ಅನುಸೂಚಿ-Iv
ವೈಯಕ್ತಿಕ ನೋಟಿಸ್ ನಮೂನೆ
ರವರಿಗೆ,
(ಪ್ರಸ್ತಾಪಿತ ಬೃಹತ್ ತ್ಯಾಜ್ಯ ಉತ್ಪಾದಕರ ಹೆಸರು ಸೇರಿಸಿ)
ವಿಷಯ: ಬೃಹತ್ ತ್ಯಾಜ್ಯ ಉತ್ಪಾದಕರು ಎಂದು ವರ್ಗೀಕರಣ
ಶ್ರೀ/ಶ್ರೀಮತಿ/ಮೆ|
ನಿಮ್ಮ ಕಟ್ಟಡದ ಆವರಣದಲ್ಲಿ ಮತ್ತು/ಅಥವಾ ನಿಮ್ಮ ಸ್ವಾಧೀನದಲ್ಲಿರುವ ಪ್ರದೇಶದಲ್ಲಿ ನಡೆಸುತ್ತಿರುವ ಕಾರ್ಯಚಟುವಟಿಕೆಗಳು/ ವ್ಯಾಪಾರವನ್ನು ಪರಿಶೀಲಿಸಿ ಸಕ್ಷಮ ಪ್ರಾಧಿಕಾರವು (ಬಿಬಿಎಂಪಿ ಹೆಸರು) ನಿಮ್ಮನ್ನು ಬೃಹತ್ ತ್ಯಾಜ್ಯ ಉತ್ಪಾದಕರು ಎಂದು ಪರಿಗಣಿಸಲಾಗಿದೆ. ಆ ಮೂಲಕವಾಗಿ, ನೀವು 2016ರ ಎಸ್ಡಬ್ಲ್ಯುಎಂ ನಿಯಮಗಳಲ್ಲಿನ ಅವಕಾಶಗಳು, ಉಪ -ನಿಯಮಗಳಿಗೆ ಬದ್ಧರಾಗಿರುವಂತೆ ಸೂಚನೆ ನೀಡಲಾಗಿದೆ. ಇದರಂತೆ ಮೂಲದಲ್ಲೇ ತ್ಯಾಜ್ಯವನ್ನು ಬೇರ್ಪಡಿಸುವುದು, ಆವರಣದ ಒಳಗೇ ಬೇ ರ್ಪಡಿಸಿದ ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣೆ ಮಾಡುವುದು, ವಿಘಟನೆಯಾಗುವ ಜೈವಿಕ ತ್ಯಾಜ್ಯವನ್ನು ಆವರಣದೊಳಗೇ ಸಂಸ್ಕರಣೆ ಮಾಡಲು ಪಟ್ಟಿ ಮಾಡಲಾದ/ ಆಯ್ದ ವ್ಯಾಪಾರಿಯ ಜೊತೆ ಒಪ್ಪಂದ ಮಾಡಿಕೊಳ್ಳುವ ನಿಯಮಕ್ಕೆ ಬದ್ಧರಾಗಿರಬೇಕಾಗುತ್ತದೆ.
ಒಂದು ವೇಳೆ ನೀವು ಬೃಹತ್ ತ್ಯಾಜ್ಯ ಉತ್ಪಾದಕರಲ್ಲ ಎಂದು ಹೇಳಿಕೊಳ್ಳುತ್ತೀರಾದರೆ 20 ದಿನಗಳ ಒಳಗಾಗಿ ನೀವು ಸ್ವಯಂ ಘೋಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇಲ್ಲದೇ ಹೋದರೆ ನಿಮ್ಮನ್ನು ಬೃಹತ್ ತ್ಯಾಜ್ಯ ಉತ್ಪಾದಕರು ಎಂದು ವರ್ಗೀಕರಣ ಮಾಡಲು ಯಾವುದೇ ಆಕ್ಷೇಪ ಇಲ್ಲ ಎಂದು ತಿಳಿಯಬೇಕಾಗುತ್ತದೆ.
ಲಗತ್ತಿಸಲಾಗಿರುವ ಸ್ವಯಂ-ಘೋಷಣೆ ಪ್ರಪತ್ರವನ್ನು ಭರ್ತಿ ಮಾಡಿ ಬಿಬಿಎಂಪಿಯ ನಿಯೋಜಿತ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿ ಸ್ವೀಕೃತಿ ರಸೀದಿಯನ್ನು ಪಡೆದುಕೊಳ್ಳಬೇಕು. ಮುಂದಿನ ಪರಿಶೀಲನಾ ಪ್ರಮಾಣಪತ್ರವನ್ನು ನೀಡುವತನಕ ಈ ರಸೀದಿಯನ್ನೇ “ಸಾಮಾನ್ಯ ತ್ಯಾಜ್ಯ ಉತ್ಪಾದಕ ಪ್ರಮಾಣಪತ್ರ”ಎಂದು ಪರಿಗಣಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮ ಸ್ವಯಂ-ಘೋಷಣೆ ಸತ್ಯಕ್ಕೆ ದೂರವಾದುದು ಎಂದು ಕಂಡು ಬಂದರೆ ಪ್ರಮಾಣಪತ್ರವನ್ನು ರದ್ದು ಮಾಡಲಾಗುತ್ತದೆ ಮತ್ತು ಉಪನಿಯಮಗಳ ಅನ್ವಯ ದಂಡಗಳನ್ನು ವಿಧಿಸಲಾಗುತ್ತದೆ.
ಅಧಿಕಾರಿಯ ಸಹಿ
ಬಿಬಿಎಂಪಿ ಆಯುಕ್ತರ ಪರವಾಗಿ