ಹೊಲ-ಕಾಲುವೆಯ ನೀರನ್ನು ಬಳಸಿಕೊಳ್ಳಲು ಹಕ್ಕುದಾರನಾದ ಪ್ರತಿಯೊಬ್ಬ ಹೊಲ-ಕಾಲುವೆಯ ಬಳಕೆದಾರನು ಅನುಸರಿಸಬೇಕಾದ ನಿಬಂಧನೆಗಳು ಈ ಮುಂದಿನಂತಿರತಕ್ಕದ್ದು,-
(i) ಸರ್ವೆ ನಂಬರಿನಲ್ಲಿರುವ ಅಥವಾ ಸರ್ವೆ ನಂಬರಿನ ಉಪ-ವಿಭಾಗದಲ್ಲಿನ ಜಮೀನಿನ ಯಾವುದೇ ಭಾಗದ ನೀರಾವರಿಗಾಗಿ ಅಗತ್ಯವಾದ ನೀರನ್ನು ಹೊಲ-ಕಾಲುವೆಯಿಂದ ನೇರವಾಗಿ ಒದಗಿಸುವುದು ಸಾಧ್ಯವಾಗುವಂತೆ ನೀರು ಕಾಲುವೆಯ ಸೂಕ್ತ ವ್ಯವಸ್ಥೆಯನ್ನು ಮಾಡತಕ್ಕದ್ದು;
(ii) ನೀರಾವರಿ ಅಧಿಕಾರಿಯು, ನಿಗದಿ ಮಾಡಿದ ಸ್ಥಳದ ಹೊರತಾಗಿ ಬೇರೆಡೆಯಿಂದ ಹೊಲ-ಕಾಲುವೆಯ ನೀರನ್ನು ತೆಗೆದುಕೊಳ್ಳತಕ್ಕದ್ದಲ್ಲ;
(iii) ಹೊಲ-ಕಾಲುವೆಯಿಂದ ಬೇರೆ ಬೇರೆ ಜಮೀನುಗಳಿಗೆ ಯಾವ ಕ್ರಮದಲ್ಲಿ ನೀರನ್ನು ಒದಗಿಸಬೇಕೆಂಬುದನ್ನು ನೀರಾವರಿ ಅಧಿಕಾರಿಯು ನಿರ್ಧರಿಸತಕ್ಕದ್ದು.
1 1 1 [XXX] [13. ಇತರೆ ವ್ಯಕ್ತಿಗಳು ಹೊಲ-ಕಾಲುವೆಯನ್ನು ಬಳಸಿಕೊಳ್ಳಲು ವ್ಯವಸ್ಥೆ.-
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 272, ದಿನಾಂಕ 7ನೇ ಸೆಪ್ಟೆಂಬರ್, 1971ರ ಮೂಲಕ ಬಿಟ್ಟುಬಿಡಲಾಗಿದೆ. 14. 24ನೇ ಪ್ರಕರಣದ ಅಡಿಯಲ್ಲಿ ನೋಟೀಸು.- 24ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ನೀಡಬೇಕಾದ ನೋಟೀಸು, ನಮೂನೆ13 ರಲ್ಲಿರತಕ್ಕದ್ದು. 1 1 1 [15. 25ನೇ ಪ್ರಕರಣದ ಅಡಿಯಲ್ಲಿ ವಿಚಾರಣೆ.- [XXX] 1. ಅಧಿಸೂಚನೆ ಸಂಖ್ಯೆ ಜಿಎಸ್ಆರ್ 272, ದಿನಾಂಕ 7ನೇ ಸೆಪ್ಟೆಂಬರ್, 1971ರ ಮೂಲಕ ಬಿಟ್ಟುಬಿಡಲಾಗಿದೆ. 16. 27ನೇ ಪ್ರಕರಣದ ಅಡಿಯಲ್ಲಿ ಸಮಾಲೋಚನಾ ಸಮಿತಿಗಳ ರಚನೆ.- (1) ಬೃಹತ್ ನೀರಾವರಿಗೆ ಸಂಬಂಧಪಟ್ಟ ಸಮಾಲೋಚನಾ ಸಮಿತಿಯಲ್ಲಿ ಏಳು ಅಧಿಕಾರಿ ಸದಸ್ಯರು ಮತ್ತು ಎಂಟು ಅಧಿಕಾರೇತರ ಸದಸ್ಯರು ಇರತಕ್ಕದ್ದು ಮತ್ತು ರಾಜ್ಯ ಸರ್ಕಾರವು ಸಮಿತಿಯ ಅಧ್ಯಕ್ಷನಾಗಿ ಒಬ್ಬ ಸದಸ್ಯನನ್ನು ನಾಮನಿರ್ದೇಶನ ಮಾಡತಕ್ಕದ್ದು.
(2) ಬೃಹತ್ ನೀರಾವರಿ ಕಾಮಗಾರಿಯ ಹೊರತುಪಡಿಸಿ, ಇತರೆ ನೀರಾವರಿ ಕಾಮಗಾರಿಗೆ ಸಂಬಂಧಪಟ್ಟ ಸಮಾಲೋಚನಾ ಸಮಿತಿಯಲ್ಲಿ ನಾಲ್ಕು ಅಧಿಕಾರೀ ಸದಸ್ಯರು ಮತ್ತು 1 [ಏಳು ಜನ ಅಧಿಕಾರೇತರ ಸದಸ್ಯರು ಇರತಕ್ಕದ್ದು ಮತ್ತು ರಾಜ್ಯ ಸರ್ಕಾರವು ನಿರ್ದೇಶಿಸಿದ ಒಬ್ಬ ಸದಸ್ಯನು ಸಮಿತಿಯ ಅಧ್ಯಕ್ಷನಾಗಿರತಕ್ಕದ್ದು. 1. ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 85 ಎಲ್ಬಿಡಬ್ಲ್ಯೂ 73, ದಿನಾಂಕ 18ನೇ ಮೇ, 1974ರ ಮೂಲಕ ಪ್ರತಿಯೋಜಿಸಲಾಗಿದೆ. 17. ನೀರಾವರಿ ಕಾಮಗಾರಿಗಳಿಂದ ನೀರನ್ನು ಉಪಯೋಗಿಸಲು ಅನುಮತಿ ಕೋರಿ ಅರ್ಜಿ.- 28ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ನೀರಾವರಿ ಕಾಮಗಾರಿಯಿಂದ ನೀರನ್ನು ಉಪಯೋಗಿಸಲು ಅನುಮತಿ ಕೋರಿ ಸಲ್ಲಿಸುವ ಅರ್ಜಿಯು, ನಮೂನೆ 14 ರಲ್ಲಿರತಕ್ಕದ್ದು. 1 [17ಎ. 28ನೇ ಪ್ರಕರಣದ (5)ನೇ ಉಪಪ್ರಕರಣದ ಉದ್ದೇಶಕ್ಕಾಗಿ ನಿಯಮಿಸಲಾದ ಅಧಿಕಾರಿ.- 28ನೇ ಪ್ರಕರಣದ (5) ನೇ ಉಪಪ್ರಕರಣದ ಉದ್ದೇಶಕ್ಕಾಗಿ ನಿಯಮಿಸಲಾದ ಅಧಿಕಾರಿಯು, ಸಂಬಂಧಪಟ್ಟ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 6 ಎಲ್ಬಿಡಬ್ಲ್ಯೂ 66 (ಭಾಗ - II) ಜಿಎಸ್ಆರ್ 32, ದಿನಾಂಕ 19ನೇ ಫೆಬ್ರವರಿ, 1968ರ ಮೂಲಕ ಸೇರಿಸಲಾಗಿದೆ. 1 [17ಬಿ. ನೈಸರ್ಗಿಕ ತೊರೆಯಿಂದ ನೀರನ್ನು ಉಪಯೋಗಿಸಲು ಅನುಮತಿ ಕೋರಿ ಅರ್ಜಿ.- ನೈಸರ್ಗಿಕ ತೊರೆಯಿಂದ ನೀರನ್ನು ಉಪಯೋಗಿಸಲು ಅನುಮತಿ ಕೋರಿ ಸಲ್ಲಿಸುವ ಅರ್ಜಿಯು, ನಮೂನೆ15 ರಲ್ಲಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 41 ಎಲ್ಬಿಡಬ್ಲ್ಯೂ 70, ದಿನಾಂಕ 25ನೇ ಜನವರಿ, 1973ರ ಮೂಲಕ ಸೇರಿಸಲಾಗಿದೆ. 18. 29ನೇ ಪ್ರಕರಣದ ಉದ್ದೇಶಗಳಿಗಾಗಿ ಸಕ್ಷಮ ಪ್ರಾಧಿಕಾರ.- 29ನೇ ಪ್ರಕರಣದ (ಎ) ಖಂಡದ ಉದ್ದೇಶಗಳಿಗಾಗಿ ಕಾಮಗಾರಿಯ ಪ್ರಭಾರದಲ್ಲಿರುವ ಸೂಪರಿಂಟೆಂಡೆಂಟ್ ಇಂಜಿನಿಯರ್, ಬೃಹತ್ ನೀರಾವರಿ ಕಾಮಗಾರಿಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರವಾಗಿರತಕ್ಕದ್ದು ಮತ್ತು ಬೃಹತ್ ನೀರಾವರಿ ಕಾಮಗಾರಿಯನ್ನು ಹೊರತುಪಡಿಸಿ ಇತರೆ ಕಾಮಗಾರಿಗೆ ಸಂಬಂಧಪಟ್ಟಂತೆ ಕಾಮಗಾರಿಯ ಪ್ರಭಾರದಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್ರವರು, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರವಾಗಿರತಕ್ಕದ್ದು.
