ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು, . ಸಾಲಗಾರರಿಂದ ಹಣ ವಸೂಲಾತಿಗಾಗಿ ಸ್ವತಃ ಅಥವಾ ಅದರ ಏಜೆಂಟರ ಮೂಲಕವಾಗಲಿ ಯಾವುದೇ ಇತರ ಬಲವಂತದ ಕ್ರಮವನ್ನು ಬಳಸತಕ್ಕದ್ದಲ್ಲ ಮತ್ತು ಬಲವಂತ ವಸೂಲಾತಿಯ ಯಾವುದೇ ಸ್ವರೂಪಕ್ಕಾಗಿ ಈ ಅಧ್ಯಾದೇಶದ ಉಪಬಂ೦ಧಗಳಡಿ ದಂಡನೆಗೆ ಹೊಣೆಯಾಗತಕ್ಕದ್ದು ಹಾಗೂ ಈ ಅಧ್ಯಾದೇಶದ ಮೇರೆಗೆ ಉಪಬಂಧಿಸಲಾದಂ೦ತೆ ಅಂಥ ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನ ನೋಂದಣಿಯನ್ನು ಅಮಾನತ್ತುಪಡಿಸಲು ಅಥವಾ ರದ್ದುಪಡಿಸಲು ನೋಂದಣಿ ಪ್ರಾಧಿಕಾರಿಯು ಅಧಿಕಾರವುಳ್ಳವನಾಗಿರತಕ್ಕದ್ದು.
ವಿವರಣೆ: ಈ ಪ್ರಕರಣದ ಉದ್ದೇಶಗಳಿಗಾ , ಮೈಕ್ರೋ ಫೈನಾನ್ಸ್ ಸಂಸ್ಥೆಯ (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನ ಮೂಲಕ ಸಾಲಗಾರರ ವಿರುದ್ಧದ “ಬಲವಂತದ ಕ್ರಮ”ವು ಈ ಮುಂದಿನವುಗಳನ್ನು ಒಳಗೊಳ್ಳುವುದು, ಎಂದರೆ:-
(i) ಸಾಲಗಾರರನ್ನು ಅಥವಾ ಆತನ/ಆಕೆಯ ಕುಟುಂಬ ಸದಸ್ಯರಿಗೆ ಒತ್ತಡವನ್ನು ಹಾಕುವುದು ಅಥವಾ ತಡೆಯೊಡ್ಡುವುದು ಅಥವಾ ಹಿಂಸೆಯನ್ನು ಬಳಸುವುದು ಅಥವಾ ಅವಮಾನಿಸುವುದು ಅಥವಾ ಬೆದರಿಸುವುದು, ಅಥವಾ
(ii) ಸಾಲಗಾರನನ್ನು, ಆತನ/ಆಕೆಯ ಕುಟುಂಬ ಸದಸ್ಯರನ್ನು ಸ್ಥಳದಿಂದ ಸ್ಮಳಕ್ಕೆ ನಿರಂತರವಾಗಿ ಹಿಂಬಾಲಿಸುವುದು ಅಥವಾ ಆತನ/ಆಕೆಯ ಒಡೆತನದ ಅಥವಾ ಬಳಕೆಯಲ್ಲಿನ ಯಾವುದೇ ಸ್ವತ್ತಿಗೆ ಮಧ್ಯಪ್ರವೇಶಿಸುವುದು ಅಥವಾ ಆತನ/ಆಕೆಯಿಂದ ಕಿತ್ತುಕೊಳ್ಳುವುದು ಅಥವಾ ಯಾವುದೇ ಅಂಥ ಸ್ವತ್ತಿನ ಬಳಕೆಗೆ ಅಡ್ಡಿಪಡಿಸುವುದು, ಅಥವಾ
(iii) ಅಂಥ ಇತರ ವ್ಯಕ್ತಿಯು ಯುಕ್ತವಾಗಿ ತೊಡಗಿರುವ ಅಥವಾ ವಾಸವಾಗಿರುವ ಅಥವಾ ಕೆಲಸ ಮಾಡುತ್ತಿರುವ ಅಥವಾ ವ್ಯವಹಾರ ನಡೆಸುತ್ತಿರುವ ಮನೆ ಅಥವಾ ಇತರ ಸ್ಥಳಕ್ಕೆ ಬಲವಂತದ ಕ್ರಮವನ್ನು ಕೈಗೊಳ್ಳುವ ಉದ್ದೇಶದಿಂದ ಆಗಾಗ ಭೇಟಿ ನೀಡುವುದು ಅಥವಾ ಭೇಟಿಯಾಗುವಂತೆ ಮಾಡುವುದು, ಅಥವಾ
(iv) ಸಾಲಗಾರನಿಗೆ ಹಣ ಪಾವತಿಗಾಗಿ ಬಲವಂತದ ಮತ್ತು ಅನುಚಿತ ಪ್ರಭಾವವನ್ನು ಬಳಸಿ ಮಾತುಕತೆಗೆ/ಓಒತ್ತಾಯಿಸುವುದಕ್ಕೆ ಖಾಸಗಿ ಅಥವಾ ಹೊರಗುತ್ತಿಗೆ ಅಥವಾ ಬಾಹ್ಯ ಏಜೆನ್ಸಿಗಳ, ಕ್ರಿಮಿನಲ್ ಹಿನ್ನಲೆಯುಳ್ಳವರ ಸೇವೆಯನ್ನು ಬಳಸುವುದು, ಅಥವಾ ) ಸರ್ಕಾರದ ಯಾವುದೇ ಕಾರ್ಯಕ್ರಮದಡಿಯಲ್ಲಿ ಸಾಲಗಾರನಿಗೆ ಪ್ರಯೋಜನದ ಹಕ್ಕುಗಳುಳ್ಳ ಯಾವುದೇ ದಸ್ತಾವೇಜನ್ನು ಸಾಲಗಾರನಿಂದ ಬಲವಂ೦ತವಾಗಿ ಪಡೆಯುವುದು.