(1) ಪ್ರಾಧಿಕಾರದಿಂದ ಅಥವಾ ಅದರ ಮೇರೆಗೆ ಕೈಗೊಳ್ಳಲಾಗಿರುವ ಸ್ಕೀಮುಗಳು ಮತ್ತು ಕಾಮಗಾರಿಗಳ ಸಂಬಂಧದಲ್ಲಿ ಯಾವುದೇ ಕ್ಲೇಮಿಗೆ ಸಂಬಂಧಿಸಿದ ಬಿಲ್ಗಳನ್ನು ರಾಜ್ಯ ಸರ್ಕಾರದ ಇಲಾಖೆಗಳಿಗೆ ನಿರ್ಧಿಷ್ಠ ಪಡಿಸಿದ ಸಂಬಂಧಪಟ್ಟ ನಿಯಮಗಳು ಮತ್ತು ಪ್ರಕ್ರಿಯೆಗಳಿಗನುಸಾರವಾಗಿ ತಯಾರಿಸಲಾಗುವುದು ಮತ್ತು ಪ್ರಮಾಣಿಕರಿಸಲಾಗುವುದು ಮತ್ತು ಪ್ರತಿಯೊಂದು ಬಿಲ್ಲಿನ ಮೇಲೆ ಸಂದಾಯ ಮಾಡಬೇಕಾಗಿರುವ ಮೊಬಲಗು ಎರಡು ಲಕ್ಷ ರೂಪಾಯಿಗಳು ಹಾಗೂ ಕಡಿಮೆ ಮೊತ್ತದ ಬಿಲ್ಲುಗಳನ್ನು ಶಿವಮೊಗ್ಗದಲ್ಲಿರುವ ಪ್ರಾಧಿಕಾರದ ಲೆಕ್ಕಾಧಿಕಾರಿ ಪರಿಶೀಲಿಸಿ ಬಿಲ್ಲು ಪಾವತಿಗೆ ಕ್ರಮವಹಿಸತಕ್ಕದ್ದು ಅವಶ್ಯಕವಾದ ವೋಚರ್ಗಳನ್ನು ದಾಖಲು ಮಾಡತಕ್ಕದ್ದು ಮತ್ತು ಹಾಜರು ಪಡಿಸತಕ್ಕದ್ದು.
(2) ಹೀಗೆ ಸಲ್ಲಿಸಲಾದ ಎಲ್ಲಾ ಬಿಲ್ಲುಗಳು ಯಾವ ವೆಚ್ಚದ ಸಂದಾಯದ ಸಂಬಂಧದಲ್ಲಿ ಆ ಬಿಲ್ಲಿನಲ್ಲಿ ಕ್ಲೇಮು ಮಾಡಲಾಗುತ್ತಿರುವುದೊ, ಆ ವೆಚ್ಚವನ್ನು ಹಿಂದಿನ ಅಥವಾ ಈಗಿನ ಇತರ ಯಾವುದೇ ಬಿಲ್ಲಿನಲ್ಲಿ ಕ್ಲೇಮು ಮಾಡಿಲ್ಲ ಎಂಬುವಷ್ಟರ ಮಟ್ಟಿಗೆ ಒಂದು ನಿರ್ದಿಷ್ಠ ಪ್ರಮಾಣ ಪತ್ರವನ್ನು ಒಳಗೊಂಡಿರತಕ್ಕದ್ದು.
(3) ಸಂದರ್ಭಾನುಸಾರವಾಗಿ ಪ್ರಾಧಿಕಾರದ ಲೆಕ್ಕಪತ್ರಾಧಿಕಾರಿ ಸಕ್ಷಮ ಪ್ರಾಧಿಕಾರವು ಮಂಜೂರು ಮಾಡಿರುವ ಪ್ರಾಧಿಕಾರದ ಯೋಜನೆ, ಮಾನ್ಯ ಮಾಡಲಾಗಿರುವ ಆಯ–ವ್ಯಯ ಹಂಚಿಕೆಗಳ ಕ್ಲೇಮು ಮಾಡಲಾಗಿರುವ ಮೊಬಲಗು ಯಥಾರ್ತತೆಯನ್ನು ಕುರಿತಂತೆ ಪರಿಶೀಲನೆ ಮಾಡುವುದು ಮತ್ತು ಸಂಬಂಧಪಟ್ಟ ಅಗತ್ಯತೆಗಳನ್ನು ಪೂರೈಸಲಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಂಡ ಮೇಲೆ ಬಿಲ್ಗಳನ್ನು ಹಣ ಪಾವತಿಗಾಗಿ ಅಂಗೀಕರಿಸುವುದು. ಐದು ಲಕ್ಷ ರೂಪಾಯಿಗಳ ಮೌಲ್ಯಗಳನ್ನು ಮೀರುವ ವೈಯಕ್ತಿಕ ಬಿಲ್ಲುಗಳ ಸಂದರ್ಭದಲ್ಲಿ ಪ್ರಾಧಿಕಾರದ ಹಣಕಾಸು ಲೆಕ್ಕಾಧಿಕಾರಿಯವರು ಬಿಲ್ಗಳನ್ನು ಹಣ ಪಾವತಿಗಾಗಿ ಅಂಗೀಕರಿಸುವುದಕ್ಕೆ ಮುಂಚೆ ಕಾರ್ಯದರ್ಶಿಯವರ ಎದುರು ಸಹಿ ಪಡೆಯುವರು.
(4) ಅಂಗೀಕರಿಸಿದ ಬಿಲ್ಲುಗಳ ಸಂಬಂಧದಲ್ಲಿನ ಪಾವತಿಗಳನ್ನು, ಸಂದರ್ಭಾನುಸಾರ ಸಹಾಯಕ ನಿಯಂತ್ರಣಾಧಿಕಾರಿ ಅಥವಾ ಹಣಕಾಸು ಲೆಕ್ಕಸಹಾಯಕರು ಕಾರ್ಯದರ್ಶಿಯವರ ವೈಯಕ್ತಿಕ ಠೇವಣಿ ಖಾತೆಯ ಮೇಲಾಗಲಿ ಅಥವಾ ಒಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅಥವಾ ಬ್ಯಾಂಕುಗಳಲ್ಲಿ ತೆರೆಯಲಾಗಿರುವ ಪ್ರಾಧಿಕಾರ ನಿಧಿಯ ಖಾತೆಯ ಮೇಲಾಗಲೀ ಡ್ರಾ ಮಾಡಿದ ಚೆಕ್ಗಳಿಂದ ಮಾಡಲಾಗುವುದು.
(5) ಅವುಗಳನ್ನು ಪಾವತಿ ಮಾಡಿದ ಮೇಲೆ ತಕ್ಷಣವೇ ಎಲ್ಲಾ ಬಿಲ್ಗಳನ್ನು ಮತ್ತು ಪೂರಕ ವೋಚರ್ಗಳನ್ನು ರದ್ದುಗೊಳಿಸಲಾಗುವುದು. ಪಾವತಿ ಮಾಡಿದ ಮೇಲೆ ಎಲ್ಲಾ ಬಿಲ್ಲುಗಳನ್ನು ಮುಂದಿನ ತಿಂಗಳ ಹತ್ತು ದಿವಸದೊಳಗೆ ಸಂಕಲನದ ಉದ್ದೇಶಕ್ಕಾಗಿ ಪ್ರಾಧಿಕಾರದ ಹಣಕಾಸು ನಿಯಂತ್ರಣಾಧಿಕಾರಿ ಕಳುಹಿಸಿಕೊಡಬೇಕು.
(6) ಪ್ರಾಧಿಕಾರವು ಹಣಕಾಸು ನಿಯಂತ್ರಣಾಧಿಕಾರಿ ಲೆಕ್ಕಾಧಿಕಾರಿ ಸಂದಾಯ ಮಾಡಿದ ಬಿಲ್ಲುಗಳು ಮತ್ತು (ವಿವಿಧ ಇಲಾಖೆಗಳು) ಸಲ್ಲಿಸಿದ ಸಂಕಲಿಸಿದ ಲೆಕ್ಕ ಪತ್ರಗಳ ಆಧಾರದ ಮೇಲೆ ಪ್ರತಿಯೊಂದು ತಿಂಗಳಿಗೆ ಸಂಬಂಧಿಸಿದ ಮಾಸಿಕ ಲೆಕ್ಕ ಪತ್ರಗಳನ್ನು ಮುಂದಿನ ತಿಂಗಳ ಇಪ್ಪತ್ತೈದನೇ ದಿನಾಂಕದೊಳಗೆ ಸಂಕಲಿಸಬೇಕು.
(7) ಕಾರ್ಯನಿರ್ವಹಣಾ ಏಜೆನ್ಸಿಗೆ ಮುಂಗಡವಾಗಿ ನೀಡಲಾದ ಏಕಗಂಟಿನ ಮೊಬಲಗಿನ ಸಂಬಂಧದಲ್ಲಿ, ಸಂಬಂಧಪಟ್ಟ ಏಜೆನ್ಸಿಯು ಮುಂದಿನ ತಿಂಗಳಿನ ಹತ್ತನೇ ದಿನಾಂಕದೊಳಗೆ ನೀಡಲಾದ ಮಾದರಿ ಪ್ರಪತ್ರದಲ್ಲಿ ಲೆಕ್ಕಪತ್ರಗಳ ಮಾಸಿಕ ವಿವರ ಪಟ್ಟಿಯನ್ನು ಒಪ್ಪಿಸತಕ್ಕದ್ದು.