(1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ಮಿ ವಿಭಾಗವು ಈ ಅಧಿನಿಯಮದ ಉಪಬಂಧಗಳಿಗೆ ಹಾಗೂ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರೆ ಅನ್ವಯವಾಗುವ ಕಾನೂನುಗಳಿಗೆ ಒಳಪಟ್ಟು ಮುಖ್ಯ ಆಯುಕ್ತರ ಸಮಗ್ರ ಮೇಲ್ವಿಚಾರಣೆ, ವಿರ್ದೇಶನ ಮತ್ತು ವಿಯಂತ್ರಣದ ಅಡಿಯಲ್ಲಿ ಈ ನಿಯಮಗಳ ಅನುಷ್ಠಾನಕ್ಕಾಗಿ ಜವಾಬ್ದಾರಿಯಾಗಿರತಕ್ಕದ್ದು. ವಲಯ ಆಯುಕ್ತರು, ವಲಯ ಮಟ್ಟದಲ್ಲಿ. ಈ ನಿಯಮಗಳ ಅನುಷ್ಠಾನಕ್ಕಾಗಿ. ಹಾಗೂ ಹಾಲನೆಗಾಗಿ ಜವಾಬ್ದಾರರಾಗಿರತಕ್ಕದ್ದು.
(2) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ತಿಗಳ ಹೈಕಿ, ಭೂಮಿ ಅಥವಾ ಕಟ್ಟಡ ಅಥವಾ ಎರಡೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪ್ರಸ್ತುತ ಸ್ವಂತಕ್ಕೆ ಅಥವಾ ಸಾರ್ವಜನಿಕ ಬಳಕೆಗಾಗಿ ಅವಶ್ಯಕತೆ ಇಲ್ಲವೆಂದು ಅಥವಾ ಮುಂದೆ ಅಂತಹ ಬಳಕೆಗೆ ಉದ್ದೇಶಿಸದಿದ್ದಲ್ಲಿ, ಅಂತಹ ಸ್ವತ್ತುಗಳನ್ನು ಪಾಲಿಕೆಯು ಕ್ರಯ ಅಥವಾ ಗುತ್ತಿಗೆಗೆ ನೀಡಬಹುದಾಗಿರುತ್ತದೆ.
(3) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ನವಿಯಮಗಳಲ್ಲಿ ಉಪಬಂ೦ಧಿಸಲಾದ ವಿನಾಯಿತಿಗಳಿಗೆ ಒಳಪಟ್ಟು, ಅದರ ಪ್ರತಿಯೊಂದು ಕ್ರಯ ಅಥವಾ ಗುತ್ತಿಗೆಯನ್ನು ಇ-ಪೊಕ್ಕೂರ್ಮೆಂಟ್ ಪೋರ್ಟಲ್ ಮುಖಾಂತರ ಸಾರ್ವಜನಿಕ ಹರಾಜು/ ಟೆಂಡರ್ಗಳ ಮೂಲಕ ಮಾಡತಕ್ಕದ್ದು.