- ಸಾಗುವಳಿಯ ವಿನಿಯಮನ.- (1) 31ನೇ ಪ್ರಕರಣದ (1) ನೇ ಉಪ ಪ್ರಕರಣದ ಅಡಿಯಲ್ಲಿಯ ಆದೇಶವನ್ನು ನೀರಾವರಿ ಅಧಿಕಾರಿಯ ಕಛೇರಿಯ ಸೂಚನಾ ಫಲಕದ ಮೇಲೆ ಅಂಥ ಆದೇಶದ ಪ್ರತಿಯನ್ನು ಅಂಟಿಸುವ ಮತ್ತು ತಾಲ್ಲೂಕಿನ ತಹಶೀಲ್ದಾರ್ ಕಛೇರಿಯ ಸೂಚನಾ ಫಲಕದ ಮೇಲೆ ಅಂಥ ಆದೇಶದ ಪ್ರತಿಯನ್ನು ಅಂಟಿಸುವಂತೆ ಮಾಡುವ ಮತ್ತು ಸಂಬಂಧಪಟ್ಟ ಗ್ರಾಮಗಳ ಚಾವಡಿಯಲ್ಲಿ ಅದನ್ನು ಅಂಟಿಸುವ ಮೂಲಕ ಪ್ರಕಟಿಸತಕ್ಕದ್ದು. (2) ನೀರಾವರಿ ಅಧಿಕಾರಿಯು, ಯಾವುದೇ ನೀರಾವರಿಯಾಗುವ ಯಾವುದೇ ಪ್ರದೇಶದಲ್ಲಿ, 31ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಬೆಳೆ ಅಥವಾ ಬೆಳೆಗಳ ಸಾಗುವಳಿಗಾಗಿ ಬೀಜ ಬಿತ್ತನೆ ಕಾರ್ಯಗಳು ಪ್ರಾರಂಭವಾಗುವುದಕ್ಕೆ ಮುಂಚೆ, ಎರಡು ತಿಂಗಳೊಳಗೆ, ಯಾವುದೇ ವರ್ಷದಲ್ಲಿ ಅಂಥ ಬೆಳೆ ಮತ್ತು ಬೆಳೆಗಳ ಸಾಗುವಳಿಗಾಗಿ ಪ್ರದೇಶವನ್ನು ಅಥವಾ ಜಮೀನುಗಳನ್ನು ನಿರ್ಧರಿಸತಕ್ಕದ್ದು.
1 [19ಎ. 32ನೇ ಪ್ರಕರಣದ (2)ನೇ ಉಪಪ್ರಕರಣದ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆಯ ಪ್ರಕಟಣೆಯ ವಿಧಾನ.- (1) 2 [32ನೇ ಪ್ರಕರಣದ (2)ನೇ ಉಪಪ್ರಕರಣದ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆಯು ನಮೂನೆ 16 ರಲ್ಲಿರತಕ್ಕದ್ದು ಮತ್ತು ಅದನ್ನು ನೀರಾವರಿ ಅಧಿಕಾರಿಯ ಕಛೇರಿಯ ಸೂಚನಾ ಫಲಕದ ಮೇಲೆ ಅಂಥ ಅಧಿಸೂಚನೆಯ ಪ್ರತಿಯನ್ನು ಅಂಟಿಸುವ ಮತ್ತು ತಾಲೂಕಿನ ತಹಶೀಲ್ದಾರ್ ಕಛೇರಿಯ ಸೂಚನಾ ಫಲಕದ ಮೇಲೆ ಅಂಟಿಸುವಂತೆ ಮಾಡುವ ಮತ್ತು ಸಂಬಂಧಪಟ್ಟ ಗ್ರಾಮಗಳ ಚಾವಡಿಗಳಲ್ಲಿ ಅದನ್ನು ಅಂಟಿಸುವ ಮೂಲಕ ಪ್ರಕಟಿಸತಕ್ಕದ್ದು.
(2) ಸಾಗುವಳಿ ಕಾರ್ಯಗಳು, ಬೀಜ ಬಿತ್ತುವ ಮತ್ತು ಸಸಿ ನೆಡುವ ಕಾರ್ಯಗಳು ಪ್ರಾರಂಭವಾಗುವುದಕ್ಕೆ ಮೊದಲು ಎರಡು ತಿಂಗಳೊಳಗೆ (1)ನೇ ಉಪನಿಯಮದಲ್ಲಿ ಉಲ್ಲೇಖಿಸಲಾದ ಅಧಿಸೂಚನೆಯನ್ನು, ಅದರಲ್ಲಿ ನಿರ್ದಿಷ್ಟಪಡಿಸಿದ ಬೆಳೆಗಳ ವಿಧಗಳನ್ನು ಪ್ರಕಟಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 74, ಎಲ್ಬಿಡಬ್ಲ್ಯೂ 71, ದಿನಾಂಕ 28ನೇ ಮೇ, 1973 (ಜಿಎಸ್ಆರ್ 149)ರ ಮೂಲಕ ಸೇರಿಸಲಾಗಿದೆ.
- ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 170, ಎಲ್ಬಿಡಬ್ಲ್ಯೂ 77, ದಿನಾಂಕ 28ನೇ ಜೂನ್, 1978 (ಜಿಎಸ್ಆರ್ 272)ರ ಮೂಲಕ ಪ್ರತಿಯೋಜಿಸಲಾಗಿದೆ.
- ತುರ್ತು ಕಾಮಗಾರಿಗಳು, ದುರಸ್ತಿ, ಇತ್ಯಾದಿಗಳಿಗಾಗಿ ಅಗತ್ಯಬೀಳಬಹುದಾದಂಥ ದೃಢಕಾಯದ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸುವುದು.- (1) ತಾಲೂಕಿನ ತಹಶೀಲ್ದಾರರು, ಕಾಲಕಾಲಕ್ಕೆ ಯಾವುದೇ ನೀರಾವರಿ ಕಾಮಗಾರಿಯು ನಡೆಯುತ್ತಿರುವಲ್ಲಿ, 40ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ಯಾವುದೇ ಕಾಮಗಾರಿಯ ದುರಸ್ತಿಗೆ ಅಥವಾ ಪೂರ್ಣಗೊಳಿಸುವುದಕ್ಕೆ ಸಂಬಂಧಪಟ್ಟಂತೆ ಕೆಲಸದ ನಿರ್ವಹಣೆಯಲ್ಲಿ ನೆರವಾಗಲು ಆ ಸ್ಥಳಕ್ಕೆ ಸಮೀಪದಲ್ಲಿ ವಾಸಿಸುವ ಅಥವಾ ಅದರ ಸಮೀಪ ಭೂಮಿಯನ್ನು ಹೊಂದಿರುವ ಸದೃಢ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಮಾಡತಕ್ಕದ್ದು. (2) ಹಾಗೆ ಸಿದ್ಧಪಡಿಸಲಾದ ಪಟ್ಟಿಯನ್ನು ತಹಶೀಲ್ದಾರರ ಕಛೇರಿಯ ಸೂಚನಾ ಫಲಕದ ಮೇಲೆ ಮತ್ತು ಸಂಬಂಧಪಟ್ಟ ಗ್ರಾಮದ ಚಾವಡಿಯಲ್ಲಿ ಅಂಟಿಸತಕ್ಕದ್ದು.
- 43ನೇ ಪ್ರಕರಣದ ಅಡಿಯಲ್ಲಿ ವಿಚಾರಣೆ.- 43ನೇ ಪ್ರಕರಣದ ಎರಡನೇ ಪರಂತುಕದ ಅಡಿಯಲ್ಲಿ ನಡೆಸುವ ವಿಚಾರಣೆಯು, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ IIIನೇ ಅಧ್ಯಾಯದ ಉಪಬಂಧಗಳಿಗನುಸಾರವಾಗಿ ವಿಧ್ಯುಕ್ತ ವಿಚಾರಣೆಯಾಗಿರತಕ್ಕದ್ದು. 1 [21ಎ. 4ಎ ಪ್ರಕರಣದ ಅಡಿಯಲ್ಲಿ ವಿಧಿಸತಕ್ಕ ನಿರ್ವಹಣಾ ಉಪಕರದ ನಿರ್ಧರಣೆ.- 4ಎ ಪ್ರಕರಣದ ಅಡಿಯಲ್ಲಿ ವಿಧಿಸತಕ್ಕ ನಿರ್ವಹಣಾ ಉಪಕರವನ್ನು ನಿರ್ಧರಿಸುವುದಕ್ಕಾಗಿ ತಹಶೀಲ್ದಾರನು, ತಾನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ, ರಾಜ್ಯ ಸರ್ಕಾರದ ಯಾವುದೇ ನೀರಾವರಿ ಕಾಮಗಾರಿಯಿಂದ ಪ್ರಯೋಜನ ಪಡೆಯುವ ಆ ಪ್ರದೇಶದಲ್ಲಿರುವ ಪ್ರತಿಯೊಬ್ಬ ಹಿಡುವಳಿದಾರನಿಗೆ ಅಂಥ ಕಾಮಗಾರಿಯಿಂದ ಪ್ರಯೋಜನವಾಗುವ ಭೂಮಿಯ ವಿಸ್ತೀರ್ಣವನ್ನು ಮತ್ತು ವಿಧಿಸತಕ್ಕ ನಿರ್ವಹಣಾ ಉಪಕರವನ್ನು ತಿಳಿಸಿ ನೋಟೀಸನ್ನು ನೀಡತಕ್ಕದ್ದು. ತಹಶೀಲ್ದಾರರು ಈ ಪ್ರಸ್ತಾವಿತ ತೆರಿಗೆ ವಿಧಿಸುವಿಕೆಗೆ ಸಂಬಂಧಪಟ್ಟಂತೆ ಯಾವ ದಿನಾಂಕದಂದು ಅಥವಾ ದಿನಾಂಕಕ್ಕೆ ಮೊದಲು ಹಿಡುವಳಿದಾರನು ಮನವಿ ಸಲ್ಲಿಸಬಹುದೆಂಬುದನ್ನು ನೋಟೀಸಿನಲ್ಲಿ ತಿಳಿಸತಕ್ಕದ್ದು. ಮನವಿಯೇನಾದರು ಇದ್ದರೆ, ಅದನ್ನು ಪರಿಶೀಲಿಸಿದ ತರುವಾಯ ತಹಶೀಲ್ದಾರನು ಅಂಥ ಜಮೀನಿಗೆ ಸಂಬಂಧಪಟ್ಟಂತೆ ವಿಧಿಸತಕ್ಕ ನಿರ್ವಹಣಾ ಉಪಕರವನ್ನು ಆದೇಶದ ಮೂಲಕ ನಿರ್ಧರಿಸತಕ್ಕದ್ದು.
