(1) ಮಂಡಳಿಯು, ಆಯವ್ಯಯದಲ್ಲಿ ಒಳಗೊಂಡ ಧನವಿನಿಯೋಗಗಳು.. ಮತ್ತು ಮಾರ್ಗೋಪಾಯಗಳನ್ನು ವಿರ್ಧರಿಸತಕ್ಕದ್ದು. ಮಂಡಳಿಯು ಹೊರಡಿಸಿದ ಆಯವ್ಯಯ ಪತ್ರದ ಮೂರು ಪ್ರತಿಗಳನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು.
(2) ಇತರ ವಿಷಯಗಳ ಜೊತೆಗೆ ಅಂಥ ಆಯವ್ಯಯ ಅಂದಾಜಿನಲ್ಲಿ ಮಂಡಳಿಯು,-
(ಎ) ಈ ಅಧಿನಿಯಮ ಮತ್ತು ಈ ವಿಯಮಗಳ ಮೂಲಕ ಮಂಡಳಿಗೆ ವಿಧಿಸಿದ ವಿವಿಧ ಸುಂಕಗಳ ಪೂರೈಕೆಗಾಗಿ ಅಗತ್ಯಪಡಿಸಬಹುದಾದಂಥ ಸೇವೆಗೆ ಸಾಕಷ್ಟು ಮತ್ತು ಸೂಕ್ತವಾದ ಉಪಬಂಧಗಳನ್ನು ರಚಿಸತಕ್ಕದ್ದು;
(ಬಿ) ,. ಮಂಡಳಿಯು, ತಾನು ಮಾಡಿಕೊಂಡ ಸಾಲಗಳ ಸಂಬಂಧದಲ್ಲಿ ಹೊಣೆಯಾಗಬಹುದಾದ ಬಾಕಿಯಿರುವ ಅಸಲು ಮತ್ತು ಬಡ್ಡಿಯ ಎಲ್ಲಾ ಕಂತುಗಳನ್ನು ಪಾವತಿಸುವುದಕ್ಕಾಗಿ ಉಪಬಂಧ ಕಲ್ಪಿಸತಕ್ಕದ್ದು.
(A) ಮಂಡಳಿಯು, ತಾನು ಆ ಸರ್ಕಾರ ಮತ್ತು ಇತರೆ ಸರ್ಕಾರಿ ಏಜೆನ್ಸಿಗಳಿಗೆ ಸಂದಾಯ ಮಾಡುವುದಕ್ಕಾಗಿ ಹೊಣೆಯಾಗಬಹುದಾದ ಎಲ್ಲಾ ಮೊತ್ತಗಳನ್ನು ಸಂದಾಯ ಮಾಡುವುದಕ್ಕೆ ಉಪಬಂಧ ಕಲ್ಪಿಸತಕ್ಕದ್ದು; ಮತ್ತು
(ಡಿ) ಮೂರು ತಿಂಗಳುಗಳ ಅವಧಿಗೆ ಸಿಬ್ಬಂದಿ ಶುಲ್ಕಗಳನ್ನು ಭರಿಸುವುದಕ್ಕಾಗಿ ಅಗತ್ಯಪಡಿಸಬಹುದಾದಂಥ ಮೊತ್ತಕ್ಕಿಂತ ಕಡಿಮೆಯಿಲ್ಲದ ಮೊತ್ತವನ್ನು ಸದರಿ ವರ್ಷದ ಕೊನೆಯಲ್ಲಿ ಉಳಿಕೆಯನ್ನು ಇರಿಸುವುದಕ್ಕಾಗಿ ಅನುಮತಿಸತಕ್ಕದ್ದು.