ಈ ಉಪವಿಧಿಗಳಲ್ಲಿ ಲಗತ್ತಿಸಲಾಗಿರುವ ಆದರೆ ವ್ಯಾಖ್ಯಾನಿಸದೇ ಇರುವ ಅನುಸೂಚಿಗಳು, ಪದಗಳು ಮತ್ತು ಬಳಕೆ ಮಾಡಿರುವ ಅಭಿವ್ಯಕ್ತಿಗಳು ಪರಿಸ್ಥಿತಿಯ ಅಗತ್ಯ ಸಂದರ್ಭಗಳ ಹೊರತಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅದಕ್ಕೆ ಸಂಬಂಧಿತ ಅರ್ಥವನ್ನು ಹೊಂದಿರುತ್ತವೆ.
3.1 "ಏಜೆನ್ಸಿ ಅಥವಾ ಸೇವೆ ಒದಗಿಸುವವರು" ಎಂದರೆ ಎಸ್ಡಬ್ಲ್ಯುಎಂ ನಿಯಮಾವಳಿ 2016ರ ಅನ್ವಯ ಮತ್ತು ಈ ಉಪವಿಧಿ 2019ರ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವವರಾಗಿರುತ್ತಾರೆ. ಇವರು ಕಾರ್ಮಿಕ ಕಾಯ್ದೆ ಸೇರಿದಂತೆ ಅನ್ವಯವಾಗುವ ಎಲ್ಲಾ ನಿಬಂಧನೆಗಳನ್ನು ಪಾಲಿಸುವಂತಹ ಯಾವುದೇ ವ್ಯಕ್ತಿ/ ಯಾವುದೇ ಸಂಸ್ಥೆ, ನೊಂದಾಯಿತ ಸಂಘ, ಟ್ರಸ್ಟ್, ಪಾಲುದಾರ, ಸೀಮಿತ ಬಾಧ್ಯತೆಯ ಪಾಲುದಾರಿಕೆ ಮತ್ತು/ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಇನ್ನು ಮುಂದೆ ಬಿಬಿಎಂಪಿ) ನೇಮಿಸಲ್ಪಟ್ಟ ಅಥವಾ ಅನುಮತಿ ಪಡೆದಿರುವಂತಹ ಚಿಂದಿ ಆಯುವವರ ಸಂಘ ಮತ್ತು /ಅಥವಾ ಯಾವುದೇ ಇತರ ನೋಂದಾಯಿತ ಸಂಸ್ಥೆ ಅಥವಾ ಅದರ ಪರವಾಗಿ ಕಾರ್ಯನಿರ್ವಹಿಸಲು ನೋಂದಾಯಿತ ಅಥವಾ ನೇಮಕ ಮಾಡಲ್ಪಟ್ಟಿರುವ ಮಾರಾಟಗಾರ ಆಗಿರಬಹುದಾಗಿದೆ.
3.2 "ಏರೋಬಿಕ್ ಕಾಂಪೋಸ್ಟಿಂಗ್" (ಆಮ್ಲಜನಕದ ಮೂಲಕ ಮಿಶ್ರಗೊಬ್ಬರ) ಎಂದರೆ ಆಮ್ಲಜನಕದ ಮೂಲಕ ಸಾವಯವ ವಸ್ತುಗಳ ಸೂಕ್ಷ್ಮಜೀವ ವೈಜ್ಞಾನಿಕ ವಿಭಜನೆಯ ನಿಯಂತ್ರಿತ ಪ್ರಕ್ರಿಯೆ.
3.3 "ಅನ್ಏರೋಬಿಕ್ ಡೈಜೆಶನ್" ಎಂದರೆ ಆಮ್ಲಜನಕರಹಿತವಾಗಿ ಸಾವಯವ ವಸ್ತುಗಳ ಸೂಕ್ಷ್ಮಜೀವ ವಿಭಜನೆಯ ನಿಯಂತ್ರಿತ ಪ್ರಕ್ರಿಯೆ.
3.4 "ಅಧಿಕೃತಗೊಳಿಸುವುದು" ಎಂದರೆ ಘ ನತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿಗೆ ಜವಾಬ್ಧಾರಿಯುತವಾಗಿರುವ ಸ್ಥಳೀಯ ಪ್ರಾಧಿಕಾರ, ಅಥವಾ ಇನ್ನಿತರ ಯಾವುದೇ ಏಜೆನ್ಸಿ ಅಥವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್ಪಿಸಿಬಿ) ಅನುಮತಿ ಪಡೆದಿರುವ ವ್ಯವಸ್ಥೆಯೊಂದರ ನಿರ್ವಾಹಕ.
3.5 "ಜೈವಿಕ ವಿಘಟನೀಯ (ಕೊಳೆತು ಹೋಗುವ) ತ್ಯಾಜ್ಯ" (ಬಯೋಡೀಗ್ರೇಡಬಲ್ ವೇಸ್ಟ್) ಎಂದರೆಯಾವುದೇ ಸಾವಯವ ವಸ್ತುವನ್ನು ಸೂಕ್ಷ್ಮಾಣು ಜೀವಿಗಳನ್ನು ಬಳಸಿ ಸರಳವಾದ ಮತ್ತು ಸ್ಥಿರವಾದ ಸಂಯುಕ್ತಗಳನ್ನಾಗಿ ವಿಘಟಿಸಬಹುದಾದ ತ್ಯಾಜ್ಯ.
3.6 "ಬಯೋ ಮಿಥೇನೇಶನ್" ಎಂದರೆ ಮಿಥೇನ್ನ್ನು ಸಮೃದ್ಧ ಪ್ರಮಾಣದಲ್ಲಿ ಹೊಂದಿರುವ ಬಯೋಗ್ಯಾಸ್ (ಜೈವಿಕ ಅನಿಲ) ಉತ್ಪಾದನೆಗೆ ಕಿಣ್ವ (ಎಂಜೈಮ್)ಗಳನ್ನು ಬಳಸಿ ಸಾವಯವ ವಸ್ತುಗಳನ್ನು ವಿಘಟಿಸುವುದು (ಕೊಳೆಸುವುದು).
3.7 "ಬ್ಲಾಕ್" ಎಂದರೆ ಏಳುನೂರ ಐವತ್ತು (750) ಮನೆಗಳನ್ನು ಹೊಂದಿರುವ, 300ರಷ್ಟು ಸಣ್ಣ ಅಂಗಡಿಗಳನ್ನು ಮತ್ತು ವಾಣಿಜ್ಯ ಸಂಸ್ಥೆಗಳು, ಈ ಮನೆಗಳನ್ನು ಹಾಗೂ ಸಂಸ್ಥೆಗಳನ್ನು ಸಂಪರ್ಕಿಸುವ ಬೀದಿಗಳು, ರಸ್ತೆಗಳನ್ನು ಹೊಂದಿರುವ ಪ್ರದೇಶವಾಗಿದ್ದು ಬಿಬಿಎಂಪಿಯು ಒಬ್ಬ ವ್ಯಕ್ತಿಗೆ ತಲಾವಾರು ಉತ್ಪನ್ನವಾಗುವ ಘನತ್ಯಾಜ್ಯ ಪ್ರಮಾಣಕ್ಕೆ ಅನುಗುಣವಾಗಿ ಅಥವಾ ಸ್ಥಳೀಯ ಸ್ಥಿತಿಗತಿಗಳನ್ನು ಅನುಸರಿಸಿ ಪರಿಣಾಮಕಾರಿಯಾದ ತ್ಯಾಜ್ಯ ಸಂಗ್ರಹ, ಸಾಗಣಿಕೆ ಮತ್ತು ಸಂಸ್ಕರಣೆಗೆ ಅನುಗುಣವಾಗಿ ಹೊಂದಾಣಿಕೆ ಮಾಡಬಹುದಾಗಿದೆ.
3.8 "ಬಯೋ ಮೆಡಿಕಲ್ ವೇಸ್ಟ್" (ವೈದ್ಯಕೀಯ ಜೈವಿಕ ತ್ಯಾಜ್ಯ) ಎಂದರೆ ಈ ಸಂದರ್ಭಗಳಲ್ಲಿ ಸಂಗ್ರಹವಾದ ತ್ಯಾಜ್ಯ (i) ಮನುಷ್ಯರ ಅಥವಾ ಪ್ರಾಣಿಗಳಲ್ಲಿನ ರೋಗದ ಪತ್ತೆ, ಚಿಕಿತ್ಸೆ, ಅಥವಾ ರೋಗ ನಿರೋಧ ಪ್ರಕ್ರಿಯೆ ಸಂದರ್ಭಗಳಲ್ಲಿ ಅಥವಾ ಸಂಶೋಧನಾ ಚಟುವಟಿಕೆಗಳಲ್ಲಿ ಅಥವಾ ಸಂಬಂಧಿತ ಸಂದರ್ಭಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಅಥವಾ
(ii) ಮನುಷ್ಯರ ಅಥವಾ ಪ್ರಾಣಿಗಳಲ್ಲಿನ ರೋಗದ ಪತ್ತೆ, ಅಥವಾ ರೋಗ ನಿರೋಧ ಪ್ರಕ್ರಿಯೆ ಸಂದರ್ಭಗಳಲ್ಲಿ ಅಥವಾ ಸಂಶೋಧನಾ ಚಡುವಟಿಕೆಗಳಲಿ ಉಪಯೋಗಕ್ಕಾಗಿ ಜೀವಿಗಳು ಅಥವಾ ಸೂಕ್ಷಾಣು ಜೀವಿಗಳನ್ನು ಬಳಸಿ ಮಾಡಲಾದ ಉತ್ಪನ್ನಗಳು ಅಥವಾ ಚಯಾಪಚಯ ಪ್ರಕ್ರಿಯೆ ಅಥವಾ ಜೀವ ರಸಾಯನಿಕ (ಬಯೋಕೆಮಿಕಲ್) ಪ್ರತಿಕ್ರಯೆಗಳಿಂದ ಉತ್ಪನ್ನವಾಗುವ ತ್ಯಾಜ್ಯ.
(iii) ಆರೋಗ್ಯ ಶಿಬಿರಗಳಲ್ಲಿ; ಅನುಸೂಚಿ 1ರ ಡಿ ಭಾಗದಲ್ಲಿ ಸಚಿತ್ರ ವಿವರಣಾ ಪಟ್ಟಿ ನೀಡಲಾಗಿದೆ.
3.9 "ಬ್ರಾಂಡ್ ಓನರ್" (ಉತ್ಪನ್ನದ ಮಾಲೀಕರು) ಎಂದರೆ ನೋಂದಾಯಿತ ಉತ್ಪನ್ನದ ಲೇಬಲ್ನ ಅಡಿಯಲ್ಲಿ ಮಾರಾಟ ಮಾಡುವ ವ್ಯಕ್ತಿ ಅಥವಾ ಸಂಸ್ಥೆ.
3.10 "ಬೃಹತ್ ತ್ಯಾಜ್ಯ ಉತ್ಪಾದಕ" (ಬಲ್ಕ್ ವೇಸ್ಟ್ ಜನರೇಟರ್) ಎಂದರೆ ಕೇಂದ್ರ ಸರ್ಕಾರದ ಇಲಾಖೆಗಳು ಅಥವಾ ಅಧೀನಕೊಳಪಟ್ಟ ಇಲಾಖೆಗಳನ್ನು ಹೊಂದಿರುವ ಕಟ್ಟಡಗಳು, ರಾಜ್ಯ ಸರ್ಕಾರದ ಇಲಾಖೆಗಳು ಅಥವಾ ಅಧೀನಕ್ಕೊಳಪಟ್ಟ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕ ರಂಗದ ಅಧೀನ ಸಂಸ್ಥೆಗಳು ಅಥವಾ ಖಾಸಗಿ ಸಂಸ್ಥೆಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಇತರೇ ಶೈಕ್ಷಣಿಕ ಸಂಸ್ಥೆಗಳು, ವಸತಿ ನಿಲಯಗಳು, ಹೊಟೇಲುಗಳು, ವಾಣಿಜ್ಯ ಸಂಕೀರ್ಣಗಳು, ಮಾರುಕಟ್ಟೆ, ಪೂಜಾ ಸ್ಥಳಗಳು, 50ಕ್ಕೂ ಹೆಚ್ಚು ಘಟಕಗಳನ್ನು ಹೊಂದಿರುವ ವಸತಿ ಸಮುಚ್ಛಯ (ಅಪಾರ್ಟ್ಮೆಂಟ್)ಗಳು, ಕ್ರೀಡಾಂಗಣ, ಕ್ರೀಡಾ ಮತ್ತು ಸಂಕೀರ್ಣಗಳು, ದಿನಮೊಂದಕ್ಕೆ ಸರಾಸರಿ 10 ಕೆಜಿಗಿಂತ ಹೆಚ್ಚಿನ ಪ್ರಮಾಣದ ತ್ಯಾಜ್ಯ ಉತ್ಪಾದಿಸುವ ಸ್ಥಳಗಳು. ಹೀಗಿದ್ದರೂ ಕಾಲಕ್ರಮೇಣ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರೆಂದು ಘೋಷಿತವಾಗಿರುವವರ ತ್ಯಾಜ್ಯ ಉತ್ಪಾದನೆಯ ಪ್ರಮಾಣದ ಪರಿಮಿತಿಯನ್ನು ಹೆಚ್ಚಿಸುವ, ತ್ಯಾಜ್ಯ ಸಂಗ್ರಹಣೆಯ ವಿಧಾನವನ್ನು ಬದಲಿಸುವ ಅಧಿಕಾರವನ್ನು ಅಧಿಕೃತ ಆದೇಶದ ಮೂಲಕ ಅಧಿಸೂಚಿಸಿರುವಂತೆ ಬಿಬಿಎಂಪಿಯು ಹೊಂದಿರುತ್ತದೆ.
