(1) ಅಂಗಡಿಗಳು ಮತ್ತು ವಾಣಿಜ್ಯ ಉದ್ದಿಮೆಗಳು ಹಾಗೂ ರಸ್ತೆ ಬದಿಯ ವ್ಯಾಪಾರಿಗಳು ತಮ್ಮ ಚಟುವಟಿಕೆಗಳ ವೇಳೆ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ವಿಂಗಡಿಸಬೇಕು. ಆಹಾರ ತ್ಯಾಜ್ಯ, ಅನುಮತಿಸಿದ ವಿಸರ್ಜಿಸಬಹುದಾದ ಪ್ಲೇಟ್ಗಳು,ಕಪ್ಗಳು, ಕ್ಯಾನ್ಗಳು,ರಾಪರ್ಗಳು, ತೆಂಗಿನಕಾಯಿ ಚಿಪ್ಪುಗಳು,ಉಳಿದ ಆಹಾರ, ತರಕಾರಿ, ಹಣ್ಣು ಹಾಗೂ ಉಪವಿಧಿಂiiಲ್ಲಿ 4(1)ರಲ್ಲಿ ನಿಗದಿಪಡಿಸಲಾದ ವಿಭಾಗಗಳ ಅನ್ವಯ ಸಂಗ್ರಹಕ್ಕಾಗಿ ಪ್ರತ್ಯೇಕ ತೊಟ್ಟಿಗಳನ್ನು ಹೊಂದಿರಬೇಕು ಹಾಗೂ ಇದು ಎಲ್ಲೂ ಕೂಡ ನೆಲದ ಮೇಲೆ ಗಲೀಜು ಮಾಡದಂತೆ ಹಾಗೂ ಚೆಲ್ಲದಂತಿರಬೇಕು. ಎಲ್ಲಾದರೂ ಆವರಣದಲ್ಲಿ ಗಲೀಜು ಮಾಡಿರುವ/ಚೆಲ್ಲಿರುವುದು ಕಂಡು ಬಂದರೆ ಅಥವಾ ವಿಂಗಡಿಸದೇ ಇರುವ ತ್ಯಾಜ್ಯ (ಒಟ್ಟು ಸೇರಿಸಿದ) ಇದ್ದರೆ ಇದು ಉಪವಿಧಿಯಂತೆ ಉಲ್ಲಂಘನೆ ಆಗಲಿದ್ದು ಅನುಸೂಚಿ VIIರಲ್ಲಿ ಪಟ್ಟಿ ಮಾಡಿರುವ ಪ್ರಕಾರದಂಡ ವಿಧಿಸಬೇಕು.
(2) ವಾಣಿಜ್ಯ ಚಟುವಟಿಕೆಗಳಿಂದಾಗಿ ಕೋಳಿ ಮಾಂಸ, ಮೀನು,ಮಾಂಸ ಹಾಗೂ ವಧಾಗಾರಗಳ ತ್ಯಾಜ್ಯ ಉತ್ಪಾದನೆಯಾಗುವ ಆವರಣಗಳ ಪ್ರತಿಯೊಬ್ಬ ಅನುಭೋಗದಾರರು ಇಂತಹ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಪೂರ್ಣವಾಗಿ ಮುಚ್ಚಿರುವ ವಿಧದಲ್ಲಿ ಮತ್ತು ನಿರ್ಮಲವಾದ ವಿಧಾನದಲ್ಲಿ ಸಂಗ್ರಹಿಸಿಡಬೇಕು. ಇಂತಹ ತ್ಯಾಜ್ಯವನ್ನು ಯಾವ ಸಂದರ್ಭಗಳಲ್ಲೂ ಬೇರೆ ಘನ ತ್ಯಾಜ್ಯದೊಂದಿಗೆ ಮಿಶ್ರಣ ಮಾಡಕೂಡದು. ಈ ತ್ಯಾಜ್ಯವನ್ನು ಯಾವುದೇ ತ್ಯಾಜ್ಯದಾರಿತ ಅಥವಾ ಸಮುದಾಯ ಬಿನ್ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಶೇಖರಣೆ ಮಾಡುವುದನ್ನು ನಿಷೇಧಿಸಲಾಗಿದ್ದು ಅನುಸೂಚಿ VIIರಲ್ಲಿ ಪಟ್ಟಿ ಮಾಡಿರುವಂತೆ ದಂಡ ತೆರಬೇಕಾಗುತ್ತದೆ. ಬಿಬಿಎಂಪಿಯು ನೇರವಾಗಿ ಅಥವಾ ತನ್ನ ಅಧಿಕೃತ ಸೇವೆ ಒದಗಿಸುವವರ ಮೂಲಕ ವಧಾಗಾರಗಳ ತ್ಯಾಜ್ಯವನ್ನು ಪ್ರತಿದಿನ ಸಂಗ್ರಹಿಸುತ್ತಿದ್ದು ಬಿಬಿಎಂಪಿ ನಿಗದಿಮಾಡಿದ ಸಮಯದಲ್ಲಿ ಈ ತ್ಯಾಜ್ಯವನ್ನು ಹಸ್ತಾಂತರಿಸಲು ಸಿದ್ಧವಾಗಿರುವುದನ್ನು ಅನುಭೋಗದಾರರು ಖಾತರಿಪಡಿಸಬೇಕು. ಕೋಳಿ ಮಾಂಸ, ಮೀನು, ಮಾಂಸ ಸೇರಿದಂತೆ ವಧಾಗಾರಗಳ ಇನ್ನಿತರ ತ್ಯಾಜ್ಯಗಳ ಪ್ರಾಥಮಿಕ ಸಂಗ್ರಹಣೆ ಮತ್ತು ದ್ವಿತೀಯ ಹಂತದ ಸಾಗಣೆಗಾಗಿ ಬಿಬಿಎಂಪಿಯು ಸೂಕ್ತವಾದ ಮುಚ್ಚಿದ ಕಂಟೇನರ್ ಬಿನ್ (ಮುಚ್ಚಿದ ಪಾತ್ರೆ/ಕಸದ ಬುಟ್ಟಿ/ತೊಟ್ಟಿ)ಗಳನ್ನು ಹಾಗೂ ವಾಹನಗಳನ್ನು ಬಳಕೆದಾರರ ಶುಲ್ಕ ವಿಧಿಸುವ ಕ್ರಮದ ಮೇಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪನ್ನವಾಗುವ ವಧಾಗಾರದ ತ್ಯಾಜ್ಯದ ಪ್ರಮಾಣದ ಆಧಾರದ ಮೇಲೆ ಒದಗಿಸಬೇಕು. ಇಂತಹ ಬಳಕೆದಾರರ ಶುಲ್ಕವನ್ನು ಬಿಬಿಎಂಪಿಯು ಪ್ರಕಟಿಸಿರುತ್ತದೆ ಮತ್ತು ಈ ವರ್ಗದ ತ್ಯಾಜ್ಯ ಉತ್ಪಾದಕರು ಈ ಸಂಗ್ರಹ/ಸಾಗಣಿಕೆ/ವೈಜ್ಞಾನಿಕ ವಿಲೇವಾರಿ ಸೇವೆ ಒದಗಿಸಿದುದಕ್ಕಾಗಿ ಶುಲ್ಕವನ್ನು ತೆರುವುದು ಅವರ ಕರ್ತವ್ಯವಾಗಿರುತ್ತದೆ.
