(1) ಭದ್ರತಾದಳವು ಮಂಡಳಿಯ ಅಧ್ಯಕ್ಷರ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಡಿಯಲ್ಲಿ ಮಂಡಳಿಯ ಸ್ವತ್ತನ್ನು ಸಂರಕ್ಷಿಸಲು ಮಂಡಳಿಗೆ ನೆರವಾಗತಕ್ಕದ್ದು.
(2) ಈ ಅಧಿನಿಯಮದ ಉಪಬಂಧಗಳು, ಅಥವಾ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, (1963ರ ಕರ್ನಾಟಕ ಅಧಿನಿಯಮ 11) ಅಥವಾ ಅದರ ಮೇರೆಗೆ ರಚಿಸಿದ ಯಾವುದೇ ನಿಯಮಗಳು ಅಥವಾ ವಿನಿಯಮಗಳು ಅಥವಾ ಉಪ-ವಿಧಿಗಳಿಗೆ ಪ್ರತಿಯಾಗಿ ಯಾವುದೇ ಅಪರಾಧವನ್ನು ಮಾಡುವ ಯಾವುದೇ ಪ್ರಯತ್ನದ ಬಗ್ಗೆ ಅಧ್ಯಕ್ಷರಿಗೆ ಯಾವುದೇ ಮಾಹಿತಿಯನ್ನು ಕೂಡಲೇ ವರದಿ ಮಾಡುವುದು ಭದ್ರತಾ ದಳದ ಮುಖ್ಯಸ್ಥರ ಕರ್ತವ್ಯವಾಗಿರತಕ್ಕದ್ದು.
(3) ಈ ಮುಂದಿನವುಗಳು ಭದ್ರತಾ ದಳದ ಕರ್ತವ್ಯಗಳಾಗಿರತಕ್ಕದ್ದು, ಎಂದರೆ:-
(ಎ) ಒತ್ತುವರಿಯನ್ನು ತಡೆಯುವುದನ್ನು ಒಳಗೊಂಡಂತೆ ಮಂಡಳಿಗೆ ಸೇರಿದ ಯಾವುದೇ ಭೂಮಿಯ ಅನಧಿಕೃತ ಸ್ವಾಧೀನವನ್ನು ತಡೆಗಟ್ಟುವುದು;
(ಬಿ) ಮಂಡಳಿಗೆ ಸೇರಿದ ಭೂಮಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಬಡಾವಣೆಗಳನ್ನು ನವಿರ್ಮಿಸುವುದನ್ನು ತಡೆಗಟ್ಟುವುದು;
(A) ವಲಯ ವಿನಿಯಮಗಳ ಉಪಬಂಧಗಳು ಅಥವಾ ಮಂಡಳಿಯು ಅನುಮೋದಿಸಿದ ನಕ್ಷೆಯ ಉಲ್ಲಂಘನೆಯಲ್ಲಿ ಕಟ್ಟಿಡಗಳ ನಿರ್ಮಾಣವನ್ನು ತಡೆಗಟ್ಟುವುದು;
(ಡಿ) ಈ ಕಾಯ್ದೆ ಮತು, ಈ ಕೆಳಗಿನ ಕಾಯ್ದೆಗಳ ಅಡಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶದೊಳಗೆ ಮಂಡಳಿಯ ಪೂರ್ವಾನುಮೋದನೆ ಇಲ್ಲದೆ ಯಾವುದೇ ಚಟುವಟಿಕೆಗಳನ್ನು ನಡೆಸಬಾರದು ಎಂದು ಮೇಲ್ವಿಚಾರಣೆ ಮಾಡುವುದು, ಅವುಗಳೆಂದರೆ:-
(i) ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ ಸಂಖ್ಯೆ 11);
(ii) ಕರ್ನಾಟಕ ಮುನ್ಸಿಪಾಲಿಟಿಗಳ ಅಧಿನಿಯಮ, 1964 (19640 ಕರ್ನಾಟಕ ಅಧಿನಿಯಮ 22)
(iii) ಕರ್ನಾಟಕ ಪಂಚಾಯತ್ರಾಜ್ ಅಧಿನಿಯಮ. 1993 (19933 ಕರ್ನಾಟಕ ಅಧಿನಿಯಮ 14)
(iv) ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ 12
(v) ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಮಳಗಳ ಮತ್ತು ಅವಶೇಷಗಳ ಅಧಿನಿಯಮ, 1961 ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು, 1965;
