಂತ್ರಿಸಲು ಅಥವಾ ನಿರ್ವಹಿsಸಲು ಇಚ್ಫಿಸುವ ಯಾರೇ ವ್ಯಕ್ತಿಯು, ಸಂಬಂಧಪಟ್ಟ ಪ್ರದೇಶದಲ್ಲಿನ ನೀರಾವರಿ ಕಾಮಗಾರಿಗಳ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರ್ಯನಿರ್ವಾಹಕ ಇಂಜಿನಿಯರ್ ಮುಖಾಂತರ ಮಂಜೂರಾತಿಗಾಗಿ ರಾಜ್ಯಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 272, ದಿನಾಂಕ 7ನೇ ಸೆಪ್ಟೆಂಬರ್, 1971 ಮೂಲಕ ಬಿಟ್ಟುಬಿಡಲಾಗಿದೆ. (2) (1)ನೇ ಉಪನಿಯಮದ ಅಡಿಯಲ್ಲಿ ಕಾಂiರ್iನಿರ್ವಾಹಕ ಇಂಜಿನಿಯರು ಸ್ವೀಕರಿಸಿದ ಪ್ರತಿಯೊಂದು ಅರ್ಜಿಯನ್ನು, ಅದನ್ನು ಸ್ವೀಕರಿಸಿದ ತರುವಾಯ ಸಾಧ್ಯವಾದಷ್ಟು ಬೇಗನೆ, ತನ್ನ ಶಿಫಾರಸುಗಳೊಂದಿಗೆ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.
(3) (2)ನೇ ಉಪನಿಯಮದ ಅಡಿಯಲ್ಲಿ ಅರ್ಜಿಯನ್ನು ಸ್ವೀಕರಿಸಿದ ಮೇಲೆ ರಾಜ್ಯ ಸರ್ಕಾರವು, ಅರ್ಜಿದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಸೂಕ್ತ ಅವಕಾಶವನ್ನು ಕೊಟ್ಟ ತರುವಾಯ, ಆ ಬಗ್ಗೆ ತಾನು ಯುಕ್ತವೆಂದು ಭಾವಿಸುವ ಆದೇಶಗಳನ್ನು ಹೊರಡಿಸಬಹುದು.