(1) ಬೃಹತ್ ತ್ಯಾಜ್ಯ ಉತ್ಪಾದಕರು ಸೇರಿದಂತೆ ಎಲ್ಲಾ ತ್ಯಾಜ್ಯ ಉತ್ಪಾದಕರು ಕಸ ಉತ್ಪತ್ತಿ ಆಗುವ ಮೂಲದಲ್ಲೇ ಘನತ್ಯಾಜ್ಯವನ್ನು ಈ ಕೆಳಗಿನ ವಿಭಾಗಗಳಲ್ಲಿ ಅನ್ವಯವಾಗುವಂತೆ ವಿಂಗಡಿಸತಕ್ಕದ್ದು.
(ಎ) ಜೈವಿಕವಾಗಿ ವಿಘಟಿಸಬಲ್ಲ (ಕೊಳೆತು ಹೋಗುವಂತಹ) ತ್ಯಾಜ್ಯ, ಹಸಿ ಕಸ ಎಂದು ಸಂಬೋಧಿಸಲಾಗುವುದು.
(ಬಿ) ಜೈವಿಕವಾಗಿ ವಿಘಟನೆ ಆಗದೇ ಇರುವ ತ್ಯಾಜ್ಯ, ಅಂದರೆ ಒಣ ಕಸ
(ಸಿ) ನೈರ್ಮಲ್ಯತ್ಯಾಜ್ಯ(ಸ್ಯಾನಿಟರಿ ವೇಸ್ಟ್) ಸೇರಿದಂತೆ ಅಪಾಯಕಾರಿ ಗೃಹ ತ್ಯಾಜ್ಯ
(ಡಿ) ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ (ಸಿ ಅಂಡ್ ಡಿ) ತ್ಯಾಜ್ಯ.
ಇ) ಬೃಹತ್ ಉದ್ಯಾನ ಮತ್ತು ತೋಟಗಾರಿಕಾ ತ್ಯಾಜ್ಯ ಹಾಗೂ ಎಫ್) ಎಲೆಕ್ಟ್ರಾನಿಕ್ ಅಥವಾ ಇ-ತ್ಯಾಜ್ಯ.
(2) ಸ್ಯಾನಿಟರಿ ನ್ಯಾಪ್ಕಿನ್, ಡಯಾಪರ್ಗಳು, ಟ್ಯಾಂಪನ್ಸ್ ಸ್ವಚ್ಛಗೊಳಿಸಲು ಬಳಕೆ ಮಾಡಿದ ವಸ್ತು ಹಾಗೂ ಅದಕ್ಕೆ ಸಮನಾದ ವಸ್ತುಗಳನ್ನು ಉತ್ಪಾದಕರು ಅಥವಾ ಆ ಬ್ರಾಂಡ್ನ ಮಾಲಿಕರು ಒದಗಿಸಿದ ಚೀಲಗಳಲ್ಲಿ ಅಥವಾ ಹಳೆಯ ಪತ್ರಿಕೆಗಳಲ್ಲಿ ಭದ್ರವಾಗಿ ಸುತ್ತಬೇಕು ಎಲ್ಲಾ ಸ್ಯಾನಿಟರಿ ತ್ಯಾಜ್ಯಗಳನ್ನು ಅಪಾಯಕಾರಿ ಗೃಹ ತ್ಯಾಜ್ಯದೊಂದಿಗೆಸಂಗ್ರಹಿಸಬೇಕು. ಬೃಹತ್ ತ್ಯಾಜ್ಯ ಉತ್ಪಾದಕರಾದಂತಹವರು, ಶೈಕ್ಷಣಿಕ ಸಂಸ್ಥೆಗಳು, ಮಹಿಳಾ ವಸತಿ ನಿಲಯಗಳು ಮತ್ತು ಪೇಯಿಂಗ್ಗೆಸ್ಟ್ ವಸತಿಗೃಹಗಳು ಇಂತಹ ಸ್ಯಾನಿಟರಿ ತ್ಯಾಜ್ಯಗಳನ್ನು ಚರಂಡಿಗಳಲ್ಲಿ ಅಥವಾ ಮೋರಿಗಳಲ್ಲಿ ವಿಸರ್ಜಿಸದೇ ಈ ಉಪವಿಧಿಗಳ ಎಲ್ಲ ನಿಯಮ(ಕರಾರು)ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಕರಾರುಗಳನ್ನು ಪಾಲಿಸದೇ ಇದ್ದಲ್ಲಿ ಅನುಸೂಚಿ-V IIರಲ್ಲಿ ಪಟ್ಟಿ ಮಾಡಿರುವ ದಂಡದ ಪ್ರಕಾರ ದಂಡ ವಿಧಿಸಲಾಗುವುದು.
