(1) 5ನೇ ನಿಯಮದ (1) ನೇ ಉಪ ನಿಯಮದ ಮೇರೆಗೆ ಇಟ್ಟುಕೊಳ್ಳಲು ಮತ್ತು ದಾಖಲೆಗಳನ್ನು ಅಂಗೀಕಾರಿಸಲಾದ ಸಾರ್ವಜನಿಕ ದಾಖಲೆಗಳನ್ನು ನಮೂನೆ(7) ರಲ್ಲಿ ಪತ್ರಾಗಾ ಇಲಾಖಾ ನಿರ್ದೇಶಕರಿಗೆ ಮಾಡಲಾದ ಅರ್ಜಿಯ ಮೇಲೆ ಸದುದ್ದೇಶ ಪರಾಮರ್ಶನೆ ಮತ್ತು ಸಂಶೋಧನೆಯ ಉದ್ದೇಶಗಳಿಗಾಗಿ 12 ನೇ ಪ್ರಕರಣದ (1) ನೇ ಉಪ ಪ್ರಕರಣದ ಉಪಬಂಧಗಳು ಮತ್ತು ಈ ಮುಂದಿನ ಷರತ್ತುಗಳಿಗೊಳಪಟ್ಟು ಲಭ್ಯವಾಗುವಂತೆ ಮಾಡತಕ್ಕದ್ದು, ಎಂದರೇ -
(ಎ) ವ್ಯಕ್ತಿಯು ಸಾರ್ವಜನಿಕದಾಖಲೆಗಳನ್ನು ಆಧಿರಿಸಲು ಅಥವಾ ಪರಾಮರ್ಶಿಸಲು ಅರ್ಜಿಯನ್ನು ಸಲ್ಲಿಸಿದಾಗ ಪತ್ರಾಗಾರ ಇಲಾಕೆಯ ನಿರ್ದೇಶಕರು ಅಂತಹ ದಾಖಲೆಯ ಪರಾಮರ್ಶಿಯ ಅವಧಿಯಲ್ಲಿ ಅಂತಹ ದಾಖಲೆಯ ಸುರಕ್ಷೆಯ ಬಗ್ಗೆ ಅರ್ಜಿದಾರನಿಂದ ಸೂಕ್ತ ನಷ್ಟ ಭರ್ತಿ ಬಂಧ ಪತ್ತ ಅತವಾ ಭದ್ರತೆಯನ್ನು ಪಡೆದುಕೊಂಡ ತರುವಾಯ, ಸದರಿ ಅರ್ಜಿಯ ಮೇಲೆ ದಾಖಲು ಮಾಡಬೇಕಾದ ಕಾರಣಗಳಿಗಾಗಿ ಅರ್ಜಿಯನ್ನು ಅಂಗೀಕರಿಸಬಹುದು ಅಥವಾ ನಿರಾಕರಿಸಬಹುದು.
(ಬಿ) ಸಾರ್ವಜನಿಕ ದಾಕಲೆಗಳನ್ನು ಆಧರಿಸಲು ಅಥವಾ ಪರಾಮರ್ಶೆ ಮಾಡಲು ಇಚ್ಚಿಸಿದ ವಿದೇಶಿಯರು , ಅವರನ್ನು ಪ್ರಾಯೋಜಿಸಿರುವ ಸಂಸ್ಥೆಗಳಿಂದ ಮತ್ತು ರಾಜತಾಂತ್ರಿಕ ನಿಯೋಗದಿಂದ ಪರಿಚಯದ ಪತ್ರವನ್ನು ಹಾಜರುಪಡಿಸಿದಾಗ ಮಾತ್ರ ಅನುಮತಿಸಬಹುದು.
(ಸಿ) ಪ್ರತಿಗಳನ್ನು ಪಡೆಯಲು ಇಚ್ಚಿಸಿದ ಯಾರೇ ಇತರೇ ವ್ಯಕ್ತಿಯು ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಛೇರಿ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸುವ ಮೂಲಕ ಹಾಗೆ ಮಾಡಬಹುದು.
(ಡಿ) ಮರು ವರ್ಣನೆ ( ರಿಪ್ರೂಗ್ರಾಫಿಕ್ಸ್) ಮತ್ತು ಲಿಪ್ಯಂತರ ಮಾಡುವ ಸೌಲಭ್ಯಗಳು ಅರ್ಜಿಸಲ್ಲಿಸುವ ಆಧಾರದ ಮೇಲೆ ದೊರೆಯುವಂತೆ ಮಾಡಬಹುದು ಮತ್ತು ಅಂತಹ ಸೇವೆಗಳಿಗಾಗಿ ಅರ್ಜಿದಾರನು ಪತ್ರಾಗಾರ ಇಲಾಖೆಯ ನಿರ್ದೇಶಕರು ಕಾಲಕಾಲಕ್ಕೆ ನಿಗಧಿಪಡಿಸಿದಂತಹ ಅವಶ್ಯ ಶುಲ್ಕಗಳನ್ನು ಸಂದಾಯ ಮಾಡತಕ್ಕದ್ದು.
