ಮಂಡಳಿಯು, ಅಧಿನಿಯಮದ 17ನೇ ಪ್ರಕರಣದ ಅಡಿಯಲ್ಲಿ ವಹಿಸಲಾದ ಪ್ರಕಾರ್ಯಗಳ ಜೊತೆಗೆ, ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು, ಈ ಮುಂದಿನ ಪ್ರಕಾರ್ಯಗಳನ್ನು ನಿರ್ವಹಿಸತಕ್ಕದ್ದು, ಎಂದರೆ,-
(1) ಮಂಡಳಿಯು, ಪಾರಂಪರಿಕ ಪ್ರದೇಶದೊಳಗಿನ ಎಲ್ಲಾ ಪುರಾತತ್ವ ನಿವೇಶನಗಳು ಮತ್ತು ಸ್ಮಾರಕಗಳು, ವಸ್ತುಗಳು ಮತ್ತು ಕಲಾಕೃತಿಗಳು, ಬಂಡೆಗಳು ಮತ್ತು ವೀರಿನ ವ್ಯವಸ್ಥೆಗಳು, ವನ್ಯಜೀವಿ, ಸಸ್ಯವರ್ಗ ಮತ್ತು ಇತರೆ ಪರಿಸರಗಳನ್ನು ಸಮಗ್ರ ನಿರ್ವಹಣೆ ಮಾಡುವುದಕ್ಕಾಗಿ ಉಪಬಂಧಿಸುವ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ತರುವಾಯ, ಪಾರಂಪರಿಕ ಪ್ರದೇಶವನ್ನು ಸಂರಕ್ಷಣೆ ಮಾಡುವ AY ವಿರ್ವಹಣಾ ಯೋಜನೆ ಅಥವಾ ಬೃಹತ್ ಯೋಜನೆಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಹಾಗೆ ಸಿದ್ಧಪಡಿಸಿದ ಯೋಜನೆಯನ್ನು ಅನುಷ್ಕಾನಗೊಳಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳತಕ್ಕದ್ದು ಮತ್ತು ಕಾರ್ಯವಿಧಾನ ಮತ್ತು ಪ್ರಕ್ರಿಯೆಯ ರೂಪುರೇಖೆಯನ್ನು ರೂಪಿಸತಕ್ಕದ್ದು. ಮತ್ತು ಕಾಲಕಾಲಕ್ಕೆ ಅದರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು.
(2) ಮಂಡಳಿಯು ಪುರಾತತ್ವದ ಪ್ರಮಿತಿಗಳೊಳಗೆ ಅವುಗಳ ನೈಸರ್ಗಿಕ ಅಭಿವ್ಯಕ್ತಿಗಳನ್ನು ಹೆಚ್ಚಿಸಿ ಹಾಗೆಯೇ ಅದನ್ನು ಸಂರಕ್ಷಿಸುವ ದೃಷ್ಟಿಯಿಂದ ಇತರೆ ಪರಿಸರಗಳ ಜೊತೆಗೆ ಇಡೀ ನೈಸರ್ಗಿಕ ಮತ್ತು ಪುರಾತತ್ವದೊಂದಿಗೆ ಆ ಸ್ಥಳದ ಇಡೀ ಭೂ ದೃಶ್ಯವನ್ನು ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು.
(3) ಮಂಡಳಿಯು, ಮೂಲಭೂತ ಅಗತ್ಯಗಳನ್ನು ಪೂರೈಸುವ ಮೂಲಕ ಮತ್ತು ಸಂದರ್ಶಕರು ಮತ್ತು ಪ್ರವಾಸಿಗರಿಗೆ ಸಾಕಷ್ಟು ಸೌಲಭ್ಯಗಳನ್ನು ಸೃಜಿಸುವ ಮೂಲಕ ಪ್ರವಾಸೋದ್ಯಮವನ್ನು ಬೆಂಬಲಿಸುವ ದೃಷ್ಟಿಯಿಂದ ಹಾಗೂ ನಾಗರಿಕ ಮೂಲಭೂತ ಸೌಕರ್ಯಗಳನ್ನು ಅವರಿಗೆ ಒದಗಿಸುವುದರ ಮೂಲಕ ಮತ್ತು ಅವರ ಅಗತ್ಯತೆಗಳನ್ನು ಪೂರೈಸುವ ಮೂಲಕ ಪಾರಂಪರಿಕ ಪ್ರದೇಶದ ಸ್ಥಳೀಯರ ಬಗ್ಗೆ ಸರಿಯಾದ ಕಾಳಜಿಯನ್ನು ವಹಿಸುವ ದೃಷ್ಟಿಯಿಂದಲೂ ಸಹ ಪುರಾತತ್ವ ಮಾನದಂಡಗಳಿಗೆ ಯುಕ್ತ ಗೌರವವನ್ನು ನೀಡುವುದರೊಂದಿಗೆ... ಪಾರಂಪರಿಕ ಪ್ರದೇಶದ ಭೂ ದೃಶ್ಯವನ್ನು ಅಭಿವೃದ್ಧಿ ಮಾಡಿಸತಕ್ಕದ್ದು.
(4) ಮಂಡಳಿಯು, ಭಾರತ ಪುರಾತತ್ವ ಸರ್ವೇಕ್ಷಣಾ ಇಲಾಖೆಯೊಂದಿಗೆ ಅದರ ಕಾರ್ಯಚಟುವಟಿಕೆಗಳಲ್ಲಿ ಮತ್ತು ತಮ್ಮ ಆಯಾಯ ಅಧಿಕಾರ ವ್ಯಾಪ್ತಿಯೊಳಗಿನ ಪುರಾತತ್ವ ಸ್ಥಳಗಳು, ಸ್ಮಾರಕಗಳ ನಿರ್ವಹಣೆ ಮತ್ತು ಉಸ್ತುವಾರಿಯಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯೊಂದಿಗೆ (ಡಿಎಎಂಐಎಚ್) ಸಮನ್ಹಯ ಸಾಧಿಸತಕ್ಕದ್ದು.