- ದಾಖಲೆಗಳ ಸೃಜಿಸುವ ಏಜೆನ್ಸಿಯು ದಾಖಲು ಮಾಡಿದ ತರುವಾಯ ಅದನ್ನು ತನ್ನ ದಾಖಲೆಗಳ ಕೊಠಡಿಯಲ್ಲಿ ಇಪ್ಪತ್ತೈದು ವರ್ಷಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಗಾಗಿ ಇಟ್ಟುಕೊಳ್ಳಲು ಪತ್ರಾಗಾರಿ ಇಲಾಖೆಯ ನಿರ್ದೇಶಕರು ಖಾಯಂ ಸ್ವರೂಪದ ಸಾರ್ವಜನಿಕ ದಾಖಲೆಗಳ ಭದ್ರತೆ ಮತ್ತು ರಕ್ಷಣೆಗಾಗಿ ಅಂಗೀಕರಿಸುವುದು. (2) ದಾಖಲೆಯ ಅಧಿಕಾರಿಯು ಪತ್ರಾಗಾರ ಇಲಾಖೆಯ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಛೇರಿ ಮುಖ್ಯಸ್ಥರಿಗೆ ಪ್ರತಿ ವರ್ಷದ 31ನೇ ಜನವರಿಗೆ ಮೊದಲು ನಮೂನೆ -1 ರಲ್ಲಿ ಆ ವರ್ಷದ ಮೌಲ್ಯ ನಿರ್ಣಯಕ್ಕಾಗಿ ಬಾಕಿ ಇರುವಂತಹ ಖಾಯಂ ಸ್ವರೂಪದ ಎಲ್ಲಾ ಸಾರ್ವಜನಿಕ ದಾಖಲೆಗಳ ವಿವರಗಳನ್ನು ನೀಡತಕ್ಕದ್ದು.
(3) (2) ನೇ ಉಪ ನಿಯಮದ ಮೇರೆಗೆ ಮಾಹಿತಿಯನ್ನು ಸ್ವೀಕರಿಸಿದ ಮೇಲೆ ಪತ್ರಾಗಾರ ಇಲಾಖೆಯ ನಿದೇಶಕರು ಅಥವಾ ಸಂದರ್ಭಾನುಸಾರ ಕಚೇರಿ ಮುಖ್ಯಸ್ಥರು ತನ್ನ ಅಧಿಕಾರಿಗಳ ಮೂಲಕ ಸಾರ್ವಜನಿಕ ದಾಖಲೆಗಳ ಮೌಲ್ಯ ನಿರ್ಣಯವನ್ನು ನಡೆಸಲು ದಾಖಲೆಗಳ ಅಧಿಕಾರಿಗೆ ನೆರವು ನೀಡತಕ್ಕದ್ದು, ಮೌಲ್ಯ ನಿರ್ಣಯದ ಕಾರ್ಯವು ಮುಕ್ತಾಯಗೊಂಡ ಮೇಲೆ ದಾಖಲೆಗಳ ಅಧಿಕಾರಿಯು ನಮೂನೆ-2 ರಲ್ಲಿ ಎಲ್ಲ ಸಾರ್ವಜನಿಕ ದಾಖಲೆಗಳ ವರ್ಗಾವಣೆಯ ಒಂದು ಪಟ್ಟಿಯನ್ನು ದ್ವಿಪ್ರತಿಯಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ಎಲ್ಲಾ ಸಾರ್ವಜನಿಕ ದಾಖಲೆಗಳನ್ನು ಪತ್ರಾಗಾರ ಇಲಾಖೆಯ ನಿರ್ದೇಶಕರ ಅಥವಾ ಸಂದರ್ಭಾನುಸಾರ ಕಛೇರಿಯ ಮುಖ್ಯಸ್ಥರಲ್ಲಿ ಸಂರಕ್ಷತೆಗಾಗಿ ಇಡತಕ್ಕದ್ದು, ಇವರು ಆ ಸಂಬಂಧದಲ್ಲಿ ತನಗೆ ಮನವಿಕೆಯಾದರೆ ಸಾವ್ಜನಿಕ ದಾಖಲೆಗಳನ್ನು ಸ್ವೀಕರಿಸಿದ್ದಕ್ಕಾಗಿ ವರ್ಗಾವಣೆ ಪಟ್ಟಿಯ ಒಂದು ಪ್ರತಿಯನ್ನು ದಾಖಲೆಗಳ ಅಧಿಕಾರಿಗೆ ಹಿಂತಿರುಗಿಸತಕ್ಕದ್ದು.
(4) ದಾಖಲೆಗಳ ಅಧಿಕಾರಿಯು ಮೌಲ್ಯ ನಿರ್ಣಯದ ತರುವಾಯ, ಇಪ್ಪತ್ತೈದು ವರ್ಷಗಳ ಅವಧಿಗೂ ಮೀರಿದ ಯಾವುದೇ ದಾಖಲೆ ಅಥವಾ ಕಡತವನ್ನು ಉಳಿಸಿಕೊಳ್ಳುವುದು ಅವಶ್ಯವೆಂದು ಭಾವಿಸಿದರೆ, ಅದನ್ನು ಹಾಗೇ ಮಾಡುವ ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ ಪತ್ರಾಗಾರ ಇಲಾಖಾ ನಿರ್ದೇಶಕರು ಅಥವಾ ಸಂದರ್ಭಾನುಸಾರ ಕಛೇರಿ ಮುಖ್ಯಸ್ಥರಿಗೆ ತಿಳಿಸಬಹುದು.