(1) ಎಲ್ಲಾ ದಾಖಲು ಮಾಡಲಾದ ಕಡತಗಳನ್ನು ಪ್ರಾಮುಖ್ಯತೆ ಮತ್ತು ಆಡಳಿತಾತ್ಮಕ ಅಗತ್ಯಗಳಿಗೆ ಸಂಬಂಧಿಸಿದಂತೆ ಪರಾಮರ್ಶನ ಮಾಡುವುದಕ್ಕಾಗಿ ಅವು ಯಾವ ಅವಧಿಯವರೆಗೆ ಅಗರ್ಯವಾಗುವ ಸಂಭವವಿದೆಯೋ ಆ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಸಂರಕ್ವಿಸುವ ಉದ್ಧೇಶಕ್ಕಾಗಿ ಆ ಎಲ್ಲ ಕಡತಗಳನ್ನು ವರ್ಗೀಕರಣ ಮಾಡತಕ್ಕದ್ದು. ಅಗತ್ಯವಾಗಬಹುದಾದಂಥ ಪ್ರತಿಯೊಂದು ಕಡತವನ್ನು ಸಂರಕ್ವಸಿಡತಕ್ಕದ್ದು ಮತ್ತು ಸ್ಥಳವನ್ನು ಉಳಿಸಲು ಮತ್ತು ಹುಡುಕುವ ಕಾರ್ಯವನ್ನು ಸರಳಗೊಳಿಸುವ ಸಲುವಾಗಿ ಅನಗತ್ಯವಾದ ಪ್ರತಿಯೊಂದು ಕಡತವನ್ನು ನಾಶಪಡಿಸತಕ್ಕದ್ದು. ಒಂದು ಕಡತವನ್ನು ಅಲ್ಪಾವಧಿ ಅಥವಾ ದೀರ್ಘಾವಧಿಗೆ ಸಂರಕ್ವಿಸಲು ಉತ್ತಮ ಅಡಳಿತಾತ್ಮಕ ಅಗತ್ಯತೆಯು ಇರುವಾಗ ಇದನ್ನು ದೀರ್ಘಕಾಕ ಸಂರಕ್ಷಿಸುವುದು ಭಿನ್ನವಾದ ಕ್ರಮವಾಗಿರುತ್ತದೆ. ಸಂರಕ್ಷಣೆಯ ಕನಿಷ್ಠ ಅವಧಿಯು ಕಡತದಲ್ಲಿ ಹೊರಡಿಸಲಾದ ಆದೇಶಗಳ ಯಾವುದೇ ಪುನರ್ ವಲೋಕನ ಅಥವಾ ಮರು ಪರಿಶೀಲನೆಗಾಗಿ ಒದಗಿಸಲು ಅನುಕೂಲವಾಗಿರುವುದು ಅಷ್ಟೆ ಅಗತ್ಯವಾಗಿರುತ್ತದೆ.
(2) ಮುಖ್ಯವಾದ ಕಡತಗಳು ಅಥವಾ ಭವಿಷ್ಯದಲ್ಲಿ ಮುಖ್ಯವಾಗಬಹುದಾದಂತ ಕಡತಗಳು ಅವು ಇತಿಹಾಸದ ಯಾವುದೇ ಅಂಶದ ಮೇಲೆ ಎಂದರೆ ರಾಜಕೀಯ, ಸೇನೆ, ಸಾಮಾಜಿಕ, ಆರ್ಥಿಕ, ಇತ್ಯಾದಿ ಅಂಶಗಳ ಮೇಲೆ ಪರೋಕ್ಷವಾಗಿ ಮಾಹಿತಿಯ ಮೂಲವಾಗಿರುವ ಅಥವಾ ಜೀವನ ಚರಿತ್ರೆಯ ಅಥವಾ ಪ್ರಾಚೀನ ಮತ್ತು ಶೋಧನೆಯ ಹಿನ್ನಲೆ ಹೊಂದಿರುವ ಅಥವಾ ಹಾಗೆ ಮುಂದೆ ರುಜುವಾತಾಗಬಹುದಾದಂಥ ಕಡತಗಳನ್ನು ನಾಶಪಡಿಸದಂತೆ ಎಚ್ಚರಿಕೆ ವಹಿಸತಕ್ಕದ್ದು.
