(1) ಪ್ರತಿಯೊಂದು ಗುತ್ತಿಗೆಯನ್ನು ಮತ್ತು ಪ್ರತಿಯೊಬ್ಬ ಗುತ್ತಿಗೆದಾರರು ಈ ಕೆಳಕಂಡ ಅಂಶಗಳನ್ನು ಪಾಲಿಸತಕ್ಕದ್ದು, ಅವುಗಳೆಂದರೆ:-
(i) ಗುತ್ತಿಗೆ ನೀಡಿದ ಆಸ್ತಿಯನ್ನು ಯಾವ ಉದ್ದೇಶಕ್ಕಾಗಿ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು ಮತ್ತು ನಿಗದಿಪಡಿಸಿದ ನಿಬಂಧನೆಗಳು ಮತ್ತು ಷರತ್ತುಗಳನ್ನು ಸಿರೀಕರಿಸತಕ್ಕದ್ದು ಮತ್ತು ಪಾಲಿಸತಕ್ಕದ್ದು.
(i) ಮಾಸಿಕ ಗುತ್ತಿಗೆ ಮೊತ್ತ ಅಥವಾ ಬಾಡಿಗೆಯನ್ನು ಪಾವತಿಸದಿದ್ದಲ್ಲಿ, ಅದು ಗುತ್ತಿಗೆ ಕರಾರಿನ ಬಹುದೊಡ್ಡ ಉಲ್ಲಂಘನೆಯಾಗಿದ್ದು, ಗುತ್ತಿಗೆಯನ್ನು, ಮಾರುಕಟ್ಟೆಗಳು ಮತ್ತು ಆಸ್ತಿ ನಿರ್ವಹಣೆಯ ಪ್ರಭಾರದಲ್ಲಿರುವ ವಿಶೇಷ ಆಯುಕ್ತರು ಅಥವಾ ವಲಯ ಆಯುಕ್ತರು 7 ದಿನಗಳ ನೋಟಿಸನ್ನು ನೀಡುವ ಮೂಲಕ ರದ್ದುಪಡಿಸತಕ್ಕದ್ದು.
(iii) ಗುತ್ತಿಗೆಗೆ ನೀಡಲಾದ ಆಸ್ತಿಗೆ ಸಂಂಬಂಧಿಸಿದಂತೆ ಅಥವಾ ಸಂದಾಯ ಮಾಡಬೇಕಾದ ಬಾಡಿಗೆ ಅಥವಾ ಗುತ್ತಿಗೆ ಮೊತ್ತಕ್ಕೆ ಸಂಬಂಧಿಸಿದಂತೆ, ವಲಯ ಆಯುಕ್ತರು ನೀಡಿದ ಯಾವುದೇ ನೋಟೀಸು ಅಥವಾ ಆದೇಶದ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿಯ ನಿರ್ವಹಣಾ ವಿಭಾಗವು ಯಾರ ಅಡಿಯಲ್ಲಿ ಬರುತ್ತದೆಯೋ ಆ ಮಾರುಕಟ್ಟೆಗಳ ಅಥವಾ ಆಸ್ತಿ ನಿರ್ವಹಣೆಯ ಪ್ರಭಾರ ಹೊಂದಿರುವ ವಿಶೇಷ ಆಯುಕ್ತರಿಗೆ ಅಪೀಲನ್ನು ಸಲ್ಲಿಸತಕ್ಕದ್ದು. ಮಾರುಕಟ್ಟೆಗಳು ಮತ್ತು ಆಸ್ತಿ ನಿರ್ವಹಣೆಯ ಪ್ರಭಾರಿ ವಿಶೇಷ ಆಯುಕ್ತರು ನೀಡಿದ ನೋಟೀಸು ಅಥವಾ ಆದೇಶದ ವಿರುದ್ಧ ಎರಡನೇ ಅಪೀಲನ್ನು ಮುಖ್ಯ ಆಯುಕರಿಗೆ ಸಲ್ಲಿಸತಕ್ಕದ್ದು.
ಪರಂತು, ಮುಖ್ಯ ಆಯುಕ್ತರು ಸ್ವಯಂಪ್ರೇರಿತವಾಗಿ ಅಥವಾ ಯಾವುದೇ ಅರ್ಜಿಯ ಕುರಿತು ಬಾಧಿತರಾಗುವ ಸಂಭವವಿರುವ ವ್ಯಕ್ತಿಗಳಿಗೆ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡಿದ ತರುವಾಯ, ಮಾರುಕಟ್ಟೆಗಳು ಮತ್ತು ಆಸ್ತಿ ನಿರ್ವಹಣೆಯ ಪ್ರಭಾರ ಹೊಂದಿರುವ ವಿಶೇಷ ಆಯುಕ್ತರ ಅಥವಾ ವಲಯ ಆಯುಕ್ತರ ಅಥವಾ ಇತರರ ಯಾವುದೇ ನೋಟೀಸು ಅಥವಾ ಆದೇಶದ ಮೇಲೆ ಯುಕ್ತ ಪುನರೀಕ್ಷಣೆ ಆದೇಶಗಳನ್ನು ಹೊರಡಿಸತಕ್ಕದ್ದು.
(iv) ವಲಯ ಆಯುಕ್ತರು ಅಥವಾ ಮಾರುಕಟ್ಟೆಗಳು ಮತ್ತು ಆಸ್ತಿ ನಿರ್ವಹಣೆಯ ಪ್ರಭಾರಿ ವಿಶೇಷ ಆಯುಕರಿಂದ ಗುತ್ತಿಗೆಯು ರದ್ದಾದ ಹೊಣೆಗಾರಿಕೆಯ ಹೊರತಾಗಿ, ಯಾವುದೇ ಸ್ವತ್ತಿಗೆ ಸಂಬಂಧಿಸಿದಂತೆ ಸಂದಾಯ ಮಾಡಬೇಕಾಗಿರುವ ಮೊತ್ತವನ್ನು ಜಫ್ತಿ ಅಥವಾ ಮುಟ್ಟುಗೋಲು ಮತ್ತು ಚರಾಸ್ತಿಗಳ BH ಅಥವಾ ಅಭಿಗ್ರಹಣ ಹಾಗೂ ಮಾರಾಟ, ಸ್ಥಿರಾಸ್ತಿಗಳ ಮತ್ತು ಬ್ಯಾಂಕ್ ಖಾತೆಗಳ ಜಫ್ತಿ ಮತ್ತು ಗುತ್ತಿಗೆದಾರನ ಚರಾಸ್ತಿಗಳ ಮಾರಾಟ ಮಾಡುವುದೂ ಸೇರಿದಂತೆ ಆಸ್ತಿ ತೆರಿಗೆ ಬಾಕಿಗಳ ವಸೂಲಾತಿಗೆ ಅನ್ವಯವಾಗಬಹುದಾದಂ೦ಥ ರೀತಿಯಲ್ಲಿಯೇ ಗುತ್ತಿಗೆದಾರರಿಂದ ವಸೂಲಿ ಮಾಡತಕ್ಕದ್ದು.