(vi) ಕರ್ನಾಟಕ ವಿಕ್ಷೇಪ ನಿಧಿ ಅಧಿನಿಯಮ, 1962 ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು, 1963;
(vii) ಪ್ರಾಚೀನ ಸ್ಮಾರಕಗಳು, ಪುರಾತತ್ವ ಸ್ಮಳಗಳು ಮತ್ತು ಅವಶೇಷಗಳ ಅಧಿನಿಯಮ, 1958 ಮತ್ತು ಪ್ರಾಚೀನ ಸ್ಮಾರಕಗಳು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ನಿಯಮಗಳು, 1959; ಮತ್ತು
(viii) ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ (ತಿದ್ದುಪಡಿ ಮತ್ತು ಮಾನ್ಯೀಕರಣ) ಅಧಿನಿಯಮ, 2010
(ಇ) ಭೂ ಬಳಕೆಯಲ್ಲಿ ಬದಲಾವಣೆ ಉಂಟಾಗುವ ನಿರ್ಮಾಣಗಳಿಗೆ ಅವಕಾಶ ನೀಡದಿರುವುದು ಮತ್ತು ಯಾವುದೇ ಅಪರಾಧ ಮಾಡಲು ಪ್ರಯತ್ನಿಸುವುದನ್ನು ಅಥವಾ ಅಪರಾಧ ಮಾಡಲು ಒಳಸಂಚು ರೂಪಿಸುವುದನ್ನು ಪತ್ತೆಹಚ್ಚುವುದು ಮತ್ತು ಅಂಥ ಅಪರಾಧದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸುವುದು, ತನಿಖೆ ಮಾಡುವುದು ಮತ್ತು ಕ್ರಮ ಜರುಗಿಸುವುದು.
(4) ಮಂಡಳಿಯು, ನಿರ್ಧರಿಸಬಹುದಾದಂ೦ತೆ, ಅವಶ್ಯಕತೆಯಿರುವ ಕಡೆಗಳಲ್ಲೆಲ್ಲಾ ಸ್ಮಾರಕಗಳ ಸುತ್ತಮುತ್ತ ಭದ್ರತಾ ದಳವು ರಾತ್ರಿಯ ವೇಳೆ ಗಸ್ತು ತಿರುಗುವಂತೆ ಮಾಡತಕ್ಕದ್ದು.
(5) ಭದ್ರತಾ ದಳವು, ಭಾರತ ಸರ್ಕಾರದ ಭಾರತೀಯ ಪುರಾತತ್ವ ಸರ್ವೇಕ್ಷಣಾದ ಭದ್ರತಾ ವಿಭಾಗ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ಸರ್ಕಾರ, ಸ್ಥಳೀಯ ಮಂಡಳಿ ಮತ್ತು ಇತರೆ ಸಂಬಂಧಪಟ್ಟ ಇಲಾಖೆಗಳೊಂದಿಗೂ ಸಹ ಸಮನ್ವಯ ಸಾಧಿಸತಕ್ಕದ್ದು ಮತ್ತು ಸಹಕಾರ ನೀಡತಕ್ಕದ್ದು.
(6) ಭದ್ರತಾ ದಳದ ಮುಖ್ಯಸ್ಮರು, ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974ರ (1974ರ ಕರ್ನಾಟಕ ಅಧಿನಿಯಮ 32) ಮೇರೆಗೆ ಕ್ರಮ ಕೈಗೊಳ್ಳುವುದಕ್ಕಾಗಿ, ಅಧಿನಿಯಮದ 31ನೇ ಪ್ರಕರಣದ (2) ನೇ ಉಪ- ಪ್ರಕರಣದ ಮೇರೆಗೆ ಸಕ್ಷಮ ಮಂಡಳಿ DOD ಘೋಷಿಸಲಾದ ಅಧಿಕಾರಿಯಾಗಿರತಕ್ಕದ್ದು.
(7) ಭದ್ರತಾ ದಳವು, ಭದ್ರತಾ ವಿಷಯಗಳ ಬಗ್ಗೆ ಕಾಲಕಾಲಕ್ಕೆ ತೆಗೆದುಕೊಳ್ಳಲಾದ ನಿರ್ಧಾರಗಳನ್ನು ಜಾರಿಗೊಳಿಸುವಲ್ಲಿ ಮಂಡಳಿಗೆ ನೆರವು ನೀಡತಕ್ಕದ್ದು.
(8) ಭದ್ರತಾ ದಳವು, ಸ್ಥಳೀಯ ಯೋಜನಾ ಪ್ರದೇಶದ ಸರಹದ್ದುಗಳನ್ನು ನಿರ್ವಹಿಸುವಲ್ಲಿ ಮಂಡಳಿಗೆ ನೆರವು ನೀಡತಕ್ಕದ್ದು.
(9) ನಿಯತಕಾಲಿಕ ವಿವರಪತ್ರಗಳು ಅಥವಾ ಪ್ರಗತಿ ವರದಿಗಳನ್ನು ಮಂಡಳಿಗೆ ಕಳುಹಿಸುವುದು ಭದ್ರತಾ ದಳದ ಮುಖ್ಯಸ್ಥರ ಕರ್ತವ್ಯವಾಗಿರತಕ್ಕದ್ದು.
