(1) ಮಂಡಳಿಯು, ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಅನುಸಾರವಾಗಿ ಅಗತ್ಯ ಪಡಿಸಬಹುದಾದ ಯಾವುದೇ ಮೊತ್ತವನ್ನು ಅಧಿನಿಯಮದ ಮೂಲಕ ಅಥವಾ ಅದರಡಿಯಲ್ಲಿ ಅಧಿಕೃತಗೊಳಿಸಿದ ಎಲ್ಲಾ ಭದ್ರತೆ ಅಥವಾ ಯಾವುದೇ ಶುಲ್ಕಗಳು ಮತ್ತು ಬಾಕಿಗಳ ಮೇಲೆ ಸಾಲ, ಸಾಲಪತ್ರ ಅಥವಾ ಅನ್ಯಥಾ ಸಾಲವನ್ನು ಪಡೆಯಬಹುದು.
(ಎ) ವಿರ್ಮಾಣ ಕಾಮಗಾರಿಗಳಿಗಾಗಿ;
(ಬಿ) ಭೂಮಿ ಮತ್ತು ಕಟ್ಟಡಗಳ ಸ್ವಾಧೀನತೆಗಾಗಿ; ಅಥವಾ (A) ಸರ್ಕಾರಕ್ಕೆ ಯಾವುದೇ ಯಣವನ್ನು ಸಂದಾಯ ಮಾಡಲು; ಅಥವಾ
(ಡಿ) ಅಧಿನಿಯಮ ಅಥವಾ ಈ ಹಿಂದೆ ಜಾರಿಯಲ್ಲಿದ್ದ ಯಾವುದೇ ಇತರೆ ಕಾನೂನಿನ ಅಡಿಯಲ್ಲಿ ಹಿಂದೆ ಪಡೆದ ಸಾಲವನ್ನು ಮರುಪಾವತಿಸಲು,
ಪರಂತು,-
(i) ಸರ್ಕಾರದ ಪೂರ್ವ ಮಂ೦ಜೂರಾತಿ ಇಲ್ಲದೆ ಸಾಲವನ್ನು ಪಡೆಯತಕ್ಕದ್ದಲ್ಲ, ಮತ್ತು
(ii) ಸಾಲದ ಮೊತ್ತ, ಬಡ್ಡಿಯ ದರ ಮತ್ತು ಆರಂಭವಾದ ದಿನಾಂಕವನ್ನು ಒಳಗೊಂಡಂ೦ತೆ ನಿಬಂಧನೆಗಳು, ಮರುಪಾವತಿಯ ಸಮಯ ಮತ್ತು ವಿಧಾನ ಮತ್ತು ಇತರೆ ವಿಷಯಗಳು ಸರ್ಕಾರದ ಅನುಮೋದನೆಗೆ ಒಳಪಟ್ಟೆರತಕ್ಕದ್ದು;
(2) (1)ನೇ ಉಪ ನಿಯಮದ ಮೇರೆಗೆ ಯಾವುದೇ ಹಣದ ಮೊತ್ತವನ್ನು ಸಾಲ ಪಡೆಯುವಾಗ,.-
(ಎ) ಅದರ ಯಾವುದೇ ಭಾಗವನ್ನು ಸರ್ಕಾರದ ಪೂರ್ವ ಮಂ೦ಜೂರಾತಿಯಿಲ್ಲದೆ, ಯಾವ ಉದ್ದೇಶಕ್ಕಾಗಿ ಸಾಲಪಡೆಯಲಾಗಿತ್ತೋ ಆ ಉದ್ದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ವಿನಿಯೋಗಿಸತಕ್ಕದ್ದಲ್ಲ;
(ಬಿ) 1)ನೇ ಉಪ-ನಿಯಮದ (ಎ) ಖಂಡದ ಮೇರೆಗೆ ಸಾಲ ಪಡೆದ ಹಣದ ಯಾವುದೇ ಮೊತ್ತದ ಭಾಗವನ್ನು ಯಾವ ನಿರ್ಮಾಣ ಕಾಮಗಾರಿಗಳಿಗಾಗಿ ಪ್ರತ್ಯೇಕವಾಗಿ ಬಳಸುವುದಕ್ಕೆ ಸಾಲವನ್ನು ಪಡೆಯಲಾಗಿತ್ತೋ ಅದಕ್ಕಾಗಿ ಅಲ್ಲದೆ ಮಂಡಳಿಯ ಅಧಿಕಾರಿಗಳು ಅಥವಾ ನೌಕರರಿಗೆ ಸಂಬಳಗಳು ಅಥವಾ ಭತ್ಯೆಗಳನ್ನು ಸಂದಾಯ ಮಾಡುವುದಕ್ಕೆ ವಿವಿಯೋಗಿಸತಕ್ಕದ್ದಲ್ಲ;