(3) ಸಮುದಾಯದ ಕಸ/ತ್ಯಾಜ್ಯದ ಸಂಗ್ರಹಣಾ ಬಿನ್/ಪಾತ್ರೆ/ಧಾರಕವನ್ನು ತಮ್ಮ ಆವರಣದಲ್ಲಿ ಹೊಂದಿರುವ ಪ್ರತಿಯೊಬ್ಬ ಬೃಹತ್ ತ್ಯಾಜ್ಯ ಉತ್ಪಾದಕರು ಅಥವಾ ಒಟ್ಟುಗೂಡಿಸುವವರು ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕರಿಂದ ವಿಂಗಡಿಸಿದ ಕಸವನ್ನು/ಘನತ್ಯಾಜ್ಯವನ್ನು ತಮ್ಮ ಆವರಣದಲ್ಲೇ ಮುಚ್ಚಿದ ಸಂಗ್ರಹಣಾ ಬಿನ್ನಲ್ಲಿ ಉಪವಿಧಿ 4ರಂತೆ ಸಂಗ್ರಹಿಸಿ ಪ್ರವೇಶದ್ವಾರ ಅಥವಾ ಕೆಳಮಹಡಿಯ ನಿಗದಿಪಡಿಸಿದ ಸ್ಥಳದಲ್ಲಿ ಇರಿಸುವ ಮೂಲಕ ಇಂತಹ ವಿಂಗಡಿತ ತ್ಯಾಜ್ಯವನ್ನು ತ್ವರಿತವಾಗಿ ಮತ್ತು ಕ್ಲಪ್ತ ಸಮಯಕ್ಕೆ ಸಂಗ್ರಹಿಸಲು ಅನುವು ಮಾಡಿಕೊಡಬೇಕು.
(4)ಯಾವುದೇ ಸ್ಥಳದ ಮಾಲಿಕರು ಅಥವಾ ಅನುಭೋಗದಾರರು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹಾಗೂ ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯಗಳನ್ನು (ಸಿ ಅಂಡ್ಡಿ) ತಮ್ಮ ಆವರಣದೊಳಗೆ ಇರಿಸತಕ್ಕದ್ದು ಮತ್ತು ಪಾದಚಾರಿ ಮಾರ್ಗ, ರಸ್ತೆ ಇನ್ನಿತರ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸುವುದು ಅಥವಾ ಅಡ್ಡಗಟ್ಟುವಂತಿರಬಾರದು. ಸಿ ಅಂಡ್ ಡಿ ತ್ಯಾಜ್ಯದ ಸಂಗ್ರಹ, ನಿರ್ವಹಣೆ ಹಾಗೂ ಉಸ್ತುವಾರಿಯನ್ನು ಸಿ ಅಂಡ್ ಡಿ ತ್ಯಾಜ್ಯ ನಿರ್ವಹಣಾ ನಿಯಮಾವಳಿ 2016 ಮತ್ತು ಬಿಬಿಎಂಪಿಯ ಕಟ್ಟಡ ಉಪವಿಧಿ ಅನ್ವಯವೇ ನಿರ್ವಹಿಸಬೇಕು.
(5)ಕಟ್ಟಡ ನಿರ್ಮಾಣ ಸಾಮಗ್ರಿ ಅಥವಾ ಸಿ ಅಂಡ್ ಡಿ ತ್ಯಾಜ್ಯವನ್ನು ಸ್ಥಳಾಭಾವ ಅಥವಾ ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯಗಳನ್ನು ಅಗತ್ಯತೆಗಳಿಗೆ ಅನುಗುಣವಾಗಿ ರಸ್ತೆ ಅಥವಾ ಇತರೇ ಸಾರ್ವಜನಿಕ ಸ್ಥಳಗಳಲ್ಲಿ ಅನಿವಾರ್ಯ ಸಂದರ್ಭಗಳಲ್ಲಿ ಅಥವಾ ತಪ್ಪಿಸಲಾಗದ ಕಾರಣಗಳಿಗಾಗಿ ಸಂಗ್ರಹಿಸಬೇಕಾಗಿ ಬಂದರೆ ಆ ಸ್ಥಳದ ಮಾಲೀಕರು ಅಥವಾ ಅನುಭೋಗದಾರರು ಬಿಬಿಎಂಪಿಯಿಂದ ನಿರ್ದಿಷ್ಟ ಅನುಮತಿ ಪಡೆದು ಮಾಡಬೇಕು. ಕಟ್ಟಡ ನಿರ್ಮಾಣ ಸಾಮಗ್ರಿ ಹಾಗೂ ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯಗಳನ್ನು (ಸಿ &ಡಿ) ರಸ್ತೆಯಲ್ಲೇ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಂಗ್ರಹಿಸಲು ಅನುವು ಮಾಡಿಕೊಟ್ಟಿರುವುದಕ್ಕಾಗಿ ಬಿಬಿಎಂಪಿಯು ಕಟ್ಟಡ ಉಪವಿಧಿ ಅಥವಾ ಕಾಲಕಾಲಕ್ಕೆ ಪ್ರಕಟಿಸಲಾಗುವಂತೆ ಶುಲ್ಕವನ್ನು ವಿಧಿಸತಕ್ಕದ್ದು. ಈ ಸಂಗ್ರಹವನ್ನು ಅತಿಕಡಿಮೆ ಸ್ಥಳದಲ್ಲಿ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮಾಡಬೇಕು. ಬಿಬಿಎಂಪಿಯು ಅಧಿಕೃತಗೊಳಿಸಿದಂತೆ ಸಂಗ್ರಹ ಮತ್ತು ಸಾಗಣೆ ವ್ಯವಸ್ಥೆಗೆ ಅನುಸಾರವಾಗಿ ಸಿ ಅಂಡ್ ಡಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಮಾಲೀಕರ ಅಥವಾ ಆವರಣದ ಅನುಭೋಗದಾರರ ಜವಾಬ್ಧಾರಿ ಆಗಿರುತ್ತದೆ.
(6)ಯಾವುದೇ ನಿಗದಿತ ವಾಣಿಜ್ಯ ಪ್ರದೇಶ ಅಥವಾ ವಾಣಿಜ್ಯ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಮಾರುಕಟ್ಟೆ ಸಂಘಗಳು ಅಥವಾ ಅಂಗಡಿ ಮಾಲಿಕರ ವರ್ಗವು ವಿಂಗಡಿತ ಕಸದ ಬಿನ್ಗಳನ್ನು (ಉತ್ಪತ್ತಿ ಆಗುವ ತ್ಯಾಜ್ಯ/ಕಸಕ್ಕೆ ಅನುಸಾರವಾಗಿ) ಇಡುವುದು, ಹಾಗೂ ಯಾವುದೇ ರೀತಿಯ ಘನತ್ಯಾಜ್ಯವು ರಸ್ತೆಗಳು, ಪಾದಚಾರಿ ಮಾರ್ಗಗಳು, ಚರಂಡಿ ಅಥವಾ ಇನ್ನಿತರ ಅಂತಹ ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡದಂತೆ, ಚೆಲ್ಲದಂತೆ ಅಥವಾ ಎಸೆಯದಂತೆ ಖಾತರಿ ಪಡಿಸುವ ಜವಾಬ್ಧಾರಿ ಹೊಂದಿರುತ್ತಾರೆ. ಇಂತಹ ಯಾವುದೇ ಆವರಣಗಳ ಮುಂಭಾಗ ಅಥವಾ ಇಂತಹ ಸಂಸ್ಥೆಗಳ ಸುತ್ತಮುತ್ತ ಅಥವಾ ವಾಣಿಜ್ಯ ಪ್ರದೇಶಗಳಲ್ಲಿ ವಿಂಗಡಿಸದೇ ಇರುವ/ ಮಿಶ್ರ ಕಸ/ತ್ಯಾಜ್ಯವನ್ನು ಹಾಕುವುದು/ಚೆಲ್ಲುವುದನ್ನು ಈ ಉಪವಿಧಿಯ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಮತ್ತು ಅನುಸೂಚಿ VIIರಲ್ಲಿ ಪಟ್ಟಿ ಮಾಡಿರುವ ದಂಡದ ಪ್ರಕಾರ ದಂಡ ವಿಧಿಸಲಾಗುವುದು.