(ಇ) ಸಂಶೊಧನಾ ಉದ್ದೇಶಕ್ಕಾಗಿ ಸಾರ್ವಜನಿಕ ದಾಖಕೆಗಳನ್ನು ಆಧರಿಸಿಸುವ ಅಥವಾ ಪರಾಮರ್ಶಿಸುವ ವ್ಯಕ್ತಿ ಮತ್ತು ಸದರಿ ದಾಖಲೆಗಳಿಂದ ತೆಗೆದುಕೊಂಡ ವಿಷಯವನ್ನು ಆಧಾರದಿಂದ ಗ್ರಂಥವನ್ನು ಪ್ರಕಟಿಸಿದಲ್ಲಿ, ಈ ಬಗ್ಗೆ ಕೃತಜ್ಞತೆಯನ್ನು ಸೂಚಿಸತಕ್ಕದ್ದು.
(ಎಫ್) ಯಾವುದೇ ಸಂದರ್ಭದಲ್ಲೂ ಯಾವುದೇ ದಾಖಲೆಗಳನ್ನು ಇಲಾಖೆಯಿಂದ ಹೊರಕ್ಕೆ ಕೊಂಡೊಯ್ಯತಕ್ಕದಲ್ಲ.
(2) ಸಾರ್ವಜನಿಕ ದಾಖಲೆಗಳನ್ನು ಪರಾಮರ್ಶನ ಮಾಡಲು ಇಚ್ಚಿಸಿದ ವ್ಯಕ್ತಿಯು ಈ ಮುಂದಿನವುಗಳನ್ನು ಮಾಡತಕ್ಕದಲ್ಲ :-
(ಎ) ಸಾರ್ವಜನಿಕ ದಾಖಲೆಗಳನ್ನು ವಿರೂಪಗೊಳಿಸುವುದು ಅಥವಾ ಅವುಗಳ ಮೇಲೆ ಬರವಣಿಗೆ ಮಾಡುವುದು ಮತ್ತು ಯಾವುದೇ ಗುರುತುಗಳು ಅಥವಾ ಸೂಚನೆಗಳನ್ನು ಹಾಕುವುದು.
(ಬಿ) ಸಾರ್ವಜನಿಕ ದಾಖಲೆಗಳನ್ನು ಮಡಚುವುದು, ಹರಿದು ಹಾಕುಹಾಕುವುದು, ಕತ್ತರಿಸುವುದು, ಸುಕ್ಕ ಮಾಡುವುದು ಅಥವಾ ಅನ್ಯತಾ ಹಾನಿಗೊಳಿಸುವುದು ಅಥವಾ ನಿರುಪಯುಕ್ತಗೊಳಿಸುವುದು.
(ಸಿ)ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದಭಾನುಸಾರ ಕಛೇರಿ ಮುಖ್ಯಸ್ಥರ ಅನುಮತಿಯನ್ನು ಪಡೆದುಕೊಳ್ಳದೇ ಯಾವುದೇ ಸಾರ್ವಜನಿಕ ದಾಖಲೆಗಳನ್ನು ತೆಗೆದುಹಾಕುವುದು.
(ಡಿ) ಸಾರ್ವಜನಿಕ ದಾಖಲೆಗಳನ್ನು ಆಧಾರಿಸುವಾಗ ಅಥವಾ ಪರಾಮರ್ಶನ ಮಾಡುವಾಗ ಯಾವುದೇ ತಿನಿಸುಗಳು ಅತವಾ ಪಾನೀಯ ವಸ್ತುಗಳನ್ನು ಸೇವಿಸುವುದು ಅಥವಾ ಧೂಮಪಾನ ಮಾಡುವುದು.
(ಇ) ಸದರಿ ದಾಖಲೆಗಳ ಯಾವುದೇ ಪ್ರತಿಯನ್ನು ತೆಗೆದುಕೊಳ್ಳುವ ಉದ್ದೇಶದಿಂದ ಯಾವುದೇ ಸಾರ್ವಜನಿಕ ದಾಖಲೆಗಳ ಮೇಲೆ ಯಾವುದೇ ಸಾಧನ ಸಾಮಾಗ್ರಿ ಅಥವಾ ವಸ್ತುವನ್ನು ಇಡುವುದು.
(ಎಫ್) ಸಾರ್ವಜನಿಕ ದಾಖಲೆಗಳನ್ನು ಆಧರಿಸುವಾಗ ಅಥವಾ ಪರಾಮರ್ಶನ ಮಾಡುವಾಗ ಯಾರೇ ಇತರ ವ್ಯಕ್ತಿಗೆ ತೊಂದರೆ ಅಥವಾ ಅಡ್ಡಿ ಉಂಟು ಮಾಡುವುದು.
ರು ಸಾರ್ವಜನಿಕ (ಜೆ) ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಚೇರಿಯ ಮುಖ್ಯಸ್ಥ ದಾಖಲೆಗಳ ನಿರ್ವಹಣೆ ಮತ್ತು ಸಂರಕ್ಷಣೆಗೆ ನಿರ್ಧರಣೆ ಮಾಡಿದಂತೆ ವಿವೇಚನೆಯ ಅನು ಸಾರದ ರೀತಿಯಲ್ಲೇ ವರ್ತಿಸಬೇಕು.