(ಸಿ) ಲೆಕ್ಕಪತ್ರಗಳಲ್ಲಿನ ಪ್ರತಿಯೊಂದು ತಿದ್ದುಪಡಿ ಅಥವಾ ಮಾರ್ಪಾಡುಗಳನ್ನು ಮೂಲ ನಮೂದಿನಲ್ಲಿ ಒಂದು ಗೆರೆಯನ್ನು ಎಳೆಯುವ ಮೂಲಕ) ಕೆಂಪು ಶಾಯಿಯಲ್ಲಿ ಅಚ್ಚುಕಟ್ಟಾಗಿ ಮಾಡತಕ್ಕದ್ದು, ಮತ್ತು ಲೆಕ್ಕಪತ್ರ ಅಧಿಕಾರಿಯವರ ಕಿರು ಸಹಿಯ ಮೂಲಕ ದೃಢೀಕರಿಸತಕ್ಕದ್ದು. ಪುಸ್ತಕಗಳು ಮತ್ತು ವೋಚರುಗಳಲ್ಲಿನ ಎಲ್ಲಾ ತಿದ್ದುಪಡಿಗಳು ಮತ್ತು ಮಾರ್ಪಾಡುಗಳನ್ನು ಅದೇ ರೀತಿಯಲ್ಲಿಯೇ ದೃಡೀಕರಿಸತಕ್ಕದ್ದು. ರಬ್ಬರ್, ವೈಟ್ನರ್ಗಳನ್ನು ಸಂಪೂರ್ಣವಾಗಿ ವಿಷೇಧಿಸತಕ್ಕದ್ದು ಮತ್ತು ಯುಕ್ತವಾಗಿ ದೃಢೀಕರಿಸದ ಹೊರತು, ರಬ್ಬರ್ ಅಥವಾ ವೈಟ್ನರ್ಗಳನ್ನು ಬಳಸಿದ ಯಾವುದೇ ದಸ್ತಾವೇಜನ್ನು ಅಂಗೀಕರಿಸತಕ್ಕದ್ದಲ್ಲ; ಮತ್ತು
(ಡಿ) ಮಂಡಳಿಯ ಕಚೇರಿಯಲ್ಲಿ ಸ್ವೀಕರಿಸಿದ ಅಥವಾ ಮಂಡಳಿಗೆ ಜಮೆ ಮಾಡುವುದಕ್ಕೆ ಯಾವುದೇ ಬ್ಯಾಂಕಿಗೆ ಸಂದಾಯವಾದ ಎಲ್ಲಾ ಮೊತ್ತಗಳನ್ನು ಸಮುಚಿತವಾದ ಶೀರ್ಷಿಕೆಯ ಅಡಿಯಲ್ಲಿ ಇರುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು ಮತ್ತು ದಾಖಲೆಗಳಿಗೆ ಲೆಕ್ಕಪತ್ರಗಳ ಅಧಿಕಾರಿ ಮತ್ತು ಮಂಡಳಿಯ ಆಯುಕರು ಕಿರು ಸಹಿ ಹಾಕತಕ್ಕದ್ದು.
(3) ಯಾವುದೇ ಬಿಲ್ಲುಗಳು, ಪ್ರಯಾಣ ವೆಚ್ಚದ ಬಿಲ್ಲುಗಳು ಮತ್ತು ಸಾದಿಲ್ದಾರು ಬಿಲ್ಲುಗಳನ್ನು ತಯಾರಿಸಿ ಮತ್ತು ವಿಯಂತ್ರಿಸುವಾಗ, ರಾಜ್ಯ ಆರ್ಥಿಕ ಸಂಹಿತೆಯಲ್ಲಿ ಮತ್ತು ರಾಜ್ಯ ಖಜಾನೆ ಸಂಹಿತೆಯಲ್ಲಿ ಒಳಗೊಂಡಿರುವ ನಿಯಮಗಳು ಅನ್ವಯವಾಗತಕ್ಕದ್ದು.
