ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಅಧಿನಿಯಮ” ಎಂದರೆ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧಿನಿಯಮ, 2024 (2024ರ ಕರ್ನಾಟಕ ಅಧಿನಿಯಮ ಸಂಖ್ಯೆ 05);
(ಬಿ) “ಆರ್ಥಿಕ ವರ್ಷ” ಎಂದರೆ 1ನೇ ಏಪ್ರಿಲ್ರಂದು ಆರಂಭಗೊಳ್ಳುವ ಮತ್ತು 31ನೇ ಮಾರ್ಚ್ರಂದು ಕೊನೆಗೊಳ್ಳುವ ವರ್ಷ;
(ಸಿ) “ನಮೂನೆ” ಎಂದರೆ, ಈ ವಿಯಮಗಳಿಗೆ ಅನುಬಂಧಿಸಿದ ನಮೂನ
(ಡಿ) “ಸರ್ಕಾರ” ಎಂದರೆ, ಕರ್ನಾಟಕ ಸರ್ಕಾರ;
(ಇ) “ಪಾರಂಪರಿಕ ತಾಣ” ಎಂದರೆ, 2610ನೇ ಪ್ರಕರಣದ ಅಡಿಯಲ್ಲಿ ಪರಿಭಾಷಿಸಿದ ಶ್ರೀ ರೇಣುಕಾ ಯಲ್ಲಮ್ಮ ಕ್ಲೇತ್ರ ತಾಣ;
(ಎಫ್) “ಪ್ರಕರಣ” ಎಂದರೆ, ಅಧಿನಿಯಮದ ಪ್ರಕರಣ; ಮತ್ತು
(ಜಿ) “ಭದ್ರತಾ ದಳ” ಎಂದರೆ, ಅಧಿನಿಯಮದ 5ನೇ ಪ್ರಕರಣದ ಅಡಿಯಲ್ಲಿ ಸ್ಥಾಪಿಸಿದ ಭದ್ರತಾದಳ;
(2) ಇದರಲ್ಲಿ ಬಳಸಲಾದ ಆದರೆ ಪರಿಭಾಷಿಸಿರದ ಎಲ್ಲಾ ಇತರೆ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅವುಗಳಿಗೆ ನೀಡಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು.