17ನೇ ಪ್ರಕರಣದ ಮೇರೆಗೆ ಹಾಕಬೇಕಾದ ಎಲ್ಲೆ ಗುರುತುಗಳನ್ನು 15.24 ಸೆ.ಮಿ x 15.24 ಸೆ.ಮಿ x 76.2 ಸೆ.ಮಿ (6' x 6'x 2 1/2) ದಪ್ಪದ ಕಲ್ಲಿನಲ್ಲಿ ಅಥವಾ ಕಾಂಕ್ರೀಟ್ ಬ್ಲಾಕಿನಲ್ಲಿ ಮಾಡಿರತಕ್ಕದ್ದು ಮತ್ತು ಹೊಲ ಕಾಲುವೆಯ ನಿರ್ಮಾಣಕ್ಕಾಗಿ ಇರುವ ಜಮೀನು, ಯಾವ ಜಮೀನಿನ ಸರ್ವೆ ನಂಬರ್ ಅಥವಾ ಸರ್ವೆ ನಂಬರ್ನ ಉಪ ಭಾಗಗಳ ಮೇಲೆ ಹಾಯ್ದು ಹೋಗುವುದೋ ಆ ಪ್ರತಿಯೊಂದು ಮೂಲೆಯಲ್ಲಿ ಮತ್ತು ನೀರಾವರಿ ಅಧಿಕಾರಿಯು ಅಗತ್ಯವೆಂದು ಭಾವಿಸಬಹುದಾದಂಥ ಇತರೆ ಸ್ಥಳಗಳಲ್ಲಿ ಸದರಿ ಗುರುತುಗಳನ್ನು ಮಾಡತಕ್ಕದ್ದು.
Loading…