ನಮೂನೆ - 5
(8ನೇ ನಿಯಮದ (6)ನೇ ಉಪನಿಯಮ ನೋಡಿ
ಪತ್ರಾಗಾರ ಇಲಾಖೆಯ ನಿರ್ದೇಶಕರು/ಇಲಾಖಾ ಮುಖ್ಯಸ್ಥರಿಗೆ ವಾರ್ಷಿಕ ವರದಿಯ ಸಲ್ಲಿಕೆಗಾಗಿ ನಮೂನೆ
- ಎ. ವ್ಯವಸ್ಥಿತವಾದ ಇಲಾಖಾ ದಾಖಲೆಗಳ ಕೊಠಡಿಯನ್ನು ಸ್ಥಾಪಿಸುವುದು - ನಿಮ್ಮ ಸಂಸ್ಥೆಯು ವ್ಯವಸ್ಥಿತವಾದ ದಾಖಲೆಗಳ ಕೊಠಡಿಯನ್ನು ಸ್ಥಾಪಿಸಿದೆಯೇ? ಹಾಗಿದ್ದರೆ, ಸಾಕಷ್ಟು ಸ್ಥಳ ರುವುದೇ?
ಬಿ. ದಾಖಲೆಗಳ ಅಧಿಕಾರಿ ನಾಮನಿರ್ದೇಶನ - ನಿಮ್ಮ ಸಂಸ್ಥೆಯು ಇಲಾಖಾ ದಾಖಲೆಗಳ ಅಧಿಕಾರಿ ಎಂದು ಅಧಿಕಾರಿಯನ್ನು ನಾಮನಿರ್ದೇಶನ ಮಾಡಿರುವುದೇ? ಮಾಡಿಲ್ಲದಿದ್ದರೆ
ಕಾರಣಗಳೇನು?
ಸಿ. ದಾಖಲೆಗಳ ಅಧಿಕಾರಿ ಹಾಗೂ
(i) ಇಲಾಖಾ ದಾಖಲೆಗಳ ಅಧಿಕಾರಿಯು ದಾಖಲೆಗಳ ನಿರ್ವಹಣೆ ಬಗ್ಗೆ ತರಬೇತಿಯನ್ನು ಪಡೆದಿರುವರೇ?
(ii) ಇಲಾಖಾ ದಾಖಲೆಗಳ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಸಿಬ್ಬಂದಿಯು ವಿವಿಧ ಅಂಶಗಳು ಅಥವಾ ದಾಖಲೆಗಳ ನಿರ್ವಹಣೆಯ ಬಗ್ಗೆ ತರಬೇತಿ ಪಡೆದಿರುವರೇ?
(iii) ಪಡೆದಿಲ್ಲದಿದ್ದರೆ, ಸಂಬಂಧಪಟ್ಟ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಈಗಿರುವ ತರಭೇತಿ ಸೌಲಭ್ಯಗಳನ್ನು ಪಡೆದುಕೊಳ್ಳು ಇಚ್ಚಿಸುವಿರಾ.
- ನಿಯತಕಾಲಿಕವಾಗಿ ದಾಖಲು ಮಾಡುವುದು, ಪರಿಶೀಲನೆ ಮಾಡುವುದು ಹಾಗೂ ಅರೆ-ಚಾಲ್ತಿ ದಾಖಲೆಗಳನ್ನು ತೆಗೆದುಹಾಕುವುದು:-
(i) ನಿಮ್ಮ ಸಂಸ್ಥೆಯು, ಖಾಯಂ ಅಲ್ಲದ ದಾಖಲೆಗಳನ್ನು ಇಡಲು, ಪರಿಶೀಲಿಸಲು ಹಾಗೂ ತೆಗೆದು ಹಾಖಲು ಕ್ರಮಗಳನ್ನು ಕೈಗೊಂಡಿದೆಯೆ?
(ii) ವರದಿಯ ವರ್ಷದಲ್ಲಿ ದಾಖಲು ಮಾಡಿದ, ಪರಿಶೀಲಿಸಿದ ಹಾಗೂ ತೆಗೆದುಹಾಕಲಾದ ದಾಖಲೆಗಳ ಒಟ್ಟು ಸಂಖ್ಯೆಯನ್ನು ಸೂಚಿಸಿ.
- ಚಾಲ್ತಿ ರಹಿತ ದಾಖಲೆಯ ಮೌಲ್ಯ ನಿರ್ಣಯ:-
(i) ನಿಮ್ಮ ಸಂಸ್ಥೆಯು, ಕರ್ನಾಟಕ ಪತ್ರಾಗಾರ ಇಲಾಖೆಯೊಂದಿಗೆ ಮೌಲ್ಯ ನಿರ್ಣಯ ಮಾಡಿದ ಚಾಲ್ತಿ ರಹಿತ ದಾಖಲೆಗಳನ್ನು ಪಡೆದುಕೊಳ್ಳಲು ಕ್ರಮವನ್ನು ಆರಂಭಿಸಿರುವುದೇ?