(2) ತಹಶೀಲ್ದಾರರ (1)ನೇ ಉಪ ನಿಯಮದ ಅಡಿಯಲ್ಲಿನ ಆದೇಶದಿಂದ ಬಾಧಿತನಾದ ಯಾರೇ ಭೂ ಹಿಡುವಳಿದಾರನು, ಆದೇಶವು ತಲುಪಿದ ದಿನಾಂಕದಿಂದ ಅರವತ್ತು ದಿನಗಳೊಳಗೆ ಸಹಾಯಕ ಆಯುಕ್ತರನಿಗೆ ಅಪೀಲನ್ನು ಸಲ್ಲಿಸಬಹುದು ಮತ್ತು ಅದರ ಮೇಲೆ ಅವರ ಆದೇಶವು ಅಂತಿಮವಾಗಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 43, ಎಲ್ಬಿಡಬ್ಲ್ಯೂ 71, ದಿನಾಂಕ 24ನೇ ಫೆಬ್ರವರಿ, 1973ರ ಮೂಲಕ ಸೇರಿಸಲಾಗಿದೆ.
- ತುಂಗಭದ್ರಾ ಮಂಡಲಿ, ಮುಂತಾದವುಗಳಿಗೆ ನಿರ್ವಹಣಾ ಉಪಕರವನ್ನು ಸಂದಾಯ ಮಾಡುವ ವಿಧಾನ.- ತುಂಗಭದ್ರಾ ಮಂಡಲಿ, ತಾಲ್ಲೂಕು ಅಭಿವೃದ್ಧಿ ಮಂಡಲಿ ಅಥವಾ ಇತರೆ ಯಾವುದೇ ಪ್ರಾಧಿಕಾರವು ನಿರ್ವಹಿಸುವ ಯಾವುದೇ ನೀರಾವರಿ ಕಾಮಗಾರಿಯಿಂದ ಪ್ರಯೋಜನ ಪಡೆದ ಭೂಮಿಯ ಮೇಲೆ ನಿರ್ವಹಣಾ ಉಪಕರವಾಗಿ ಸಂಗ್ರಹಿಸಿದ ಮೊಬಲಗನ್ನು ಯಾವ ಆರ್ಥಿಕ ವರ್ಷದಲ್ಲಿ ಸಂಗ್ರಹಿಸಲಾಗಿದೆಯೋ ಆ ವರ್ಷದ ತರುವಾಯ ಅದನ್ನು ತುಂಗಭದ್ರಾ ಮಂಡಳಿಗೆ, ತಾಲೂಕು ಅಭಿವೃದ್ಧಿ ಮಂಡಲಿಗೆ ಅಥವಾ ಸಂಬಂಧಪಟ್ಟ ಇತರೆ ಪ್ರಾಧಿಕಾರಕ್ಕೆ ರಾಜ್ಯಸರ್ಕಾರವು ಆದೇಶದ ಮೂಲಕ ಅನುದಾನಗಳ ರೂಪದಲ್ಲಿ ಸಂದಾಯ ಮಾಡತಕ್ಕದ್ದು.
- ಕಾಲುವೆಗಳಲ್ಲಿ ಅಥವಾ ಕಾಲುವೆಗಳ ಮೂಲಕ ವ್ಯಕಿಗಳು, ಪ್ರಾಣಿಗಳು ಅಥವಾ ವಾಹನಗಳು ದಾಟಿಹೋಗುವುದು.- (1) ಕಾರ್ಯನಿರ್ವಾಹಕ ಇಂಜಿನಿಯರನು ಗೊತ್ತುಪಡಿಸಿದ ಸ್ಥಳವನ್ನು ಹೊರತುಪಡಿಸಿ, ಯಾವುದೇ ಸ್ಥಳದಲ್ಲಿ, ಯಾವುದೇ ನೀರಾವರಿ ಕಾಮಗಾರಿಯ ದಂಡೆ ಅಥವಾ ಕಾಲುವೆಯ ಮೇಲೆ ಯಾರೇ ವ್ಯಕ್ತಿಯು ಹಾಯ್ದು ಹೋಗತಕ್ಕದ್ದಲ್ಲ ಅಥವಾ ಯಾವುದೇ ಪ್ರಾಣಿ ಅಥವಾ ವಾಹನವು ಹಾಯ್ದು ಹೋಗುವಂತೆ ಮಾಡತಕ್ಕದ್ದಲ್ಲ. ಕಾರ್ಯನಿರ್ವಾಹಕ ಇಂಜಿನೀಯರನು ಹಾಗೆ ನಿಗದಿಪಡಿಸಿದ ಸ್ಥಳದಲ್ಲಿ ಸೂಚನಾ ಫಲಕವನ್ನು ನೆಡುವ ವ್ಯವಸ್ಥೆ ಮಾಡತಕ್ಕದ್ದು. (2) (1)ನೇ ಉಪನಿಯಮದ ಅಡಿಯಲ್ಲಿ ಸ್ಥಳಗಳನ್ನು ನಿಗದಿಪಡಿಸುವಾಗ, ಕಾರ್ಯನಿರ್ವಾಹಕ ಇಂಜಿನಿಯರನು, ಕಾಮಗಾರಿಯ ಸಮೀಪದಲ್ಲಿ ವಾಸಿಸುವ ಅಥವಾ ಭೂಮಿಗಳನ್ನು ಹೊಂದಿರುವ ವ್ಯಕ್ತಿಗಳ ಕಾಲುವೆಯನ್ನು ದಾಟಬೇಕಾದ ಅಥವಾ ತಮ್ಮ ಪ್ರಾಣಿಗಳಿಗೆ ನೀರನ್ನು ಪೂರೈಸಬೇಕಾದ ವ್ಯಕ್ತಿಗಳ ಯುಕ್ತ ಅನುಕೂಲತೆಗೆ ಯಥೋಚಿತ ಗಮನ ಕೊಡತಕ್ಕದ್ದು.
(3) (1)ನೇ ಉಪಪ್ರಕರಣದ ಉಲ್ಲಂಘನೆಯು 55ನೇ ಪ್ರಕರಣದ ಅಡಿಯಲ್ಲಿ ದಂಡನೀಯ ಅಪರಾಧವಾಗತಕ್ಕದ್ದು.
1 [23ಎ. 64ನೇ ಪ್ರಕರಣದ ಅಡಿಯಲ್ಲಿ ವಸೂಲು ಮಾಡತಕ್ಕ ವೆಚ್ಚಗಳು.- 64ನೇ ಪ್ರಕರಣದ (1)ನೇ ಉಪಪ್ರಕರಣದ ಅಡಿಯಲ್ಲಿ ನೀರಾವರಿ ಅಧಿಕಾರಿಯು ವಸೂಲು ಮಾಡತಕ್ಕ ವೆಚ್ಚಗಳು, ಯುಕ್ತ ಅನುಮತಿ ಪಡೆದು ನೀರನ್ನು ಬಳಸಿಕೊಂಡಿದ್ದರೆ ಸಂದಾಯ ಮಾಡಬಹುದಾಗಿದ್ದ ನೀರು ದರದ ಇಪ್ಪತ್ತು ಪಟ್ಟು ಹೆಚ್ಚು ಮೊಬಲಗು ಆಗಿರತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 134, ದಿನಾಂಕ 4ನೇ ಮಾರ್ಚ್, 1969ರ (ಪಿಡಬ್ಲ್ಯೂಡಿ 7 ಎಲ್ಬಿಡಬ್ಲ್ಯೂ 65 ಭಾಗ - II)ರ ಮೂಲಕ ಸೇರಿಸಲಾಗಿದೆ. 1 [23ಬಿ. ಪ್ರಮಾಣಿತ ಪ್ರತಿಗಳನ್ನು ನೀಡುವುದು.- ಈ ಅಧಿನಿಯಮದ ಮೇರೆಗೆ ಆದೇಶಗಳನ್ನು ಮಾಡಲು ಅಧಿಕಾರ ಹೊಂದಿರುವ ಅಧಿಕಾರಿಗಳು, ತಾವು ಮಾಡಿದ ಆದೇಶಗಳ ಪ್ರಮಾಣಿತ ಪ್ರತಿಗಳನ್ನು ನೀಡಬಹುದು. ಪ್ರಮಾಣಿತ ಪ್ರತಿಗಳನ್ನು ತಯಾರಿಸಲು ತಗಲುವ ವೆಚ್ಚಗಳನ್ನು ಪ್ರತಿಯೊಂದು ಬೆರಳಚ್ಚು ಅಥವಾ ಲಿಖಿತ ಪುಟಗಳಿಗೆ ಅಥವಾ ಅದರ ಭಾಗಕ್ಕೆ ಐವತ್ತು ಪೈಸೆಯ ದರದಲ್ಲಿ ಲೆಕ್ಕ ಹಾಕತಕ್ಕದ್ದು.
- 23ಬಿ ನಿಯಮವನ್ನು ಜಿಎಸ್ಆರ್ 93, ದಿನಾಂಕ 07.03.1979ರ ಮೂಲಕ 15.03.1979 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
- ನಿರಸನ ಮತ್ತು ಉಳಿಸುವಿಕೆಗಳು.- 72ನೇ ಪ್ರಕರಣದ (1)ನೇ ಉಪಪ್ರಕರಣದ ಕಾರಣದಿಂದಾಗಿ ಜಾರಿಯಲ್ಲಿ ಮುಂದುವರಿಯುತ್ತಿರುವ ಈ ಹಿಂದಿನ ನಿಯಮಗಳಿಗೆ ಸಂವಾದಿಯಾದ ಎಲ್ಲ ನಿಯಮಗಳು ಈ ಮೂಲಕ ನಿರಸಿತವಾಗಿವೆ; ಪರಂತು, ಸದರಿ ನಿರಸನವು, ಸದರಿ ನಿಯಮಗಳ ಮತ್ತು ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ, 1899ರ 6ನೇ ಪ್ರಕರಣದ ಉಪಬಂಧಗಳ ಅಡಿಯಲ್ಲಿ ಮಾಡಲಾದ ಹಿಂದಿನ ಕಾರ್ಯಾಚರಣೆಯನ್ನು ಬಾಧಿಸತಕ್ಕದ್ದಲ್ಲ ಮತ್ತು ಸದರಿ ನಿಯಮಗಳು, ಕರ್ನಾಟಕ ಅಧಿನಿಯಮದ ಮೂಲಕ ನಿರಸನವಾಗಿದ್ದರೆ ಹೇಗೋ ಹಾಗೆ ಅನ್ವಯಿಸತಕ್ಕದ್ದು. ನಮೂನೆ- I (ನಿಯಮ 1ನ್ನು ನೋಡಿ) ಕರ್ನಾಟಕ ನೀರಾವರಿ ಅಧಿನಿಯಮ, 1965ರ 6, 7 ಅಥವಾ 8ನೇ ಪ್ರಕರಣದ ಅಡಿಯಲ್ಲಿ ಕಟ್ಟಡವನ್ನು ಅಥವಾ ವಾಸದ ಮನೆಗೆ ಹೊಂದಿಕೊಂಡಿರುವ ಅಂಗಳ ಅಥವಾ ತೋಟವನ್ನು ಪ್ರವೇಶಿಸುವ ಬಗೆಗಿನ ನೋಟೀಸು.
. . . . . . . . .
. . . . . . . . . ಇವರಿಗೆ . . . . . . . . . . . . ನೀರಾವರಿ ಅಧಿಕಾರಿಯಾದ . . . . . . . . . . . ಎಂಬ ನಾನು, . . . . . . ದಿನಾಂಕದಂದು . .
. . . . . . . . ಸಮಯದಲ್ಲಿ . . . . . . . . . . ಉದ್ದೇಶಕ್ಕಾಗಿ . . . . . . . . . ಜಿಲ್ಲೆಯ . . . . . . . . . ತಾಲೂಕಿನ . . . . . . . . ಗ್ರಾಮದ . . . . . . . . ಸರ್ವೇ ನಂ.ನಲ್ಲಿನ ವಾಸದ ಮನೆಗೆ ಸೇರಿರುವ ಕಟ್ಟಡ / ಆವೃತ ಅಂಗಳ/ ತೋಟವನ್ನು ಪ್ರವೇಶಿಸುವುದಾಗಿ ಈ ಮೂಲಕ ತಿಳಿಸುತ್ತೇನೆ.
ನನ್ನ ಪರವಾಗಿ ಮತ್ತು ನನ್ನ ಆದೇಶಗಳ ಮೇರೆಗೆ ಕಾರ್ಯನಿರ್ವಹಿಸುವ ಯಾರೇ ವ್ಯಕ್ತಿಯ ಪ್ರವೇಶಕ್ಕೆ ಅನುಮತಿಸುವಂತೆ ನಾನು ಕೋರುತ್ತೇನೆ. (ಇಲ್ಲಿ ಉದ್ದೇಶಗಳನ್ನು ನಮೂದಿಸಿ) . . . . . . . . .
. . . . . . . .
ನೀರಾವರಿ ಅಧಿಕಾರಿ
ನಮೂನೆ- 2 ಅಧಿಸೂಚನೆ ಕರ್ನಾಟಕ ನೀರಾವರಿ ಅಧಿನಿಯಮ, 1965ರ 15(1)ನೇ ಪ್ರಕರಣದ ಮೇರೆಗಿನ ಅಧಿಸೂಚನೆ . . . . . . . . . . . . ನೀರಾವರಿ ಅಧಿಕಾರಿಯಾದ ನಾನು . . . . . . . . . . . . . ವಿತರಣ ಕಾಲುವೆ/ ಉಪಕಾಲುವೆ . . . . . . ಚೈನ್ ಸಂಖ್ಯೆ . . . . . . . . ರಲ್ಲಿರುವ ಹೊರ ಮಾರ್ಗದಿಂದ ಸಾಗುವಳಿ ಉದ್ದೇಶಗಳಿಗಾಗಿ ನೀರಿನ ಅಗತ್ಯವಿರುವ ಜಮೀನುಗಳಿಗೆ ನೀರು ಸರಬರಾಜು ಮಾಡಲು ಈ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಜಮೀನುಗಳಿಗೆ ಹೊಲ-ಕಾಲುವೆಗಳನ್ನು ನಿರ್ಮಾಣ ಮಾಡುವುದು ಅಗತ್ಯವೆಂದು ಕಂಡುಬಂದಿರುವುದರಿಂದ;
ಈಗ ಕರ್ನಾಟಕ ನೀರಾವರಿ ಅಧಿನಿಯಮ, 1965ರ (1965ರ ಕರ್ನಾಟಕ ಅಧಿನಿಯಮ 16) 15ನೇ ಪ್ರಕರಣದ (1)ನೇ ಉಪ ಪ್ರಕರಣದಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ನೀರಾವರಿ ಅಧಿಕಾರಿಯಾದ ನಾನು . . . . . ಈ ಪ್ರದೇಶಕ್ಕೆ ಹೊಲ-ಕಾಲುವೆಯನ್ನು . . . . . . . . ತರುವಾಯ ನಿರ್ಮಾಣ ಮಾಡಲಾಗುವುದೆಂದು ಈ ಮೂಲಕ . . . . ಘೋಷಿಸುತ್ತೇನೆ.
| ಹೊಲ-ಕಾಲುವೆಗಳು ಅವಶ್ಯವಿರುವ ಜಮೀನುಗಳ ಅನುಸೂಚಿ | |||
| ಜಿಲ್ಲೆ | ತಾಲ್ಲೂಕು | ಗ್ರಾಮದ 1 [ಪ್ರದೇಶಗಳಲ್ಲಿ | ನೀರಾವರಿ |
| ಹೆಸರು | ಹೆಸರು ಒಳಗೊಳ್ಳುವ | ಮಾಡಬಹುದಾದ | |
| ಜಮೀನುಗಳ ಸರ್ವೆ | ಪ್ರದೇಶ | ||
| ನಂ. ಮತ್ತು ಅಂತಹ | |||
| ಪ್ರದೇಶದ ಚೆಕ್ಕುಬಂದಿಗಳ | |||
| ಚಾಲ್ತಿ ವಿವರಣೆ]1 | |||
| 1 | 2 | 3 4 | 5 |
ಸಂಕಲನಕಾರರು, ಕರ್ನಾಟಕ ರಾಜಪತ್ರ, . . . . . . . 19 ದಿನಾಂಕದ ಕರ್ನಾಟಕ ರಾಜಪತ್ರದಲ್ಲಿ ಪ್ರಕಟಿಸುವುದಕ್ಕಾಗಿ.
- ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 65, ಎಲ್ಬಿಡಬ್ಲ್ಯೂ 72, ದಿನಾಂಕ 6ನೇ ಮೇ, 1974ರ ಮೂಲಕ ಪ್ರತಿಯೋಜಿಸಲಾಗಿದೆ. ನಮೂನೆ-3 ಅಧಿಸೂಚನೆ ಕರ್ನಾಟಕ ನೀರಾವರಿ ಅಧಿನಿಯಮ, 1965ರ 15(2)ನೇ ಪ್ರಕರಣದ ಮೇರೆಗಿನ ಅಧಿಸೂಚನೆ ಸಾಗುವಳಿಯ ಉದ್ದೇಶಗಳಿಗಾಗಿ ನೀರಿನ ಸರಬರಾಜು ಅಗತ್ಯವಿರುವಂತಹ ಜಮೀನುಗಳಿಗೆ ನೀರನ್ನು ಸರಬರಾಜು ಮಾಡುವ ಉದ್ದೇಶಕ್ಕಾಗಿ . . . . . . . . . ಹೊರಗಂಡಿಯ . . . . . . . . .ಚೈನ್ ಸಂಖ್ಯೆಯ . . . . . . . . ಕಾಲುವೆ/ . . . . . . . . . . . . ಉಪಕಾಲುವೆಯ ನಿರ್ಮಾಣ ಮಾಡುವುದಕ್ಕಾಗಿ, ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವುದು ಅವಶ್ಯವೆಂದು ನಾನು ಅಭಿಪ್ರಾಯಪಟ್ಟಿರುವುದರಿಂದ ಹಾಗೂ ಅಂತಹ ಜಮೀನುಗಳನ್ನು ಗುರುತು ಮಾಡಿರುವುದರಿಂದ;
ಈಗ ಕರ್ನಾಟಕ ನೀರಾವರಿ ಅಧಿನಿಯಮ, 1965ರ (1965ರ ಕರ್ನಾಟಕ ಅಧಿನಿಯಮ 16) 15ನೇ ಪ್ರಕರಣದ (2)ನೇ ಉಪಪ್ರಕರಣದಿಂದ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, . . . . . . . . . . ನೀರಾವರಿ ಅಧಿಕಾರಿಯಾದ . . . . . . . . ಎಂಬ ನಾನು, ಸದರಿ ಜಮೀನುಗಳನ್ನು ಹೊಲ-ಕಾಲುವೆಗಳ ನಿರ್ಮಾಣಕ್ಕಾಗಿ ಗುರುತು ಮಾಡಲಾಗಿದೆ ಎಂದು ಈ ಮೂಲಕ ಘೋಷಿಸುತ್ತೇನೆ.
