ಈ ಅಧ್ಯಾದೇಶದ ಉಪಬಂ೦ಧಗಳಡಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಭಾರತೀಯ ನ್ಯಾಯ ಸಂಹಿತೆ, 2023ರ 2ನೇ ಪ್ರಕರಣದ (28ನೇ ಉಪಪ್ರಕರಣದ ಅರ್ಥವ್ಯಾಪ್ತಿಯೊಳಗೆ ಲೋಕನೌಕರನೆಂದು ಭಾವಿಸತಕ್ಕದ್ದು. 14. ಲೈಸೆನ್ಸುರಹಿತ ಮತ್ತು ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ AOA NM ಅಥವಾ ಲೇವಾದೇವಿದಾರರ ಮೂಲಕ ಬಲವಂತದ ಕ್ರಮದಿಂದ ಸಾಲಗಾರನಿಗೆ ಪರಿಹಾರ (relief)- ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಅಥವಾ ಯಾವುದೇ ಅಂಥ ಕಾನೂನಿನ ಮೂಲಕ ಜಾರಿಯಲ್ಲಿರುವ ಕರಾರಿನಲ್ಲಿ ಅಥವಾ ಲಿಖಿತಪತ್ರದಲ್ಲಿ ಏನೇ ಒಳಗೊಂಡಿದ್ದರೂ ಮತ್ತು ಈ ಅಧ್ಯಾದೇಶದಲ್ಲಿ ಅನ್ಯಥಾ ಸ್ಪಷ್ಟವಾಗಿ ಉಪಬಂ೦ಧಿಸಿದುದನ್ನುಳಿದು, ಈ ಪ್ರಕರಣದ ಪ್ರಾರಂಭದ ದಿನಾಂಕದಿಂದ ಜಾರಿಗೆ ಬರುವಂತೆ,- (ಎ) ಈ ಪ್ರಕರಣದ ಪ್ರಾರಂಭಕ್ಕೆ ಮೊದಲು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ನೋಂದಾಯಿತವಲದಿದ್ದರೆ ಮತ್ತು ಲೈಸೆನ್ಸುರಹಿತವಾಗಿದ್ದರೆ, ಸಾಲಗಾರನು ಪಾವತಿಸಬೇಕಾದ, ಯಾವುದಾದರೂ ಬಡ್ಡಿಯ ಮೊತ್ತವಿದ್ದಲ್ಲಿ ಅದನ್ನೂ ಒಳಗೊಂಡಂತೆ “ಸಮಾಜದ ದುರ್ಬಲ ವರ್ಗದವರಿಗಾಗಿ” ಮುಂಗಡ ನೀಡಿದ ಪ್ರತಿಯೊಂದು ಸಾಲವನ್ನು ಸಂಪೂರ್ಣವಾಗಿ ತೀರಿಕೆಯಾಗಿದೆಯೆಂದು ಭಾವಿಸತಕ್ಕದ್ದು;
(ಬಿ) ಯಾವುದಾದರೂ ಬಡ್ಡಿಯಿದ್ದಲ್ಲಿ ಅದನ್ನೂ ಒಳಗೊಂಡಂ೦ತೆ ಅಂಥ ಸಾಲದ ಯಾವುದೇ ಮೊತ್ತದ ವಸೂಲಾತಿಗಾಗಿ ಸಾಲಗಾರನ ವಿರುದ್ಧ ಯಾವುದೇ ದಾವೆ ಅಥವಾ ವ್ಯವಹರಣೆಯನ್ನು ಯಾವುದೇ ನ್ಯಾಯಾಲಯವು ಪುರಸ್ಕರಿಸತಕ್ಕದ್ದಲ್ಲ:
BOOS) ಸಾಲಗಾರ ಮತ್ತು ಯಾರೇ ಇತರ ವ್ಯಕ್ತಿಯ ವಿರುದ್ಧ ಜಂಟಿಯಾಗಿ ದಾವೆ ಅಥವಾ ವ್ಯವಹರಣೆಯನ್ನು ಹೂಡಲಾಗಿದ್ದರೆ, ಈ ಪ್ರಕರಣದಲ್ಲಿ ಇರುವುದಾವುದೂ ಅಂಥ ಇತರ ವ್ಯಕ್ತಿಗೆ ಅದು ಸಂಬಂಧಿಸಿರುವಷ್ಟರ ಮಟ್ಟಿಗೆ ದಾವೆ ಅಥವಾ ವ್ಯವಹರಣೆಯ ಪುರಸ್ಕರಣೆಯು (maintainability) ಅನ್ವಯವಾಗತಕ್ಕದ್ದು.
(ಸಿ) ಯಾವುದೇ ಸಾಲದ ವಸೂಲಾತಿಗಾಗಿ ಯಾರೇ ಸಾಲಗಾರನ ವಿರುದ್ಧ ಸದರಿ ದಿನಾಂಕದಂದು ಬಾಕಿಯಿರುವ ಎಲ್ಲಾ ದಾವೆಗಳು ಮತ್ತು ವ್ಯವಹರಣೆಗಳು (ಅಪೀಲುಗಳು, ಪುನರೀಕ್ಷಣೆಗಳು, ಜಫಪ್ತಿಗಳು.. ಅಥವಾ ಅಮಲ್ಮಾರಿ ವ್ಯವಹರಣೆಗಳನ್ನು ಒಳಗೊಂಡು) ಕೊನೆಗೊಳ್ಳತಕ್ಕದ್ದು.