ಅನುಸೂಚಿ-I
ಜೈವಿಕ- ವಿಘಟನೀಯ ತ್ಯಾಜ್ಯ, ಜೈವಿಕವಾಗಿ ವಿಘಟನೆಯಾಗದ ಮರು ಬಳಸಬಹುದಾದ ತ್ಯಾಜ್ಯ, ಅಪಾಯಕಾರಿ ಗೃಹ ತ್ಯಾಜ್ಯ, ವೈದ್ಯಕೀಯ ಜೈವಿಕ ತ್ಯಾಜ್ಯ ಮತ್ತು ಬೃಹತ್ತ್ಯಾಜ್ಯದ ವಿವರಣಾತ್ಮಕ ಪಟ್ಟಿ:-
ಭಾಗ-ಎ: ಜೈವಿಕ ವಿಘಟನೀಯ ತ್ಯಾಜ್ಯದ ವಿವರಣಾತ್ಮಕ ಪಟ್ಟಿ:-
(i) ಚಹಾಪುಡಿ, ಮೊಟ್ಟೆ ಚಿಪ್ಪುಗಳು, ಹಣ್ಣು ಮತ್ತು ತರಕಾರಿ ಸಿಪ್ಪೆಗಳು, ತಿಂದುಳಿದದ್ದು ಮತ್ತು/ಅಥವಾ ಹಳಸಿದ ಆಹಾರವನ್ನು ಒಳಗೊಂಡ ಅಡುಗೆ ಮನೆ ತ್ಯಾಜ್ಯ
(ii) ಹಣ್ಣು ಮತ್ತು ತರಕಾರಿಗಳು, ಕೊಳೆತ ಮತ್ತು ಅಥವಾ ಹಾಳಾದ ತರಕಾರಿ ಮತ್ತು ಹಣ್ಣುಗಳ ಸಾವಯವ ಮಾರುಕಟ್ಟೆತ್ಯಾಜ್ಯ. (iii) ಮಾಂಸ ಮತ್ತು ಮೂಳೆಗಳು
(iv) ಉದ್ಯಾನದ ಮತ್ತು ಎಲೆ ಕಸ, ಹೂವುಗಳು ಸೇರಿದಂತೆ
(v) ತೆಂಗಿನ ಚಿಪ್ಪುಗಳು
(vi) ಮರ/ ಎಲೆಗಳ ಬೂದಿ
ಭಾಗ-ಬಿ: ಜೈವಿಕವಾಗಿ ವಿಘಟನೆಯಾಗದ ಮರು ಬಳಸ ಬಹುದಾದ ತ್ಯಾಜ್ಯಗಳ ವಿವರಣಾತ್ಮಕ ಪಟ್ಟಿ* (ಪಟ್ಟಿ ಮಾಡಲಾದ ವಸ್ತುಗಳು/ಪದಾರ್ಥಗಳು):-
(i) ಪತ್ರಿಕೆಗಳು
(ii) ಕಾಗದ, ಪುಸ್ತಕಗಳು ಮತ್ತು ಮ್ಯಾಗಝಿನ್ಗಳು (ನಿಯತಕಾಲಿಕಗಳು)
(iii) ಗಾಜು
(iv) ಲೋಹದ ವಸ್ತುಗಳು ಮತ್ತು ತಂತಿ
(v) ಪ್ಲಾಸ್ಟಿಕ್
(vi) ಅಲುಮಿನಿಯಂ ಕ್ಯಾನ್ಗಳು
(vii) ರೆಕ್ಸೀನ್
(viii) ರಬ್ಬರ್
(ix) ಮರ/ ಪೀಠೋಪಕರಣ
(x) ಪ್ಯಾಕೇಜಿಂಗ್ ವಸ್ತುಗಳು
(xi) ಬಟ್ಟೆಗಳು
(xii) ಸ್ಟೈರೋಫೋಮ್
(xiii) ಥರ್ಮೊಕೋಲ್
- ಮೇಲೆ ಪ್ರಸ್ತಾಪಿಸಿರುವುದು ಮಾದರಿ ಪಟ್ಟಿಗಳಾಗಿದ್ದು ಮುಂದೆ ಇದನ್ನು ಪರಿಷ್ಕರಿಸಲಾಗುತ್ತದೆ (ಅಂದರೆ ವಸ್ತುಗಳನ್ನು