3.11 "ಉದ್ಯಾನಗಳು ಮತ್ತು ತೋಟಗಾರಿಕಾ ಬೃಹತ್ ತ್ಯಾಜ್ಯ" ಎಂದರೆ ಉದ್ಯಾನವನಗಳು, ತೋಟಗಳು, ಸಂಚಾರಿ ದ್ವೀಪಗಳು, ರಸ್ತೆ ವಿಭಜಕಗಳು ಹಾಗೂ ಹುಲ್ಲು, ಮರದ ತುಂಡುಗಳು, ಕಳೆಗಳು, ಮರದ 'ಕಂದು' ಬಣ್ಣದ ಸಮೃದ್ಧ ಇಂಗಾಲ ಹೊಂದಿರುವ ಕತ್ತರಿಸಿದ ಶಾಖೆಗಳು, ರೆಂಬೆಗಳು, ಮರದ ತೊಗಟೆಗಳು, ಒಣಹುಲ್ಲು ಕಡ್ಡಿ ಅಥವಾ ಸತ್ತ ಎಲೆಗಳು ಮತ್ತು ಮರದ ಸವರಿದ ಭಾಗಗಳು ಹೀಗೆ ಪ್ರತಿದಿನದ ಸಂಗ್ರಹಣೆಯಲ್ಲಿ ಜೈವಿಕವಾಗಿ ಕೊಳೆಯುವ ಸಂಗ್ರಹ ಮಾಡಲಾಗದ ವಸ್ತುಗಳು.
3.12 "ಬೃಹತ್ ತ್ಯಾಜ್ಯ"ವು ವಾಣಿಜ್ಯ ಮತ್ತು ವಸತಿಗಳಿಂದ ಸಂಗ್ರಹಿಸಲ್ಪಟ್ಟು ಅವುಗಳ ರಾಶಿ, ಆಕಾರ, ಗಾತ್ರ ಅಥವಾ ಪ್ರಮಾಣದಿಂದಾಗಿ ಬಿಬಿಎಂಪಿಯ ಅಭಿಪ್ರಾಯದಂತೆ ಮತ್ತು /ಅಥವಾ ತ್ಯಾಜ್ಯವನ್ನು ಪ್ರತಿದಿನ ಬಿಬಿಎಂಪಿಯ ಮನೆ ಮನೆ ಸಂಗ್ರಹದ ವೇಳೆ ಸಂಗ್ರಹಿಸುವುದು ಸುಲಭ ಸಾಧ್ಯವಾಗದೇ ಇರುವುದು. ಉದಾಹರಣೆಗೆ ಹಳೆಯ ಹಾಸಿಗೆ, ಹಳೆಯ ಪೀಠೋಪಕರಣಗಳು. ಸಚಿತ್ರ ವಿವರಣೆಯನ್ನು ಅನುಸೂಚಿ 1ರ (ಇ) ವಿಭಾಗದಲ್ಲಿ ನೀಡಲಾಗಿದೆ.
3.13 "ಉಪವಿಧಿ" ಎಂದರೆ ಸ್ಥಳೀಯ ಸಂಸ್ಥೆಗಳಿಂದ ಅಧಿಸೂಚಿತವಾದ ನಿಯಂತ್ರಣ ಕ್ರಮಗಳು, ನಗರಗಳ ಗಣತಿ ಮತ್ತು ಅಧಿಸೂಚಿತ ಪ್ರದೇಶ ಉಪನಗರ ಮೊದಲಾದ ಕಡೆಗಳಲ್ಲಿ ಅವುಗಳ ವ್ಯಾಪ್ತಿಯಲ್ಲಿ ಈ ನಿಯಮಾವಳಿಗಳ ಅನುಷ್ಟಾನಕ್ಕೆ ಅನುವು ಮಾಡಿಕೊಡುವಂತಹುದಾಗಿದೆ.
3.14 "ಸಿ ಮತ್ತು ಡಿ ನಿಯಮಗಳು" ಎಂದರೆ ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯ ನಿಯಮಾವಳಿಗಳು, 2016 ಆಗಿದ್ದು, ಇದು ಬಿಬಿಎಂಪಿಯ ಅಧಿಸೂಚನೆಗಳು, ಆದೇಶಗಳು ಹಾಗೂ ನಿರ್ದೇಶನಗಳನ್ನು ಮತ್ತು/ಅಥವಾ ಸೂಕ್ತ ಸರಕಾರೀ ಪ್ರಾಧಿಕಾರಗಳ ಸಂಬಂಧಿಸಿದ ನಿಯಮಾವಳಿಗಳನ್ನು ಹೊಂದಿರುವುದು.
3.15 "ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯ"ವು ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯ ನಿರ್ವಹಣಾ ನಿಯಮಾವಳಿ 2016ರ ನಿಯಮ(3) ಉಪನಿಯಮ(1)ರ ಅನುಸೂಚಿ(ಸಿ)ಯಲ್ಲಿ ನೀಡಲಾದ ಅರ್ಥವನ್ನು ಹೊಂದಿರಬೇಕು.
3.16 "ಸಿಪಿಸಿಬಿ" ಎಂದರೆ ಕೇಂದ್ರ ಪರಿಸರ ನಿಯಂತ್ರಣ ಮಂಡಳಿ.
3.17 "ಸ್ವಚ್ಛ ಪ್ರದೇಶ" ಎಂದರೆ ಎದುರುಗಡೆ ಇರುವ ಸಾರ್ವಜನಿಕ ಸ್ಥಳ ಮತ್ತು ಸುತ್ತಲೂ ಅಥವಾ ಕಾಲುದಾರಿಯ ಅಂಚಿನವರೆಗೂ ವಿಸ್ತರಿಸಿರುವ ಯಾವುದೇ ಆವರಣ ಹಾಗೂ ಚರಂಡಿ, ಪಾದಚಾರಿ ಮಾರ್ಗ ಮತ್ತು ಕಾಲು ದಾರಿಯ ಅಂಚು.
3.18 "ಸ್ವಚ್ಛತಾ ಶುಲ್ಕ" ಎಂದರೆ ಯಾವುದೇ ಕಾರ್ಯಕ್ರಮಗಳ ನಿರ್ವಾಹಕರು/ಸಂಘಟಕರ ಬಳಿಯಿಂದ ಕಾರ್ಯಕ್ರಮದ ಸ್ಥಳ ಸ್ವಚ್ಛಗೊಳಿಸಲು ಸಂಗ್ರಹಿಸುವ ಮೊತ್ತ.
3.19 "ದಹನಕಾರಿ/ಅಗ್ನಿಕಾರಕ ತ್ಯಾಜ್ಯ"ಎಂದರೆ ಜೈವಿಕವಾಗಿ ವಿಘಟನೆ ಆಗದ (ಕರಗದೇ ಇರುವುದು), ಪುನರ್ ಬಳಕೆ ಮಾಡಲಾಗದ, ಮತ್ತೆ ಬಳಸಲಾಗದ, ಹಾನಿಕಾರಕವಲ್ಲದ ಘನ ತ್ಯಾಜ್ಯವಾಗಿದ್ದು 1500 ಕಿಲೋ ಕ್ಯಾಲೊರಿ/ಕೆಜಿ ಕನಿಷ್ಟ ಕ್ಯಾಲೊರಿ ಮೌಲ್ಯವನ್ನು ಹೊಂದಿರುವುದಾಗಿರುತ್ತದೆ. ಪ್ಲಾಸ್ಟಿಕ್, ಮರದ ತಿರುಳು ಮೊದಲಾದವುಗಳಂತಹ ಕ್ಲೋರಿನ್ಯುಕ್ತವಲ್ಲದ ವಸ್ತುಗಳು.
3.20 "ಸಮುದಾಯ ತ್ಯಾಜ್ಯ ಸಂಗ್ರಹ ಡಬ್ಬ"ಎಂದರೆ ಮಹಾನಗರ ಪಾಲಿಕೆಯಿಂದ ಸ್ಥಾಪನೆಗೊಂಡು ಮಾಲೀಕರು ಮತ್ತು ಅಥವಾ/ಒಂದು ಅಥವಾ ಅದಕ್ಕಿಂತ ಹೆಚ್ಚು ಆವರಣಗಳಲ್ಲಿ ಇರುವವರ ಸಹಯೋಗದೊಂದಿಗೆ ನಿರ್ವಹಿಸಲ್ಪಡುವ ವಿಂಗಡಿಸಿದ ಘನ ತ್ಯಾಜ್ಯವನ್ನು ರಸ್ತೆ ಬದಿ/ಅಥವಾ ಅಂತಹ ಮಾಲೀಕರ ಯಾವುದೇ ಆವರಣದಲ್ಲಿ/ಆಶ್ರಯಿತರ ಅಥವಾ ಅವರ ಸಾಮಾನ್ಯ ಆವರಣದಲ್ಲಿ ಸಂಗ್ರಹಿಸುವ ವ್ಯವಸ್ಥೆ.
3.21 "(ಕಾಂಪೋಸ್ಟ್) ಗೊಬ್ಬರ ತಯಾರಿಕೆ" (ಕಾಂಪೋಸ್ಟಿಂಗ್) ಎಂದರೆ ಸಾವಯವ ವಸ್ತುಗಳ ಸೂಕ್ಷ್ಮಾಣು ಜೀವ ವಿಭಜನೆಯನ್ನೊಳಗೊಂಡ ನಿಯಂತ್ರಿತ ಪ್ರಕ್ರಿಯೆ.
3.22 "ಸಹ ಸಂಸ್ಕರಣೆ" ಎಂದರೆ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ವಿಘಟನೆ ಹೊಂದದ (ಕೊಳೆತು ಹೋಗದ) ಮತ್ತು ಮರು ಬಳಕೆ ಮಾಡಲಾಗದ ಘನ ತ್ಯಾಜ್ಯಗಳ ಬಳಕೆ ಆಗಿದೆ. ಈ ಘನತ್ಯಾಜ್ಯಗಳ ಕ್ಯಾಲೊರಿಕ್ ಮೌಲ್ಯ 1500 ಕಿಲೊ ಕ್ಯಾಲೊರಿ/ಕೆಜಿಗಿಂತ ಹೆಚ್ಚಿದ್ದು ಘನ ತ್ಯಾಜ್ಯಗಳನ್ನು ಕಚ್ಚಾ ವಸ್ತುಗಳಾಗಿ ಅಥವಾ ಶಕ್ತಿಯ ಮೂಲವಾಗಿ ಅಥವಾ ಎರಡನ್ನೂ ನೈಸರ್ಗಿಕ ಖನಿಜ ಸಂಪನ್ಮೂಲಗಳು ಮತ್ತು ಪಳೆಯುಳಿಕೆ ಇಂಧನಗಳ ಬದಲಿಯಾಗಿ ಅಥವಾ ಹೆಚ್ಚುವರಿಯಾಗಿ ಬಳಕೆ ಮಾಡುವುದಾಗಿದೆ.
3.23 "ವಿಕೇಂದ್ರಿತ ಸಂಸ್ಕರಣೆ" ಎಂದರೆ ವಿಘಟನೆ ಹೊಂದಬಹುದಾದ ತ್ಯಾಜ್ಯಗಳ ಗರಿಷ್ಟ ಸಂಸ್ಕರಣೆಗಾಗಿ ಚದುರಿಕೊಂಡಿರುವ ಸ್ಥಳೀಯ ವ್ಯವಸ್ಥೆಗಳನ್ನು ಸ್ಥಾಪಸಿಸುವುದು. ಪುನರ್ಬಳಕೆ ಮಾಡಬಹುದಾದವುಗಳನ್ನು ಅವುಗಳು ಉತ್ಪಾದನೆ ಆಗುವ ಮೂಲಕ್ಕೆ ಹತ್ತಿರದಲ್ಲೇ ಸಂಗ್ರಹಿಸುವುದು. ಈ ಮೂಲಕ ತ್ಯಾಜ್ಯದ ಸಂಸ್ಕರಣೆ ಅಥವಾ ವಿಲೇಗೆ ಸಾಗಾಟವನ್ನು ಕನಿಷ್ಟಗೊಳಿಸುವುದು.
3.24. "ವಿಲೇವಾರಿ"ಎಂದರೆ ಅಂತರ್ಜಲ ಮಲಿನ ಹೊಂದುವುದನ್ನು ತಪ್ಪಿಸಲು, ಮೇಲ್ಮೈ ನೀರು ಮಲಿನವಾಗುವುದನ್ನು ತಡೆಯಲು, ಸುತ್ತುವರಿದ ಗಾಳಿ ಮತ್ತು ಪ್ರಾಣಿ ಪಕ್ಷಿಗಳು ಆಕರ್ಷಿತವಾಗದಂತೆ ಅಂತಿಮವಾಗಿ ಮತ್ತು ಸುರಕ್ಷಿತವಾಗಿ ಸಂಸ್ಕರಿತ ಘನತ್ಯಾಜ್ಯವನ್ನು ವಿಲೇವಾರಿ ಮಾಡುವುದಾಗಿದೆ. ಇದನ್ನುಜಡವಾಗಿ ಬೀದಿಗಳನ್ನು ಗುಡಿಸುವುದು, ಭೂಮಟ್ಟದಲ್ಲಿರುವ ಚರಂಡಿಗಳಿಂದ ಹೂಳು ತೆಗೆಯುವುದರ ಮೂಲಕ ಅಂತರ್ಜಲ, ಮೇಲ್ಮೈ ನೀರು,ಸುತ್ತುವರಿದ ಗಾಳಿ ಮಲಿನವಾಗದಂತೆ ಪ್ರಾಣಿ ಪಕ್ಷಿಗಳು ಆಕರ್ಷಿತವಾಗದಂತೆ ಮಾಡುವುದಾಗಿದೆ.
