(1) ನೋಂದಣಿ ಪ್ರಾಧಿಕಾರಿ ಅಥವಾ ಆತನು/ಆಕೆಯು ಈ ಕುರಿತು ಅಧಿಕೃತಗೊಳಿಸಿದ ಯಾರೇ ಅಧಿಕಾರಿಯು, ಈ ಅಧ್ಯಾದೇಶದ ಉಪಬಂಧಗಳಿಗೆ ಅನುಸಾರವಾಗಿ ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು ವ್ಯವಹಾರ ನಡೆಸುತ್ತಿರುವರೆ ಎಂಬುದನ್ನು ಪರಿಶೀಲಿಸುವುದು, ಮೈಕ್ರೋ ಫೈನಾನ್ಸ್ JOA, (MFI) ಅಥವಾ ಸಾಲ ನೀಡಿಕೆ ಏಜಿನ್ಸಿ ಅಥವಾ AOA, ಅಥವಾ ಲೇವಾದೇವಿದಾರನ ಕಛೇರಿಯ ಆವರಣಕ್ಕೆ ಪ್ರವೇಶಿಸುವುದು ಅಥವಾ ಆತನ/ಆಕೆಯ ಅಭಿಪ್ರಾಯದಲ್ಲಿ ಯಾರೇ ವ್ಯಕ್ತಿಯು ಸಾಲ ಕೂಡುವ ವ್ಯವಹಾರದಲ್ಲಿ ತೊಡಗಿಕೊಂಡಿದ್ದರೆ ಮತ್ತು OOP ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಅಥವಾ ದಸ್ತಾವೇಜನ್ನು ಆತನಿಗೆ/ಆಕೆಗೆ ಹಾಜರುಪಡಿಸಲು ಸೂಚಿಸುವುದು ಹಾಗೂ ಪ್ರತಿಯೊಂದು ಅಂಥ ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲ ನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು COB ತಪಾಸಣೆಗೆ ಅನುಮತಿಸತಕ್ಕದ್ದು ಮತ್ತು ಅಂಥ ತಪಾಸಣೆಯಲ್ಲಿ ಅಂಥ ದಾಖಲೆ ಅಥವಾ ದಸ್ತಾವೇಜನ್ನು ಅಗತ್ಯವಿರುವಾಗಲೆಲ್ಲಾ ಹಾಜರುಪಡಿಸತಕ್ಕದ್ದು.
(2) ನೋಂದಣಿ ಪ್ರಾಧಿಕಾರಿಯು, (BC ಉಪಪ್ರಕರಣದ ಉದ್ದೇಶಗಳಿಗಾಗಿ ಆವರಣಗಳನ್ನು ಶೋಧಿಸಬಹುದು ಮತ್ತು ಅಗತ್ಯವಿರಬಹುದಾದ ಯಾವುದೇ ದಾಖಲೆ ಅಥವಾ ದಸ್ತಾವೇಜನ್ನು ವಶಪಡಿಸಿಕೊಳ್ಳಬಹುದು ಹಾಗೂ ಪರಿಶೀಲನೆ, ಪ್ರಾಸಿಕ್ಯೂಶನ್ ಅಥವಾ ಇತರೆ ಕಾನೂನು ಕ್ರಮಗಳ ಉದ್ದೇಶಗಳಿಗಾಗಿ ಅಗತ್ಯವಿರಬಹುದಾದಂಥ ಅವಧಿಗೆ ಮಾತ್ರವೇ ವಶಪಡಿಸಿಕೊಂಡ ದಾಖಲೆಗಳು ಅಥವಾ ದಸ್ತಾವೇಜುಗಳನ್ನು ಇಟ್ಟುಕೊಳ್ಳತಕ್ಕದ್ದು.
(3) ನೋಂದಣಿ ಪ್ರಾಧಿಕಾರಿ ಅಥವಾ (Sse ಉಪಪ್ರಕರಣದಲ್ಲಿ ಉಲ್ಲೇಖಿಸಿರುವ ಇತರ ಅಧಿಕಾರಿಯು, ಮೈಕ್ರೋ ಫೈನಾನ್ಸ್ AOA, (MFI) ಅಥವಾ ಸಾಲನೀಡಿಕೆ ಏಜೆನ್ಸಿ ಅಥವಾ AOA, ಅಥವಾ ಲೇವಾದೇವಿದಾರನು ಸಂಬಂಧಿತ ಮಾಹಿತಿಯನ್ನು ಒದಗಿಸುವ ಮಟ್ಟದಲ್ಲಿರುವನೆಂದು ಆತನು/ಆಕೆಯು ಅಭಿಪ್ರಾಯಪಟ್ಟ ಯಾರೇ ವ್ಯಕ್ತಿಯನ್ನು ಸಮನು ಮಾಡುವ ಮತ್ತು ಪರಿಶೀಲಿಸುವ ಅಧಿಕಾರವನ್ನು ಸಹ ಹೊಂದಿರತಕ್ಕದ್ದು.