(1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧೀನದ ಎಲ್ಲಾ ಸ್ಥಿರಾಸ್ತಿಗಳ ಪಟ್ಟಿಯನ್ನು ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ತಿ ವಿಭಾಗದ ಮುಖೇನ ನಿರ್ವಹಣೆ ಮಾಡತಕ್ಕದ್ದು.
(2) ಆಯಾ ವಲಯ ವ್ಯಾಪ್ತಿಯಲ್ಲಿನ ಸ್ಮಿರಾಸ್ತಿಗಳ ಪಟ್ಟಿಯನ್ನು ಸಂಬಂಧಪಲಟ್ಟ ವಲಯ ಆಯುಕ್ತರು ನಿರ್ವಹಿಸತಕ್ಕದ್ದು ಮತ್ತು ಈ ಅಧಿನಿಯಮದ ಉಪಬಂಧಗಳ ಪ್ರಕಾರ ವಲಯ ಆಯುಕ್ತರು ಅದನ್ನು ಅಪ್ಡೇಟ್ ಮಾಡಿ ಅನುಮೋದನೆಗಾಗಿ ಮುಖ್ಯ ಆಯುಕರಿಗೆ ಕಳುಹಿಸತಕ್ಕದ್ದು.
(3) ಈ ನಿಯಮಗಳನ್ನು ಪ್ರಕಟಿಸಿದ ಕೂಡಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಿರಾಸ್ತಿಗಳ ಪಟ್ಟಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವೆಬ್ ಸೈಟ್ ನಲ್ಲಿ ಹಾಗೂ ಸಾರ್ವಜನಿಕವಾಗಿ ಡೊಮ್ಮೆನ್ ನಲ್ಲಿ ಪ್ರಕಟಿಸತಕ್ಕದ್ದು ಮತ್ತು ಕಾಲಕಾಲಕ್ಕೆ ಅದನ್ನು ಇಂದೀಕರಿಸತಕ್ಕದ್ದು.