| ಅನುಸೂಚಿ | |||||
| ಕ್ರ. | ಜಿಲ್ಲೆ | ತಾಲ್ಲೂಕಿನ | ಗ್ರಾಮದ | [ಪ್ರದೇಶಗಳಲ್ಲಿ 1 | ಹೊಲ-ಕಾಲುವೆಗಳ |
| ಸಂ. | ಹೆಸರು | ಹೆಸರು | ಹೆಸರು | ಒಳಗೊಂಡ | ನಿರ್ಮಾಣಕ್ಕಾಗಿ |
| ಜಮೀನುಗಳ ಸರ್ವೆ | ಗುರುತುಮಾಡಲಾದ | ||||
| ನಂ.ಗಳು ಮತ್ತು | ಪ್ರದೇಶ. | ||||
| ಅಂತಹ ಪ್ರದೇಶದ | |||||
| ಚೆಕ್ಕು ಬಂದಿಗಳ | |||||
| ಚಾಲ್ತಿ ವಿವರಣೆಗಳು]1 | |||||
| 1 | 2 | 3 | 4 | 5 | 6 |
- ತಹಶೀಲ್ದಾರರು . . . . . . . ತಾಲೂಕು, ಅಧಿನಿಯಮದ 15(2)ನೇ ಪ್ರಕರಣದ ಅನುಸಾರ ಹೊಲ-ಕಾಲುವೆಯನ್ನು ಹಾದು ಹೋಗುವ ಪ್ರತಿಯೊಂದು ಗ್ರಾಮದಲ್ಲಿ ಮಾಹಿತಿ ಹಾಗೂ ಪ್ರಕಟಣೆಗಾಗಿ 2. ಸಹಾಯಕ ಎಂಜಿನಿಯರ್ . . . . . . . . . ಉಪ ವಿಭಾಗ 3. ಜಿಲ್ಲಾಧಿಕಾರಿ . . . . . . . . . ಜಿಲ್ಲೆ 4. ಅಧೀಕ್ಷಕ ಇಂಜಿನಿಯರ್ . . . . . . . . . . . . . . . . . . . . . ವಲಯ 24( )ನೇ ಪ್ರಕರಣದ ಮೇರೆಗೆ ನೋಟೀಸು, ಸೂಪರಿಂಟೆಂಡೆಂಟ್ ಇಂಜಿನಿಯರ್ . . . . . . . . . ವಲಯ 5. ಸೂಚನಾ ಫಲಕ 2 [ನಮೂನೆ 4 ರಿಂದ 12 1. ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 65, ಎಲ್ಬಿಡಬ್ಲ್ಯೂ 72, ದಿನಾಂಕ 6ನೇ ಮೇ, 1974ರ ಮೂಲಕ ಪ್ರತಿಯೋಜಿಸಲಾಗಿದೆ.
- ನಮೂನೆ 4, 5, 6, 7, 8, 9, 10, 11 ಮತ್ತು 12 ಇವುಗಳನ್ನು ಅಧಿಸೂಚನೆ ಸಂಖ್ಯೆ ಜಿಎಸ್ಆರ್ 272, ದಿನಾಂಕ 7ನೇ ಸೆಪ್ಟೆಂಬರ್, 1971 (ಪಿಡಬ್ಲ್ಯೂ 66, ಎಲ್ಬಿಡಬ್ಲ್ಯೂ 71) ಇದರ ಮೂಲಕ ಬಿಟ್ಟುಬಿಡಲಾಗಿದೆ. ಪರಿಶಿಷ್ಟ- XI
ನಮೂನೆ-13 24(1)ನೇ ಪ್ರಕರಣದ ಮೇರೆಗಿನ ಸೂಚನೆ ನೀರಾವರಿ ಅಧಿಕಾರಿಯ ಕಛೇರಿ, . . . . . . . . ವಿಭಾಗ ಶ್ರೀ/ಶ್ರೀಮತಿ . . . . . . . . . . . ಇವರಿಗೆ . . . . . . . . . ಸಂಖ್ಯೆಯ ಕಾಲುವೆ/ ಉಪ ಕಾಲುವೆ ಜಲಮಾರ್ಗ ಸಂಖ್ಯೆ. . . . . . . . . . ಚೈನ್ನಲ್ಲಿ . . . . . . . ಸಂಖ್ಯೆಯ . . . . . . . ತೂಬುಗಂಡಿಯಲ್ಲಿ ಬರುವ ಹೊಲ-ಕಾಲುವೆ ಅಥವಾ ಕಾಲುವೆಗಳನ್ನು ಸುಸ್ಥಿತಿಯಲ್ಲಿ ನಿರ್ವಹಿಸಿಕೊಂಡು ಬರಲು ಕರ್ನಾಟಕ ನೀರಾವರಿ ಅಧಿನಿಯಮ, 1965ರ 20ನೇ ಪ್ರಕರಣದ (1)ನೇ ಉಪಪ್ರಕರಣದ (ಎ) ಖಂಡದ ಮೂಲಕ ವಿಧಿಸಿದ ಹೊಣೆಗಾರಿಕೆಯನ್ನು ಪೂರೈಸಲು ನೀವು ವಿಫಲರಾಗಿದ್ದೀರೆಂಬುದು ನನ್ನ ಗಮನಕ್ಕೆ ಬಂದಿರುವುದರಿಂದ ;
ಆದ್ದರಿಂದ, ಈಗ ಕರ್ನಾಟಕ ನೀರಾವರಿ ಅಧಿನಿಯಮ, 1965ರ (1965ರ ಕರ್ನಾಟಕ ಅಧಿನಿಯಮ 16) 24(1)ನೇ ಪ್ರಕರಣದ ಮೇರೆಗೆ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, . . . . . . . . . . ನೀರಾವರಿ ಅಧಿಕಾರಿ . . . . . . . . . ಎಂಬ ನಾನು, . . . . . . . . ದಿನಗಳೊಳಗಾಗಿ ಅವಶ್ಯ ದುರಸ್ತಿ ಕಾಮಗಾರಿಯನ್ನು ನಿರ್ವಹಿಸಲು ನಿಮಗೆ ನಿರ್ದೇಶಿಸುತ್ತೇನೆ. ಇದಕ್ಕೆ ತಪ್ಪಿದಲ್ಲಿ, ಆ ಕಾಮಗಾರಿಯನ್ನು ನಾನು ನಿರ್ವಹಿಸುತ್ತೇನೆ ಮತ್ತು ಅಂತಹ ದುರಸ್ತಿ ಕಾಮಗಾರಿಗೆ ಭರಿಸಲಾದ ಎಲ್ಲ ವೆಚ್ಚಗಳನ್ನು ಭೂಕಂದಾಯದ ಬಾಕಿಯಂತೆ ನಿಮ್ಮಿಂದ ವಸೂಲಿ ಮಾಡಲಾಗುವುದು.
ನೀರಾವರಿ ಅಧಿಕಾರಿ, . . . . . . . . ವಿಭಾಗ ಪ್ರತಿ:
ಅಸಿಸ್ಟೆಂಟ್ ಇಂಜಿನಿಯರ್ರವರಿಗೆ.
ಪರಿಶಿಷ್ಟ- XIV ನಮೂನೆ-14 ನೀರಾವರಿಗಾಗಿ ನೀರು ಸರಬರಾಜು ಕೋರಿ ಅರ್ಜಿ ಅರ್ಜಿಯ ಸಂಖ್ಯೆ ಗೆ, ನೀರಾವರಿ ಅಧಿಕಾರಿ, . . . . . . . . . ವಿಭಾಗ . . . . . . . . . ಜಿಲ್ಲೆಯ . . . . . . . . . ತಾಲ್ಲೂಕಿನ . . . . . . . . . . . ಗ್ರಾಮದ ನಿವಾಸಿಯಾದ . . . . .
. . . . . ಎಂಬ ನಾನು, ಕರ್ನಾಟಕ ನೀರಾವರಿ ಅಧಿನಿಯಮ, 1965ರ ಮತ್ತು ನೀರಾವರಿಗೆ ಸಂಬಂಧಪಟ್ಟ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರೆ ಕಾನೂನಿನ ಉಪಬಂಧಗಳು ಮತ್ತು ಕರ್ನಾಟಕ ನೀರಾವರಿ ನಿಯಮಗಳು, 1965ರ ಉಪಬಂಧಗಳಿಗೆ ಮತ್ತು ಈ ಅರ್ಜಿಯಲ್ಲಿ ನಾನು ಅಂಗೀಕರಿಸಿರುವ ನಿರ್ದಿಷ್ಟಪಡಿಸಿದ ಷರತ್ತುಗಳಿಗೆ ಒಳಪಟ್ಟು ಇಲ್ಲಿ ಇನ್ನು ಮುಂದೆ ವಿವರಿಸಲಾಗಿರುವ ಜಮೀನಿನ ನೀರಾವರಿ ಉದ್ದೇಶಕ್ಕಾಗಿ . . . . . . . . . ಕಾಲುವೆಯಿಂದ ನೀರು ಸರಬರಾಜು ಕೋರಿ ಈ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ:
| ಗ್ರಾಮದ ಕಾಲುವೆಯ ಹೆಸರು | ಉಪಕಾಲುವೆಯ ಹೆಸರು | ಹೊರ ಮಾರ್ಗದ ಸಂಖ್ಯೆ | ಸರ್ವೆ ನಂ. ಮತ್ತು ಉಪ ಸರ್ವೆ ನಂ. | ಸರ್ವೆ ನಂ. ವಿಸ್ತೀರ್ಣ | ಹಿಡುವಳಿಯ ವಿಸ್ತೀರ್ಣ | ನೀರಾವರಿ ಗೊಳಪಡಿಸ ಬೇಕಾದ ವಿಸ್ತೀರ್ಣ | ಬೆಳೆ ನೀರು ಅಗತ್ಯ ವಿರುವ ಅವಧಿ |
| 1 2 3 4 5 6 7 8 9 10 | |||||||
ಸಾಕ್ಷಿದಾರನ ಸಹಿ:
(ಅರ್ಜಿಯ ಎಲ್ಲ ವಿವರಗಳನ್ನು ಅರ್ಜಿದಾರನೇ ಭರ್ತಿ ಮಾಡಬೇಕು) ಮಂಜೂರಾತಿಗಾಗಿ ಈ ಮುಂದಿನಂತೆ ಮುಂದಕ್ಕೆ ಕಳುಹಿಸಲಾಗಿದೆ:-
(1) ಮಂಜೂರು ಮಾಡಬೇಕಾದ ಪ್ರದೇಶ (2) ಮಂಜೂರಾತಿಯ ಅವಧಿ
(2) ಮಂಜೂರಾತಿಯ ಅವಧಿ . . . . . . . . ಯಿಂದ . . . . . . . . ವರೆಗೆ
(3) ವಿಧಿಸಬೇಕಾದ ನೀರಿನ ದರ
(3) ವಿಧಿಸಬೇಕಾದ ನೀರಿನ ದರ ಎಕರೆ ಒಂದಕ್ಕೆ . . . . . . . .
