(1) ಈ ನಿಯಮಗಳಲ್ಲಿ ಸಂಧರ್ಭವು ಅನ್ಯಥಾ ಅಗತ್ಯ ಪಡಿಸಿದ ಹೊರತು:–
(ಎ) “ಅಧಿನಿಯಮ” ಎಂದರೆ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2011 (2012ರ ಕರ್ನಾಟಕ ಅಧಿನಿಯಮ ಸಂಖ್ಯೆ: 21);
(ಬಿ) “ಒಪ್ಪಂದ” ಎಂದರೆ ಪ್ರಾಧಿಕಾರದ ಪ್ರಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಯಾವುದೇ ಅನುಮೋದಿತ ಏಜೆನ್ಸಿಗಳು, ವ್ಯಕ್ತಿ ಅಥವಾ ವ್ಯಕ್ತಿಗಳೊಂದಿಗೆ ಅಧಿನಿಯಮದ ಉಪ–ಬಂಧಗಳು ಮತ್ತು ಅದರಡಿಯಲ್ಲಿ ಉಪ–ಬಂಧಿಸಿದ ನಿಯಮಗಳ ಮೇರೆಗೆ ಪ್ರಾಧಿಕಾರ ಮಾಡಿಕೊಳ್ಳುವ ಒಪ್ಪಂದ;
(ಸಿ) “ಲೆಕ್ಕ ಪರಿಶೋಧಕ” ಎಂದರೆ, ಅಧಿನಿಯಮದ 22ನೇ ಪ್ರಕರಣದ (3)ನೇ ಉಪ–ಪ್ರಕರಣದ ಮೇರೆಗೆ ನೇಮಕವಾದ ಒಬ್ಬ ಅಧಿಕಾರಿ;
(ಡಿ) “ಆಕಸ್ಮಿಕ ಋಣಭಾರ” ಎಂದರೆ ಕಛೇರಿಯ ಕಾರ್ಯನಿರ್ವಹಣೆಗಾಗಿ ಅನುಷಂಗಿಕವಾದ ವೆಚ್ಚಗಳು ಮತ್ತು ಇದು ಸಿಬ್ಬಂದಿ ಮತ್ತು ಪ್ರಯಾಣ ಭತ್ಯೆಗಳಿಗೆ ಸಂಬಂಧಿಸಿದವುಗಳಲ್ಲದೆ ಎಲ್ಲಾ ವಿವಿಧ ವೆಚ್ಚಗಳನ್ನು ಒಳಗೊಳ್ಳುತ್ತದೆ;
(ಇ) “ಹಣಕಾಸು ವರ್ಷ” ಎಂದರೆ, ಪ್ರತಿವರ್ಷ ಏಪ್ರಿಲ್ 1ನೇ ದಿನಾಂಕದಿಂದ ಪ್ರಾರಂಭವಾಗಿ ಮಾರ್ಚ್ 31 ನೇ ದಿನಾಂಕಕ್ಕೆ ಕೊನೆಗೊಳ್ಳುವ ಒಂದು ವರ್ಷದ ಅವಧಿ;
(ಎಫ್) “ಪ್ರಪತ್ರ” ಎಂದರೆ, ಈ ನಿಯಮಗಳಿಗೆ ಅನುಬಂಧಿಸಲಾದ ಪ್ರಪತ್ರ; ಮತ್ತು
(ಜಿ) “ಪ್ರಕರಣ” ಎಂದರೆ, ಅಧಿನಿಯಮದ ಪ್ರಕರಣ;
(2) ಇದರಲ್ಲಿ ಉಪಯೋಗಿಸಲಾದ ಆದರೆ ಪರಿಭಾಷಿಸದೇ ಇರುವ ಎಲ್ಲಾ ಇತರ ಪದಗಳು ಮತ್ತು ಅಭಿವ್ಯಕ್ತಿಗಳು ಅಧಿನಿಯಮದಲ್ಲಿ ಅವುಗಳಿಗೆ ಅನುಕ್ರಮವಾಗಿ ನೀಡಲಾದಂತದೇ ಅರ್ಥವನ್ನು ಹೊಂದಿರತಕ್ಕದ್ದು.