3.25 "ಅಪಾಯಕಾರಿ ಗೃಹ ತ್ಯಾಜ್ಯ" ಎಂದರೆ ಗೃಹ (ಮನೆಗಳ) ಹಂತದಲ್ಲಿ ಉತ್ಪತ್ತಿಯಾದ ತ್ಯಾಜ್ಯವಾಗಿದೆ. ಬಳಸಿ ಬಿಟ್ಟಿರುವ ಪೇಂಟ್ಗಳ ಡ್ರಮ್ಗಳು, ಕ್ರಿಮಿನಾಶಕ ಕ್ಯಾನ್ಗಳು, ಸಿಎಫ್ಎಲ್ ಬಲ್ಬ್ಗಳು, ಟ್ಯೂಬ್ಲೈಟ್, ಅವಧಿ ಮೀರಿದ ಔಷಧ, ಒಡೆದು ಹೋಗಿರುವ ಪಾದರಸದ ಉಷ್ಣತಾ ಮಾಪಕ (ಥರ್ಮೋ ಮೀಟರ್)ಗಳು, ಬಳಸಿದ ಬ್ಯಾಟರಿಗಳು, ಬಳಕೆ ಮಾಡಿದ ಸೂಜಿ, ಸಿರಿಂಜ್ಗಳು ಮತ್ತು ಮಲಿನಗೊಂಡಿರುವ/ಕಲುಷಿತ ಹತ್ತಿ ಇತ್ಯಾದಿಗಳನ್ನು ಇದು ಒಳಗೊಂಡಿದೆ.
3.26 "ಮನೆ ಮನೆ ಸಂಗ್ರಹಣೆ" ಮನೆ ಮನೆಗಳ ಬಾಗಿಲಿನಿಂದ, ಅಂಗಡಿಗಳಿಂದ, ವಾಣಿಜ್ಯ ಸಂಸ್ಥೆಗಳಿಂದ, ಕಛೇರಿಗಳಿಂದ, ಸಂಸ್ಥೆಗಳು ಅಥವಾ ಇನ್ನಿತರ ಗೃಹೇತರ ಆವರಣಗಳಿಂದ ಘನ ತ್ಯಾಜ್ಯ ಸಂಗ್ರಹ. ಭಾರಿ ಪ್ರಮಾಣದ ಉತ್ಪಾದಕರನ್ನು ಇದು ಹೊರತಾಗಿದೆ.
3.27"ಒಣ ತ್ಯಾಜ್ಯ" ಎಂದರೆ ವಿಘಟನೆ ಹೊಂದದ ತ್ಯಾಜ್ಯ ಮತ್ತು ನಿಧಾನವಾಗಿ ಬೀದಿ ಗುಡಿಸುವುದು. ಇದು ಪುನರ್ಬಳಕೆ ಮಾಡಬಹುದಾದ ಮತ್ತು ಪುನರ್ಬಳಕೆ ಮಾಡಲಾಗದ ತ್ಯಾಜ್ಯ, ಅಗ್ನಿಕಾರಕ/ದಹನಕಾರಿ ತ್ಯಾಜ್ಯಗಳನ್ನು ಒಳಗೊಂಡಿದೆ.
3.28 "ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ಅಥವಾ ಡಿಡಬ್ಲ್ಯುಡಿಸಿ" ಎಂದರೆ ವಿಕೇಂದ್ರಿತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ. ವಿಘಟನೆ ಹೊಂದದ ತ್ಯಾಜ್ಯ ನಿರ್ವಹಣೆಯನ್ನು ಇದು ಒಳಗೊಂಡಿದ್ದು ಬಿಬಿಎಂಪಿ ಮತ್ತು/ಅಥವಾ ಏಜೆನ್ಸಿ/ಸೇವೆ ಒದಗಿಸುವವರು/ಚಿಂದಿ ಆಯುವವರ ಸಂಸ್ಥೆಗಳು/ಸ್ವಸಹಾಯ ಸಂಘಗಳು ಇತ್ಯಾದಿಗಳನ್ನು ಒಳಗೊಂಡಿದೆ.
3.29 "ಹಳೆಯ ತೆರೆದ ತ್ಯಾಜ್ಯ ರಾಶಿ" ಎಂದರೆ ಭೂ ಭರ್ತಿಯ ನೈರ್ಮಲ್ಯ ತತ್ವಗಳನ್ನು ಪಾಲಿಸದೇ ಘನತ್ಯಾಜ್ಯವನ್ನು ವಿಲೇವಾರಿ ಮಾಡಲು ಸ್ಥಳೀಯ ಸಂಸ್ಥೆಗಳು ಬಳಕೆ ಮಾಡುವ ಜಾಗ.
3.30 "ಕಾರ್ಯಕ್ರಮಗಳು" ಎಂದರೆ ಯಾವುದೇ ಸಮಾರಂಭಗಳಿಗಾಗಿ, ಆಚರಣೆಗಳಿಗಾಗಿ, ಸಭೆಗಳಿಗಾಗಿ, ರ್ಯಾಲಿ, ಮೆರವಣಿಗೆ, ಹೊರಾಂಗಣ ಸಭಾಂಗಣದ ಚಟುವಟಿಕೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಸಿನೆಮಾ ಚಿತ್ರೀಕರಣಕ್ಕಾಗಿ ಸಮಾಗಮಗೊಳ್ಳುವುದು ಅಥವಾ ಸೇರುವುದಾಗಿದೆ.
3.31 "ಉತ್ಪಾದಕರ ವಿಸ್ತರಿತಜವಾಬ್ಧಾರಿ (ಇಪಿಆರ್)' ಎಂದರೆ ಪ್ಲಾಸ್ಟಿಕ್, ಸತು, ಗಾಜು ಅಥವಾ ರಟ್ಟಿನ ಡಬ್ಬಇತ್ಯಾದಿಗಳ ಉತ್ಪಾದಕರ ಜವಾಬ್ಧಾರಿ. ಪ್ಯಾಕೇಜಿಂಗ್ ಉತ್ಪನ್ನಗಳು ಬಾಳಿಕೆ ಬರುವ ವರೆಗೆ ಪರಿಸರಿಕವಾಗಿ ಉತ್ತಮ/ಸಮರ್ಪಕ ನಿರ್ವಹಣೆ ಮಾಡುವುದು.
3.32 "ಇ-ತ್ಯಾಜ್ಯ"ಎಂಬುವುದು ಇ-ತ್ಯಾಜ್ಯ ನಿರ್ವಹಣಾ ನಿಯಮಾವಳಿ 2016ರ, ಷರತ್ತು (ಆರ್)ನ ನಿಯಮ 3ರ ಉಪನಿಯಮ (1)ರ ಅಡಿಯಲ್ಲಿ ಬರುವ ಅರ್ಥವನ್ನೇ ಹೊಂದಿರಬೇಕು.
3.33 "ನೋಂದಾಯಿತ ಸೇವಾದಾರರು" ಎಂದರೆ ಎಸ್ಡಬ್ಲ್ಯುಎಮ್ ನಿಯಮಾವಳಿ ಮತ್ತು ಈ ವಿಧಿಗಳ ಅನ್ವಯ ಈ ವ್ಯಕ್ತಿಗಳು/ಸಂಸ್ಥೆಗಳು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದ್ದಾರೆಯೇ ಎಂದು ಬಿಬಿಎಂಪಿಯು ನಿಷ್ಠೆಯಿಂದ ಪರಿಶೀಲನೆ ನಡೆಸಿದ ಬಳಿಕ ಯಾವುದೇ ಸಂಸ್ಥೆ, ನೋಂದಾಯಿತ ಸಂಘ, ಟ್ರಸ್ಟ್, ಪಾಲುದಾರಿಕೆ, ಸೀಮಿತ ಹೊಣೆಗಾರಿಕೆ ಮತ್ತು/ಅಥವಾ ನೋಂದಾಯಿತ ಸಂಸ್ಥೆ ಜೊತೆಗೆ ಚಿಂದಿ ಆಯುವವರ ನೋಂದಾಯಿತ ಸಂಸ್ಥೆ ಮತ್ತು/ಅಥವಾ ತ್ಯಾಜ್ಯ ವ್ಯವಹಾರಸ್ಥರು. ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸೇವೆಗಳನ್ನು ಒದಗಿಸಲು ಇವರು ಬಿಬಿಎಂಪಿಯೊಂದಿಗೆ ನೋಂದಾಯಿತರಾಗಿರುತ್ತಾರೆ.
3.34 "ಸೌಲಭ್ಯ" ಎಂದರೆ ಪ್ರತ್ಯೇಕಿಸುವುದು, ಮತ್ತೆ ಪಡೆಯುವುದು, ಸಂಗ್ರಹ, ಸಂಗ್ರಹಣೆ, ಪುನರ್ಬಳಕೆ, ಸಂಸ್ಕರಣೆ ನಿರ್ವಹಣೆ ಅಥವಾ ಘನ ತ್ಯಾಜ್ಯದ ಸುರಕ್ಷಿತ ವಿಲೇವಾರಿ ಮಾಡುವ ವ್ಯವಸ್ಥೆ ಆಗಿದ್ದು ಘನತ್ಯಾಜ್ಯ ನಿರ್ವಹಣಾ ಪ್ರಕ್ರಿಯೆ ಆಗಿದೆ.
3.35 "ರೂಢಿಮಾಡುವುದು/ ಎಚ್ಚರಿಕೆ ಅವಧಿ"ಎಂದರೆ ಈ ಉಪವಿಧಿಗಳನ್ನು ಉಲ್ಲಂಘಿಸಿದರೆ ವಿಧಿಸಬಹುದಾದ ದಂಡದಿಂದ ವಿನಾಯಿತಿ ನೀಡುವ ನಿರ್ದಿಷ್ಟ ಅವಧಿ.
3.36 "ದಂಡ" ಎಂದರೆ ನಿಯಮಗಳು ಅಥವಾ ಉಪವಿಧಿಯಲ್ಲಿರುವ ನಿರ್ದೇಶನಗಳನ್ನು ಪಾಲಿಸದೇ ಇರುವುದಕ್ಕೆ ಉಪವಿಧಿಯಂತೆ ತ್ಯಾಜ್ಯ ಉತ್ಪಾದಕರು ಅಥವಾ ಕಸ ಸಂಸ್ಕರಣೆ ಮಾಡುವ ಮತ್ತು ವಿಲೇವಾರಿ ವ್ಯವಸ್ಥೆ ಮೇಲೆ ದಂಡ ವಿಧಿಸುವುದು.
3.37 "ನಿರ್ವಹಣೆ" ಎಂದರೆ ವಿಂಗಡಣೆ, ಪ್ರತ್ಯೇಕಿಸುವುದು, ವಸ್ತುಗಳನ್ನು ಮರಳಿ ಪಡೆಯುವುದು ದ್ವಿತೀಯ ಹಂತದ ಸಂಗ್ರಹ, ಸಣ್ಣ ತುಂಡುಗಳನ್ನಾಗಿ ಮಾಡುವುದು, ಮೂಟೆ ಕಟ್ಟುವುದು, ಪುಡಿ ಮಾಡುವುದು, ಲೋಡ್ ಮಾಡುವುದು/ತುಂಬಿಸುವುದು, ಇಳಿಸುವುದು, ಸಾಗಾಣಿಕೆ. ಸಂಸ್ಕರಣೆ ಮತ್ತು ಘನತ್ಯಾಜ್ಯಗಳ ವಿಲೇವಾರಿ 3.38 "ಅಪಾಯಕಾರಿ ತ್ಯಾಜ್ಯ" ಎಂದರೆ ಯಾವುದೇ ವಸ್ತು ಅವುಗಳ ಭೌತಿಕ, ರಾಸಾಯನಿಕ, ಪ್ರತಿಕ್ರಿಯಾತ್ಮಕ, ವಿಷಕಾರಕವಾಗಿದ್ದು ಇದು ತಾನಾಗಿಯೇ ಅಥವಾ ಇನ್ನಾವುದೇ ತ್ಯಾಜ್ಯದೊಂದಿಗೆ ಸೇರಿಕೊಂಡಾಗ ಅಥವಾ ವಸ್ತುಗಳೊಂದಿಗೆ ಸೇರಿದಾಗ ಆರೋಗ್ಯ ಅಥವಾ ಪರಿಸರಕ್ಕೆ ಅಪಾಯ ಉಂಟು ಮಾಡಬಲ್ಲಂತಹದ್ದು. ಇವುಗಳನ್ನು ಈ ಉಪವಿಧಿಯ ಅನುಸೂಚಿ IIರಲ್ಲಿ ವಿಶೇಷವಾಗಿ ಪಟ್ಟಿ ಮಾಡಲಾಗಿದೆ. ಮತ್ತು ಇತರ ಎಲ್ಲ ಅಪಾಯಕಾರಿ ತ್ಯಾಜ್ಯಗಳನ್ನು 'ಅಪಾಯಕರ ತ್ಯಾಜ್ಯಗೂ (ನಿರ್ವಹಣೆ ಮತ್ತು ನಿಭಾವಣೆ) 1989ರಲ್ಲಿ ವಿವರಿಸಲಾಗಿದೆ. ಇದನ್ನು ಅಪಾಯಕಾರಿ ಮತ್ತು ಇತರ ತ್ಯಾಜ್ಯ (ನಿರ್ವಹಣೆ ಮತ್ತು ಗಡಿಯಾಚೆಗಿನ ಸಾಗಾಟ) ನಿಯಮಾವಳಿ 2016 ಎಂದು ತಿದ್ದುಪಡಿ ಮಾಡಲಾಗಿದೆ.