(3) ದಾಖಲೆಗಳನ್ನು ಎ, ಬಿ, ಸಿ, ಡಿ ಎಂದು ವರ್ಗೀಕರಿಸತಕ್ಕದ್ದು, ಇವುಗಳ ಲಕ್ಷಣಗಲನ್ನು ಈ ಮುಂದೆ ವಿವರಿಸಲಾಗಿದೆ. ಅಂಥ ವರ್ಗೀಕರಣಗಳನ್ನು ಅನುಮೋದಿಸಲು ಸಕ್ಷಮ ಅಧಿಕಾರಿಯನ್ನು ಸಹ ಅದರಲ್ಲಿ ಸೂಚಿಸಲಾಗಿದೆ.
(i) “ಎ” ವರ್ಗ :- ಅನಿರ್ದಿಷ್ಟ ಕಾಲದವರೆಗೆ ಸಂರಕ್ಷಿಸಬೇಕಾಗುತ್ತದೆ. ಈ ವರ್ಗದಲ್ಲಿ ಪ್ರಮುಖ ಪ್ರಶ್ನೆಗಳನ್ನು ಚರ್ಚೆಮಾಡಲಾದ ಅಥವಾ ಪ್ರಮುಖ ಪೂರ್ವ ನಿದರ್ಶನಗಳನ್ನು ಸ್ಥಾಪಿಸುವ ಆದೇಶಗಳನ್ನೊಳಗೊಂಡಿರುವುದು ಅಥವಾ ಖಾಯಂ / -ಪ್ರಧಾನ ಸ್ವರೂಪದ ಸಾಮಾನ್ಯ ಸೂಚನೆಗಳು ಅಥವಾ ನಿರ್ಣಯಗಳನ್ನು ಒಳಗೊಂಡಿರುವಂತಹ ಕಡತಗಳನ್ನು ಸೇರಿಸಲಾಗಿದೆ. ಈ ಕಡತಗಳನ್ನುಅಗತ್ಯವಿದ್ದಾಗ ಮುದ್ರಿಸತಕ್ಕದ್ದು. ಸರ್ಕಾರದ ಉಪ ಕಾರ್ಯದರ್ಶಿ ಅಥವಾ ಇಲಾಖೆಯ ಮುಖ್ಯಸ್ಥರ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯು ಈ ವರ್ಗೀಕರಣವನ್ನು ಅನುಮೋದಿಸತಕ್ಕದ್ದು.
(ii) “ಬಿ” ವರ್ಗ :- 30 ವರ್ಷಗಳವರೆಗೆ ಸಂರಕ್ಷಿಸಬೇಕಾಗುತ್ತದೆ. ಈ ವರ್ಗದಲ್ಲಿ ಮೇಲೆ ಹೇಳಲಾದಂತಹ ವರ್ಗದ ಕಡತಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ ಅವು ಕೆಲವು ದಶಕಗಳ ನಂತರ ಪರಾಮರ್ಶನಕ್ಕಾಗಿ ಬೇಕಾಗುವ ಸಂಭವವಿರುವುದಿಲ್ಲ. ಸರ್ಕಾರದ ಅಧೀನ ಕಾರ್ಯದರ್ಶಿಯ ಅಥವಾ ಸಮೂಹ ‘ಎ’ ಅಧಿಕಾರಿಯು ಈ ವರ್ಗೀಕರಣವನ್ನು ಅನುಮೋದಿಸತಕ್ಕದ್ದು.