ದಿನಾಂಕ:
ಎಕರೆ ಒಂದಕ್ಕೆ. .... ...
ಮಂಜೂರು ಮಾಡಲಾಗಿದೆ ಸಹಿ:
ದಿನಾಂಕ ಸಹಿ:
ಸೂಚನೆಗಳು 1. ಅರ್ಜಿಗಳನ್ನು ದ್ವಿಪ್ರತಿಯಲ್ಲಿ ನೀರಾವರಿ ಅಧಿಕಾರಿಗೆ ಅಥವಾ ಅಂತಹ ಅರ್ಜಿಗಳನ್ನು ಸ್ವೀಕರಿಸಲು ಅವರಿಂದ ಅಧಿಕೃತನಾದ ಯಾರೇ ಇತರೆ ಅಧಿಕಾರಿಗೆ ಸಲ್ಲಿಸತಕ್ಕದ್ದು. ಅರ್ಜಿಯನ್ನು ದೂತನ ಮೂಲಕ ಅಥವಾ ಖುದ್ದಾಗಿ ಅಥವಾ ಅಂಚೆಯ ಮೂಲಕ ಕಳುಹಿಸಬಹುದು. 2. ಆದೇಶವನ್ನು ಹೊರಡಿಸಿದಾಗ ಅದರ ನಕಲನ್ನು ನೀರಾವರಿ ಅಧಿಕಾರಿಯ ಆದೇಶದ ಹಿಂಬರಹದೊಂದಿಗೆ ಅರ್ಜಿದಾರನಿಗೆ ಹಿಂದಿರುಗಿಸಲಾಗುವುದು. 3. ಏಕಮಾತ್ರ ಅಧಿಭೋಗದಾರ ಅಥವಾ ಎಲ್ಲ ಜಂಟಿ ಅಧಿಭೋಗದಾರರು (2) ಏಕಮಾತ್ರ ವರಿಷ್ಠ ಹಿಡುವಳಿದಾರ ಅಥವಾ ಎಲ್ಲ ಜಂಟಿ ವರಿಷ್ಠ ಹಿಡುವಳಿದಾರರು (3) ಮಂಜೂರಾತಿಯ ಅವಧಿವರೆಗೆ ಜಮೀನಿನ ನೀರಾವರಿ ಸಾಗುವಳಿಯನ್ನು ಮಾಡಲು ಹಕ್ಕುಳ್ಳ ಒಬ್ಬ ವ್ಯಕ್ತಿ ಅಥವಾ (4) ಇವರುಗಳ ಪೈಕಿಯಿಂದ ಅಂಥ ಮಂಜೂರಾತಿ ಸ್ವೀಕರಿಸಲು ಈ ಸಂಬಂಧದಲ್ಲಿ ವಿಧ್ಯುಕ್ತವಾಗಿ ಅಧಿಕೃತನಾದ ಒಬ್ಬ ವ್ಯಕ್ತಿ, ಇವರನ್ನು ಹೊರತುಪಡಿಸಿ, ಸಾಮಾನ್ಯವಾಗಿ ಯಾರೇ ವ್ಯಕ್ತಿಗೆ ಯಾವುದೇ ಜಮೀನಿನ ನೀರಾವರಿಗಾಗಿ ಯಾವುದೇ ಮಂಜೂರಾತಿಯನ್ನು ನೀಡಲಾಗುವುದಿಲ್ಲ. 4. ಅರ್ಜಿದಾರನು, ಜಮೀನಿನಲ್ಲಿ ನೀರಾವರಿ ಸಾಗುವಳಿಯನ್ನು ಮಾಡಲು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವುದಕ್ಕಾಗಿ ಜಮೀನಿನಲ್ಲಿ ಆತನಿಗಿರುವ ಹಿತಾಸಕ್ತಿಯ ಸ್ವರೂಪ ಅಥವಾ ಅವನು ಹೊಂದಿರುವ ಅಧಿಕಾರ-ಇವುಗಳನ್ನು ಪ್ಯಾರಾ-2 ರಲ್ಲಿ ತಿಳಿಸಬೇಕು. 5. ಈ ಬಗೆಯ ನೀರಾವರಿಗಾಗಿ ಸೂಕ್ತವಲ್ಲವೆಂದು ಕಂಡು ಬರುವ ಯಾವುದೇ ಜಮೀನನ್ನು ನೀರಾವರಿಗೊಳಪಡಿಸಲು ಮಂಜೂರಾತಿಯನ್ನು ನಿರಾಕರಿಸಲಾಗುವುದು. ಷರತ್ತುಗಳು 1. ಅರ್ಜಿಯನ್ನು ಮಂಜೂರು ಮಾಡಿದ ತರುವಾಯ, ನೀರಾವರಿ ಅಧಿಕಾರಿಯು ಮಂಜೂರು ಮಾಡಿದ ಪ್ರದೇಶಕ್ಕೆ ಮತ್ತು ಅವಧಿಗೆ, ಆ ಪ್ರದೇಶ ನೀರಾವರಿಗೊಳಪಟ್ಟಿರಲಿ ಅಥವಾ ಒಳಪಡದಿರಲಿ ಆ ಅವಧಿಯಲ್ಲಿ ನೀರು ಒದಗಿಸಲಾಗಿದ್ದರೆ, ಪೂರ್ತಿಯಾಗಿ ನೀರಿನ ದರಗಳನ್ನು ಸಂದಾಯ ಮಾಡತಕ್ಕದ್ದು. ಸಾರ್ವಕಾಲಿಕ ಬೆಳೆಗಳ ಸಂದರ್ಭದಲ್ಲಿ, ಅರ್ಜಿಯ ಮಂಜೂರಾತಿ ದಿನಾಂಕದಿಂದ ಒಂದು ತಿಂಗಳೊಳಗಾಗಿ ನೀರು ಸರಬರಾಜು ಅಗತ್ಯವಿಲ್ಲವೆಂದು ಅರ್ಜಿದಾರರು ನೀರಾವರಿ ಅಧಿಕಾರಿಗೆ ಲಿಖಿತದಲ್ಲಿ ತಿಳಿಸಿದರೆ ಯಾವುದೇ ನೀರಿನ ದರವನ್ನು ವಿಧಿಸತಕ್ಕದ್ದಲ್ಲ. 2. ಪ್ರತಿಯೊಂದು ಬಗೆಯ ಬೆಳೆಯನ್ನು (ಎಂದರೆ, ಕಬ್ಬು, ವೀಳೈದೆಲೆ, ಸಾಮಾನ್ಯ ಸರ್ವಕಾಲಿಕ, ಎರಡು ಋತುಮಾನದ ಮತ್ತು ಋತುಮಾನದ) ಪಾಸ್ಪುಸ್ತಕದಲ್ಲಿ ತೋರಿಸಿರುವಂತೆ ಮಂಜೂರಾತಿಯ ಅವಧಿಯವರೆಗೆ ಮಾತ್ರ ಬೆಳೆಯತಕ್ಕದ್ದು. ಆದರೆ, ಯಾವುದೇ ಕಡಿಮೆ ದರದ ಯಾವುದೇ ಬಗೆಯ ಬೆಳೆಯನ್ನು ಸಮಾನ ವಿಸ್ತೀರ್ಣದ ಪ್ರದೇಶದಲ್ಲಿ ಪ್ರತಿಯೋಜಿಸಬಹುದು. 3. ಮಂಜೂರಾದ ಪ್ರದೇಶದ ಮಿತಿಯನ್ನು ಮೀರತಕ್ಕದ್ದಲ್ಲ. 4. ಕರ್ನಾಟಕ ನೀರಾವರಿ ಅಧಿನಿಯಮ, 1965ರ ಅಥವಾ ಕರ್ನಾಟಕ ನೀರಾವರಿ ನಿಯಮಗಳು, 1965ರ ಯಾವುದೇ ನಿಯಮದ ಯಾವುದೇ ಉಪಬಂಧವನ್ನು ಅಥವಾ ಈ ಅರ್ಜಿಯ ಯಾವುದೇ ಷರತ್ತನ್ನು ಉಲ್ಲಂಘಿಸಿದರೆ, ಯಾವುದೇ ನೋಟೀಸು ನೀಡದೆ ಮಂಜೂರಾತಿಯು ರದ್ದಾಗುವುದಕ್ಕೆ ಗುರಿಯಾಗತಕ್ಕದ್ದು ಅಥವಾ ಮಂಜೂರಾತಿಯ ಮೇರೆಗೆ ಯಾವುದೇ ಬೆಳೆಗೆ ಸರಬರಾಜನ್ನು ತಡೆಹಿಡಿಯುವುದಕ್ಕೆ ಅಥವಾ ಪೂರ್ಣವಾಗಿ ನಿಲ್ಲಿಸಲು ಗುರಿಯಾಗಿರತಕ್ಕದ್ದು. 