(4) ಅಂಚೆ ಚೀಟಿಗಳನ್ನು ಮಂಡಳಿಯ ಕಛೇರಿಯಲ್ಲಿ ಬಳಸುವುದಕ್ಕಾಗಿ ಖರೀದಿಸತಕ್ಕದ್ದು ಮತ್ತು ನೀಡತಕ್ಕದ್ದು. Woe ಚೀಟಿಗಳ ಚಾರ್ಜುಗಳನ್ನು ಪ್ರತ್ಯೇಕ ಸಾದಿಲ್ದಾರು ಬಿಲ್ಲುಗಳಲ್ಲಿ ತೆಗೆಯತಕ್ಕದ್ದು.
(5) ವೆಚ್ಚಗಳನ್ನು ಈ ಮುಂದಿನ ಮುಖ್ಯ ಮತ್ತು ಉಪ ಶೀರ್ಷಿಕೆಗಳ ಅಡಿಯಲ್ಲಿ ವರ್ಗೀಕರಿಸತಕ್ಕದ್ದು; ಎಂದರೆ:-
| ಮುಖ್ಯ ಶೀರ್ಷಿಕೆ | ಉಪ ಶೀರ್ಷಿಕೆ |
| (ಎ) ಅಧ್ಯಕ್ಷ ಮತ್ತು ಸದಸ್ಯರುಗಳಿಗೆ ಭತ್ಯೆ ಮತ್ತು ಶುಲ್ಕಗಳು | ಮಂಡಳಿಯ ಅಧ್ಯಕ್ಷ ಅಥವಾ ಸದಸ್ಯರುಗಳಿಗೆ ಭತ್ಯೆಗಳು ಅಥವಾ ಶುಲ್ಕಗಳು |
| (ಬಿ) ಸಿಬ್ಬಂದಿ ವೇತನ | (i) ಆಯುಕ್ತರ ವೇತನ (ii) ಸಿಬ್ಬಂದಿ ವೇತನ |
| (ಸಿ) ಭತ್ಯೆಗಳು | (i) ಪ್ರಯಾಣ ಭತ್ಯೆ (ii) ಇತರೆ ಭತ್ಯೆಗಳು |
| (ಡಿ) ಸಾದಿಲ್ದಾರುಗಳು | (i) ಬಾಡಿಗೆ ದರಗಳು ಮತ್ತು ತೆರಿಗೆಗಳು (ii) ಅಂಚೆಚೀಟಿಗಳು ಮತ್ತು ಟಿಲಿಗ್ರಾಂಗಳು (iii) ಲೇಖನ ಸಾಮಗ್ರಿಗಳು (iv) ಪುಸ್ತಕಗಳು ಮತ್ತು ನಿಯತಕಾಲಿಕೆಗಳು (v) ವಿದ್ಯುತ್ ಮತ್ತು ದೀಪದ ವೆಚ್ಚಗಳು |
| (vi) ದೂರವಾಣಿ ವೆಚ್ಚಗಳು (vii) ಮುದ್ರಣ ವೆಚ್ಚಗಳು (viii) ಪೀಠೋಪಕರಣಗಳು (ix) ಇತರೆ | |
| (ಇ) ಕಾನೂನು ವೆಚ್ಚಗಳು | (i) ವಕೀಲರ ಶುಲ್ಕಗಳು (ii) ಸ್ಥ್ಯಾಂಪು ವೆಚ್ಚಗಳು (iii) ನ್ಯಾಯಾಲಯ ಶುಲ್ಕಗಳು |
| (ಎಫ್) ಸಾಲಗಳು ಮತ್ತು ಮುಂಗಡಗಳು | (i) ಸಾಲಗಳ ಮರುಪಾವತಿ (ii) ಸಾಲಗಳ ಮೇಲಿನ ಬಡ್ಡಿ (iii) ಸಾಲಗಳು ಮತ್ತು ಮುಂಗಡಗಳು |
| (ಜಿ) ಇತರ ಶುಲ್ಕಗಳು | (i) ಅನುದಾನಗಳು ಮತ್ತು ವಿದ್ಯಾರ್ಥಿ ವೇತನಗಳು (ii) ಸಾಲಗಳು ಮತ್ತು ಕಟ್ಟಡಗಳ ಮೇಲೆ ಬೃಹತ್ ಖರ್ಚು (iii) ನಿರ್ವಹಣೆ ಮತ್ತು ರಿಪೇರಿಗಳು (iv) ಡಿಬೆಂಚರುಗಳು, ಸ್ಟಾಕ್ ಅಥವಾ ಇತರ ಅಮೂಲ್ಯ ವಸ್ತುಗಳ ಖರೀದಿ |