ಅಧಿನಿಯಮದ ಪ್ರಕರಣ 15, 17ರ ಮೇರೆಗೆ ಮಾಹಿತಿ ಸಂಗ್ರಹಿಸಿದ ತರುವಾಯ,–
(1) ಪ್ರತಿಯೊಂದು ವರ್ಷದ ಡಿಸೆಂಬರ್ ಒಂದನೇ ದಿನಾಂಕಕ್ಕೆ ಮೊದಲು, ಪ್ರಾಧಿಕಾರವು ಈ ಮುಂದಿನವುಗಳನ್ನು ತಯಾರಿಸಿ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು.
(ಎ) 1ನೇ ಸಂಖ್ಯೆಯ ಪ್ರಪತ್ರದಲ್ಲಿ ಮುಂದಿನ ಹಣಕಾಸು ವರ್ಷದ ಆಯ–ವ್ಯಯ ಪತ್ರ.
(ಬಿ) 2ನೇ ಸಂಖ್ಯೆಯ ಪ್ರಪತ್ರದಲ್ಲಿ ವಾರ್ಷಿಕ ಯೋಜನೆ.
(ಸಿ) ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳೂ ಸೇರಿದಂತೆ ಸಿಬ್ಬಂದಿ ವರ್ಗದ ಒಂದು ಅನುಸೂಚಿ ಮತ್ತು ಮುಂದಿನ ವರ್ಷದಲ್ಲಿ ಭರ್ತಿ ಮಾಡಬೇಕಾದ ಹುದ್ದೆಗಳನ್ನು ಪ್ರಪತ್ರ–3 ರಲ್ಲಿ ತಯಾರಿಸಿಡತಕ್ಕದ್ದು
(2) ಪ್ರಾಧಿಕಾರದ ಕಾರ್ಯ ಸಾಧ್ಯವಾದ ಮಟ್ಟಿಗೆ ಹಣಕಾಸು ವರ್ಷದ ಮುಕ್ತಾಯದ ತರುವಾಯ ನಡೆಯುವ ಮೊದಲನೇ ಸಾಮಾನ್ಯ ಸಭೆಯಲ್ಲಿ ಆ ವರ್ಷದ ಲೆಕ್ಕ ಪತ್ರಗಳನ್ನು ಅಂಗೀಕರಿಸತಕ್ಕದ್ದು. ಈ ವಾರ್ಷಿಕ ಲೆಕ್ಕ ಪತ್ರಗಳನ್ನು ಮೇಲಿನ(1)ನೇ ಉಪನಿಯಮದ ಮೇರೆಗೆ ನಿಯಮಿಸಲಾದ ನಮೂನೆಯಲ್ಲಿ ಪ್ರಾಧಿಕಾರವು ತಯಾರಿಸತಕ್ಕದ್ದು ಮತ್ತು ಅಂಗೀಕರಿಸತಕ್ಕದ್ದು.