5. ನೀರು ಲಭ್ಯವಿದ್ದರೆ, ಇಡೀ ಋತುಮಾನಕ್ಕೆ ನೀರನ್ನು ನೀಡತಕ್ಕದ್ದು ಅಥವಾ ನೀರಾವರಿ ಅಧಿಕಾರಿಯ ವಿವೇಚನೆಯ ಮೇರೆಗೆ ಎಷ್ಟು ನೀರು ಸರಬರಾಜು ಮಾಡಲು ಸಾಧ್ಯಮೋ ಅಷ್ಟು ಸಲ ಸರಬರಾಜು ಮಾಡಬಹುದು. 6. ಪೂರ್ಣ ಪ್ರಮಾಣದ ನೀರು ಸರಬರಾಜಿಗೆ ಖಾತರಿ ನೀಡಲಾಗುವುದಿಲ್ಲ, ಆದರೆ ಯಾವ ಋತುವಿನ ಬಗ್ಗೆ ಅರ್ಜಿ ಸಲ್ಲಿಸಲಾಗಿದೆಯೋ ಆ ಅವಧಿಯಲ್ಲಿ ನೀರಿನ ಕೊರತೆಯ ಸಂಭವದ ಆದಷ್ಟು ಬೇಗನೆ ಮಾಹಿತಿಯನ್ನು ಮುಂಚಿತವಾಗಿ ನೀಡತಕ್ಕದ್ದು. 7. ಮಂಜೂರಾದ ಕಬ್ಬಿನ ಬೆಳೆಯ ಯಾವುದೇ ಪ್ರದೇಶಕ್ಕೆ ಮಾಡುವ ನೀರು ಸರಬರಾಜು ಅಗತ್ಯವಿದ್ದಾಗ, 31ನೇ ಮೇ ನಂತರ ಹೊಸ ಕಬ್ಬಿನ ಬೆಳೆಯ ಪ್ರದೇಶದಲ್ಲಿ ನೀರು ಸರಬರಾಜು ಹಿಂತೆಗೆದುಕೊಳ್ಳುವುದಕ್ಕೆ ಬದ್ಧವಾಗಿರತಕ್ಕದೆಂಬ ಷರತ್ತಿಗೊಳಪಟ್ಟಿರುತ್ತದೆ. 31ನೇ ಮೇ ನಂತರ ಪ್ರತಿ ಕ್ರಮಾನುಗತ ನೀರು ಸರಬರಾಜು ಮಾಡಲು ನೀರಾವರಿ ಅಧಿಕಾರಿಯ ಮಂಜೂರಾತಿಯ ಅಗತ್ಯವಿರತಕ್ಕದ್ದು. ಅಂಥ ಮಂಜೂರಾತಿಯನ್ನು ಕೃಷಿ ಉದ್ದೇಶಗಳಿಗೆ ನೀರಾವರಿ ಕಾಮಗಾರಿಯಲ್ಲಿ ನೀರು ಲಭ್ಯವಿದ್ದರೆ ಮಾಡತಕ್ಕದ್ದು. ಆದರೆ ಋತುಗಳಲ್ಲಿ ಯಾವುದೇ ಕಾಲಕ್ಕೆ ನೀರು ಸಾಕಷ್ಟಿಲ್ಲದಿದ್ದರೆ, ಮುಂದೆ ಮಾಡಬೇಕಾದ ಹೆಚ್ಚಿನ ನೀರು ಸರಬರಾಜನ್ನು ನಿಲ್ಲಿಸಲಾಗುವುದು ಮತ್ತು ನೀರಾವರಿ ಬೇಸಾಯಗಾರನು ಯಾವುದೇ ಸಂದರ್ಭದಲ್ಲೂ ನೀರಿನ ಕೊರತೆಯ ಕಾರಣದಿಂದಾಗಿ ಕಬ್ಬಿನ ಬೆಳೆಗೆ ಆದ ಯಾವುದೇ ಹಾನಿಗೆ ನಷ್ಟ ಪರಿಹಾರವನ್ನು ಕ್ಲೇಮು ಮಾಡತಕ್ಕದ್ದಲ್ಲ. 1 [ನಮೂನೆ-15 1. ಅಧಿಸೂಚನೆ ಸಂಖ್ಯೆ ಪಿಡಬ್ಲ್ಯೂಡಿ 41 ಎಲ್ಬಿಡಬ್ಲ್ಯೂ 70, ದಿನಾಂಕ 25ನೇ ಜನವರಿ, 1973 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
ನೀರಾವರಿಗಾಗಿ ನೈಸರ್ಗಿಕ ತೊರೆಯ ನೀರಿನ ಬಳಕೆಯ ಅನುಮತಿಗಾಗಿ ಅರ್ಜಿ ಗೆ:
ನೀರಾವರಿ ಅಧಿಕಾರಿ, . . . . . . . . . . ವಿಭಾಗ . . . . . . . . . . . ಜಿಲ್ಲೆಯ . . . . . . . . . . ತಾಲೂಕಿನ . . . . . . . . . ಗ್ರಾಮದ ನಿವಾಸಿಯಾದ . . .
. . . . . . . . ಎಂಬ ನಾನು, ಇಲ್ಲಿ ಇನ್ನು ಮುಂದೆ ವಿವರಿಸಿರುವ ಜಮೀನಿನ ನೀರಾವರಿ ಉದ್ದೇಶಕ್ಕಾಗಿ, ಕರ್ನಾಟಕ ನೀರಾವರಿ ಅಧಿನಿಯಮ, 1965 ಮತ್ತು ನೀರಾವರಿಗೆ ಸಂಬಂಧಪಟ್ಟ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರೆ ಕಾನೂನು ಮತ್ತು ಕರ್ನಾಟಕ ನೀರಾವರಿ ನಿಯಮಗಳು, 1965 ಇವುಗಳ ಉಪಬಂಧಗಳಿಗೊಳಪಟ್ಟು ಮತ್ತು ಅಲ್ಲದೆ ಸೂಚನೆಗಳಲ್ಲಿ ಒಳಗೊಂಡ ಉಪಬಂಧಗಳು ಮತ್ತು ಈ ಅರ್ಜಿಯ ಕೊನೆಯಲ್ಲಿ ನಿರ್ದಿಷ್ಟಪಡಿಸಿದ ಮತ್ತು ನಾನು ಒಪ್ಪಿಕೊಂಡಿರುವ ಷರತ್ತುಗಳಿಗೊಳಪಟ್ಟು, ನೈಸರ್ಗಿಕ ತೊರೆ/ ನದಿಯಿಂದ ನೀರನ್ನು ಬಳಸಲು ಅನುಮತಿ ಕೋರಿ ಈ ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ.-
| ಗ್ರಾಮದ | ಸರ್ವೆ ನಂಬರ್ | ಹಿಡುವಳಿ | ನೀರಾವರಿ | ಅನುಮತಿ |
| ಹೆಸರು | ಮತ್ತು ಅದರ | ವಿಸ್ತೀರ್ಣ | ಗೊಳ್ಳಬೇಕಾದ | ಅಗತ್ಯವಿರುವ |
| ವಿಸ್ತೀರ್ಣ | ವಿಸ್ತೀರ್ಣ | ಅವಧಿ | ||
| 1 | 2 | 3 | 4 | 5 |
ದಿನಾಂಕ ಅರ್ಜಿದಾರನ ಸಹಿ ಅಥವಾ ಎಡಗೈ ಹೆಬ್ಬೆಟ್ಟು ಗುರುತು ಸಾಕ್ಷಿದಾರನ ಸಹಿ ಅರ್ಜಿದಾರನ ಸಹಿ ಅಥವಾ ಎಡಗೈ ಹೆಬ್ಬೆಟ್ಟು ಗುರುತು 1.
(ಅರ್ಜಿಯ ಎಲ್ಲ ವಿವರಗಳನ್ನು ಅರ್ಜಿದಾರನೇ ಭರ್ತಿ ಮಾಡಬೇಕು).