3.39 "ದಹಿಸುವುದು" ಎಂದರೆ ಘನತ್ಯಾಜ್ಯಗಳನ್ನು ಅತಿ ಹೆಚ್ಚು ತಾಪ(ಬಿಸಿ)ದೊಂದಿಗೆ ನಿಯಂತ್ರಿತ ವಾತಾವರಣದಲ್ಲಿ ಉಷ್ಣತೆಯಲ್ಲಿ ವಿಘಟಿಸಬಲ್ಲ ವಸ್ತುಗಳಾಗಿ ಸುಡುವುದು ಅಥವಾ ಉರಿಸುವುದು.
3.40 "ಜಡವಾಗಿರುವವು" ಎಂದರೆ ಜೈವಿಕವಾಗಿ ವಿಘಟನೆ ಆಗದ, ಮರುಬಳಕೆ ಮಾಡಲಾಗದ ಅಥವಾ ಸುಡಲಾಗದ ತ್ಯಾಜ್ಯಗಳು, ಬೀದಿ ಗುಡಿಸುವ ತ್ಯಾಜ್ಯ, ಅಥವಾ ಧೂಳು, ಮೇಲ್ಮಟ್ಟದ ಚರಂಡಿಗಳಿಂದ ತೆಗೆಯಲಾದ ಹೂಳು, ಅಥವಾ ತ್ಯಾಜ್ಯ ಸಂಸ್ಕರಣೆಯಿಂದ ತಿರಸ್ಕೃತವಾಗಿರುವಂತವುಗಳು ಸೇರಿವೆ.
3.41: "ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು" ಎಂದರೆ ಮರುಬಳಕೆ ಮಾಡುವಂತಹ ವಸ್ತುಗಳನ್ನು ಪ್ರತ್ಯೇಕಿಸುವ, ಮಾರಾಟ ಮಾಡುವ ಅಥವಾ ಖರೀದಿ ಮಾಡುವ ವ್ಯಕ್ತಿಗಳು, ಸಂಘಗಳು ಅಥವಾ ತ್ಯಾಜ್ಯ ವ್ಯಾಪಾರಿಗಳು.
3.42 "ಕೆಎಸ್ಪಿಸಿಬಿ" ಎಂದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 3.43 "ಲೀಚೆಟ್" ಎಂದರೆ ಘನತ್ಯಾಜ್ಯದೊಳಗೆ ಅಥವಾ ಇತರೇ ಮಾಧ್ಯಮದೊಳಗೆ ಹರಿದು ಅವುಗಳಲ್ಲಿ ಕರಗಿ ಹೋಗಿರುವ ಅಥವಾ ಅವುಗಳಿಗೆ ಅಂಟಿಕೊಂಡಿರುವ/ತೂಗು ಹಾಕಿಕೊಂಡಿರುವ ವಸ್ತುಗಳನ್ನು ಆಚೆಗೆ ತೆಗೆಯುವ ದ್ರವವಾಗಿದೆ.
3.44 "ಕಸ"ಎಂದರೆ ಎಲ್ಲ ತಿರಸ್ಕೃತ ಮತ್ತು ಅಸ್ವಚ್ಛ ವಾತಾವರಣ ನಿರ್ಮಾಣ ಮಾಡುವಂತಹ, ಈ ಉಪವಿಧಿ ಪ್ರಕಾರ ನಿಷೇಧಿಸಲ್ಪಟ್ಟಿರುವ ವಸ್ತುಗಳನ್ನು ಎಸೆಯುವುದರಿಂದ ಅಥವಾ ಸಂಗ್ರಹಿಸುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಆಗಬಹುದಾದ ಅಥವಾ ಅಪಾಯಕಾರಿ ಆಗಬಹುದಾದ ವಸ್ತುಗಳು 3.45 "ಕಸ ಹಾಕುವುದು"ಎಂದರೆ ಅದು ಬೀಳುವ, ಇಳಿಯುವ, ಬೀಸುವ, ಕೊಚ್ಚಿ ಹೋಗುವ/ತೊಳೆದು ಹೋಗುವ, ಜಿನುಗುವ/ಒಳ ಸೇರಿ ಹೋಗುವ ಅಥವಾ ತಪ್ಪಿಸಿಕೊಳ್ಳುವ ಅಥವಾ ಬೀಳಬಹುದಾದ ಕಡೆಗಳಲ್ಲಿ ಕಸ ಹಾಕುವುದು ಅಥವಾ ಎಸೆಯುವುದು ಅಥವಾ ಇಳಿದು ಹೋಗಬಹುದಾದ/ತೊಳೆದು ಹೋಗಬಹುದಾದ/ಜಿನುಗಬಹುದಾದ/ಒಳ ಸೇರಿ ಹೋಗಬಹುದಾದ ಅಥವಾ ತಪ್ಪಿಸಿಕೊಳ್ಳಬಹುದಾದ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬೀಳುವಂತೆ ಮಾಡಬಹುದಾದ ಅಥವಾ ಕಸವು ಬೀಳಲು, ಹಾರಿ ಹೋಗಲು ಅನುವು ಮಾಡಿಕೊಡುವುದು, ತೊಳೆದು ಹೋಗಲು, ಬಸಿದು/ಜಿನುಗಿ ಹೋಗಲು ಅಥವಾ ತಪ್ಪಿಸಿಕೊಂಡು ಹೋಗುವ ಕಡೆಗಳಲ್ಲಿ ಕಸವನ್ನು ಹಾಕುವುದು/ಎಸೆಯುವುದು ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕುವುದು.
3.46 "ಮಾರುಕಟ್ಟೆ ಸಂಘಗಳು" ಎಂದರೆ ಅಂಗಡಿ ಮಾಲೀಕರು ಅಥವಾ ಅಂಗಡಿ ಇಟ್ಟವರು ವ್ಯಾಪಾರಿಗಳು, ವರ್ತಕರು, ವ್ಯವಹಾರಸ್ಥರು, ಡೀಲರ್ಗಳು, ವ್ಯಾಪಾರಿಗಳು, ಮಧ್ಯವರ್ತಿಗಳು ಅಥವಾ ಏಜೆನ್ಸಿ, ನಿಗದಿತ ನೆರೆಹೊರೆಯ ಪ್ರದೇಶಕ್ಕೆ ಸೇವೆ ಒದಗಿಸುವವರು ಆಗಿದ್ದು ಮಾರುಕಟ್ಟೆ ಅಥವಾ ಸಹಕಾರ ಸಂಘಗಳ ರಿಜಿಸ್ಟ್ರಾರ್ ಬಳಿ ನೋಂದಣಿ ಆಗಿರುವ ಅಥವಾ ಆಗದೇ ಇರುವ ಪ್ರದೇಶಗಳ ಗುಂಪು ಅಥವಾ ಕೂಟ/ಸಂಘಗಳಾಗಿವೆ.;
3.47"ವಸ್ತುಗಳ ಪುನರ್ ಪಡೆಯುವ ವ್ಯವಸ್ಥೆ" (ಮಟೀರಿಯಲ್ ರಿಕವರಿ ಫೆಸಿಲಿಟಿ-ಎಂಆರ್ಎಫ್) ಎಂದರೆ ಕಾಂಪೋಸ್ಟ್ ಮಾಡಲಾಗದ ಘನ ತ್ಯಾಜ್ಯವನ್ನು ಬಿಬಿಎಂಪಿ ಅಥವಾ ನಿಯಮಾವಳಿ 2ರಲ್ಲಿ ಹೆಸರಿಸಲಾಗಿರುವ ಯಾವುದೇ ವ್ಯಕ್ತಿ ಅಥವಾ ಎಜೆನ್ಸಿ ತಾತ್ಕಾಲಿಕವಾಗಿ ಸಂಗ್ರಹಿಸಿ ಇಡುವ ವ್ಯವಸ್ಥೆಯಾಗಿದೆ. ತ್ಯಾಜ್ಯವನ್ನು ತಲುಪಿಸುವ ಅಥವಾ ಸಂಸ್ಕರಣೆ ಅಥವಾ ಅಂತಿಮವಾಗಿ ವಿಲೇವಾರಿ ಮಾಡಲು ತೆಗೆದುಕೊಂಡು ಹೋಗುವ ಮುನ್ನ ಪ್ರತ್ಯೇಕಿಸಲು, ವಿಂಗಡಿಸಲು ಮತ್ತು ತ್ಯಾಜ್ಯದ ವಿವಿಧ ಭಾಗಗಳಿಂದ ಮರುಬಳಕೆ ಮಾಡಬಹುದಾದವುಗಳನ್ನು ಮರಳಿ ಪಡೆಯಲು ಚಿಂದಿ ಆಯುವವರ, ಅನೌಪಚಾರಿಕವಾಗಿ ಮರುಬಳಕೆ ಮಾಡುವವರ ಅಥವಾ ಸ್ಥಳೀಯ ಸಂಸ್ಥೆಗಳಿಂದ ಗೊತ್ತು ಮಾಡಲ್ಪಟ್ಟಿರುವ ಅಥವಾ ನಿಯಮಾವಳಿ 2ರಲ್ಲಿ ಈ ಉದ್ದೇಶಕ್ಕಾಗಿ ಹೆಸರಿಸಲಾಗಿರುವ ಯಾವುದೇ ಸಂಸ್ಥೆಗಳ ಯಾವುದೇ ಅಧಿಕೃತವಾದ ಅನೌಪಚಾರಿಕ ವಲಯ ಆಗಿದೆ.
3.48 "ನೆರೆಹೊರೆ" ಎಂದರೆ ಅದರ ಭೌತಿಕ ವಿನ್ಯಾಸಕ್ಕೆ ಸಂಬಂಧಿಸಿ, ಸ್ವಭಾವ ಅಥವಾ ಅಲ್ಲಿನ ನಿವಾಸಿಗಳನ್ನು ಸಂಬಂಧಿಸಿದ ಸ್ಪಷ್ಟವಾಗಿ ವಿವರಿಸಲಾಗಿರುವ/ ವ್ಯಾಖ್ಯಾನಿಸಲಾಗಿರುವ ಪ್ರದೇಶ.
3.49 "ಹೂಸ ನಿರ್ಮಾಣ" ಎಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲಾ ಕಟ್ಟಡಗಳು.
3.50 "ಜೈವಿಕವಾಗಿ ವಿಘಟನೆಯಾಗದ (ನಾನ್ ಬಯೋಡಿಗ್ರೇಡಬಲ್) ತ್ಯಾಜ್ಯ" ಸೂಕ್ಷ್ಮಾಣು ಜೀವಿಗಳಿಂದ ಸರಳವಾದ ಹಾಗೂ ಸ್ಥಿರ ಸಂಯುಕ್ತವಾಗಿ ವಿಘಟಿಸಲಾಗದ ಯಾವುದೇ ತ್ಯಾಜ್ಯ.;
3.51 “ಉಪದ್ರವ” ಎಂದರೆ ಯಾವುದೇ ಜೀವಕ್ಕೆ ಅಪಾಯತರಬಲ್ಲ, ಆರೋಗ್ಯಕ್ಕೆ ಅಥವಾ ಆಸ್ತಿಗೆ ಹಾನಿಕಾರಕವಾಗುವಂತಹ ದೇಹಕ್ಕೆ ಘಾಸಿ ಉಂಟು ಮಾಡಬಲ್ಲ, ಅಪಾಯಕರ, ಕಿರಿಕಿರಿ ತರುವ ಅಥವಾ ನೋಡುವುದಕ್ಕೆ ಅಪರಾಧ ಎನ್ನಿಸುವಂತಹ, ವಾಸನೆ ಉಂಟು ಮಾಡಬಲ್ಲ ಅಥವಾ ಕೇಳಬಲ್ಲ ಯಾವುದೇ ಕೃತ್ಯ, ಲೋಪ/ಚ್ಯುತಿ ತರುವ ವಿಷಯ.
3.52“ಉಪದ್ರವ ಶೋಧಕರ”ಎಂದರೆ ಸಾರ್ವಜನಿಕ ಕಿರಿಕಿರಿ/ಹೇಸಿಕೆ ಉಂಟು ಮಾಡುವವರನ್ನು ಪತ್ತೆ ಮಾಡಲು ಆಯುಕ್ತರಿಂದ ನೇಮಕವಾದ ಬಿಬಿಎಂಪಿಯ ನೌಕರರು/ಸಿಬ್ಬಂದಿ ಹಾಗೂ ಇತರೇ ಅಥವಾ ಸಾರ್ವಜನಿಕವಾಗಿ ಕಿರಿಕಿರಿ ಉಂಟು ಮಾಡುವುದನ್ನು ಪತ್ತೆ ಮಾಡಬಲ್ಲ ತಾಂತ್ರಿಕ ಉಪಕರಣಗಳು.
3.53 "ಅನುಭೋಗದಾರರು"ಎಂದರೆ ಇವರನ್ನು ಒಳಗೊಂಡು
(i) ಮಾಲೀಕರಿಗೆ ಬಾಡಿಗೆ ನೀಡುತ್ತಿರುವ ಅಥವಾ ಬಾಡಿಗೆ ನೀಡಬೇಕಿರುವ ಯಾವುದೇ ವ್ಯಕ್ತಿ ಅಥವಾ ಸ್ಥಳ ಬಾಡಿಗೆ, ಕಟ್ಟಡ(ಗಳು), ಕೊಠಡಿ(ಗಳು) ಮತ್ತು/ಅಥವಾ ಬಳಕೆ ಅಥವಾ ಅನುಭೋಗಕ್ಕಾಗಿ ನೀಡಬಹುದಾದ ಅದೇ ತೆರನಾದ ಆವರಣಗಳು
(ii) ಮಾಲೀಕರು ಅನುಭೋಗಿಸುತ್ತಿರುವ, ಅಥವಾ ತನ್ನ ಭೂಮಿ ಬಳಸುತ್ತಿರುವ, ಕಟ್ಟಡ(ಗಳು),ಕೊಠಡಿ(ಗಳು) ಮತ್ತು/ಅಥವಾ ಅಂತಹ ಆವರಣಗಳು.
