ಅನುಸೂಚಿ–Iii
ಬೃಹತ್ ತ್ಯಾಜ್ಯ ಉತ್ಪಾದಕರನ್ನು ಸೂಚಿಸಿ ನೀಡಲಾದ ಸಾರ್ವಜನಿಕ ನೋಟಿಸ್
ಸರ್ಕಾರವು 2016 ಏಪ್ರಿಲ್ 08ರಂದುಅಧಿಸೂಚಿಸಿದ 2016ರ ಘನತ್ಯಾಜ್ಯ ನಿರ್ವಹಣೆ (ಎಸ್ಡಬ್ಲ್ಯುಎಂ) ನಿಯಮಗಳ ಮೂಲಕ ತಿಳಿಸುವುದೇನೆಂದರೆ, ಘನತ್ಯಾಜ್ಯವನ್ನು ಉತ್ಪಾದಿಸುವ ಬೃಹತ್ ತ್ಯಾಜ್ಯಗಳ ಉತ್ಪಾದಕರು ಮತ್ತು ನಿರ್ದಿಷ್ಟಪಡಿಸಿದ ಹೊಸ ನಿರ್ಮಾಣಗಳಿಂದ ಉತ್ಪಾದನೆಯಾದ ಕೆಲವು ತ್ಯಾಜ್ಯ ನಿರ್ವಹಣೆಯ ಕೆಲಸವನ್ನು ಕಡ್ಡಾಯವಾಗಿ ಅವರೇ ಮಾಡಬೇಕಾಗಿರುತ್ತದೆ, ------------- --------------------(ಬಿಬಿಎಂಪಿ ಹೆಸರು)ಯು ಇನ್ನಿತರ ಯಾವುದೇ ನಿಯಮ/ಅವಕಾಶಗಳಿದ್ದರೂ ಕೂಡ, ಈ ಮೂಲಕ ನೀಡುವ ಸೂಚನೆ ಏನೆಂದರೆ, (i) ಪ್ರತಿ ದಿನ 10 ಕೆಜಿ ಅಥವಾ ಅದಕ್ಕಿಂತ ಹೆಚ್ಚು ಘನತ್ಯಾಜ್ಯ (ಎಲ್ಲಾತ್ಯಾಜ್ಯ ಮೂಲಗಳಿಂದ) ಉತ್ಪಾದನೆ ಅಥವಾ (ii)5000 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಪ್ರದೇಶವನ್ನು ಹೊಂದಿದ ಪ್ರತ್ಯೇಕ ಆವರಣವಿರುವ ಬಡಾವಣೆ, ಕಾರ್ಪೋರೇಟ್ ಆವರಣ, ಟೆಕ್ನಾಲಜಿಪಾರ್ಕ್ಗಳು ಮತ್ತು ಸಂಸ್ಥೆಗಳು ಅಥವಾ 10 ಕೆಜಿ ಅಥವಾ ಅದಕ್ಕಿಂತಅಧಿಕ ಘನತ್ಯಾಜ್ಯವನ್ನು ಉತ್ಪಾದಿಸಿದರೆ, 2016 ರ ಎಸ್ಡಬ್ಲ್ಯುಎಂ ನಿಯಮಗಳ ಅವಕಾಶಗಳು ಮತ್ತು ಬಿಬಿಎಂಪಿ ಅಧಿಸೂಚಿಸಿದ ಉಪನಿಯಮಗಳ ಪ್ರಕಾರ (ಈ ಜಾಲತಾಣದಲ್ಲಿ ಲಭ್ಯ) ಈ ನೋಟಿಸ್ ಪಡೆದ 60 ದಿನಗಳಿಗೆ ಮೀರದಂತೆ (ಈ ದಿನಾಂಕಕ್ಕೆ) ಘನತ್ಯಾಜ್ಯವನ್ನು 03(ಮೂರು) ವಿಭಾಗಗಳಾಗಿ/ ಪಾಲುಗಳಾಗಿ (ಜೈವಿಕ ವಿಘಟನೀಯ, ವಿಘಟನೆಯಾಗದ ತ್ಯಾಜ್ಯ ಮತ್ತು ಗೃಹ ಅಪಾಯಕಾರಿ ತ್ಯಾಜ್ಯ) ಮೂಲದಲ್ಲಿಯೇ ಬೇರ್ಪಡಿಸಿ ಮತ್ತು ಆವರಣದಲ್ಲಿಯೇ ಸಂಸ್ಕರಿಸುವುದು ಸೇರಿದಂತೆ ವಿಘಟನೆಯಾಗದ ಜೈವಿಕ ತ್ಯಾಜ್ಯದ ನಿರ್ವಹಣೆಯನ್ನು ಕಡ್ಡಾಯಗೊಳಿಸಿದೆ. ಉಪನಿಯಮದಲ್ಲಿರುವ ವಿಸ್ತೃತವಾದ ಸೂಚನೆಗಳು ಈ ಜಾಲತಾಣದಲ್ಲಿ ಲಭ್ಯವಿದೆ .............................