(iii) “ಸಿ” ವರ್ಗ :- 10 ವರ್ಷಗಳವರೆಗೆ ಸಂರಕ್ಷಿಸಬೇಕಾಗುತ್ತದೆ. ಈ ವರ್ಗದಲ್ಲಿ ಅತಿ ಸೀಮಿತ ವರ್ಷಗಳ ಅವಧಿಯವರೆಗೆ ಸಂರಕ್ಷಿಸಬೇಕಾದ ಎರಡನೇ ಪ್ರಾಮುಖ್ಯತೆಯ ಕಡತಗಳಿಗೆ ಹಂಚಿಕೆ ಮಾಡಲಾಗಿದೆ. ಶಾಖಾಧಿಕಾರಿಯು ಅಥವಾ ಸಮೂಹ ‘ಬಿ’ ಅಧಿಕಾರಿಯ ದರ್ಜೇಗಿಂತ ಕಡಿಮೆಯಲ್ಲದ ದರ್ಜೆಯ ಅಧಿಕಾರಿಯು ಈ ವರ್ಗೀಕರಣವನ್ನು ಅನುಮೋದಿಸತಕ್ಕದ್ದು.
(iv) “ ಡಿ” ವರ್ಗ :- ಕಡತವು ಮುಕ್ತಾಯವಾದಂತ ವರ್ಷದ ಕೊನೆಯಲ್ಲಿ ಒಂದು ವರ್ಷದ ತರುವಾಯ ನಾಶಪಡಿಸಬೇಕಾದುದು. ಈ ವರ್ಗದ ಕಡತಗಳಲ್ಲಿ, ಕೇವಲ ತಾತ್ಕಾಲಿಕ ಸ್ವರೂಪದ ಮತ್ತು ಸಂರಕ್ಷಿಸಿಡುವುದು ಅಗತ್ಯವಿಲ್ಲದಂತ ಒಳಾಂಶಗಳನ್ನೊಳಗೊಂಡಿರತಕ್ಕದ್ದು. ಶಾಖಾಧಿಕಾರಿ ದರ್ಜೆಗಿಂತ ಕಡಿಮೆಯಲ್ಲದ ಅಥವಾ ಸಮೂಹ ‘ ಬಿ’ ಅಧಿಕಾರಿಯು ಈ ವರ್ಗೀಕರಣವನ್ನು ಅನಿಮೋದಿಸತಕ್ಕದ್ದು.
(4) ಮೇಲಿನ ಪ್ರವರ್ಗಗಳ ದಾಖಲೆಗಳ ವರ್ಗೀಕರಣವು ಒಂದು ಇಲಾಖೆಯಲ್ಲಿ ವ್ಯವಹರಿಸುವ ವಿಷಯಗಳನ್ನು ಅಧಿಕೃತವಾದ (ಎ.ಬಿ.ಸಿ.ಡಿ) ವರ್ಗೀಕರಣದ ಮೂಲಕಸರಳಗೊಳಿಸತಕ್ಕದ್ದು. ವಿಧಾನದ ಮೂಲಕ ಮುಂದುವರೆಸತಕ್ಕದ್ದು. ಇಲಾಖೆಯಲ್ಲಿ ವ್ಯವಹರಿಸುವ ವಿವಿಧ ವಿಷಯಗಳನ್ನು ಆಡಳಿತಾತ್ಮಕ ಮತ್ತು ಐತಿಹಾಸಿಕ ಅಂಶದ ದೃಷ್ಠಿಯಿಂದ ಪ್ರತಿಯೊಂದು ವಿಷಯದ ಸ್ವರೂಪ ಮತ್ತು ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎ.ಬಿ.ಸಿ.ಡಿ ಪ್ರವರ್ಗಗಳನ್ನಾಗಿ ಗುಂಪಾಗಿಸತಕ್ಕದ್ದು.
