ಉಪಸಮಿತಿ ಮಂಡಿಸುವ ಪೂರ್ವ,–
(i) ವಾರ್ಷಿಕ ಲೆಕ್ಕಗಳೂ ಸೇರಿದಂತೆ ಪ್ರಾಧಿಕಾರದ ನಿಧಿಯ ಆದಾಯ ಮತ್ತು ವೆಚ್ಚಗಳ ಲೆಕ್ಕ ಪತ್ರಗಳನ್ನು ಸರ್ಕಾರವು ನೀಡುವ ಯಾವುದೇ ನಿರ್ದೇಶನಕ್ಕೊಳಪಟ್ಟು ಕಾರ್ಯದರ್ಶಿಯವರ ಸಲಹೆಯ ಮೇರೆಗೆ ಹಣಕಾಸು ನಿಯಂತ್ರಣಾಧಿಕಾರಿ/ಲೆಕ್ಕ ಪತ್ರಾಧಿಕಾರಿ ಅಳವಡಿಸಿದಂಥ ರೀತಿಯಲ್ಲಿ ಮತ್ತು ಅಂಥ ನಮೂನೆಯಲ್ಲಿ ಇಡತಕ್ಕದ್ದು. ಮಾಸಿಕ ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು ಪ್ರಪತ್ರ 4 ರಲ್ಲಿ ತಯಾರಿಸತಕ್ಕದ್ದು.
(ii) ಪ್ರಾಧಿಕಾರದ ನಿಧಿಯಿಂದ ವೆಚ್ಚವನ್ನೂ, ಅಧಿನಿಯಮದಲ್ಲಿ ಅನ್ಯಥಾ ವ್ಯಕ್ತವಾಗಿ ಉಪಬಂಧಿಸಲಾಗಿರುವಂತೆ, ಈ ನಿಯಮಗಳ ಮೇರೆಗೆ ನಿಯಮಿಸಲಾದಂಥ ಮಂಜೂರಾತಿಗಳು, ಷರತ್ತುಗಳು ಮತ್ತು ಪರಿಮಿತಿಗಳಿಗೆ ಒಳಪಟ್ಟು ವಹಿಸತಕ್ಕದ್ದು. ಈ ನಿಯಮಗಳಿಗೆ ಒಳಪಟ್ಟು ಪ್ರಾಧಿಕಾರವು ಅಂತಹ ವಿಷಯಗಳಿಗೆ ವಿನಿಯಮಗಳ ಮೇರೆಗೆ ಮತ್ತಷ್ಟು ವ್ಯವಸ್ಥೆ ಮಾಡಬಹುದಾಗಿದೆ.
(iii) ಪ್ರಾಧಿಕಾರದ ಕಾರ್ಯ ಸಾಧ್ಯವಾದ ಮಟ್ಟಿಗೆ ಹಣಕಾಸು ವರ್ಷದ ಮುಕ್ತಾಯದ ತರುವಾಯ ನಡೆಯುವ ಮೊದಲನೇ ಸಾಮಾನ್ಯ ಸಭೆಯಲ್ಲಿ ಆ ವರ್ಷದ ಲೆಕ್ಕಪತ್ರಗಳನ್ನು ಅಂಗೀಕರಿಸತಕ್ಕದ್ದು. ಈ ವಾರ್ಷಿಕ ಲೆಕ್ಕ ಪತ್ರಗಳನ್ನು (1) ನೇ ಉಪನಿಯಮದ ಮೇರೆಗೆ ನಿಯಮಿಸಲಾದ ನಮೂನೆಯಲ್ಲಿ ಪ್ರಾಧಿಕಾರವು ತಯಾರಿಸತಕ್ಕದ್ದು ಮತ್ತು ಅಂಗೀಕರಿಸತಕ್ಕದ್ದು.