ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ಅಧಿನಿಯಮ ಎಂದರೆ ಸಾರ್ವಜನಿಕ ದಾಖಲೆಗಳ ಅಧಿನಿಯಮ, 2010 (2011ರ ಕರ್ನಾಟಕ ಅಧಿನಿಯಮ ಸಂಖ್ಯೆ 9)
(ಬಿ) ಮೌಲ್ಯ ನಿರ್ಣಯ ಎಂದರೆ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಅಥವಾ ಕಛೇರಿ ಮುಖ್ಯಸ್ಥರೊಂದಿಗೆ ಸಂದರ್ಭಾನುಸಾರವಾಗಿ ಸಾರ್ವಜನಿಕ ದಾಖಲೆಗಳ ಮೌಲ್ಯ ನಿರ್ಧಾರವನ್ನು ಮಾಡುವುದು.
(ಸಿ) ವರ್ಗೀಕೃತ ದಾಖಲೆಗಳು ಎಂದರೆ, ಸಿವಾಲಯ ಕೈಪಿಡಿ ಅಥವಾ ಕಛೇರಿ ಕೈಪಿಡಿಯ ಕಾರ್ಯವಿದಾನ ಅಥವಾ ಕರ್ನಾಟಕ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಯಾವುದೇ ಇತರ ಸೂಚನೆಗಳಲ್ಲಿ ಹೇಳಲಾದ ಕಾರ್ಯವಿಧಾನಗಳ ಅನುಸಾರವಾಗಿ ಅತ್ಯಂತ ರಹಸ್ಯ, ರಹಸ್ಯ ಗೋಪ್ಯ ಮತ್ತು ನಿರ್ಬಂಧಿತ ಎಂದು ವರ್ಗೀಕರಿಸಲಾದ ಸಾರ್ವಜನಿಕ ದಾಖಲೆಗಳು.
(ಡಿ) ಅಭಿರಕ್ಷೆ ಎಂದರೆ ಸಾರ್ವಜನಿಕ ದಾಖಲೆಗಳ ಸ್ವಾಧಿನತೆ.
(ಇ) ನಿಕ್ಷ್ರೀಯ ಮಂಡಳಿ ಎಂದರೆ ನಿಗಮಿತ ಅಥವಾನಿಗಮಿತ ಅಲ್ಲದ ಮಂಡಳಿಯಾಗಿದ್ದು ಇದನ್ನು ತಮ್ಮ ಪ್ರಕಾರ್ಯಗಳನ್ನು ನಿರ್ವಹಿಸಲು ಯಾರೇ ಉತ್ತರಾಧಿಕಾರಿ ಇಲ್ಲದ ಕಾರಣ ಸಮಾಪನಗೊಳಿಸಲಾದುದು.
(ಎಫ್) ವರ್ಗೀಕರಣ ಪಟ್ಟಿಯಿಂದ ಮಾಡುವುದು ; ಎಂದರೆ ಇವುಗಳ ಮೌಲ್ಯ ನಿರ್ಧಾರಕೆಯ ತರುವಾಯ ವರ್ಗೀಕರಣಗಳನ್ನು ಕೆಳಗಿಳಿಸುವುದು.
(ಜಿ) ಕಡತ ಎಂದರೆ ನಿರ್ದಿಷ್ಟ ವಸ್ತು ವಿಷಯದ ಮೇಲೆ ಸಾರ್ವಜನಿಕ ದಾಖಲೆಗಳಿಗೆ ಸಂಬಂಧಿಸಿದ ಪತ್ರ ವ್ಯವಹಾರ ಟಿಪ್ಪಣಿಗಳು ಮತ್ತು ಅದರ ಅನುಬಂಧಗಳು ಮತ್ತು ಕಡತದ ಸಂಖ್ಯೆ ಇರುವ ಪತ್ರಗಳ ಟಿಪ್ಪಣಿ.
(ಹೆಚ್) “ನಮೂನೆ” ಎಂದರೆ ಈ ನಿಯಮಗಳಿಗೆ ಲಗತ್ತಿಸಲಾದ ನಮೂನೆ.
(ಐ) “ಸಾಮಾನ್ಯ” ದಾಖಲೆ ವಿಭಾಗ ಎಂದರೆ ಸರ್ಕಾರದ ಡಿ ವರ್ಗದ ದಾಖಲೆಗಳನ್ನು ಹೊರತು ಪಡಿಸಿ ಚಾಲ್ತಿ/ಅರೆ ಚಾಲ್ತಿ ದಾಖಲೆಗಳನ್ನು ಸಂರಕ್ಷಿಸಲಾಗಿರುವ ವಿಭಾಗ.
(ಜೆ) ಸದಸ್ಯ ಎಂದರೆ ಮಂಡಳಿಯ ಸದಸ್ಯ.
