(1) ದಾನ ಅಥವಾ ಖರಿದೀ ಅಥವಾ ಇತರ ರೀತಿಯಲ್ಲಿ ಖಾಸಗೀ ಮೂಲಗಳಿಂದ ಹೊಂದಿದಿ ದಾಖಲೆಗಳನ್ನು ದಾನ ನೀಡಿದವರು ವಿಧಿಸಿ ಷರತ್ತುಗಳಿಗೊಳಪಟ್ಟು ಸದುದ್ದೇಶ ಸಂಶೋಧನೆಗೆ ಲಭ್ಯವಾಗುವಂತೆ ಮಾಡತಕ್ಕದ್ದು.
(2) ಸಂಶೋಧನಾ ವಿದ್ವಾಂಸರು ದಾಖಲೆಗಳ ಪರಾಮರ್ಶನ ಅಥವಾ ಉಲ್ಲೇಖ ಮಾಡುವ ಅನುಮತಿಗಾಗಿ ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ನಮೂನೆ-8 ರಲ್ಲಿ ಅರ್ಜಿಯೊಂದನ್ನು ಸಲ್ಲಿಸತಕ್ಕದ್ದು. ಪತ್ರಾಗಾರ ಇಲಾಖೆಯ ನಿರ್ದೇಶಕರು ಸಮಾಲೋಚನ ಕಾಲದಲ್ಲಿ ಅಂತಹ ದಾಖಲೆಯ ಸುರಕ್ಷೆಗೆ ಸಂಭಂದಿಸಿದಂತೆ ಅರ್ಜಿದಾರನಿಂದ ಸೂಕ್ತವಾದ ನಷ್ಟ ಭರ್ತಿ ಬಂಧ ಪತ್ರ ಅಥವಾ ಭದ್ರತೆಯನ್ನು ಪಡೆದ ತರುವಾಯ ಸಾರ್ವಜನಿಕ ಹಿತದೃಷ್ಟಿಯಿಂದ ಅಂತಹ ಅನುಮತಿಯನ್ನು ನೀಡಬಹುದು ಅಥವಾ ನಿರಾಕರಿಸಬಹುದು. ನಿರಾಕರಣೆಯ ಸಂದರ್ಭದಲ್ಲಿ ಅಂತಹ ನಿರಾಕರಣೆಗೆ ಕಾರಣಗಳನ್ನು ಸದರಿ ಅರ್ಜಿಯ ಮೇರೆಗೆ ದಾಖಲು ಮಾಡತಕ್ಕದ್ದು.
(3) ಮೈಕ್ರೋಫಿಲ್ಮ್ ರೋಲುಗಳು, ಹಾರ್ಡ್ ಕಾಪಿಗಳು ಅಥವಾ ಯಾವುದೇ ಎಲೆಕ್ಟ್ರಾನಿಕ್ ನಮೂನೆಗಳು ಲಭ್ಯವಾದಾಗ ಮೂಲ ದಾಖಲೆಗಳನ್ನು ಸಂಶೋಧನಾ ವಿದ್ವಾಂಸರುಗಳಿಗೆ ಪರಾಮರ್ಶನೆ ಅಥವಾ ಉಲ್ಲೇಖಕ್ಕಾಗಿ ಒದಗಿಸತಕ್ಕದ್ದಲ್ಲ. ದಾಖಲಗಳ ಯಾವುದೇ ಪ್ರತಿಯನ್ನು ಪತ್ರಾಗಾರ ಇಲಾಖಾ ನಿರ್ದೇಶಕರಿಗೆ ಅಥವಾ ಸಂದಭಾನುಸಾರ ಕಛೇರಿ ಮುಖ್ಯಸ್ಥರ ಪೂರ್ವಾನುಮತಿ ಇಲ್ಲದೆ ನೀಡತಕ್ಕದ್ದಲ್ಲ.