(10) ಅಧಿನಿಯಮ ಮತ್ತು ನಿಯಮಗಳ ಉದ್ದೇಶಗಳನ್ನು ಸಾಧಿಸುವ ಸಲುವಾಗಿ, ಭದ್ರತಾ ದಳದ ಮುಖ್ಯಸ್ಥರು, ಭದ್ರತಾದಳವು ಯಾವಾಗಲೂ ಜಾಗರೂಕವಾಗಿರುವುದನ್ನು ಮತ್ತು ಅದರ ಸಿಬ್ಬಂದಿ ಮತ್ತು ಸಾವಗಿಗಳು ಸುಸ್ಥಿಶಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. 4. ರಾಜ್ಯಮಟ್ಟದ ಸಮಿತಿ. (1) ರಾಜ್ಯಮಟ್ಟದ ಸಮಿತಿಯ ಕಾರ್ಯಕಲಾಪಗಳ ಸಭೆಯನ್ನು, ಅಧ್ಯಕ್ಷರು ಅಥವಾ ಅಧ್ಯಕ್ಷರ ಯುಕ್ತ ಅನುಮೋದನೆ ಪಡೆದು ಸದಸ್ಯ ಕಾರ್ಯದರ್ಶಿಯವರು ಸಭೆಯನ್ನು ಕರೆಯತಕ್ಕದ್ದು. (2) ಸದಸ್ಯ-ಕಾರ್ಯದರ್ಶಿಯು, ಅಂಥ ಸಭೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ಮತ್ತು ಅಲ್ಲಿ ನಿರ್ವಹಿಸಬೇಕಾದ ಕಾರ್ಯಕಲಾಪಗಳ ಕಾರ್ಯಸೂಚಿಯನ್ನು ನಿರ್ದಿಷ್ಟಪಡಿಸುವ ಏಳು ದಿನಗಳ ಸಭಾ ಮಾಹಿತಿಯನ್ನು ಸಂಂಬಂಧಪಲ್ಟವರಿಗೆ ನೀಡತಕ್ಕದ್ದು.
(3) Bardo ಪಾಲನೆಗಾಗಿ, ಸಭೆಯಲ್ಲಿ ಹಾಜರಾದ ಸದಸ್ಯರ ಸಂಖ್ಯೆಯು ಒಟ್ಟು ಸಂಖ್ಯೆಯ ಮೂರನೇ ಒಂದರಷ್ಟಕ್ಕಿಂತ (1/3) ಕಡಿಮೆಯಿದ್ದರೆ, ಅಧ್ಯಕ್ಷರು, 15 ನಿಮಿಷಗಳವರೆಗೆ ಕಾಯ್ದ ನಂತರ, ಅಂಥ ಮುಂದಿನ ಗಂಟೆಗಳಿಗೆ ಅಥವಾ ನಂತರದ ದಿನದ ಅಥವಾ ಆತನು ಯುಕ್ತವಾಗಿ ನಿಗದಿಮಾಡಬಹುದಾದಂಥ ಮತ್ತೊಂದು ದಿನಕ್ಕೆ ಸಭೆಯನ್ನು ಮುಂ೦ದೂಡತಕ್ಕದ್ದು ಮತ್ತು ಅಂಥ ಸಭೆಯನ್ನು ಮುಂದಕ್ಕೆ ಹಾಕಿದ ಸೂಚನೆಯನ್ನು ಆದಷ್ಟು ಬೇಗನೇ ಸಂಬಂಧಪಟ್ಟ ಸದಸ್ಯರಿಗೆ ನೀಡತಕ್ಕದ್ದು ಮತ್ತು ಅಂಥ ಮುಂ೦ದೂಡಲಾದ ಸಭೆಯಲ್ಲಿ ಕೋರಂ ಇರುವ ಸಂದರ್ಭದಲ್ಲಿ, ಮೂಲ ಸಭೆಯ ಮುಂದೆ ಕೋರಂ ಇದ್ದರೆ ಯಾವ ವ್ಯವಹಾರಗಳನ್ನು ಮಂಡಿಸಬೇಕಾಗಿತ್ತೋ ಆ ವ್ಯವಹಾರಗಳನ್ನು ಮುಂದೂಡಿದ ಸಭೆಯ ಮುಂದೆ ಮಂಡಿಸತಕ್ಕದ್ದು ಮತ್ತು ಕೋರಂ ಇಲ್ಲದಿದ್ದರೂ ಸಹ ಅಂಥ ಸಭೆಯಲ್ಲಿ ಅವುಗಳನ್ನು ವಿಲೇ ಮಾಡಬಹುದು.