(5) ವರ್ಗೀಕರಣ ಮಾಡುವ ವಿಧಾನವು ವ್ಯವಹರಿಸುವುದನ್ನು ಆಧರಿಸಿ ಅಧೀಕೃತ ಎ.ಬಿ.ಸಿ.ಡಿ ವರ್ಗೀಕರಣ ಅನುಸಾರವಾಗಿ ಯಾವುದೇ ಕಡತದ ಮೇಲೆ ಕೈಗೊಳ್ಳಬೇಕಾದ ಅಗತ್ಯ ಕ್ರಮ ಇಲ್ಲದಿರುವಾಗ ಪ್ರತಿ ಪ್ರಕರಣವನ್ನು ಪ್ರತ್ಯೇಕವಾಗಿ ಇಡಲು ಸಲಹೆ ಮಾಡತಕ್ಕದ್ದು. ದಾಖಲು ಮಾಡುವುದಕ್ಕಾಗಿ ಮತ್ತು ಎ.ಬಿ.ಸಿ.ಡಿ ಪಟ್ಟಿಯ ಅಡಿಯಲ್ಲಿ ವರ್ಗೀಕರಿಸುವುದಕ್ಕಾಗಿ ಸಮುಚಿತ ಅಧಿಕಾರಿಯ ಅನುಮೋದನೆಗೆ ಕಡತವನ್ನು ಸಲ್ಲಿಸತಕ್ಕದ್ದು. 8. ವರ್ಗೀಕರಿಸಲಾದ ದಾಖಲೆಗಳನ್ನು ಕೆಳ ದರ್ಜೆಗಿಳಿಸುವುದು : (1) ದಾಖಲೆಗಳನ್ನು ಸೃಜಿಸುವ ಏಜೆನ್ಸಿಯು, ನಿರ್ವಹಿಸಲಾದ ವರ್ಗೀಕರಿಸಲಾದ ದಾಖಲೆಗಳ ಮೌಲ್ಯ ನಿರ್ಧಾರ ಮತ್ತು ಕೆಳದರ್ಜೆಗೊಳಿಸಲು ಸರ್ಕಾರದ ಅಧೀನ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯ ಅಥವಾ ಸಂಬಂಧಪಟ್ಟ ದಾಖಲೆ ಅಧಿಕಾರಿಯನ್ನು ಅಧಿಕೃತಗೊಳಿಸತಕ್ಕದ್ದು. ಅಂತಹ ಕಛೇರಿ ಆದೇಶದ ಪ್ರತಿಯನ್ನು ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ಅಥವಾ ಸಂದರ್ಭಾನುಸಾರ ಕಛೇರಿ ಮುಖ್ಯಸ್ಥರಿಗೆ ಕಳುಹಿಸತಕ್ಕದ್ದು. (2) (1) ನೇ ಉಪ ನಿಯಮದ ಮೇರೆಗೆ ಹಾಗೆ ಅಧಿಕೃತಗೊಂಡ ಅಧಿಕಾರಿಯು ದಾಖಲೆಗಳನ್ನು ಕೆಳದರ್ಜೆಗೆ ಇಳಿಸುವ ಉದ್ದೇಶಕ್ಕಾಗಿ ಪ್ರತಿ ಐದನೇ ವರ್ಷದಲ್ಲಿ ವರ್ಗೀಕರಿಸಲಾದ ದಾಖಲೆಗಳ ಮೌಲ್ಯ ನಿರ್ಣಯವನ್ನು ಮಾಡತಕ್ಕದ್ದು.
(3) ಕೆಳದರ್ಜೆಗೆ ಇಳಿಸಿದ ತರುವಾಯ, ಅಧಿಕಾರಿಯು ಯಾವುದೇ ದಾಖಲೆಯನ್ನು ಖಾಯಂ ಸ್ವರೂಪದ ದಾಖಲೆ ಎಂದು ಘೋಷಿಸಿದರೆ, ಅದನನು ಮೌಲ್ಯ ನಿರ್ಣಯದ ತರುವಾಯ, ಪತ್ರಾಗಾರ ಇಲಾಖೆ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಛೇರಿ ಮುಖ್ಯಸ್ಥರ ಬಳಿ ಇರತಕ್ಕದ್ದು ಮತ್ತು ಸಂರಕ್ಷಿಸತಕ್ಕದ್ದು.
