Section 6ವೆಚ್ಚಗಳನ್ನು ಸಂದಾಯ ಮಾಡಲು ಬದ್ಧನಾದ ವ್ಯಕ್ತಿಯು ಸಂದಾಯ ಮಾಡಲು ತಪ್ಪಿದಾಗ ಕಾರ್ಯವಿಧಾನ
13ನೇ ಪ್ರಕರಣದ ಅಡಿಯಲ್ಲಿ ಆದೇಶವನ್ನು ನೀಡಲಾದ ವ್ಯಕ್ತಿಯು, ಸದರಿ ಪ್ರಕರಣದ ಮೇರೆಗೆ ಅಗತ್ಯಪಡಿಸಲಾದಂಥ ವೆಚ್ಚಗಳನ್ನು ಸಂದಾಯ ಮಾಡದಿದ್ದಾಗ, ನೀರಾವರಿ ಅಧಿಕಾರಿಯು, ಅದನ್ನು ಭೂ ಕಂದಾಯ ಬಾಕಿಯೆಂಬಂತೆ ವಸೂಲಿ ಮಾಡಬೇಕೆಂದು ಜಿಲ್ಲಾಧಿಕಾರಿಯವರಿಗೆ ತಿಳಿಸತಕ್ಕದ್ದು.