ಸೇರಿಸಲಾಗುತ್ತದೆ ಅಥವಾ ತೆಗೆದುಹಾಕಲಾಗುತ್ತದೆ) ಪ್ರತಿಯೊಂದು ವಸ್ತುವಿಗಾಗಿ ಗುರುತಿಸಲ್ಪಟ್ಟ ಸಂಸ್ಕರಣ ಮತ್ತು ಮರು ಬಳಕೆಯ
ಕೇಂದ್ರಗಳ ಆಧಾರದಲ್ಲಿ ಪ್ರತಿ ಬಿಬಿಎಂಪಿ ವಾರ್ಡ್ನಲ್ಲಿ ಈ ಕೆಲಸ ಮಾಡಲಾಗುತ್ತದೆ)
ಭಾಗ-ಸಿ: ಅಪಾಯಕಾರಿ ಗೃಹ ತ್ಯಾಜ್ಯದ ವಿವರಣಾತ್ಮಕ ಪಟ್ಟಿ:-
(i) ಏರೋಸಾಲ್ ಕ್ಯಾನ್ಗಳು
(ii) ಬ್ಯಾಟರಿಗಳು
(iii) ಬಿಳಿಚುಪುಡಿ ಮತ್ತು ಅಡುಗೆ ಮನೆ ಸಾಧನಗಳು ಮತ್ತುಚರಂಡಿ ಸ್ವಚ್ಛಗೊಳಿಸುವ ಸಾಧನಗಳು
(iv) ಕಾರಿನ ಬ್ಯಾಟರಿಗಳು, ಆಯಿಲ್ ಫಿಲ್ಟರ್ಗಳು ಮತ್ತು ಕಾರಿಗೆ ಸಂಬಂಧಿಸಿದ ಉತ್ಪನ್ನಗಳು ಮತ್ತು ಬಳಕೆ ಪದಾರ್ಥಗಳು.
(v) ತೈಲ, ರಾಸಾಯನಿಕಗಳು ಮತ್ತು ದ್ರಾವಕಗಳು ಮತ್ತು ಅವುಗಳ ಖಾಲಿ ಡಬ್ಬಗಳು
(vi) ಪ್ರಸಾಧನ ಸಾಮಗ್ರಿಗಳು, ರಾಸಾಯನಿಕ ಆಧಾರಿತ ಕೀಟನಾಶಕಗಳು ಮತ್ತು ಅವುಗಳ ಖಾಲಿ ಕಂಟೇನರ್ಗಳು.
(vii) ಅವಧಿ ಮುಗಿದವು ಸೇರಿದಂತೆ ಇತರ ಔಷಧಿಗಳು
(viii) ಪೇಯಿಂಟ್ಗಳು, ತೈಲ, ಲೂಬ್ರಿಕೆಂಟ್ಗಳು, ಅಂಟು, ಥಿನ್ನರ್ ಮತ್ತು ಅವುಗಳ ಖಾಲಿ ಕಂಟೇನರ್ಗಳು
(ix) ಕೀಟನಾಶಕಗಳು ಮತ್ತು ಸಸ್ಯನಾಶಕಗಳು ಮತ್ತು ಅವುಗಳ ಖಾಲಿ ಕಂಟೇನರ್ಗಳು
(x) ಫೊಟೋಗ್ರಫಿಗೆ ಬಳಸುವ ರಾಸಾಯನಿಕಗಳು
(xi) ಹೊಸ ಸಾಮಗ್ರಿಗಳನ್ನು ಸುತ್ತಿತಂದ ಮೆತ್ತನೆಯ ಫೋಮ್ ಪ್ಯಾಕೇಜ್ ವಸ್ತುಗಳು
(xii) ಥರ್ಮೋಮೀಟರ್ಗಳು ಮತ್ತು ಮರ್ಕುರಿ-ಧಾರಕ ಉತ್ಪನ್ನಗಳು
ಭಾಗ-ಡಿ: ವೈದ್ಯಕೀಯ ಜೈವಿಕ ತ್ಯಾಜ್ಯಗಳ ವಿವರಣಾತ್ಮಕ ಪಟ್ಟಿ:-
(ಪೂರ್ತಿ ಪಟ್ಟಿಗಾಗಿ 2016ರ ವೈದ್ಯಕೀಯ ಜೈವಿಕತ್ಯಾಜ್ಯ ನಿರ್ವಹಣೆ ನಿಯಮಗಳ ಅನುಸೂಚಿ I ನ್ನು ದಯವಿಟ್ಟು ಪರಿಶೀಲಿಸಿ)
