(1) ಸರ್ಕಾರವು, ಹಿಂದಿನ ಮತ್ತು ಸಮವರ್ತಿ ಲೆಕ್ಕ ಪರಿಶೋಧನೆಯ ಉದ್ದೇಶಕ್ಕಾಗಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಉಪ ನಿಯಂತ್ರಕರ ಅಥವಾ ಲೆಕ್ಕಾಧಿಕಾರಿ ದರ್ಜೆಗೆ ಕಡಿಮೆಯಲ್ಲದ ದರ್ಜೆಯ ಒಬ್ಬ ಅಧಿಕಾರಿಯನ್ನು ಪ್ರಾಧಿಕಾರದ ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಬಹುದು.
(2) ಪ್ರಾಧಿಕಾರದ ಲೆಕ್ಕಪತ್ರಗಳು, ಭಾರತದ ಮಹಾ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರ ವಾರ್ಷಿಕ ಹಾಗೂ ನಿಯತಕಾಲಿಕ ಲೆಕ್ಕ ಪರಿಶೋಧನೆಗೊಳಪಟ್ಟಿರತಕ್ಕದ್ದು.
(3) ಉಪ–ನಿಯಮ (1) ಮತ್ತು (2)ರ ಮೇರೆಗೆ ಆದೇಶವನ್ನು ಮಾಡಿದಾಗ, ಪ್ರಾಧಿಕಾರದ ಲೆಕ್ಕ ಪರಿಶೋಧನೆಗಾಗಿ ಅಂತಹ ಲೆಕ್ಕ ಪತ್ರಗಳನ್ನು ಒಪ್ಪಿಸತಕ್ಕದ್ದು. ಅಥವಾ ಒಪ್ಪಿಸುವಂತೆ ಮಾಡತಕ್ಕದ್ದು ಮತ್ತು ಉಪ–ನಿಯಮ (1) ಮತ್ತು (2)ರ ಮೇರೆಗೆ ನೇಮಿತರಾದ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಲೆಕ್ಕ ಪರಿಶೋಧನೆಯ ಉದ್ದೇಶಕ್ಕಾಗಿ ಅಗತ್ಯಪಡಿಸಬಹುದಾದಂತ ಮಾಹಿತಿಯನ್ನು ಒದಗಿಸತಕ್ಕದ್ದು.