ಈ ಮಂಜೂರಾತಿಗಾಗಿ ಮುಂದಕ್ಕೆ ಕಳುಹಿಸಲಾಗಿದೆ:
(1) ಮಂಜೂರು ಮಾಡಬೇಕಾದ ಪ್ರದೇಶ
(2) ಮಂಜೂರಾತಿಯ ಅವಧಿ
(3) ಎಕರೆ ಒಂದಕ್ಕೆ . . . . . . . . . . ರಿಂದ . . . . . . . . . . ವರೆಗೆ ವಿಧಿಸಬೇಕಾದ ನೀರಿನ ದರ ಸಹಿ:
ದಿನಾಂಕ: ಸಹಿ:
ಮಂಜೂರು ಮಾಡಲಾಗಿದೆ ಸಹಿ:
ದಿನಾಂಕ: ಸಹಿ:
ಸೂಚನೆಗಳು 1. ಅರ್ಜಿಯನ್ನು ದ್ವಿಪ್ರತಿಯಲ್ಲಿ ನೀರಾವರಿ ಅಧಿಕಾರಿಗೆ ಅಥವಾ ಅಂಥ ಅರ್ಜಿಗಳನ್ನು ಸ್ವೀಕರಿಸಲು ಅವರಿಂದ ಅಧಿಕೃತನಾದ ಯಾರೇ ಅಧಿಕಾರಿಗೆ ಸಲ್ಲಿಸತಕ್ಕದ್ದು. ಅರ್ಜಿಯನ್ನು ಒಬ್ಬ ದೂತನ ಮೂಲಕ ಅಥವಾ ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ನೀಡಬಹುದು. 2. ಒಂದು ಆದೇಶವನ್ನು ಹೊರಡಿಸಿದಾಗ ಅದರ ನಕಲನ್ನು ನೀರಾವರಿ ಅಧಿಕಾರಿಗಳ ಆದೇಶ ಗಳೊಂದಿಗೆ ಹಿಂಬರಹ ಮಾಡಿ ಅರ್ಜಿದಾರನಿಗೆ ಹಿಂದಿರುಗಿಸಲಾಗುವುದು. 3. (1) ಏಕಮಾತ್ರ ಅಧಿಭೋಗದಾರ ಅಥವಾ ಎಲ್ಲ ಜಂಟಿ ಅಧಿಭೋಗದಾರರು (2) ಏಕಮಾತ್ರ ವರಿಷ್ಠ ಹಿಡುವಳಿದಾರ ಅಥವಾ ಎಲ್ಲ ಜಂಟಿ ವರಿಷ್ಠ ಹಿಡುವಳಿದಾರರು (3) ಮಂಜೂರಾತಿಯ ಅವಧಿವರೆಗೆ ಜಮೀನಿನ ನೀರಾವರಿ ಸಾಗುವಳಿಯನ್ನು ಮಾಡಲು ಹಕ್ಕುಳ್ಳ ಒಬ್ಬ ವ್ಯಕ್ತಿ ಅಥವಾ (4) ಅಂಥ ಮಂಜೂರಾತಿ ಸ್ವೀಕರಿಸಲು ಈ ಸಂಬಂಧದಲ್ಲಿ ವಿಧ್ಯುಕ್ತವಾಗಿ ಪ್ರಾಧಿಕೃತನಾದ ಒಬ್ಬ ವ್ಯಕ್ತಿ ಇವರುಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ಯಾರೇ ವ್ಯಕ್ತಿಗೆ ಯಾವುದೇ ಜಮೀನಿನ ನೀರಾವರಿಗೆ ಯಾವುದೇ ಮಂಜೂರಾತಿಯನ್ನು ನೀಡಲಾಗುವುದಿಲ್ಲ. 4. ಅರ್ಜಿದಾರನು, ಜಮೀನಿನಲ್ಲಿ ನೀರಾವರಿ ಸಾಗುವಳಿಯನ್ನು ಮಾಡಲು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವುದಕ್ಕಾಗಿ ಜಮೀನಿನಲ್ಲಿ ಅವನಿಗಿರುವ ಹಿತಾಸಕ್ತಿಯ ಸ್ವರೂಪ ಅಥವಾ ಅವನು ಹೊಂದಿರುವ ಅಧಿಕಾರ-ಇವುಗಳನ್ನು 2ನೇ ಖಂಡದಲ್ಲಿ ತಿಳಿಸಬೇಕು. 5. ಈ ಬಗೆಯ ನೀರಾವರಿಗಾಗಿ ಸೂಕ್ತವಲ್ಲವೆಂದು ಕಂಡು ಬರುವ ಯಾವುದೇ ಜಮೀನನ್ನು ನೀರಾವರಿಗೊಳಪಡಿಸಲು ಅನುಮತಿಯನ್ನು ನಿರಾಕರಿಸಲಾಗುವುದು. 6. ಮೇಲೆ ವಿವರಿಸಲಾದಂತೆ ಅರ್ಜಿಯಲ್ಲಿ ಪೂರ್ಣ ವಿವರಗಳನ್ನು ನೀಡಿರದಿದ್ದರೆ ಮತ್ತು ಈ ಸಂಬಂಧದಲ್ಲಿ ನೀರಾವರಿ ಅಧಿಕಾರಿಯು ಅಗತ್ಯಪಡಿಸಿದ ಯಾವುದೇ ಮಾಹಿತಿಯನ್ನು ಒದಗಿಸಲು ವಿಫಲರಾದ ಸಂದರ್ಭದಲ್ಲಿ ಅಂಥ ಅರ್ಜಿಯನ್ನು ತಿರಸ್ಕರಿಸಲು ಬದ್ಧವಾಗತಕ್ಕದ್ದು. [ಐದು ವರ್ಷಗಳ ಅವಧಿಗಾಗಿ ಮಾತ್ರ ಮತ್ತು ಅಂಥ 7. ಮಂಜೂರಾತಿಯನ್ನು ಕೇವಲ ತಾತ್ಕಾಲಿಕವಾಗಿ ಮತ್ತು 1 ಅನುಮತಿಯಿಂದ ಆ ಪಕ್ಷಕಾರನು ಆದ್ಯತೆಗೆ ಹಕ್ಕುಳ್ಳವನಾಗದಿದ್ದ ಪಕ್ಷದಲ್ಲಿ ನೀಡಬಹುದು. 8. ಅರ್ಜಿಗೆ ಸಂಬಂಧಿಸಿದಂತೆ ಅನುಮತಿ ನಿರಾಕರಿಸುವ ಅಥವಾ ತಿರಸ್ಕರಿಸುವ ಪ್ರತಿಯೊಂದು ಆದೇಶವು ಲಿಖಿತದಲ್ಲಿರತಕ್ಕದ್ದು ಮತ್ತು ನಿರಾಕರಣೆ ಅಥವಾ ತಿರಸ್ಕಾರಕ್ಕೆ ಕಾರಣಗಳನ್ನು ಸೂಚಿಸತಕ್ಕದ್ದು.
- ಅಧಿಸೂಚನೆ ಸಂಖ್ಯೆ ಜಿಎಸ್ಆರ್ 322, ದಿನಾಂಕ 20ನೇ ಡಿಸೆಂಬರ್, 1973 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. ಷರತ್ತುಗಳು 1. ಅರ್ಜಿಯನ್ನು ಮಂಜೂರು ಮಾಡಿದ ತರುವಾಯ, ನೀರಾವರಿ ಅಧಿಕಾರಿಯು ಮಂಜೂರು ಮಾಡಿದ ಪ್ರದೇಶದ ವಿಸ್ತೀರ್ಣ ಮತ್ತು ಅವಧಿಗೆ ನೀರಿನ ದರ ಸಂದಾಯವಾಗತಕ್ಕದ್ದು.
- ಮಂಜೂರಾದ ಪ್ರದೇಶದ ಮಿತಿಯನ್ನು ಮೀರತಕ್ಕದ್ದಲ್ಲ.
- ಕರ್ನಾಟಕ ನೀರಾವರಿ ಅಧಿನಿಯಮ, 1965ರ ಅಥವಾ ಕರ್ನಾಟಕ ನೀರಾವರಿ ಅಧಿನಿಯಮದ ಯಾವುದೇ ನಿಯಮದ ಯಾವುದೇ ಉಪಬಂಧ ಅಥವಾ ಈ ಅರ್ಜಿಯ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದರೆ, ನೋಟೀಸು ನೀಡದೆ ಅನುಮತಿಯು ರದ್ದುಗೊಳಿಸುವಿಕೆಗೆ ಅಥವಾ ಪೂರ್ಣವಾಗಿ ನಿಲ್ಲಿಸುವಿಕೆಗೆ ಬದ್ಧವಾಗಿರತಕ್ಕದ್ದು. 1 [ನಮೂನೆ-16 [19ಎ ನಿಯಮ ನೋಡಿ] ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ, . . . .. . . . . ಭೂಮಿಯಲ್ಲಿ ಬೆಳೆಯತಕ್ಕ ಬೆಳೆಗಳ ವಿಧಗಳನ್ನು ನಿಯಮಿಸುವುದು ಯುಕ್ತವಾಗಿರುವುದು ಮತ್ತು ಅಪೇಕ್ಷಣೀಯವಾಗಿರುವುದು ಎಂಬುದಾಗಿ ಕರ್ನಾಟಕ ಸರ್ಕಾರವು, ಕರ್ನಾಟಕ ನೀರಾವರಿ ಅಧಿನಿಯಮ, 1965ರ 32 (1)ನೇ ಪ್ರಕರಣದ ಮೇರೆಗೆ ಘೋಷಣೆಯನ್ನು (ಅಧಿಸೂಚನೆ ಸಂಖ್ಯೆ .. . . . . . . . ದಿನಾಂಕ . . . . . . . . . ವನ್ನು ನೋಡಿ) ಮಾಡಿರುವುದರಿಂದ;
ಈಗ, ಕರ್ನಾಟಕ ನೀರಾವರಿ ಅಧಿನಿಯಮ, 1965ರ 32 (2)ನೇ ಪ್ರಕರಣದ ಮೇರೆಗೆ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ನೀರಾವರಿ ಅಧಿಕಾರಿಯಾದ . . . . . . . . . . . ಎಂಬ ನಾನು ಸದರಿ ಅಧಿನಿಯಮದ 27ನೇ ಪ್ರಕರಣದ ಮೇರೆಗೆ ರಚಿಸಲಾಗಿರುವ ಸಮಿತಿಯೊಂದಿಗೆ ಸಮಾಲೋಚಿಸಿ ಮತ್ತು . . . . . . . ಜಿಲ್ಲೆಯ ಜಿಲ್ಲಾಧಿಕಾರಿಯವರ ಅನುಮೋದನೆ ಪಡೆದು ಈ ಮುಂದಿನ ಅನುಸೂಚಿಯಲ್ಲಿ 4ನೇ ಅಂಕಣದಲ್ಲಿ ಬೆಳೆಯಬಹುದಾದ ಬೆಳೆಗಳ ವಿಧಗಳಿಗೆ ಸಂಬಂಧಿಸಿದಂತೆ, 3ನೇ ಅಂಕಣದಲ್ಲಿನ ಸಂವಾದಿ ನಮೂದುಗಳಲ್ಲಿ ನಿರ್ದಿಷ್ಟಪಡಿಸಿರುವ ಭೂಮಿಗಳು ಮತ್ತು ಅದರ 5 ಮತ್ತು 6ನೇ ಅಂಕಣಗಳಲ್ಲಿನ ಸಂವಾದಿ ನಮೂನೆಗಳಲ್ಲಿ ಬಿತ್ತನೆ ಮತ್ತು ನಾಟಿಗೆ ಬೇಕಾಗುವ ಅವಧಿಯನ್ನು ಈ ಮೂಲಕ ನಿರ್ದಿಷ್ಟಪಡಿಸಿದ್ದೇನೆ.