(4) ಈ ನಿಯಮದ ಮೇರೆಗೆ ಇಡಲಾದ ದಾSಲೆಗಳನ್ನು ಯಾವುದೇ ಅಧಿಕೃತ ಉದ್ದೇಶಕ್ಕಾಗಿ ಕೋರಬಹುದು ಮತ್ತು ನಿಯಮ 6 ರಲ್ಲಿ ಉಪಬಂಧಿಸಲಾದ ರೀತಿಯಲ್ಲಿ ಅವುಗಳನ್ನು ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ಅಥವಾ ಸಂದರ್ಭಾನುಸಾರ ಕಛೇರಿ ಮುಖ್ಯಸ್ಥರಿಗೆ ಹಿಂದಿರುಗಿಸತಕ್ಕದ್ದು.
(5) ಪ್ರತಿ ವರ್ಷದ ಜೂನ್ ಮತ್ತು ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ, ವರ್ಗೀಕರಿಸಲಾದ ದಾಖಲೆಗಳ ಮೌಲ್ಯ ನಿರ್ಧಾರಣೆ ಮತ್ತು ಕೆಳದರ್ಜೆಗೆ ಇಳಿಸುವುದಕ್ಕಾಗಿ ಕೈಗೊಂಡ ಕ್ರಮದ ಬಗ್ಗೆ ಪತ್ರಾಗಾರ ಇಲಾಖಾ ನಿರ್ದೇಶಕರು ಅಥವಾ ಕಛೇರಿ ಮುಖ್ಯಸ್ಥರಿಗೆ (1) ನೇ ಉಪನಿಯಮದ ಮೇರೆಗೆ ಅಧಿಕೃತಗೊಳಿಸಲಾದ ಅಧಿಕಾರಿಯ ಮೂಲಕ ನಮೂನೆ-4 ರಲ್ಲಿ ಅರ್ಧವಾರ್ಷಿಕ ವಿವರಣಾ ಪತ್ರವನ್ನು ಸಲ್ಲಿಸತಕ್ಕದ್ದು.
(6) 3ನೇ ನಿಯಮದ ಮೇರೆಗೆ ನಾಮ ನಿರ್ದೇಶನಗೊಂಡ ದಾಖಲೆಗಳ ಅಧಿಕಾರಿಯು ಪ್ರತಿಯೊಂದು ವರ್ಷದ ವಾರ್ಷಿಕ ವರದಿಯನ್ನು ಮುಂಬರುವ ವರ್ಷದ ಮಾರ್ಚ್ ತಿಂಗಳಲ್ಲಿ ನಮೂನೆ-5 ರಲ್ಲಿ ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ಅಥವಾ ಕಛೇರಿ ಮುಖ್ಯಸ್ಥರಿಗೆ ಸಲ್ಲಿಸತಕ್ಕದ್ದು. 9. ಸಾರ್ವಜನಿಕ ದಾಖಲೆಗಳ ನಾಶ : (1) ಯಾವುದೇ ಸಾರ್ವಜನಿಕದಾಖಲೆಯನ್ನು ದಾಖಲು ಮಾಡದೇ ಮತ್ತು ಪುನರವಲೋಕನ ಮಾಡದೇ ನಾಶ ಪಡಿಸತಕ್ಕದಲ್ಲ. ಪ್ರತಿ ವರ್ಷದ ಜನವರಿ ತಿಂಗಳಲ್ಲಿ, ದಾಖಲೆಗಳನ್ನು ಸೃಜಿಸುವ ಪ್ರತಿಯೊಂದು