(iii) ಬಾಡಿಗೆ ಮುಕ್ತ ಯಾವುದೇ ಜಾಗದ ಉಚಿತ ಬಾಡಿಗೆದಾರ, ಕಟ್ಟಡ(ಗಳು), ಕೊಠಡಿ(ಗಳು) ಮತ್ತು/ಅಥವಾ ಅಂತಹ ಆವರಣಗಳು
(iv) ಯಾವುದೇ ಕಟ್ಟಡ(ಗಳು), ಕೊಠಡಿ(ಗಳು) ಮತ್ತು/ಅಥವಾ ಅಂತಹ ಆವರಣಗಳನ್ನು ಅನುಭೋಗಿಸುತ್ತಿರುವ ಪರವಾನಗಿದಾರ.
(v) ಯಾವುದೇ ಕಟ್ಟಡ(ಗಳು), ಕೊಠಡಿ(ಗಳು) ಮತ್ತು/ಅಥವಾ ಅಂತಹ ಆವರಣಗಳನ್ನು ಬಳಕೆ ಮತ್ತು ಅನುಭೋಗಿಸುತ್ತಿರುವ ಕಾರಣಕ್ಕಾಗಿ ಮಾಲೀಕರಿಗೆ ನಷ್ಟ ತುಂಬಿ ಕೊಡುವವರು ಹಾಗೂ
(vi) ಸರಕಾರಿ ಇಲಾಖೆಯ ಸಂಬಂಧಿಸಿದ ಮುಖ್ಯಸ್ಥರು, ಅವರ ನಿಯಂತ್ರಣದಲ್ಲಿರುವ ಸ್ವತ್ತಿಗೆ ಸಂಬಂಧಿಸಿದಂತೆ.
3.54 "ಕೇಂದ್ರ/ಘಟಕ ನಿರ್ವಾಹಕ"ಎಂದರೆ ಘನತ್ಯಾಜ್ಯ ನಿರ್ವಹಣೆ ಸೌಲಭ್ಯ ಅಥವಾ ವ್ಯವಸ್ಥೆಯ ಮಾಲಿಕತ್ವ ಹೊಂದಿರುವ ಅಥವಾ ನಿರ್ವಹಿಸುತ್ತಿರುವ ಬಿಬಿಎಂಪಿ ಒಳಗೊಂಡಂತೆ ಅಥವಾ ಬಿಬಿಎಂಪಿಯಿಂದ ನೇಮಕವಾದ ಇನ್ನಾವುದೇ ಸಂಸ್ಥೆ/ಘಟಕ ಅಥವಾ ಏಜೆನ್ಸಿಯಾಗಿದೆ.
3.55 "ಮಾಲಿಕ" ಎಂದರೆ ಯಾವುದೇ ಕಟ್ಟಡ, ಅಥವಾ ಭೂಮಿ ಅಥವಾ ಅದರ ಭಾಗದ ಮಾಲಿಕರ ಹಕ್ಕುಗಳನ್ನು ಚಲಾಯಿಸುವ ವ್ಯಕ್ತಿ.;
3.56 "ನಿರ್ದಿಷ್ಟಸ್ಥಳದಿಂದ ಸ್ಥಳಕ್ಕೆ (ಪಾಯಿಂಟ್ ಟು ಪಾಯಿಂಟ್ ಕಲೆಕ್ಷನ್) ಸಂಗ್ರಹಣೆ" ಎಂದರೆ ಬಿಬಿಎಂಪಿಯಿಂದ ನಿರ್ಧರಿಸಲ್ಪಟ್ಟ ನಿಖರ ಸ್ಥಳದಿಂದ ಘನತ್ಯಾಜ್ಯವನ್ನು ಸಂಗ್ರಹಿಸಿ ಬಿಬಿಎಂಪಿ ಮತ್ತು/ಅಥವಾ ಏಜೆನ್ಸಿ/ಸೇವೆ ಒದಗಿಸುವವರು ಒದಗಿಸಿದ ವಾಹನಗಳಲ್ಲಿ ಮುಂದಿನ ಸಾಗಣೆಗಾಗಿ ಸಂಗ್ರಹಿಸುವ ವ್ಯವಸ್ಥೆಯಾಗಿದೆ. ಇಲ್ಲಿಯವರೆಗೆ ಕಸ ಉತ್ಪಾದಕರು ಸಂಗ್ರಹಿಸಿದ, ಪ್ರತ್ಯೇಕಿಸಿದ ಘನತ್ಯಾಜ್ಯವನ್ನು ಸಂಗ್ರಹ ಸ್ಥಳ/ತ್ಯಾಜ್ಯ ಡಿಪೋಗಳು, ಕಸ ನೆರವುದಾಣಗಳು (ಕಿಯಾಸ್ಕ್ಗಳು)/ಕಸ ಕಿಯಾಸ್ಕ್ಗಳು ಅಥವಾ/ನಿಗದಿತ ಸ್ಥಳಗಳಲ್ಲಿ ಸಂಗ್ರಹಕ್ಕಾಗಿ ತಂದುಕೊಡಬೇಕು.
3.57 "ಪ್ರಾಥಮಿಕ ಸಂಗ್ರಹಣೆ"ಎಂದರೆ ಪ್ರತ್ಯೇಕಿಸಿದ ಘನ ತ್ಯಾಜ್ಯವನ್ನು ಅದರ ಉತ್ಪಾದನಾ ಮೂಲಗಳಾದ ಮನೆಗಳೂ ಸೇರಿಂತೆ ಅಂಗಡಿಗಳು, ಕಛೇರಿಗಳು ಮತ್ತಿತರ ಇನ್ನಾವುದೇ ಗೃಹೇತರ ಆವರಣಗಳಿಂದ ಅಥವಾ ಸಂಗ್ರಹ ಕೇಂದ್ರಗಳಿಂದ ಅಥವಾ ಬಿಬಿಎಂಪಿ ನಿಗದಿ ಮಾಡಿದ ಯಾವುದೇ ಖಚಿತ ಸ್ಥಳದಿಂದ ಸಂಗ್ರಹಿಸುವುದು, ಎತ್ತುವುದು ಹಾಗೂ ತೆಗೆಯುವುದು.
3.58 "ಸಂಸ್ಕರಣೆ" ಎಂದರೆ ಪ್ರತ್ಯೇಕಿಸಿದ ಘನ ತ್ಯಾಜ್ಯಗಳನ್ನು ಮತ್ತೆ ಉಪಯೋಗಿಸುವ, ಪುನರ್ಬಳಕೆಗೆ ಪರಿವರ್ತಿಸುವ (ರೀಸೈಕಲ್) ಅಥವಾ ಹೊಸ ವಸ್ತುವಾಗಿ ಬದಲಿಸುವ ವೈಜ್ಞಾನಿಕ ಪ್ರಕ್ರಿಯೆ ಆಗಿದೆ.
3.59 "ಸಂಸ್ಕರಣೆ ಶುಲ್ಕ” ಎಂದರೆ ಬಿಬಿಎಂಪಿ ನಿಗದಿ ಮಾಡಿದ ಶುಲ್ಕ ಅಥವಾ ಬೆಂಬಲ ಬೆಲೆ ಆಗಿದ್ದು ಮಾಲಿಕರು/ಗ್ರಾಹಕರು (ರಿಯಾಯಿತಿ ಪಡೆಯುವವರು), ಅಥವಾ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆ ಹೊಂದಿರುವ ನಿರ್ವಾಹಕರು ಅಥವಾ ಉಳಿಕೆ ಘನತ್ಯಾಜ್ಯವನ್ನು ಬಳಕೆ ಮಾಡುತ್ತಿರುವ ಭೂಭರ್ತಿ ಸ್ಥಳದಲ್ಲಿ ವಿಲೇವಾರಿ ಮಾಡಲು, ಅಗತ್ಯವಿರುವ ಎಲ್ಲೇ ಆಗಲಿ ಪಾವತಿಸಲು ವಿಧಿಸುವ ಶುಲ್ಕವಾಗಿದೆ.
3.60 "ಸಾರ್ವಜನಿಕ ಸ್ಥಳ" ಎಂದರೆ ರಸ್ತೆ, ಪ್ರಧಾನರಸ್ತೆ, ಸೇತುವೆರಸ್ತೆ, ಬೀದಿ /ಗಲ್ಲಿ, ಕಾಲುದಾರಿ, ಓಣಿ ಅಥವಾ ಓಡಾಡುವ ಸ್ಥಳ/ಭಾಗ, ಹೆದ್ದಾರಿ, ಏರುದಾರಿ/ಒಡ್ಡುದಾರಿ, ಸೇತುವೆ, ಚೌಕದ ಓಣಿ ಅಥವಾ ನಡುಭಾಗವಾಗಿದೆ. ಇದು ಸಾರ್ವಜನಿಕ ರಸ್ತೆ ಆಗಿರಬಹುದು ಅಥವಾ ಸಾರ್ವಜನಿಕರಿಗೆ ಓಡಾಟದ ಹಕ್ಕು ಹೊಂದಿರುವ, ಸಾರ್ವಜನಿಕರಿಗೆ ಪ್ರವೇಶದ ಹಕ್ಕು ಇರುವ ಉದ್ಯಾನವನಗಳು, ಹೂತೋಟಗಳು, ಮನರಂಜನಾ ಮೈದಾನಗಳು, ಆಟದ ಮೈದಾನಗಳು, ಕಡಲತೀರಗಳು, ಜಲಮೂಲಗಳು, ನೀರಿನ ಹರಿವುಗಳು, ಸಾರ್ವಜನಿಕ ಪ್ಲಾಜ್ಝಾಗಳು ಹಾಗೂ ವಾಯುವಿಹಾರ ಸ್ಥಳಗಳು, ಸರಕಾರಿ ಮತ್ತು ಮಹಾನಗರ ಪಾಲಿಕೆ ಕಟ್ಟಡಗಳು, ಸಾರ್ವಜನಿಕ ಆಸ್ಪತ್ರೆಗಳು, ಮಾರುಕಟ್ಟೆಗಳು, ವಧಾಗಾರಗಳು, ನ್ಯಾಯಾಲಯಗಳು ಇತ್ಯಾದಿಗಳನ್ನು ಒಳಗೊಂಡಿದೆ.;
3.61 "ಸಾರ್ವಜನಿಕ ಉಪದ್ರವ" ಎಂದರೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ದೇಹಕ್ಕೆ ಘಾಸಿ ಉಂಟು ಮಾಡಬಲ್ಲ, ಅಪಾಯಕರ, ಕಿರಿಕಿರಿ ತರುವ ಅಥವಾ ನೋಡುವುದಕ್ಕೆ ಅಪರಾಧ ಎನ್ನಿಸುವಂತಹ, ವಾಸನೆ ಉಂಟು ಮಾಡಬಲ್ಲ ಅಥವಾ ಕೇಳಬಲ್ಲ ಅಥವಾ ಓಡಾಟಕ್ಕೆ ತೊಂದರೆ ಉಂಟು ಮಾಡಬಲ್ಲ ಕೆಲಸ ಅಥವಾ ಶಾಂತಿಗೆ ಭಂಗತರಬಲ್ಲ ಜೀವಕ್ಕೆ ಅಪಾಯ ತಂದೊಡ್ಡಬಲ್ಲ ಅಥವಾ ಆರೋಗ್ಯ ಅಥವಾ ಆಸ್ತಿಗೆ ಹಾನಿ ಉಂಟು ಮಾಡಬಲ್ಲ ಯಾವುದೇ ಕೃತ್ಯ, ಲೋಪ/ಚ್ಯುತಿ ತರುವ ವಿಷಯ.
3.62 "ಸಾರ್ವಜನಿಕ ಬೀದಿ"ಎಂದರೆ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ 1976ರ ಉಪಕಲಮು (31)ರ ಕಲಮು 2ರಲ್ಲಿರುವ ಅರ್ಥವನ್ನೇ ಹೊಂದಿರಬೇಕು.;
3.63 "ಆವರಣ" ಎಂದರೆ ಯಾವುದೇ ಜಾಗ, ಕಟ್ಟಡ ಅಥವಾ ಕಟ್ಟಡದ ಭಾಗವಾಗಿದ್ದು ಅದಕ್ಕೆ ಸಂಬಂಧಿಸಿದ ಯಾವುದೇ ಹೂದೋಟ/ ಉದ್ಯಾನ, ಮೈದಾನ ಅಥವಾ ಅದರ ಒಂದು ಭಾಗ ಹಾಗೂ ಭೂಮಿಯ ಮೇಲೆ ನಿರ್ಮಿಸಲಾದ ಕಟ್ಟಡಗಳಾಗಿದ್ದು ವಾಸಿಸುವ ಮನೆ, ವ್ಯಾಪಾರ, ಕೈಗಾರಿಕೆ, ಸೇವೆ, ವ್ಯಾಪಾರ, ಸರಕಾರ ಅಥವಾ ಇನ್ನಾವುದೇ ಸಾರ್ವಜನಿಕ ಅಥವಾ ಖಾಸಗಿ ಉದ್ದೇಶಗಳಾದ ಮದುವೆ, ಔತಣ ಕೂಟ, ಸಭೆ, ವಸ್ತುಪ್ರದರ್ಶನ, ಕಾರ್ಯಕ್ರಮಗಳು ಇತ್ಯಾದಿಗಳಿಗೆ ಬಳಕೆ. ವಾಹನಗಳ ನಿಲುಗಡೆಗಾಗಿ, ಬೀದಿ ಬದಿ ವ್ಯಾಪಾರಕ್ಕಾಗಿ, ಕಾಮಗಾರಿಗಳ ಸ್ಥಳದಲ್ಲಿ ಸಾಮಗ್ರಿಗಳ ಸಂಗ್ರಹ ಅಥವಾ ಇನ್ನಾವುದೇ ಸಾರ್ವಜನಿಕ ಅಥವಾ ಖಾಸಗಿ ಉದ್ದೇಶಕ್ಕಾಗಿ, ಬಿಬಿಎಂಪಿಯಿಂದ ತಾತ್ಕಾಲಿಕವಾಗಿ ಅನುಮತಿ ಪಡೆದಿರುವ ಸಾರ್ವಜನಿಕ ರಸ್ತೆಯ ಭಾಗ ಕೂಡ ಇದರಲ್ಲಿ ಸೇರಿದ್ದು ಇದು ವಾಹನಗಳ ಸಂಚಾರದ ಹೊರತಾಗಿ ಇನ್ನೇನೂ ಆಗಿರಬಹುದಾಗಿದೆ.
