(1) ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) “ಸಾಲಗಾರ” ಎಂದರೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂ೦ಸ್ಥೆಗಳು ಅಥವಾ ಲೇವಾದೇವಿದಾರರಿಂದ ಮೌಖಿಕ ಅಥವಾ ಲಿಖಿತ ಕರಾರಿನಡಿ ಷರತ್ತುಗಳು ಮತ್ತು ವಿಬಂಧನೆಗಳೊಂದಿಗೆ, ಯಾವುದೇ ಉದ್ದೇಶಕ್ಕಾಗಿ ಸಾಲದ ರೂಪದಲ್ಲಿ ಹಣವನ್ನು ಪಡೆಯುವ, ಆ ಹಣವನ್ನು ಕೆಲವು ಕಾಲಾವಧಿಯೊಳಗೆ ಮರುಪಾವತಿಸತಕ್ಕ ವ್ಯಕ್ತಿ ಅಥವಾ ಸ್ವಸಹಾಯ ಗುಂಪು (SHG) ಅಥವಾ ಜಂಟಿ ಹೊಣೆಗಾರಿಕೆ ಗುಂಪು 0೬6) ಅಥವಾ ವ್ಯಕ್ತಿಗಳ ಗುಂಪು;
(ಬಿ) "ಬಲವಂತದ ಕ್ರಮ” ಎಂದರೆ 8ನೇ ಪ್ರಕರಣದಲ್ಲಿ ವಿವರಿಸಲಾದ ಬಲವಂತದ ಕ್ರಮ;
(A) “ಬಡ್ಡಿ” DOWD) ಈ ಅಧ್ಯಾದೇಶದ ಉಪಬಲಂಧಗಳಡಿ ಪರಿಭಾಷಿಸಿದ ನಿಬಂಧನೆಗಳ ಉದ್ದೇಶಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು. ಅಥವಾ ಲೇವಾದೇವಿದಾರರಿಂದ ನಗದು ಅಥವಾ ಸಂದರ್ಭಾನುಸಾರವಾಗಿ ವಸ್ತುರೂಪದಲ್ಲಿ ಸಾಲಗಾರನಿಗೆ ನೀಡಿದ ಮೊತ್ತದ ಮೇಲಿನ ಲಾಭ ಹಾಗೂ ಅದು ದಿನಕ್ಕೆ, ವಾರಕ್ಕ, ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ವಿಧಿಸಲಾದ ಬಡ್ಡಿಯನ್ನು ಒಳಗೊಳ್ಳುವುದು;
(ಡಿ) “ಸಾಲ” ಎಂದರೆ ಸಾಲಗಾರನಿಗೆ ಬಡ್ಡಿಯ ಮೇರೆಗೆ ಖಚಿತವಾಗಿ ಅಥವಾ ಅನ್ಯಥಾ ನೀಡಲಾದ ಹಣದ ರೂಪದಲ್ಲಿನ ಅಥವಾ ಬೀಜ, ಗೊಬ್ಬರ, ಇತ್ಯಾದಿಗಳಂತಹ ವಸ್ತುರೂಪದಲ್ಲಿನ ಮುಂಗಡ ಅಥವಾ ಕೈಸಾಲ;
(ಇ) “ಲೇವಾದೇವಿದಾರ” ಎಂಬುದು ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ ಸಂಸ್ಥೆಗಳನ್ನು ಒಳಗೊಳ್ಳುವುದು ಹಾಗೂ ದಿನಕ್ಕೆ, ವಾರಕ್ಕೆ, ತಿಂಗಳಿಗೆ ಅಥವಾ ವರ್ಷದ ಆಧಾರದಲ್ಲಿ ಬಡ್ಡಿಯನ್ನು ವಿಧಿಸುವ ಮೂಲಕ ಲಾಭವನ್ನು ಗಳಿಸಲು ನಗದು ಅಥವಾ ವಸ್ತುರೂಪದಲ್ಲಿ ಸಾಲ ನೀಡುವ ಅಥವಾ ಯಾವುದೇ ಸ್ವರೂಪದ ಹಣಕಾಸು ನೆರವು ನೀಡುವುದನ್ನು ಪ್ರಧಾನ ಅಥವಾ ಪ್ರಾಸಂಗಿಕ ಚಟುವಟಿಕೆಯಾಗಿಸಿಕೊಂಡ ಯಾವುದೇ ಪಾಲುದಾರ ಫರ್ಮು ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳ HOB ಅಥವಾ ಡಿಜಿಟಲ್ ಸಾಲನೀಡಿಕೆ ಪ್ಲಾಟ್ಫಾರ್ಮ್;
(ಎಫ್) “ನೋಂದಣಿ ಪ್ರಾಧಿಕಾರಿ” ಎಂದರೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ:
BOOS) ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಅಂಥ ಇತರ ಗೊತ್ತುಪಡಿಸಿದ ಅಧಿಕಾರಿಯನ್ನು ನೋಂದಣಿ ಪ್ರಾಧಿಕಾರಿ ಎಂದು ನೇಮಿಸಬಹುದು;
(ಜಿ) “ಸಮಾಜದ ದುರ್ಬಲ ವರ್ಗ” ಎಂದರೆ ರೈತರು, ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳು, ಕೃಷಿ ಕಾರ್ಮಿಕರು, ಕಾರ್ಮಿಕರು, ಬೀದಿ ವ್ಯಾಪಾರಿಗಳು, ಒಂದು ಸ್ಥಳದಿಂದ ಮತ್ತೊಂದು ಸ್ಮಳಕ್ಕೆ ಚಲಿಸುವ ಇತರ ವ್ಯಾಪಾರಿಗಳು, ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಅವರ ಮೂಲ ಸೇವೆಗಳಿಗೆ ಕುಗ್ಗಿರುವ ಪ್ರವೇಶಾವಕಾಶದ ಮತ್ತು ಮುಖ್ಯವಾಗಿ ಆರೋಗ್ಯ, ವಸತಿ ನೈರ್ಮಲ್ಯ ಇತ್ಯಾದಿಗಳ ಅಂತರ್ನಿಹಿತ ನಿರ್ಣಾಯಕತೆಗಳ (underlying determinants) ಕಾರಣದಿಂದಾಗಿ ಇತರರಿಗೆ ಹೋಲಿಸಿದಲ್ಲಿ ಅನನುಕೂಲತೆಯಿರುವ ಜನರ MOB ಮತ್ತು ಆರ್ಥಿಕವಾಗಿ ಹಿಂದುಳಿದ, ನಿಯತ ಆದಾಯದ ಮೂಲವಿಲ್ಲದೆ ಜೀವನೋಪಾಯದ ಮಾದರಿಗಳಲ್ಲಿ ಕೆಳಮಟ್ಟದಲ್ಲಿರುವವರು.
(2) ಈ ಅಧ್ಯಾದೇಶದಲ್ಲಿ ಬಳಸಿರುವ ಆದರೆ ಪರಿಭಾಷಿಸದಿರುವ ಪದಗಳು, ಸಂಬಂಧಪಟ್ಟ ಅಧಿನಿಯಮಗಳು ಮತ್ತು ಅದರಡಿ ರಚಿಸಿದ ನಿಯಮಗಳಲ್ಲಿ ಅನುಕ್ರಮವಾಗಿ ಅವುಗಳಿಗೆ ನೀಡಲಾದ ಅವೇ ಅರ್ಥಗಳನ್ನು ಹೊಂದಿರತಕ್ಕದ್ದು.