(1) ಪತ್ರಾಗಾರ ಇಲಾಖಾ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಛೇರಿ ಮುಖ್ಯಸ್ಥರ ಬಳಿ ಇಡಲಾದ ಮತ್ತು ನಿರ್ವಹಿಸಲಾದ ಸಾರ್ವಜನಿಕ ದಾಖಲೆಗಳು ಯಾವುದೇ ಅಧಿಕೃತ ಉದ್ದೇಶಕ್ಕಾಗಿ ದಾಖಲೆಗಳನ್ನು ಸೃಜಿಸಿದ ಏಜೆನ್ಸಿಗೆ ಬೇಕಿದ್ದರೆ ಆಗ ದಾಖಲೆಗಳ ಅಧಿಕಾರಿಯು ಪತ್ರಾಗಾರದ ನಿರ್ದೇಶಕರಿಗೆ ಅಥವಾ ಸಂದರ್ಭಾನುಸಾರ ಕಚೇರಿಗೆ ಮುಖ್ಯಸ್ಥರಿಗೆ ನಮೂನೆ-3ರಲ್ಲಿ ಯುಕ್ತವಾದ ಸಹಿ ಮಾಡಿದ ಮತ್ತು ಕಚೇರಿ ಮೊಹರು ಕರುವ ಕೋರಿಕೆ ಪತ್ರವನ್ನು ಕಳಹಿಸತಕ್ಕದ್ದು.
(2) (1) ನೇ ಉಪ ನಿಯಮದ ಮೇರೆಗೆ ಕೋರಲಾದ ಸಾರ್ವಜನಿಕ ದಾಖಲೆಗಳನ್ನು ಆ ಉದ್ದೇಶ ಈಡೇರಿದ ಕೂಡಲೇ ಹಿಂತಿರುಗಿಸಬಹುದು. ಆದರೆ ದಾಖಲೆಗಳ ಅಧಿಕಾರಿ ಅಥವಾ ದಾಖಲೆಗಳನ್ನು ಸೃಜಿಸುವ ಏಜೆನ್ಸಿಯು ಅವುಗಳನ್ನು ಆರು ತಿಂಗಳ ಅವಧಿಗೂ ಮೇರಿ ಹೆಚ್ಚು ಕಾಲ ಇಟ್ಟುಕೊಳ್ಳತಕ್ಕದ್ದಲ್ಲ.