ಅಧಿನಿಯಮದ 14ನೇ ಪ್ರಕರಣದ (2) ನೇ ಉಪ-ಪ್ರಕರಣದ ಮೇರೆಗೆ ಗೊತ್ತುಪಡಿಸಲಾದ ಅಂಥ ಪ್ರಕಾರ್ಯಗಳ ಜೊತೆಗೆ ಈ ಮುಂದಿನ ಪ್ರಕಾರ್ಯಗಳನ್ನು ನಿರ್ವಹಿಸುವುದು ಆಯುಕ್ತರ ಕರ್ತವ್ಯವಾಗಿರತಕ್ಕದ್ದು, ಎಂದರೆ:-
(1) ಮಂಡಳಿಯ ಸಭೆಗಳನ್ನು ಕರೆಯುವುದು ಮತ್ತು ಅವುಗಳನ್ನು ನಿರ್ವಹಿಸುವುದು ಮತ್ತು ಸಭೆಗಳ ಸಂಕ್ಲಿಪ್ತ ಟಿಪ್ಪಣಿಗಳನ್ನು ಸಿದ್ಧಪಡಿಸುವುದು ಮತ್ತು ಮಂಡಳಿಯ ನಿರ್ಣಯಗಳನ್ನು ಕಾರ್ಯಗತಗೊಳಿಸುವುದು;
ಪರಂತೂ, ಆಯುಕ್ತರು, ಮಂಡಳಿಯ ಯಾವುದೇ ವಿರ್ಣಯವು ಅಧಿನಿಯಮದ ಅಥವಾ ಯಾವುದೇ ಇತರೆ ಕಾನೂನು ಅಥವಾ ಯಾವುದೇ ನಿಯಮ, ಅಧಿಸೂಚನೆ, ವಿನಿಯಮ ಅಥವಾ ಅಧಿನಿಯಮದ ಅಡಿಯಲ್ಲಿ ರಚಿಸಿದ ಅಥವಾ ಹೊರಡಿಸಿದ ಉಪ-ವಿಧಿ ಅಥವಾ ಸರ್ಕಾರವು ಹೊರಡಿಸಿದ ಯಾವುದೇ ಇತರ ಕಾನೂನು ಅಥವಾ ಆದೇಶವು ಮಂಡಳಿಯ ಅಂತೆಯೇ ಪರಂಪರೆಯ ಹಿತಾಸಕ್ತಿಗೆ ಪ್ರತಿಕೂಲವಾದ ಅಥವಾ ಬಾಧಕವಾದ ಯಾವುದೇ ಉಪಬಂಧಗಳನ್ನು ಉಲ್ಲಂಫಿಸಿದೆ ಎಂದು ಅಭಿಪ್ರಾಯಪಟ್ಟರೆ ಆತನು ವಿರ್ಣಯಗಳನ್ನು ಹೊರಡಿಸಿದ ಹದಿನೈದು ದಿನಗಳೊಳಗಾಗಿ ಸರ್ಕಾರದ ಆದೇಶವನ್ನು ಪಡೆಯಲು ಸರ್ಕಾರಕ್ಕೆ ವಿಷಯವನ್ನು ಕಳುಹಿಸತಕ್ಕದ್ದು ಮತ್ತು ಮುಂದಿನ ಸಭೆಯಲ್ಲಿ ತಾನು ತೆಗೆದುಕೊಂಡ ಕ್ರಮದ ಬಗ್ಗೆ ಮಂಡಳಿಗೆ ತಿಳಿಸತಕ್ಕದ್ದು ಮತ್ತು ಅಂಥ ನಿರ್ಣಯದ ಮೇಲೆ ಸರ್ಕಾರದ ಆದೇಶವನ್ನು ಪಡೆದುಕೊಳ್ಳುವವರೆಗೆ, ಆಯುಕ್ತರು ಅಂಥ ನಿರ್ಣಯವನ್ನು ಕಾರ್ಯರೂಪಕ್ಕೆ ತರಲು ಬದ್ಧರಾಗಿರತಕ್ಕದ್ದಲ್ಲ.
(2) ಮಂ೦ಡಳಿಯ ಸಭೆಗಳ ನಡವಳಿಗಳ ಅಥವಾ ವ್ಯವಹರಣೆಗಳ ಮತ್ತು ಸರ್ಕಾರವು ಕಾಲಕಾಲಕ್ಕೆ ತರಿಸಿಕೊಳ್ಳಬಹುದಾದ ಯಾವುದೇ ವಿವರಪಟ್ಟೆ ಅಥವಾ ಇತರೆ ಮಾಹಿತಿಯ ಒಂದು ಪ್ರತಿಯನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು;
(3) ಸರ್ಕಾರವು ನಿರ್ದೇಶಿಸಬಹುದಾದಂಥ ಯೋಜನೆಗಳು ಮತ್ತು ಕಾಮಗಾರಿಗಳನ್ನು ಕೈಗೊಳ್ಳುವುದು ಮತ್ತು ಕಾರ್ಯಗತಗೊಳಿಸುವುದು ಮತ್ತು ಅದರ ಅಗತ್ಯ ವೆಚ್ಚವನ್ನು ಭರಿಸುವುದು.
(4) ಕಾರ್ಯನಿರ್ವಾಹಕ ಆಡಳಿತದ ವಿಷಯಗಳಲ್ಲಿ ಭದ್ರತಾ ದಳವನ್ನು ಹೊರತುಪಡಿಸಿ ಮಂಡಳಿಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರ ಮೇಲ್ವಿಚಾರಣೆ ಮಾಡುವುದು ಮತ್ತು ವ್ಯವಹರಣೆಗಳನ್ನು ನಿಯಂತ್ರಿಸುವುದು ಮತ್ತು ಅಂಥ ಅಧಿಕಾರಿಗಳು ಮತ್ತು ನೌಕರರ ಸೇವೆ ಹಾಗೂ ಅವರ ವೇತನ, ವಿಶೇಷ ಸವಲತ್ತುಗಳು ಮತ್ತು ಭತ್ಯೆಗಳಿಗೆ ಸಂಬಂಧಪಟ್ಟ ಎಲ್ಲಾ ಪ್ರಶ್ನೆಗಳನ್ನು ವಿಲೇವಾರಿ ಮಾಡುವುದು;
(5) ಮಂಡಳಿಯ ಪತ್ರ ವ್ಯವಹಾರವನ್ನು ನಿರ್ವಹಿಸುವುದು ಮತ್ತು ನಡೆಸುವುದು;
(6) ಮಂಡಳಿಯ ಎಲ್ಲಾ ಅನುಮತಿಗಳನ್ನು, ಆದೇಶಗಳನ್ನು, ತೀರ್ಮಾನಗಳನ್ನು, ಸೂಚನೆಗಳನ್ನು ಮತ್ತು ಇತರೆ ದಸ್ತಾವೇಜುಗಳನ್ನು ಮತ್ತು ಮಂಡಳಿಯ ಆದೇಶಗಳನ್ನು ತಮ್ಮ ಸಹಿಯ ಮೂಲಕ ಅಧಿಪ್ರಮಾಣನಗೊಳಿಸುವುದು; ಮತ್ತು
(7) ಮಂಡಳಿಯ ಲೆಕ್ಕಪತ್ರಗಳು ಮತ್ತು ದಾಖಲೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನಿಯಂತ್ರಿಸುವುದು.