(1) ಮಂಡಳಿಯು, ಪ್ರತಿಯೊಂದು ಹಣಕಾಸು ವರ್ಷಕ್ಕೆ ಮುಂದಿನ ವರ್ಷದ ಜೂನ್ 30 ರ ಮೊದಲು ನಮೂನೆ-1 ರಲ್ಲಿ ತನ್ನ ವಾರ್ಷಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
(2) ವರದಿಯು, ಹಣಕಾಸಿನ ವರ್ಷದ ಅವಧಿಯಲ್ಲಿ ಮಂಡಳಿಯ ಕಾರ್ಯಚಟುವಟಿಕೆಗಳು, ಹಣಕಾಸಿನ ಪರಿಸ್ಥಿತಿ, ಅಧಿಕಾರಿಗಳು ಮತ್ತು ಸಿಬ್ಬಂದಿ, ಸರ್ಕಾರವು ಕಳುಹಿಸಿದ ವಿಷಯಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ಒಳಗೊಂಡಿರತಕ್ಕದ್ದು.
(3) ವರದಿಯು, ರಾಜ್ಯ ಮಟ್ಟದ ಸಮಿತಿಯ ನಡವಳಿಗಳ ಸಾರಾಂಶವನ್ನು ಸಹ ಒಳಗೊಂಡಿರತಕ್ಕದ್ದು.