3.64 "ಧಾರಕಗಳು" ಎಂದರೆ ಯಾವುದೇ ಸಂಗ್ರಹದ ಪಾತ್ರೆ (ಕಂಟೇನರ್) ಆಗಿದ್ದು ಇದು ಯಾವುದೇ ರೀತಿಯ ಘನ ತ್ಯಾಜ್ಯದ ಸಂಗ್ರಹಕ್ಕಾಗಿ ಬಳಕೆ ಮಾಡುವ ತೊಟ್ಟಿ ಮತ್ತು ಚೀಲಗಳು ಆಗಿರಬಹುದಾಗಿದೆ.
3.65 "ಪುನರ್ ಬಳಕೆಗೆ ಪರಿವರ್ತಿಸುವುದು" ಎಂದರೆ ಪ್ರತ್ಯೇಕಿಸಿದ ವಿಘಟನೆ ಹೊಂದದೇ ಇರುವ ಘನತ್ಯಾಜ್ಯವಾಗಿದ್ದು ಇದನ್ನು ಹೊಸ ಉತ್ಪನ್ನಗಳ ತಯಾರಿಗೆ ಅಥವಾ ಹೊಸ ಉತ್ಪನ್ನಗಳ ತಯಾರಿಗೆ ಕಚ್ಚಾ ವಸ್ತುವಾಗಿ ಬಳಸಲಾಗುವುದು. ಇದು ಮೂಲ ಉತ್ಪನ್ನಕ್ಕೆ ಸರಿ ಸಮನಾಗಿರಬಹುದು ಅಥವಾ ಅದನ್ನು ಹೋಲದೇ ಭಿನ್ನವಾಗಿರಬಹುದು.
3.66 "ಪುನರ್ ಬಳಕೆಗೆ ಪರಿವರ್ತಿಸಬಹುದಾದ ತ್ಯಾಜ್ಯ" ಎಂದರೆ ಸಾಮಾನ್ಯವಾಗಿ ಘನ ತ್ಯಾಜ್ಯದಲ್ಲಿ ಕಂಡು ಬರುವ ಮತ್ತು ಒಟ್ಟಾಗಿ ಮತ್ತು ಸಾಮಾನ್ಯವಾಗಿ "ಒಣ ತ್ಯಾಜ್ಯ/ಕಸ" ಎಂದು ಕರೆಯಲಾಗುವುದು. ಹಲವು ವಿಧದ ಗಾಜುಗಳು, ಕಾಗದ, ಲೋಹ, ಪ್ಲಾಸ್ಟಿಕ್, ವಸ್ತ್ರ, ಇಲೆಕ್ಟ್ರಾನಿಕ್ ವಸ್ತುಗಳು ಇತ್ಯಾದಿ ಆಗಿದೆ.
3.67 "ತ್ಯಾಜ್ಯ" ಎಂದರೆ ಅದು ಈಗ ಇರುವ ಸ್ವರೂಪದಲ್ಲಿ ಬಳಸಲಾಗದ, ಉಪಯೋಗಿಸಲು ಆಗದ ಅಥವಾ ಸಂಸ್ಕರಿಸಲಾಗದ ತ್ಯಾಜ್ಯ ವಸ್ತುವಾಗಿದೆ. ಇದು ಬೇರೆ ಬೇರೆ ಚಟುವಟಿಕೆ, ಪರಕ್ರಿಯೆಗಳಿಂದ ಉತ್ಪತ್ತಿ ಆಗಿರಬಹುದಾಗಿದ್ದು ವಿಘಟಿಸಬಹುದಾದ/ವಿಘಟಿಸಲು ಆಗದ/ಪುನರ್ ಬಳಕೆಗೆ ಪರಿವರ್ತಿಸಬಹುದಾದ ಸ್ಥಿತಿಯಲ್ಲಿರಬಹುದಾಗಿದೆ.
3.68 "ತ್ಯಾಜ್ಯ ಉತ್ಪಾದಿತ ಇಂಧನ" (ಆರ್ಡಿಎಫ್) ಎಂದರೆ ಕ್ಲೋರಿನ್ಯುಕ್ತ ವಸ್ತುಗಳನ್ನು ಹೊರತಾಗಿ ಪ್ಲಾಸ್ಟಿಕ್, ಮರ ಅಥವಾ ಸಾವಯವ ತ್ಯಾಜ್ಯದಂತಹ ಘನತ್ಯಾಜ್ಯಗಳ ದಹನಕಾರಿ ಅಂಶದಿಂದ ಪಡೆದಿರುವ ಇಂಧನ. ಇದು ಉಂಡೆಯ ಅಥವಾ ಘನತ್ಯಾಜ್ಯವನ್ನು ಒಣಗಿಸುವುದರಿಂದ, ನವಿರುಗರಿಯಿಂದ, ನಿರ್ಜಲೀಕರಣಗೊಳಿಸುವುದರಿಂದ ಹಾಗೂ ಒತ್ತೊತ್ತಾಗಿಡುವುದರಿಂದ ರೂಪಿಸಬಹುದು.
3.69 "ಉಳಿಕೆಯಾದ ಜಡ ತ್ಯಾಜ್ಯ" ಎಂದರೆ ತ್ಯಾಜ್ಯ ಮತ್ತು ಘನ ತ್ಯಾಜ್ಯದ ಸಂಸ್ಕರಣೆ ವ್ಯವಸ್ಥೆ/ಸೌಲಭ್ಯದಿಂದ ತಿರಸ್ಕರಿಸಲ್ಪಟ್ಟಿರುವಂತಹುದಾಗಿದ್ದು ಇವುಗಳು ಪುನರ್ ಬಳಕೆಗೆ ಪರಿವರ್ತಿಸಲಾಗದ ಅಥವಾ ಮುಂದಿನ ಸಂಸ್ಕರಣೆಗೆ ಸಾಧ್ಯವಾಗದೇ ಇರುವಂತಹುದನ್ನು ಒಳಗೊಂಡಿರುತ್ತದೆ.
3.70 "ನಿಯಮಗಳು" ಎಂದರೆ ಘನತ್ಯಾಜ್ಯ ನಿರ್ವಹಣಾ ನಿಯಮಾವಳಿ, 2016 3.71 "ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ" ಎಂದರೆ ನಿರ್ದಿಷ್ಟ ನೆರೆಹೊರೆಯ ಅಥವಾ ಬಿಬಿಎಂಪಿ ವ್ಯಾಪ್ತಿಗೆ ಬರುವ ಪ್ರದೇಶದ ಗುಂಪು, ಮಾಲಿಕರ ಸಂಘ ಅಥವಾ ವಸತಿ ಸಮುಚ್ಛಯದ ಅನುಭೋಗಿಗಳು ಆಗಿದ್ದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರಿಂದ ನೋಂದಣಿ ಆಗಿರುವ ಅಥವಾ ಆಗಿರದೇ ಇರುವುದನ್ನು ಒಳಗೊಂಡಿರಬಹುದು. ಇವುಗಳು ಬಿಬಿಎಂಪಿಗೆ ಸಂಬಂಧಿಸಿದ ನಾಗರಿಕ ಸಮಸ್ಯೆಗಳನ್ನು ಹೊಂದಿರುತ್ತದೆ.
3.72 "ನೈರ್ಮಲ್ಯ ಭೂಭರ್ತಿ" ಎಂದರೆ ಉಳಿಕೆ ಜಡತ್ಯಾಜ್ಯವನ್ನು ಸುರಕ್ಷಿತ ಕ್ರಮಗಳಿಂದ ಸಿದ್ಧಪಡಿಸಿದ ಸ್ಥಳದಲ್ಲಿ ವಿಲೇವಾರಿ ವ್ಯವಸ್ಥೆ, ಅಂತರ್ಜಲ ಮಾಲಿನ್ಯ, ಮೇಲ್ಮೈಮಟ್ಟದ ನೀರಿನ ಮಾಲಿನ್ಯ, ಧೂಳಿನಿಂದ ಕೂಡಿದ ಗಾಳಿ, ಕಸದ ಮೇಲಿನ ಗಾಳಿ,ಕೆಟ್ಟ ವಾಸನೆ/ದುರ್ಗಂಧ, ಬೆಂಕಿ ದುರಂತ, ಪ್ರಾಣಿಗಳ ಹಾವಳಿ, ಪಕ್ಷಿಗಳ ಹಾವಳಿ, ಕೀಟಗಳು, ಹೆಗ್ಗಣಗಳು, ಹಸಿರು ಮನೆ ಅನಿಲ ಹೊರಸೂಸುವ ಪರಿಣಾಮ, ನಿರಂತರ ಸಾವಯವ ಮಾಲಿನ್ಯ, ಅಸಮತೋಲಿತ ಇಳಿಜಾರು ಹಾಗೂ ಕುಸಿತಗಳ ವಿರುದ್ಧವಾಗಿ ಸುರಕ್ಷತಾ ಕ್ರಮಗಳೊಂದಿಗೆ ರೂಪಿಸಲಾದ ಭೂಭರ್ತಿ ವ್ಯವಸ್ಥೆ ಆಗಿದೆ.
3.73 "ನೈರ್ಮಲ್ಯ ತ್ಯಾಜ್ಯ" ಎಂದರೆ ಬಳಕೆ ಮಾಡಲಾದ ಡಯಾಪರ್ಗಳು, ನೈರ್ಮಲ್ಯ ಟವೆಲ್ಗಳು, ಕರವಸ್ತ್ರ(ನ್ಯಾಪ್ಕಿನ್)ಗಳು, ಋತುಸ್ರಾವಿಕ (ಋತುಚಕ್ರದ ವೇಳೆ ಬಳಕೆ ಮಾಡಿದ) ಬಟ್ಟೆಗಳು ಮತ್ತು ಕಪ್ಗಳು, ಹಾಸಿಗೆಯ ಮೇಲೆ ಬಳಸಿದ ಹತ್ತಿಯ/ಶೀಟ್ಗಳು, ಋತುಸ್ರಾವಿಕ ರಕ್ತ, ದೇಹದ ಮೇಲಿನ ಗಾಯದಿಂದಾದ ರಕ್ತ, ಇನ್ನಿತರ ಸ್ರವಿಸುವಿಕೆಯನ್ನು ಸ್ವಚ್ಛಗೊಳಿಸಲು ಬಳಕೆ ಮಾಡಿದ ನುಣುಪಾದ ವಸ್ತು (ಟ್ಯಾಂಪನ್ಸ್), ಕಾಂಡೋಮ್ಗಳು (ಗರ್ಭನಿರೋಧಕಗಳು), ಕಿವಿ ಸ್ವಚ್ಛಗೊಳಿಸುವ ಕಡ್ಡಿಗಳು (ಇಯರ್ಬಡ್ಸ್), ಶೌಚಾಲಯದ ಪೇಪರ್ಗಳು, ಬ್ಯಾಂಡ್ಏಡ್, ಮನೆಗಳಲ್ಲಿ ಬಳಸಿದ ಸಿರಿಂಜ್ಗಳು ಹಾಗೂ ಇದೇ ತೆರನಾದ ಇನ್ನಿತರ ವಸ್ತುಗಳನ್ನೊಳಗೊಂಡಿರುವುದು.
3.74 "ಬೀದಿ ಗುಡಿಸುವುದು"ಎಂದರೆ ಸಾರ್ವಜನಿಕ ರಸ್ತೆಗಳನ್ನು, ಉದ್ಯಾನವನ ಹಾಗೂ ಇತರ ಸಾರ್ವಜನಿಕ ಸ್ಥಳಗಳನ್ನು ಗುಡಿಸಿ ಘನತ್ಯಾಜ್ಯಗಳನ್ನು ಸಂಗ್ರಹಿಸುವುದು, ಸಾರ್ವಜನಿಕ ರಸ್ತೆಗಳಲ್ಲಿ ಹಾಕಿರುವ ಮೇಲ್ಮೈ ಚರಂಡಿಗಳನ್ನು/ಕಂದಕ(ಕಾಲುವೆ)ಗಳನ್ನು ಸ್ವಚ್ಛಗೊಳಿಸುವುದು ಮತ್ತು ಇದೇ ತೆರನಾದ ಇನ್ನಿತರ ಚಟುವಟಿಕೆಗಳು;
3.75 "ಶುಚಿಮಿತ್ರ" ಎಂದರೆ ವಾರ್ಡ್ ನ/ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ವ್ಯಕ್ತಿಗಳ/ನಾಗರಿಕರ ಗುಂಪು ಆಗಿದ್ದು ವ್ಯಾಪ್ತಿಯ ವಾರ್ಡ್ ಸಮಿತಿ ಮತ್ತು ಬಿಬಿಎಂಪಿಯೊಂದಿಗೆ ನೋಂದಾಯಿಸಲ್ಪಟ್ಟ ಮತ್ತು ಸ್ವಯಂಪ್ರೇರಿತವಾಗಿ
(i) ನಿಯಮಿತ ಸಮೀಕ್ಷೆ (ಸರ್ವೇ)ಗಳನ್ನು ನಡೆಸುವುದು ಮತ್ತು ಎಸ್ಡಬ್ಲ್ಯುಎಮ್ ನಿಯಮಾವಳಿ 2016 ಅನುಷ್ಟಾನದ ಕುರಿತು ಹಾಗೂ ಈ ಉಪವಿಧಿ 2019ನ್ನು ಅವರ ವಾರ್ಡ್ಗಳಲ್ಲಿ ಅನುಷ್ಟಾನಗೊಳಿಸುವ ಕುರಿತು ವರದಿ ತಯಾರಿ.