ಏಜೆನ್ಸಿಯು ನಮೂನೆ-6 ರಲ್ಲಿ ನಿರ್ದಿಷ್ಟಪಡಿಸಿದ ದಾಖಲೆಗಳನ್ನು ಉಳಿಸಿಕೊಳ್ಳುವ ಅನುಸೂಚಿಯನ್ನು ನಾಶಪಡಿಸುವ ಅಥವಾ ಉಳಿಸಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಎಲ್ಲಿ ಅಂತಹ ಕಡತಗಳ ಉಲ್ಲೇಖ ಅಥವಾ ಸಮಾಲೋಚನೆ ತರುವಾಯ ದಾಖಲು ಮಾಡತಕ್ಕದ್ದು. ಈ ಕೆಲಸವನ್ನು ದಾಖಲೆಗಳ ಅಧಿಕಾರಿಯೊಂದಿಗೆ ಸಮಾಲೋಚನೆ ಮಾಡಿ ಪೂರ್ಣಗೊಳಿಸತಕ್ಕದ್ದು. (2) ಇಪ್ಪತ್ತೈದು ವರ್ಷಗಳಿಗೂ ಮೀರದಂತೆ ಹಳೆಯದಾದ ಯಾವುದೇ ಸಾರ್ವಜನಿಕ ದಾಖಲೆಗಳನ್ನು ಅದನ್ನು ಮೌಲ್ಯ ನಿರ್ಣಯ ಮಾಡಿದ ಹೊರತು ಯಾವುದೇ ದಾಖಲೆಗಳ ಸೃಜನಾ ಏಜೆನ್ಸಿಯು ನಾಶಪಡಿಸತಕ್ಕದ್ದಲ್ಲ.
(3) ನಾಶಪಡಿಸಲು ಉದ್ದೇಶಿಸಲಾದಂತಹ ಎಲ್ಲಾ ಅಂತಹ ಸಾರ್ವಜನಿಕ ದಾಖಲೆಗಳ ಒಂದು ಪಟ್ಟಿಯನ್ನು ದಾಖಲೆ ಸೃಜಿಸುವ ಏಜೆನ್ಸಿಯು ನಮೂನೆ-6 ರಲ್ಲಿ ಸಿದ್ಧಪಡಿಸ ತಕ್ಕದ್ದು ಮತ್ತು ಮುಂದಿನ ಪರಾಮರ್ಶೆಗಾಗಿ ಖಾಯಂ ಆಗಿ ಉಳಿಸಿಕೊಳ್ಳತಕ್ಕದ್ದು.
(4) ದಾಖಲೆಗಳ ಅಧಿಕಾರಿಯು , ನಮೂನೆ 7 ರಲಿ ದಾಖಲು ಮಾಡುವ ಸೂಚಿ ತಯಾರಿಸುವ, ಪುನರವಲೋಕನೆಯನ್ನು ಮಾಡುವ ಮತ್ತು ಬೇಡದಿರುವುದನ್ನು ತೆಗೆದುಹಾಕುವ ದಖಲೆಗಳ ಬಗ್ಗೆ ಅರ್ಧವಾರ್ಷಿಕ ವರದಿಯನ್ನು ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ಅಥವಾ ಕಛೇರಿ ಮುಖ್ಯಸ್ಥರಿಗೆ ಸಲ್ಲಿಸತಕ್ಕದ್ದು.
(5) ದಾಖಲೆಗಳ ಅದೀಕಾರಿಯ ಸಮ್ಮುಖದಲ್ಲಿ ದಾಖಲೆಗಳನ್ನು ಸುಟ್ಟುಹಾಖುವ ಅಥವಾ ಚೂರು ಚೂರಾಗಿ ಮಾಡುವ ಮೂಲಕ ನಾಶಪಡಿಸತಕ್ಕದ್ದು.