(1) ನೋಂ೦ದಣಿ ಪ್ರಾಧಿಕಾರಿಯು ಯಾವುದೇ ಸಮಯದಲ್ಲಿ ಸ್ವತಃ ಅಥವಾ ಸಾಲಗಾರನಿಂದ ದೂರು ಸ್ವೀಕರಿಸಿದ ಮೇಲೆ ಅಂಥ ರದ್ಧತಿಗಾಗಿ ಲಿಖಿತದಲ್ಲಿ ಸಾಕಷ್ಟು ಕಾರಣಗಳನ್ನು ನೀಡಿದ ತರುವಾಯ ಮತ್ತು ಅದನ್ನು ಆಲಿಸಿದ ತರುವಾಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (1170 ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳ ಅಥವಾ ಲೇವಾದೇವಿದಾರರ ನೋಂದಣಿಯನ್ನು ರದ್ದುಗೊಳಿಸಬಹುದು ಅಥವಾ ರದ್ದುಪಡಿಸಲು ಶಿಫಾರಸ್ಸು ಮಾಡಬಹುದು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (11£) ಅಥವಾ ಸಾಲ ನೀಡಿಕೆ ಏಜಿನ್ಸಿಗಳು ಅಥವಾ ಸಂಸ್ಮೆಗಳನ್ನು ಅಥವಾ ಲೇವಾದೇವಿದಾರರನ್ನು ಯಾವ ಅಂಶಗಳ ಮೇಲೆ ಮೇಲ್ನೋಟಕ್ಕೆ ರದ್ದುಗೊಳಿಸುವ ತೀರ್ಮಾನ ಕೃಗೊಳ್ಳಲಾಗಿದೆಯೆಂದು ತಿಳಿಸುವ ನೋಟೀಸು ನೀಡಿದ ಹೊರತು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರಿಗೆ ಅಂಥ ನೋಟೀಸಿನ ವಿರುದ್ಧ ಅಹವಾಲನ್ನು ಹೇಳಿಕೂಳ್ಳುವ ಸೂಕ್ತ ಅವಕಾಶವನ್ನು ನೀಡಿದ ಹೊರತು ನೋಂದಣಿ ರದ್ದತಿಯ ಆದೇಶವನ್ನು ಹೊರಡಿಸತಕ್ಕದ್ದಲ್ಲ.
ವಿವರಣೆ: ಉಪಪಪ್ರಕರಣ (1)ರ ಉದ್ದೇಶಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MF) ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು, ಈ ಅಧ್ಯಾದೇಶದ ಯಾವುದೇ ಉಪಬಂಧಗಳ ಉಲ್ಲಂಘನೆಯ ಅಪರಾಧಕ್ಕಾಗಿನ ಅಪರಾಧ ನಿರ್ಣಯವು ಅದರ ನೋಂದಣಿಯನ್ನು ಅಮಾನತ್ತ್ನುಗೊಳಿಸಲು ಅಥವಾ ರದ್ದುಗೊಳಿಸಲು ಸಾಕಷ್ಟು ಕಾರಣವುಳ್ಳದ್ದಾಗಿರತಕ್ಕದ್ದು.
(2) ನೋಂದಣಿ ಪ್ರಾಧಿಕಾರಿಯು. (1ನೇ ಉಪಪ್ರಕರಣದಡಿ ವಿಚಾರಣೆಯನ್ನು ಬಾಕಿಯಿರಿಸಿ, ದಾಖಲಿಸಬೇಕಾದ ಸಾಕಷ್ಟು ಕಾರಣಗಳಿಗಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು (MFI) ಅಥವಾ ಸಾಲ ನೀಡಿಕೆ ಏಜಿನ್ಸಿಗಳು ಅಥವಾ ಸಂಸ್ಥೆಗಳ ಅಥವಾ ಲೇವಾದೇವಿದಾರರ ನೋಂದಣಿಯನ್ನು ಅಮಾನತ್ತ್ನುಪಡಿಸಬಹುದು.