(ii) ವಾರ್ಡ್ಗಳಲ್ಲಿ ಸ್ವಚ್ಛತಾ ಅಭಿಯಾನ ಅಥವಾ ಜಾಗೃತಿ ಅಭಿಯಾನಗಳಲ್ಲಿ ಪಾಲ್ಗೊಳ್ಳುವುದು ಮತ್ತು
(iii) ಸಮೀಕ್ಷೆ ವೇಳೆ ಗುರುತಿಸಲಾದ ವಿಚಾರಗಳ ಕುರಿತು ಪರಿಹಾರಕ್ಕಾಗಿ ವಾರ್ಡ್ ಸಮಿತಿ ಮತ್ತು ಎಸ್ಡಬ್ಲ್ಯುಎಮ್ ಕೋಶ ಹಾಗೂ ಬಿಬಿಎಂಪಿಯೊಂದಿಗೆ ಸಂಪರ್ಕ ಕಲ್ಪಿಸುವುದು.
3.76 "ಸೆಕೆಂಡರಿ ಸ್ಟೋರೇಜ್” (ದ್ವಿತೀಯ ಹಂತದ ಸಂಗ್ರಹಣೆ) ಎಂದರೆ ಪ್ರಾಥಮಿಕ ಸಂಗ್ರಹದ ಬಳಿಕ ಘನ ತ್ಯಾಜ್ಯದ ತಾತ್ಕಾಲಿಕ ನಿಯಂತ್ರಣ ಆಗಿದೆ. ಸೆಕೆಂಡರಿ ತ್ಯಾಜ್ಯ ಸಂಗ್ರಹ ಡಿಪೋಗಳಲ್ಲಿ ಅಥವಾ ವಸ್ತುಗಳನ್ನು ಪಡೆಯುವ ವ್ಯವಸ್ಥೆ(ಎಂಆರ್ಎಫ್)ಗಳಲ್ಲಿ ಅಥವಾ ತೊಟ್ಟಿಗಳಿಂದ ಸಂಸ್ಕರಣೆಗೆ ಅಥವಾ ಅಂತಿಮ ವಿಲೇವಾರಿಗೆ ಸಾಗಾಟ ಮಾಡುವುದಕ್ಕಾಗಿ.
3.77 "ಪ್ರತ್ಯೇಕಿಸುವುದು/ಬೇರ್ಪಡಿಸುವುದು"ಎಂದರೆ ಘನ ತ್ಯಾಜ್ಯದ ಬೇರೆ ಬೇರೆ ಅಂಶಗಳಾದ ಕೃಷಿ ಹಾಗೂ ಹೈನುಗಾರಿಕೆ(ಡೈರಿ) ಸೇರಿದಂತೆ ಜೈವಿಕವಾಗಿ ವಿಘಟನೆಗೊಳ್ಳುವ ತ್ಯಾಜ್ಯ, ಪುನರ್ಬಳಕೆಗೆ ಪರಿವರ್ತಿಸಬಹುದಾದ ಮತ್ತು ಪುನರ್ಬಳಕೆಗೆ ಪರಿವರ್ತಿಸಲಾಗದ ದಹನಕಾರಿ ತ್ಯಾಜ್ಯ ಹಾಗೂ ಪುನರ್ಬಳಕೆಗೆ ಪರಿವರ್ತಿಸಲಾಗದ ಜಡ ತ್ಯಾಜ್ಯ, ಮ ನೆಗಳ ಅಪಾಯಕಾರಿ ತ್ಯಾಜ್ಯವೂ ಸೇರಿದಂತೆ ನೈರ್ಮಲ್ಯ ತ್ಯಾಜ್ಯ, ಹಾಗೂ ನಿರ್ಮಾಣ ಮತ್ತು ಧ್ವಂಸ (ಸಿ ಅಂಡ್ಡಿ) ತ್ಯಾಜ್ಯಗಳನ್ನು ವಿಂಗಡಿಸಿ ಪ್ರತ್ಯೇಕವಾಗಿ ಸಂಗ್ರಹಿಸುವುದು;
3.78 "ಘನತ್ಯಾಜ್ಯ" ಎಂದರೆ ಘನ ಅಥವಾ ಅರೆ ಘನ ರೂಪದಲ್ಲಿರುವ ಮನೆಗಳ ನೈರ್ಮಲ್ಯ ತ್ಯಾಜ್ಯ, ವಾಣಿಜ್ಯ ತ್ಯಾಜ್ಯ, ಸಂಸ್ಥೆಗಳ ತ್ಯಾಜ್ಯ, ಅಡುಗೆ ಮತ್ತು ಮಾರುಕಟ್ಟೆ ತ್ಯಾಜ್ಯ ಮತ್ತು ಗೃಹೇತರ ತ್ಯಾಜ್ಯ, ಬೀದಿ ಗುಡಿಸುವುದರಿಂದ ಸಿಗುವ ತ್ಯಾಜ್ಯ, ಮೇಲ್ಮೈ ಚರಂಡಿಗಳಿಂದ ತೆಗೆಯಲಾದ ಹೂಳು, ತೋಟಗಾರಿಕಾ ತ್ಯಾಜ್ಯ, ಕೃಷಿ ಮತ್ತು ಹೈನುಗಾರಿಕಾ ತ್ಯಾಜ್ಯ, ಸಂಸ್ಕರಿತ ಬಯೋ ಮೆಡಿಕಲ್(ವೈದ್ಯಕೀಯ) ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಕೈಗಾರಿಕೇತರ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಮತ್ತು ಇ ತ್ಯಾಜ್ಯ, ಬ್ಯಾಟರಿ ತ್ಯಾಜ್ಯ ಸ್ಥಳೀಯಾಡಳಿತದ ಪ್ರದೇಶದಿಂದ ಸಂಗ್ರಹಿಸಲ್ಪಟ್ಟ ವಿಕಿರಣತ್ಯಾಜ್ಯ ಮತ್ತು ನಿಯಮಾವಳಿ 2 ರಲ್ಲಿ ಹೇಳಲಾದ ಇನ್ನಿತರ ವಸ್ತುಗಳು ಹೊರತುಪಡಿಸಿ;
3.79 "ವಿಂಗಡಿಸುವುದು" ಎಂದರೆ ಕಾಗದ, ಪ್ಲಾಸ್ಟಿಕ್, ಕಾರ್ಡ್ ಬೋರ್ಡ್ಗಳು (ರಟ್ಟು), ಲೋಹ, ಗಾಜು ಮೊದಲಾದ ಪುನರ್ಬಳಕೆಗೆ ಸಾಧ್ಯವಾಗುವಂತಹ ಇನ್ನಿತರ ವಸ್ತುಗಳನ್ನು ಪುನರ್ಬಳಕೆಗೆ ಪರಿವರ್ತಿಸಲು ಸಾಧ್ಯವಾಗುವಂತೆ ಸಾಕಷ್ಟು ಪ್ರಮಾಣದಲ್ಲಿ ಮಿಶ್ರಿತ ಘನ ತ್ಯಾಜ್ಯದಿಂದ ಪ್ರತ್ಯೇಕಿಸುವುದು.
3.80 "ಮೂಲ" ಎಂದರೆ ತ್ಯಾಜ್ಯ ಉತ್ಪತ್ತಿ ಆಗುವ ಆವರಣ ಅಥವಾ ಮಾಲಿಕರಿಂದ/ಒಂದು ಅಥವಾ ಹೆಚ್ಚು ಆವರಣಗಳ ಅನುಭೋಗಿಗಳು ವಿಂಗಡಿಸಿದ ಘನತ್ಯಾಜ್ಯಕ್ಕಾಗಿ ಬಳಸುವ ಸಮುದಾಯ ಸಂಗ್ರಹ ಕೇಂದ್ರ;
3.81 "ಸ್ಥಿರೀಕರಣ" ಎಂದರೆ ವಿಘಟಿಸಬಲ್ಲ ತ್ಯಾಜ್ಯವನ್ನು ಲೀಚೆಟ್ ಅಥವಾ ಆಕ್ರಮಕಾರೀ ವಾಸನೆ ಉತ್ಪಾದಿಸದಂತೆ ಸ್ಥಿರ ಸ್ಥಿತಿಗೆ ಜೈವಿಕ ವಿಘಟನೆ (ಕೊಳೆಯಿಸುವುದು) ಗೊಳಿಸುವುದು. ಇದು ಕೃಷಿ ಭೂಮಿಗೆ ಬಳಕೆಗೆ,ಮಣ್ಣಿನ ಸವಕಳಿ ನಿಯಂತ್ರಣ ಹಾಗೂ ಮಣ್ಣಿನ ಸ್ವಾಸ್ಥ್ಯಕ್ಕಾಗಿ ಬಳಸಲು ಯೋಗ್ಯವಾಗುವಂತೆ ಮಾಡುವುದು.
3.82 "ಸ್ಥಿರೀಕೃತ ಜೈವಿಕ ಘಟನೆಗೊಳ್ಳುವ ತ್ಯಾಜ್ಯ"ಎಂದರೆ ವಿಘಟನೆಗೊಳ್ಳಬಲ್ಲ ತ್ಯಾಜ್ಯವನ್ನು ತಾಂತ್ರಿಕವಾಗಿ/ಜೈವಿಕವಾಗಿ ಸ್ಥಿರೀಕೃತಗೊಳಿಸಿದ್ದರ (ರೋಗಕಾರಕಗಳಿಂದ ಮುಕ್ತವಾದ) ಫಲಿತಾಂಶ ಮತ್ತು ಕೇವಲ ಸ್ಥಿರೀಕರಿಸಿದಾಗ ಮಾತ್ರ ಯಾವುದೇ ನಿರ್ಬಂಧಗಳಿಲ್ಲದೇ ಬಳಕೆ ಮಾಡಬಹುದು.