ನೋಟಿಸ್ ನೀಡಿದ ಅವಧಿಯೊಳಗೆ ತಮ್ಮ ಆವರಣದಿಂದ 10 ಕೆ.ಜಿ.ಗಿಂತ ಕಡಿಮೆ ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎಂದು ಸ್ವಯಂಘೋಷಣೆ ಮಾಡದೇ ಹೋದ ಪಕ್ಷದಲ್ಲಿ ಎಲ್ಲಾ ತ್ಯಾಜ್ಯ ಉತ್ಪಾದಕರೂ ಬೃಹತ್ ತ್ಯಾಜ್ಯ ಉತ್ಪಾದಕರು ಎಂಬ ವ್ಯಾಖ್ಯಾನದ ವ್ಯಾಪ್ತಿಯೊಳಗೆ ಬರುವರೆಂದು ವರ್ಗೀಕರಿಸಲಾಗುತ್ತದೆ. ಈಸ್ವಯಂಘೋಷಣೆ ಪರಿಶೀಲನೆಗೆ ಒಳಪಡಲಿದ್ದು ಅದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿದು ಬಂದಲ್ಲಿ ನಿಗದಿಪಡಿಸಲಾದ ದಂಡವನ್ನು ವಿಧಿಸಲಾಗುತ್ತದೆ. ಪರಿಶೀಲನೆ ಮಾಡಲು ಸಾಧ್ಯವಾಗುವಂತೆ ಈ ನೋಟಿಸ್ ಜಾರಿ ಮಾಡಿದ (ದಿನಾಂಕ)ದಿನದಿಂದ 20 ದಿನಗಳ ಒಳಗಾಗಿ ಬಿಬಿಎಂಪಿಗೆ ಈ ಸ್ವಯಂ ಘೋಷಣೆಗಳನ್ನು ಸಲ್ಲಿಸಬೇಕಾಗುತ್ತದೆ. ನಿಗದಿಪಡಿಸಿದ ದಿನಾಂಕದ ನಂತರ ಸಲ್ಲಿಸಲಾದ/ಕಳುಹಿಸಿದ ಯಾವುದೇ ಸ್ವಯಂ-ಘೋಷಣೆಯನ್ನು ತಕ್ಷಣ ತಿರಸ್ಕರಿಸಲಾಗುತ್ತದೆ.
ಈ ನೋಟಿಸ್ಜಾರಿ ಮಾಡಿದ(ದಿನಾಂಕ....). 60 .ದಿನಗಳ ಬಳಿಕ ಬೃಹತ್ ತ್ಯಾಜ್ಯ ಉತ್ಪಾದಕರಿಗಾಗಿ......................ರೂಪಿಸಲಾಗಿರುವ 2016ರ ಎಸ್ಡಬ್ಲ್ಯುಎಂ ನಿಯಮಗಳು ಮತ್ತು ಅಥವಾ ಈ ಉಪನಿಯಮಗಳನ್ನು ಉಲ್ಲಂಘಿಸಿರುವುದು ಗಮನಕ್ಕೆ ಬಂದರೆ ಬಿಬಿಎಂಪಿ ಉಪನಿಯಮಗಳಲ್ಲಿ ಉಲ್ಲೇಖಿಸಲಾಗಿರುವಂತೆ ದಂಡವನ್ನು ವಿಧಿಸಲಾಗುತ್ತದೆ.
ಮುಂದಿನ ದಿನಗಳಲ್ಲಿಯೂ ಘೊಷಣೆ ಸುಳ್ಳು ಎಂಬುದು ಸಾಬೀತಾದರೆ ಬಿಬಿಎಂಪಿ ಉಪನಿಯಮಗಳ ಪ್ರಕಾರ ದಂಡಗಳನ್ನು ವಿಧಿಸಲಾಗುತ್ತದೆ.
ಸ್ಥಳ:
ಬಿಬಿಎಂಪಿ ಅಧಿಕಾರಿ ಸಹಿ