(ii) ಮೌಲ್ಯ ನಿರ್ಣಯಕ್ಕಾಗಿ ಇರುವ ದಾಖಲೆಗಳ ಇಡಿ ಪ್ರಮಾಣವನ್ನು ತಿಳಿಸಿ.
- ದಾಖಲೆಗಳನ್ನು ಉಳಿಸಿಕೊಳ್ಳುವ ಅನುಸೂಚಿಯ ಸಂಕಲನ / ಪರಿಷ್ಕರಣೆ:-
(i) ನಿಮ್ಮ ಸಂಸ್ಥೆಯು, ಕರ್ನಾಟಕ ಪತ್ರಾಗಾರ ಇಲಾಖೆಯೊಂದಿಗೆ ಸಮಾಲೋಚಿಸಿ, ಖಾಯಂ ಪ್ರಕಾರ್ಯಗಳ ದಾಖಲೆಗಳ ಉಳಿಸಿಕೊಳ್ಳುವ ಅನುಸೂಚಿಯನ್ನು ಪರಿಷ್ಕರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆಯೇ?
(ii) ನಿಮ್ಮ ಸಂಸ್ಥೆಯು, ಐದು ವರ್ಷಗಳ ನಂತರ ಮೇಲಿನ ಅನುಸೂಚಿಯನ್ನು ಪರಿಷ್ಕರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆಯೇ?
- ವರ್ಗೀಕೃತ ದಾಖಲೆಗಳ ನಿಯತಕಾಲಿಕ ಪರಿಶೀಲನೆ:-
(i) ನಿಮ್ಮ ಸಂಸ್ಥೆಯು, ವರದಿಯ ವರ್ಷದಲ್ಲಿ ವರ್ಗೀಕೃತ ದಾಖಲೆಗಳನ್ನು ಮತ್ತೆ ವರ್ಗೀಕರಿಸಿರುವುದೇ?
(ii) ಇಲ್ಲದಿದ್ದರೆ ಕಾರಣಗಳೇನು?
- ದಾಖಲೆಗಳ ವಾರ್ಷಿಕ ಸೂಚಿಗಳ ಸಂಕಲನ:-
(i) ನಿಮ್ಮ ಸಂಸ್ಥೆಯು, ವಾರ್ಷಿಕ ಸೂಚಿಗಳನ್ನು ಸಂಕಲನ ಮಾಡಿರುವುದೇ?
(ii) ಸಂಚಿಕೆಗಳ ಹೆಸರಿನೊಂದಿಗೆ ಸೇರಿರುವ ವರ್ಷಗಳನ್ನು ತಿಳಿಸುವುದು.
- ಸಾಂಸ್ಥಿಕ ವಿವರದ ಸಂಕಲನ:-
ನಿಮ್ಮ ಸಂಸ್ಥೆಯು, ತನ್ನ ಸ್ಥಾಪನೆಯ ದಿನಾಂಕದೊಂದಿಗೆ ವಿವಿಧ ಕಾರ್ಯಗಳನ್ನು ಬಿಂಬಿಸುವ ಸಾಂಸ್ಥಿಕ ವಿವರದ ಸಂಕಲನ ಮಾಡಿರುವುದೇ? ಹಾಗಿದ್ದರೆ, ಅದರ ದು ಪ್ರತಿಯನ್ನು ಕರ್ನಾಟಕ ಪತ್ರಾಗಾರ ಇಲಾಖೆಗೆ ಒದಗಿಸುವುದು
- ನಿಷ್ಕ್ರಿಯ ಮಂಡಳಿಗಳ ದಾಖಲೆಗಳು:-
(i) ನಿಮ್ಮ ಸಂಸ್ಥೆಯು, ನಿಷ್ಕ್ರಿಯ ಮಂಡಳಿಗಳ ದಾಖಲೆಗಳನ್ನು ಪಡೆದುಕೊಂಡಿದೆಯೇ? ವಿವರಗಳನ್ನು ನೀಡಿ.
(ii) ಹಾಗಿದ್ದರೆ, ಅವುಗಳನ್ನು ಕರ್ನಾಟಕ ಪತ್ರಾಗಾರ ಇಲಾಖೆಗೆ ವರ್ಗಾಯಿಸಲು ಕ ಕೈಗೊಂಡಿರುವ ಕ್ರಮವೇನು?