(3) ಜೈವಿಕ-ವಿಘಟನೀಯ ತ್ಯಾಜ್ಯ, ಜೈವಿಕ ವಿಘಟನೆಯಾಗದ ತ್ಯಾಜ್ಯ ಮತ್ತು ಅಪಾಯಕಾರಿ ಗೃಹತ್ಯಾಜ್ಯಗಳನ್ನು ಸ್ಯಾನಿಟರಿ ತ್ಯಾಜ್ಯಗಳೊಂದಿಗೆ ಅವುಗಳನ್ನು ಒಟ್ಟು ಮಾಡದೇ ಬಿಬಿಎಂಪಿ ಮತ್ತು/ಅಥವಾ ಏಜೆನ್ಸಿ/ಸೇವೆ ಒದಗಿಸುವವರು ಯಾರೇ ಆಗಲಿ ಅವರಿಗೆ ನೀಡಲು ಪ್ರತ್ಯೇಕವಾಗಿ ನಿಗದಿತ ಧಾರಕಗಳಲ್ಲಿ (ಯಾವುದೇ ಪ್ಲಾಸ್ಟಿಕ್ ಅಥವಾ ಕಸದ ಚೀಲಗಳನ್ನು ಬಳಸದೇ)ಸಂಗ್ರಹಿಸಿಡಬೇಕು. ಪ್ಯಾಕೆಟ್ಗಳು, ಆಹಾರದ ಪೊಟ್ಟಣಗಳು (ಕಂಟೇನರ್), ಪೆಟ್ಟಿಗೆಗಳು, ಬಾಟಲ್ಗಳು, ಟೆಟ್ರಾಪ್ಯಾಕ್ ಕಾರ್ಟನ್ಗಳು(ಡಬ್ಬಗಳು) ಹಾಗೂ ಇನ್ನಿತರ ಎಸೆಯುವ ವಸ್ತುಗಳನ್ನು ಸ್ವಚ್ಛಗೊಳಿಸಿ ಒಣಗಿಸಿ ಇವುಗಳನ್ನು ಪರಿಣಾಮಕಾರಿಯಾಗಿ ಮರು ಬಳಸಲು ಪರಿವರ್ತಿಸುವಂತೆ ಮಾಡುವುದನ್ನು ತ್ಯಾಜ್ಯ ಉತ್ಪಾದಕರು ಖಚಿತ ಪಡಿಸಿಕೊಳ್ಳಬೇಕು. ಜೈವಿಕವಾಗಿ ವಿಘಟನೆಯಾಗಬಲ್ಲ ತ್ಯಾಜ್ಯಗಳೂ ಸೇರಿದಂತೆ ಎಲ್ಲಾ ಘನತ್ಯಾಜ್ಯಗಳನ್ನು ಬಿಬಿಎಂಪಿ ಮತ್ತು /ಅಥವಾ ಏಜೆನ್ಸಿ/ಸೇವೆ ಒದಗಿಸುವವರಿಗೆ ನೀಡಲು ಇದನ್ನು ಪ್ಲಾಸ್ಟಿಕ್ ಚೀಲದೊಳಕ್ಕೆ ಸುತ್ತಬಾರದು. ಇಂತಹ ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಿ ನೇರವಾಗಿ ಪ್ರಾಥಮಿಕ ಸಂಗ್ರಹಣಾ ವಾಹನಕ್ಕೆ ಮಾತ್ರ ವರ್ಗಾವಣೆ ಮಾಡತಕ್ಕದ್ದು.
(4) ಕಸ ಉತ್ಪಾದಕರ ಆವರಣದಲ್ಲೇ ಕಟ್ಟಡ ನಿರ್ಮಾಣ ಮತ್ತು ಭಗ್ನಾವಶೇಷ ತ್ಯಾಜ್ಯಗಳನ್ನು ಮತ್ತು ಉದ್ಯಾನಗಳ ಬೃಹತ್ ಹಾಗೂ ತೋಟಗಾರಿಕಾ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಇರಿಸತಕ್ಕದ್ದು. ಯಾವುದೇ ಜೈವಿಕ ವೈದ್ಯಕೀಯ(ಬಯೋ ಮೆಡಿಕಲ್) ತ್ಯಾಜ್ಯ,ಇ-ತ್ಯಾಜ್ಯ, ಅಪಾಯಕಾರಿ ರಾಸಾಯನಿಕಗಳು ಹಾಗೂ ಕೈಗಾರಿಕಾ ತ್ಯಾಜ್ಯಗಳನ್ನು ಘನತ್ಯಾಜ್ಯದೊಂದಿಗೆ ಬೆರೆಸುವಂತಿಲ್ಲ.
(5) ಬಿಬಿಎಂಪಿ ಮತ್ತು/ಅಥವಾ ಏಜೆನ್ಸಿ/ಸೇವೆ ಒದಗಿಸುವವರಲ್ಲಿ ಯಾರಿಗಾದರೂ ವಿಂಗಡಿಸಿದ ಘನತ್ಯಾಜ್ಯವನ್ನು ಅಂತಿಮವಾಗಿ ಹಸ್ತಾಂತರಿಸುವ ಮುನ್ನ ವಿಂಗಡಿಸಿದ ತ್ಯಾಜ್ಯವನ್ನು ಸಂಗ್ರಹಿಸುವ ಬಿನ್ ಈ ಕೆಳಗಿನ ಬಣ್ಣದಲ್ಲಿರಬೇಕು.
(ಎ)ಹಸಿರು-ಜೈವಿಕ ವಿಘಟನೀಯ ತ್ಯಾಜ್ಯ/ಹಸಿ ಕಸ
(ಬಿ) ನೀಲಿ-ಜೈವಿಕ ವಿಘಟನೆ ಆಗದ/ಒಣ ಕಸ ತ್ಯಾಜ್ಯ ಹಾಗೂ (ಸಿ)ಕೆಂಪು-ಅಪಾಯಕಾರಿ ಗೃಹ ತ್ಯಾಜ್ಯ/ಕಸ ಸ್ಯಾನಿಟರಿ ತ್ಯಾಜ್ಯ ಸೇರಿದಂತೆ.