3.83 "ಬೀದಿ ವ್ಯಾಪಾರಿ"ಎಂದರೆ ಸರಕು/ಸಾಮಗ್ರಿಗಳು, ಸಾಮಾನು, ಜಿನಸುಗಳು, ಆಹಾರ ಸಾಮಗ್ರಿಗಳು ಅಥವಾ ದಿನಬಳಕೆಯ ಸಾಮಗ್ರಿಗಳ ಮಾರಾಟದಲ್ಲಿ ತೊಡಗಿರುವವರು ಅಥವಾ ಸಾರ್ವಜನಿಕರಿಗೆ ಸೇವೆ ಒದಗಿಸುವವರು. ಇವರು ಬೀದಿಯಲ್ಲಿ, ಓಣಿ/ಸಂದಿಗಳಲ್ಲಿ, ಕಾಲುದಾರಿ, ಪಾದಚಾರಿ ಮಾರ್ಗ, ಕಲ್ಲು ಹೊದಿಸಿದ ದಾರಿ,ಸಾರ್ವಜನಿಕ ಉದ್ಯಾನಗಳು ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಖಾಸಗಿ ಸ್ಥಳಗಳಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾದಕಟ್ಟಡ/ವಿನ್ಯಾಸದಲ್ಲಿ ಅಥವಾ ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತಾ ವ್ಯವಹರಿಸಬಹುದು. ಇವರನ್ನು ಬೀದಿ ವ್ಯಾಪಾರಿ, ಕೂಗಿಕೊಂಡು ಬೀದಿಗಳಲ್ಲಿ ವ್ಯಾಪಾರ ಮಾಡುವವ (ಕೂಗಿಮಾರುಗ), ಆಕ್ರಮಿ ಹಾಗೂ ಇನ್ನಿತರ ಯಾವುದೇ ಸ್ಥಳೀಯ ಅಥವಾ ವಲಯವಾರು ಸಮಾನಾರ್ಥ ನೀಡುವ ಪದಗಳಿಂದ ಕರೆಯಬಹುದು. "ಬೀದಿ ವ್ಯಾಪಾರ" ಎಂಬ ಪದವು ಅವುಗಳ ವ್ಯಾಕರಣ ಭಿನ್ನತೆ/ವ್ಯತ್ಯಾಸಗಳಿಂದಾಗಿ ಮತ್ತು ಸಂಬಂಧಿಸಿದ ಅಭಿವ್ಯಕ್ತಿಗಳಿಗೆ ಅನುಸಾರವಾಗಿ ವ್ಯಾಖ್ಯಾನಿಸಬೇಕು;
3.84 "ಸಾಗಾಟ/ಸಾಗಣೆ" ಎಂದರೆ ಘನ ತ್ಯಾಜ್ಯದ ಸಾಗಾಟ.ಇದು ಸಂಸ್ಕರಿಸಿದ ಅಥವಾ ಭಾಗಶ: ಸಂಸ್ಕರಿಸಿದ ಅಥವಾ ಸಂಸ್ಕರಿಸದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪರಿಸರಕ್ಕೆ ಯಾವುದೇ ಹಾನಿ ಆಗದ ರೀತಿಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮತ್ತು ಮುಚ್ಚಿದ ಸಾರಿಗೆ ವ್ಯವಸ್ಥೆಯೊಂದಿಗೆ ಕೆಟ್ಟ ವಾಸನೆ ಬಾರದಂತೆ, ನೆಲದ ಮೇಲೆ ಚೆಲ್ಲದಂತೆ ಮತ್ತು ನೋಡಲಾಗದ ಸ್ಥಿತಿಯನ್ನು ತಡೆಯುವ ರೀತಿಯಲ್ಲಿ ಸಾಗಾಟ ಮಾಡಬೇಕು;
3.85 "ವರ್ಗಾವಣೆಕೇಂದ್ರ" ಎಂದರೆ ಪ್ರಾಥಮಿಕ ಸಂಗ್ರಹದಿಂದ ಘನತ್ಯಾಜ್ಯ ಪಡೆಯಲು ಮತ್ತು ಮುಚ್ಚಿದ ವಾಹನದಲ್ಲಿ ಅಥವಾ ಕಂಟೇನರ್ಗಳಲ್ಲಿ ಇದನ್ನು ಬೃಹತ್ ಪ್ರಮಾಣದಲ್ಲಿ ಒಟ್ಟಿಗೆ ತ್ಯಾಜ್ಯ ಸಂಸ್ಕರಣೆ ಮತ್ತು/ಅಥವಾ ವಿಲೇವಾರಿ ವ್ಯವಸ್ಥೆಯಿರುವ ಕಡೆಗೆ ತ್ಯಾಜ್ಯ ವರ್ಗಾವಣೆಗೆ ಮತ್ತು ನಿಗದಿತ ಗುಣ ಮಟ್ಟದ ನಿರ್ವಹಣಾ ವಿಧಾನದಲ್ಲಿ ನೆಲದ ಮೇಲೆ ಯಾವುದೇ ಕಚಡ/ಕೊಳೆ ಇಲ್ಲದಂತೆ(ಎನ್ಜಿಒಜಿ) ಮತ್ತು ಕಚಡ/ತ್ಯಾಜ್ಯವು ವರ್ಗಾವಣೆ ಅಥವಾ ಸಾಗಾಟದ ವೇಳೆ ಶೂನ್ಯ ಸೋರುವಿಕೆ/ಚೆಲ್ಲುವಿಕೆ ತತ್ವವನ್ನು ಅನುಸರಿಸುವುದರೊಂದಿಗೆ ಸಾಗಣಿಕೆ ನಡೆಸುವುದು;
3.86 "ಸಂಸ್ಕರಣೆ" ಎಂದರೆ ಯಾವುದೇ ತ್ಯಾಜ್ಯದ ಭೌತಿಕ, ರಾಸಾಯನಿಕ ಅಥವಾ ಜೈವಿಕ ಗುಣಲಕ್ಷಣಗಳನ್ನು ಅಥವಾ ಸಂಯೋಜನೆಯನ್ನು ಬದಲಿಸಿ ಅವುಗಳ ಪ್ರಮಾಣವನ್ನು ಕಡಿಮೆ ಮಾಡುವ ಅಥವಾ ಹಾನಿ ಮಾಡುವ ಸಂಭಾವ್ಯತೆಯನ್ನು ಕಡಿಮೆ ಮಾಡುವ ವಿಧಾನ, ತಂತ್ರ ಅಥವಾ ಪ್ರಕ್ರಿಯೆ ಆಗಿದೆ.
3.87 "ಬಳಕೆದಾರರ ಶುಲ್ಕ /ಘನತ್ಯಾಜ್ಯ ಕರ" ಘನ ತ್ಯಾಜ್ಯಕರ ಎಂದರೆ ಮಲಿನಗೊಳಿಸುವವರು(ಮಾಲಿನ್ಯಕಾರಕರು) ಪಾವತಿಸುವ ತತ್ವದ ಆಧಾರದ ಮೇಲೆ ಬಿಬಿಎಂಪಿ ಮತ್ತು ನಿಯಮಾವಳಿ 2 ರಲ್ಲಿ ಹೆಸರಿಸಲಾಗಿರುವ ಯಾವುದೇ ಸಂಸ್ಥೆಯು ತ್ಯಾಜ್ಯದ ಉತ್ಪಾದಕರ ಮೇಲೆ ಘನ ತ್ಯಾಜ್ಯ ಸಂಗ್ರಹದ, ಸಾಗಾಟದ, ಸಂಸ್ಕರಣೆಯ ಮತ್ತು ವಿಲೇವಾರಿಯ ಸೇವೆಗಳ ಖರ್ಚನ್ನು ಪೂರ್ಣವಾಗಿ ಅಥವಾ ಭಾಗಶ: ಭರಿಸಲು ವಿಧಿಸುವ ಶುಲ್ಕವಾಗಿದೆ;
3.88 "ಖಾಲಿ ನಿವೇಶನ" ಎಂದರೆ ಯಾವುದೇ ಖಾಸಗಿ ವ್ಯಕ್ತಿಗೆ ಸೇರಿದ ಮತ್ತು ಅವರು ಈಗ ಅದನ್ನು ಅನುಭೋಗಿಸದೇ ಖಾಲಿ ಬಿಟ್ಟಿರುವ ಯಾವುದೇ ಜಾಗ ಅಥವಾ ಬಳಸದೇ ಬಿಟ್ಟಿರುವ ಬಯಲು ಜಾಗ.
3.89 "ಎರೆಹುಳ ಗೊಬ್ಬರ" (ವರ್ಮಿ ಕಂಪೋಸ್ಟಿಂಗ್) ಎಂದರೆ ಎರೆಹುಳಗಳನ್ನು ಬಳಸಿ ವಿಘಟಿಸಬಹುದಾದ ತ್ಯಾಜ್ಯವನ್ನು ಗೊಬ್ಬರವಾಗಿ (ಕಾಂಪೋಸ್ಟ್) ಪರಿವರ್ತಿಸುವುದು.
3.90"ವಾರ್ಡ್ ಮೈಕ್ರೋಪ್ಲಾನ್" ಎಂದರೆ ಎಸ್ಡಬ್ಲ್ಯುಎಮ್ 2016ರ ನಿಯಮಾವಳಿಗಳು ಮತ್ತು ಈ ಉಪವಿಧಿಯ ಉದ್ದೇಶಗಳನ್ನು ಈಡೇರಿಸಲು ಮೂಲಭೂತ ಯೋಜನಾ ಘಟಕ ಆಗಿದ್ದು ಎಸ್ಡಬ್ಲ್ಯುಎಮ್ ಸೇವೆಗಳ ಪ್ರಮಾಣ ಮತ್ತು ಸೇವಾ ವ್ಯಾಪ್ತಿಯನ್ನು ಅಂದಾಜಿಸುವುದು.
3.91 "ತ್ಯಾಜ್ಯ ಶ್ರೇಣಿ ವ್ಯವಸ್ಥೆ" ಎಂದರೆ ಘನತ್ಯಾಜ್ಯದ ನಿರ್ವಹಣೆಯ ಆದ್ಯತಾ ಕ್ರಮವಾಗಿದೆ. ಈ ಕೆಳಗಿನ 5 ವಿಚಾರಗಳಿಗೆ ಮೇಲೆ ಗಮನವಿರಿಸಿ ನಿರ್ವಹಿಸಬೇಕಾಗಿದೆ. ಅಂದರೆ ತಡೆಗಟ್ಟುವುದು (ಬಳಕೆ ಮೇಲೆ ತಡೆ), ಕಡಿಮೆಗೊಳಿಸುವುದು, ಮತ್ತೆ ಉಪಯೋಗಿಸುವುದು, ಪುನರ್ಬಳಕೆಗೆ ಪರಿವರ್ತಿಸುವುದು, ಹಿಂಪಡೆಯುವುದು ಹಾಗೂ ಕೊನೆಯ ಆಯ್ಕೆಯಾಗಿ ವಿಲೇವಾರಿ ಮಾಡುವುದಾಗಿದೆ. ಅಂದರೆ ತಡೆಗಟ್ಟುವುದು ಅತ್ಯಂತ ಆದ್ಯತೆಯ ಆಯ್ಕೆಯಾಗಿದೆ ಮತ್ತು ಭೂ ಭರ್ತಿಯಲ್ಲಿ ವಿಲೇವಾರಿ ಮಾಡುವುದು ಕೊನೆಯ ಅನಿವಾರ್ಯತೆ ಆಗಿದೆ;
3.92 "ತ್ಯಾಜ್ಯಉತ್ಪಾದಕ" ಘನತ್ಯಾಜ್ಯವನ್ನು ಉತ್ಪಾದಿಸುವ ಪ್ರತಿಯೋರ್ವ ವ್ಯಕ್ತಿ ಅಥವಾ ಜನರ ಗುಂಪು, ಪ್ರತಿಯೊಂದು ಮನೆಗಳ ಆವರಣ ಮತ್ತು ಗೃಹೇತರ/ವಾಣಿಜ್ಯ ಸಂಸ್ಥೆಗಳು/ಭಾರತೀಯ ರೈಲ್ವೇ, ರಕ್ಷಣಾ ಸಂಸ್ಥೆಗಳು ಇತ್ಯಾದಿ ರಾಜ್ಯ ಮತ್ತು ಕೇಂದ್ರ ಸರಕಾರಿ ಸಂಸ್ಥೆಗಳಾಗಿವೆ;
3.93 "ಚಿಂದಿಆಯುವವರು" ಎಂದರೆ ತ್ಯಾಜ್ಯ ಉತ್ಪಾದನೆ ಆಗುವ ಮೂಲಗಳಿಂದ ಅಂದರೆ ಬೀದಿಗಳು, ಕಸದ ತೊಟ್ಟಿಗಳು, ವಸ್ತುಗಳನ್ನು ಮರಳಿ ಪಡೆಯುವ ವ್ಯವಸ್ಥೆಗಳು, ಸಂಸ್ಕರಣೆ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳಿಂದ ಮತ್ತೆ ಬಳಸಬಹುದಾದ ಅಥವಾ ಪುನರ್ ಬಳಕೆಗೆ ಪರಿವರ್ತಿಸಬಹುದಾದ ಘನತ್ಯಾಜ್ಯಗಳನ್ನು ಅನೌಪಚಾರಿಕವಾಗಿ ಸಂಗ್ರಹಿಸುವ ಅಥವಾ ಪುನ: ಪಡೆಯುವ ಕೆಲಸದಲ್ಲಿ ತೊಡಗಿಕೊಂಡಿರುವ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಆಗಿದೆ. ಈ ಮೂಲಕ ಅವರು ತಮ್ಮ ಜೀವನಾಧಾರ ರೂಪಿಸಿಕೊಳ್ಳುತ್ತಾರೆ.
3.94 "ತ್ಯಾಜ್ಯ ವ್ಯಾಪಾರಿಗಳು"ಎಂದರೆ ರದ್ದಿ ಡೀಲರ್ಗಳು, ಸಂಚಾರಿ ಖರೀದಿದಾರರು, ಮತ್ತು ಪುನರ್ಬಳಕೆಗೆ ಪರಿವರ್ತಿಸಬಹುದಾದ ವಿಘಟಿಸಲು ಆಗದೇ ಇರುವ ತ್ಯಾಜ್ಯಗಳ ವಿಂಗಡಣೆ,ಮಾರಾಟ ಮತ್ತು ಖರೀದಿಯಲ್ಲಿ ತೊಡಗಿರುವ ವ್ಯಾಪಾರಸ್ಥರಾಗಿದ್ದಾರೆ.
3.95 "ಶೂ ನ್ಯ ತ್ಯಾಜ್ಯ ಆವರಣ" ಎಂದರೆ ವಸತಿ ಅಥವಾ ವಸತಿಯೇತರ/ವಾಣಿಜ್ಯ/ಶೈಕ್ಷಣಿಕ/ಸರಕಾರಿ/ಅಧಿಕಾರಿಗಳ ಕಾಲೋನಿ(ಆವರಣ) ಆಗಿದ್ದು ಇಲ್ಲಿನ ಆವರಣದೊಳಕ್ಕೆ ಸಂಗ್ರಹವಾದ ತ್ಯಾಜ್ಯವು 100% ಮೂಲದಲ್ಲೇ ವಿಂಗಡಣೆ ಆಗಿದ್ದು ಮತ್ತು ಸಂಸ್ಕರಿಸಲ್ಪಟ್ಟಿದ್ದು /ಮೂಲ ಸ್ಥಳದಲ್ಲೇ ಸಂಸ್ಕರಿಸಲ್ಪಡುವ ಮತ್ತು ಇತರೇ ಪುನರ್ ಬಳಕೆಗೆ ಪರಿವರ್ತಿಸಬಹುದಾದ ತ್ಯಾಜ್ಯವನ್ನು ಪಡೆಯಲು ಬಿಬಿಎಂಪಿ ಯತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಯನ್ನು/ಸೇವೆ ಒದಗಿಸುವವರನ್ನು ಅಥವಾ ಅನುಮೋದಿತ ಮಾರಾಟಗಾರರನ್ನು ಅವಲಂಭಿಸದೇ ಪುನರ್ಬಳಕೆ ಪರಿವರ್ತಕರೊಂದಿಗೆ ನೇರವಾಗಿ ಹೊಂದಾಣಿಕೆ ಮಾಡಿಕೊಂಡಿರುವ ಕಾಲೊನಿ ಅಥವಾ ಆವರಣವಾಗಿದೆ.