(ಕೆ) ಖಾಸಗಿ ದಾಖಲೆಗಳು ಎಂದರೆ ಒಬ್ಬ ಖಾಸಗಿ ವ್ಯಕ್ತಿ ಅಥವಾ ಯಾವುದೇ ಸರ್ಕಾರೇತರ ಸಂಸ್ಥೆಯ ಸ್ವಾಧಿನದಲ್ಲಿ ಇಟ್ಟಿರುವ ದಾಖಲೆಗಳು.
(ಎಲ್) ದಾಖಲು ಮಾಡುವುದು ಎಂದರೆ ಕಡತದಮೊಂದನ್ನು ಈ ಬಗ್ಗೆ ಪರಿಗಣಿಸಲಾದ ಎಲ್ಲ ವಿಷಯಗಳ ಮೇಲೆ ಕ್ರಮವನ್ನು ಪೂರ್ಣಗೊಳಿಸಿದ ನಂತರ ಕಡತವನ್ನು ಮುಕ್ತಾಯಗೊಳಿಸಿದ ಪ್ರಕ್ರಿಯೆ.
(ಎಂ) ಖಾಯಂ ಸ್ವರೂಪದ ದಾಖಲೆಗಳು ಎಂದರೆ ಇವುಗಳು ಸಾರ್ವಜನಿಕ ದಾಖಲೆಗಳಾಗಿದ್ದು, ಅವುಗಳನ್ನು ಕೈಪಿಡಿ ಅಥವಾ ಕಛೇರಿ ವಿಧಾನ ಅಥವಾ ವಿಷಯ ಮೇಲಿನ ಸೂಚನೆಗಳಲ್ಲಿ ಹೇಳಲಾದ ವಿಧಾನಗಳ ಅನುಸಾರವಾಗಿ ದಾಖಲೆಗಳ ಸೃಜನಾ ಏಜೆನ್ಸಿ ಮಾತ್ರ 5ನೇ ನಿಯಮ (1) ನೇ ಉಪನಿಯಮದ ಮೇರೆಗೆ ಗೊತ್ತುಪಡಿಸಲಾದ ಅವಧಿಗಾಗಿ ದಾಖಲು ಮಾಡಿದ ಮೇಲೆ ಸಂರಕ್ವಿಸುವುದು ಮತ್ತು ಕೊನೆತನಕ ನಿರ್ವಹಿಸುವುದು.
(ಎನ್) ದಾಖಲೆಗಳನ್ನು ಉಳಿಸಿಕೊಳ್ಳುವ ಅನುಬಂಧ ಎಂದರೆ ಇಟ್ಟುಕೊಂಡ ಅವಧಿಯನ್ನು ಉಪಬಂಧಿಸಲಾದ ಅನುಸೂಚಿ.
(ಒ) ಪುನರವಲೋಕನ ಎಂದರೆ ಸಂದರ್ಭಾನುಸಾರ ಅವುಗಳನ್ನು ಮುಂದಿನ ನಿರ್ವಹಣೆ ಉಳಿಸಿಕೊಳ್ಳುವಿಕೆ ಅಥವಾ ನಾಶಪಡಿಸಲು ಉಳಿಸಿಕೊಳ್ಳುವ ಅವಧಿಯು ಮುಕ್ತಾಯವಾದ ಮೇಲೆ ದಾಖಲು ಮಾಡಿದ ಕಡತಗಳ ನಿಯತವಾದ ಮೌಲ್ಯ ನಿರ್ಧಾರಣೆ.
(ಪಿ) ಪ್ರಕರಣ ಎಂದರೆ ಈ ಅಧಿನಿಯಮದ ಪ್ರಕರಣ.
(ಕ್ಯೂ) ಸ್ಥಾಯಿ ರಕ್ಷ ಕಡತ ಎಂದರೆ ಅಕಾರದಿ ಕ್ರಮದಲ್ಲಿ ಹೊರಡಿಸಿದ ಕಾರ್ಯ ನೀತಿ, ಆದೇಶಗಳು, ಸೂಚನೆಗಳು ಅಥವಾ ಇದಕ್ಕೆ ಸಂಬಂಧಿಸಿದ ಯಾವುದೇ ಇತರ ಪ್ರಾಸಂಗಿಕ ವಿಷಯದ ಪ್ರತಿಗಳನ್ನು ಒಳಗೊಂಡಿರುವ ನಿರ್ಧಿಷ್ಟ ವಸ್ತು ವಿಷಯದ ಮೇಲಿನ ಕಾಗದ ಪತ್ರಗಳ ಸಂಕಲನ.
(ಆರ್) ಇಲ್ಲಿ ಬಳಸಲಾದ ಮತ್ತು ಪರಿಭಾಷಿಸಿಲ್ಲದ, ಆದರೆ ಅಧಿನಿಯಮದಲ್ಲಿ ಪರಿಭಾಷಿಸಲಾದ ಪದಗಳು ಮತ್ತು ಪದವಳಿಗಳಿಗೆ ಅಧಿನಿಯಮದಲ್ಲಿ ಇವುಗಳಿಗೆ ಕ್ರಮವಾಗಿ ನೀಡಲಾದ ಅರ್ಥಗಳನ್ನೇ ಹೊಂದಿರತಕ್ಕದ್ದು.