(4) ಅಧ್ಯಕ್ಷರು, ಪ್ರತಿಯೊಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳತಕ್ಕದ್ದು. ಯಾವುದೇ ಕಾರಣಗಳಿಗಾಗಿ ಅಧ್ಯಕ್ಷರು ಸಭೆಗೆ ಹಾಜರಾಗಲು ಆಗದಿದ್ದರೆ, ಸಭೆಯಲ್ಲಿ ಉಪಸ್ಥಿತರಿರುವ ಉಪಾಧ್ಯಕ್ಷರು ರಾಜ್ಯ ಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳತಕ್ಕದ್ದು.
(5) ಯಾರೇ ಸದಸ್ಯರು, ತಾನಾಗಿಯೇ ಅಥವಾ ಅವರ ಪಾಲುದಾರರು ಅಥವಾ ಸಂಬಂ೦ಧಿಕರು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಪಾಲು ಅಥವಾ ಹಿತಾಸಕ್ತಿಯನ್ನು ಹೊಂದಿರುವ ಅಂಥ ಯಾವುದೇ ವಿಷಯಗಳ ಕುರಿತು ಚರ್ಚೆಯಲ್ಲಿ ಭಾಗವಹಿಸತಕ್ಕದ್ದಲ್ಲ. ಅಥವಾ ಮತ ಚಲಾಯಿಸತಕ್ಕದ್ದಲ್ಲ.
(6) ರಾಜ್ಯಮಟ್ಟದ ಸಮಿತಿಯ ಸಭೆಯ ನಡವಳಿಗಳನ್ನು ದಾಖಲಿಸತಕ್ಕದ್ದು ಮತ್ತು ಅಧ್ಯಕ್ಷರ ಅನುಮೋದನೆಯನ್ನು ಪಡೆದುಕೊಂಡ ನಂತರ ಹದಿನೈದು ದಿನಗಳೊಳಗಾಗಿ ಸದಸ್ಯ ಕಾರ್ಯದರ್ಶಿಯು ಸಂ೦ಂಬಂಧಪಟ್ಟ ಸದಸ್ಯರಿಗೆ ಕಳುಹಿಸತಕ್ಕದ್ದು.
(7) ಯಾರೇ ಸದಸ್ಯ ನಡವಳಿಗಳ ದಾಖಲೆ, ಅಥವಾ ಅದರ ಯಾವುದೇ ಭಾಗವನ್ನು ಒಪ್ಪಿಕೊಳ್ಳ ದಿದ್ದರೆ, ಆತನು ಅಧ್ಯಕ್ಷರ ಗಮನಕ್ಕೆ ತರುವುದಕ್ಕಾಗಿ ಏಳು ದಿನಗಳೊಳಗಾಗಿ ಸದಸ್ಯ ಕಾರ್ಯದರ್ಶಿಯವರಿಗೆ ಅದರ ಬಗ್ಗೆ ತಿಳಿಸತಕ್ಕದ್ದು ಮತ್ತು ಅಧ್ಯಕ್ಷರು ಅದರ ಮೇಲೆ ತೆಗೆದುಕೊಳ್ಳುವ ತೀರ್ಮಾನವು ಅಂತಿಮವಾಗಿರತಕ್ಕದ್ದು.
(8) ಸದಸ್ಯ ಕಾರ್ಯದರ್ಶಿಯು, ನಡವಳಿಯ ದಾಖಲೆಗಳು ಮತ್ತು ಅದರ ತೀರ್ಮಾನಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆದಷ್ಟು ಬೇಗನೆ ಸರ್ಕಾರದ ಮುಂದೆ ಮಂಡಿಸತಕ್ಕದ್ದು.
(9) ಅಧ್ಯಕ್ಷರು, ಹಾಗೇ ಅಗತ್ಯವಾಗಿದ್ದರೆ ಮೂರು ದಿನಗಳ ನೋಟೀಸನ್ನು ನೀಡುವ ಮೂಲಕ ರಾಜ್ಯಮಟ್ಟದ ಸಮಿತಿಯ ವಿಶೇಷ ಸಭೆ ಅಥವಾ ತುರ್ತು ಸಭೆಯನ್ನು ಕರೆಯುವುದು. ವಿಶೇಷ ಅಥವಾ ತುರ್ತುಸಭೆಯನ್ನು ಕರೆದಾಗ 7ನೇ ನಿಯಮದ ಅಡಿಯಲ್ಲಿನ ಉಪಬಂಧಗಳನ್ನು ಅನುಸರಿಸತಕ್ಕದ್ದು.
ಮಂಡಳಿಯ ಅಧಿಕಾರಿಗಳ ಕರ್ತವ್ಯಗಳು