ಅಧ್ಯಕ್ಷನಲ್ಲದ ಪ್ರಾಧಿಕಾರದ ಪ್ರತಿಯೊಬ್ಬ ಸರ್ಕಾರೇತರ ಸದಸ್ಯರು ಪ್ರಾಧಿಕಾರದ ಸಭೆಗೆ ಅಧಿಕೃತವಾಗಿ ಹಾಜರಾದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮದ ‘ಅನುಬಂಧ–ಎ’ರ ಅನುಸಾರ ಪ್ರಯಾಣ ಭತ್ಯೆ, ದಿನ ಭತ್ಯೆ ಹಾಗೂ ಸಭಾ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.