(i) ರಕ್ತ ಹಾಗೂ ದೇಹದ ದ್ರವದಿಂದ ಕಲುಷಿತವಾದ ಡ್ರೆಸ್ಸಿಂಗ್, ಮುಲಾಮುಪಟ್ಟಿ, ಹತ್ತಿಯ ಹೀರೊತ್ತಿಗೆಯನ್ನು ಒಳಗೊಂಡ ಮತ್ತು
ಕಲುಷಿತ ವಸ್ತುಗಳು ಮತ್ತು ಉಳಿಕೆ ರಕ್ತವನ್ನು ಒಳಗೊಂಡ ಬ್ಯಾಗ್ಗಳು ಮತ್ತು ರಕ್ತಕ್ಕೆ ಸಂಬಂಧಿಸಿದ ಬಿಡಿಭಾಗಗಳು
(ii) ಆ್ಯಂಟಿ ಬಯೋಟಿಕ್ನಂತಹ ಔಷಧೀಯ ತ್ಯಾಜ್ಯಗಳಂತಹ ಅವಧಿ ಮುಗಿದ ಅಥವಾ ತಿರಸ್ಕರಿಸಲಾದ ಔಷಧಿಗಳು,
ಕೋಶನಾಶಕ ಔಷಧಿಗಳನ್ನು ಒಳಗೊಂಡ ಗಾಜು ಅಥವಾ ಪ್ಲಾಸ್ಟಿಕ್ ಬಿರಡೆಗಳು, ಸೀಸೆಗಳು ಇತ್ಯಾದಿ.
(iii) ರಕ್ತ ಅಥವಾ ದೇಹದ್ರಾವಕವನ್ನು ಮೆತ್ತಿಕೊಂಡ ತಿರಸ್ಕರಿಸಲಾದ ನಾರು, ಚಾಪೆಗಳು.
(iv) ಟ್ಯೂಬ್ಗಳು, ಬಾಟಲ್ಗಳು, ದೇಹದೊಳಕ್ಕೆ ತೂರಿಸಲಾದ ಟ್ಯೂಬ್ಗಳು, ತೂರುನಳಿಗೆ, ಮೂತ್ರದ ಬ್ಯಾಗ್ಗಳು, ಸೂಜಿಗಳು,
ಚಿಕ್ಕ ಚಾಕುಗಳು, ಬ್ಲೇಡ್, ಸಿರಿಂಜ್ (ಸೂಜಿ ಇಲ್ಲದ ಮತ್ತು ಸೂಜಿಯನ್ನು ಹೊಂದಿದ ಸಿರಿಂಜ್ಗಳು) ಮತ್ತು
ವ್ಯಾಕುಟೇನರ್ಗಳು ಮತ್ತು ಕೈಗವಸುಗಳು.
ಭಾಗ-ಇ: ಬೃಹತ್ ತ್ಯಾಜ್ಯಗಳ ವಿವರಣಾತ್ಮಕ ಪಟ್ಟಿ:-
(i)ಪೀಠೋಪಕರಣಗಳು ಮತ್ತು ಇನ್ನಿತರ ಸಾಮಗ್ರಿಗಳಾದ ವಾರ್ಡ್ರೋಬ್ಗಳು, ಟೇಬಲ್ಗಳು, ಕುರ್ಚಿಗಳು, ಶೂರ್ಯಾಕ್ಗಳು,
ಕಂಪ್ಯೂಟರ್ ಟೇಬಲ್ಗಳು, ಹಾಸಿಗೆಗಳು, ಮಂಚಗಳು, ಊಟದ ಟೇಬಲ್, ಸೋಫಾಗಳು ಇತ್ಯಾದಿ.
(ii) ಅಡುಗೆಮನೆ ಪಾತ್ರೆಗಳು
(iii) ಹಾಸಿಗೆಗಳು
(iv) ಇ-ತ್ಯಾಜ್ಯದ ಅಡಿಯಲ್ಲಿ ಬಾರದಿರುವ ಸಂಗೀತ ಸಾಧನಗಳು.
- ಪ್ರತಿ ವರ್ಷ ಸಂಗ್ರಹಿಸಲಾದ ಗೃಹ ಅಪಾಯಕಾರಿ ತ್ಯಾಜ್ಯದ ಪ್ರಮಾಣ