(1) ಗುತ್ತಿಗೆದಾರನು ಚಾಲಿಯಲ್ಲಿರುವ ಗುತ್ತಿಗೆಯ ಅವಧಿಯನ್ನು ವಿಸ್ತರಿಸುವುದಕ್ಕೆ ತನ್ನ ಗುತ್ತಿಗೆಯ ಅವಧಿಯನ್ನು ಮೀರಿ. ಯಾವುದೇ ಅಂತರ್ಗತ ಹಕ್ಕನ್ನು ಮತ್ತು ಕಾರ್ಯನೀತಿಯನ್ನು ಹೊಂದಿರುವುದಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಂಪೂರ್ಣ ವಿವೇಚನೆಗೆ ಒಳಪಟ್ಟಿರತಕ್ಕದ್ದು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವಂತ ಬಳಕಗಾಗಿ ಅಥವಾ ಯಾವುದೇ ಇತರ ಸಾರ್ವಜನಿಕ ಉದ್ದೇಶಕ್ಕಾಗಿ ಆಸ್ತಿ ಅಥವಾ ಭೂಮಿಯ ಅಗತ್ಯವಿದ್ದರೆ ವಿಸ್ತರಣೆಯನ್ನು ನೀಡದೆ ಇರಬಹುದು.
(2) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಚಾಲ್ಕಿಯಲ್ಲಿರುವಂತೆ ಅಥವಾ ನೆಲಸಮ ಮಾಡಿದ ನಂತರ (ಭಾಗಶಃ ಅಥವಾ ಪೂರ್ಣವಾಗಿ) ಮತ್ತು ಪುನರ್ ನಿರ್ಮಾಣದ ನಂತರ ಆಸ್ತಿಯನ್ನು ಗುತ್ತಿಗೆಗೆ ನೀಡುವ ಬಗ್ಗೆ ಯೋಚಿಸಬಹುದು. ಚಾಲಿ,ಯಲ್ಲಿರುವ ಗುತ್ತಿಗೆದಾರನು ಯಾವುದೇ ಸಮಯದಲ್ಲಿ ಟಿಂಡರ್ ಅಥವಾ ಹರಾಜು ಪ್ರಕ್ರಿಯೆಯ ಮೂಲಕ ಹೋಗದೆ, ತನ್ನ ಚಾಲಿಯಲ್ಲಿರುವ ಗುತ್ತಿಗೆಯ ಅವಧಿ ಮುಗಿಯುವುದಕ್ಕೆ ಕನಿಷ್ಠ ಎರಡು ತಿಂಗಳ ಮೊದಲು ಅಥವಾ ಗುತ್ತಿಗೆ ಅವಧಿ ಮುಗಿದ ಸಂದರ್ಭದಲ್ಲಿ, ಈ ನಿಯಮಗಳ ಅಧಿಸೂಚನೆಯ ದಿನಾಂಕದಿಂದ ಆರು ತಿಂಗಳೊಳಗೆ ಒಂದು ಬಾರಿ ವಿಸ್ತರಣೆಯನ್ನು ಕೋರುವ ತನ್ನ ಆಯ್ಕೆಯನ್ನು ಲಿಖಿತವಾಗಿ ನೀಡತಕ್ಕದ್ದು. ಚಾಲ್ಕಿಯಲ್ಲಿರುವ ಗುತ್ತಿಗೆದಾರನು, ನಿರ್ದಿಷ್ಟ ಕಾಲಮಿತಿಯೊಳಗೆ ಲಿಖಿತವಾಗಿ ಆಯ್ಕೆಯನ್ನು ನೀಡಲು ವಿಫಲವಾದರೆ ಟಿಂಡರ್ ಅಥವಾ ಹರಾಜು ಪ್ರಕ್ರಿಯೆಯಿಲದೆ ಗುತ್ತಿಗೆ ವಿಸ್ತರಣೆಯನ್ನು ಆಯ್ಕೆ ಮಾಡಲು ಬಯಸುವುದಿಲ್ಲ ಮತ್ತು ಆಸ್ತಿಯನ್ನು ಎಲ್ಲಾ ಖುಣಭಾರ ಮುಕ್ತವಾಗಿ ಹರಾಜು ಹಾಕತಕ್ಕದ್ದು. ಒಂದು ವೇಳೆ ಚಾಲ್ತಿಯಲ್ಲಿರುವ ಗುತ್ತಿಗೆಯ ಗುತ್ತಿಗೆದಾರನು ಚಾಲ್ಕಿಯಲ್ಲಿರುವ ಗುತ್ತಿಗೆಯ ಅವಧಿಗೆ ಸಮಾನವಾದ ಅವಧಿಗಾಗಿ ಮತ್ತೊಂದು ಗುತ್ತಿಗೆಗೆ ಅರ್ಜಿ ಸಲ್ಲಿಸಲು ಆಯ್ಕೆ ಮಾಡಿದರೆ, ಆಗ ಚಾಲ್ತಿಯಲ್ಲಿರುವ ಗುತ್ತಿಗೆಯು ವಿಸ್ತರಿಸಿದ ಗುತ್ತಿಗೆಯ ಅವಧಿಯು ಪ್ರಾರಂಭವಾದ ದಿನಾಂಕದಂದು ಮುಕ್ತಾಯವಾಗತಕ್ಕದ್ದು.
ದೃಷ್ಟಾಂತ 1:
(ಎ) 'ಎ' ನು 1.4.2020 ರಿಂದ ಪ್ರಾರಂಭವಾಗುವಂತೆ 5 ವರ್ಷಗಳ ಅವಧಿಗೆ ಒಂದು ಮಳಿಗೆಯನ್ನು ಗುತ್ತಿಗೆಗೆ ಪಡೆದಿರುತ್ತಾನೆ ಮತ್ತು ಈಗ ಅದು 2024 ರಲ್ಲಿ 4 ನೇ ವರ್ಷದಲ್ಲಿದೆ.
(ಬಿ) 'ಎ' ನ ಗುತ್ತಿಗೆಯು 31.3.2025 ರಂದು ಕೊನೆಗೊಳ್ಳುತ್ತದೆ.
(ಸಿ) ಪ್ರಸ್ತುತ ಗುತ್ತಿಗೆಯು ಕೊನೆಗೊಳ್ಳುವ ದಿನಾಂಕದಿಂದ ಎರಡು ತಿಂಗಳು ಮುಂಚಿತವಾಗಿ, ಎಂದರೆ, 31.1.2025 ರಂದು ಅಥವಾ ಅದಕ್ಕಿಂತ ಮುಂಚೆ ಯಾವುದೇ ಸಮಯದಲ್ಲಿ, 'ಎ'ನು ಪ್ರಸ್ತುತ ಚಾಲ್ತಿಯಲ್ಲಿರುವ ಮಳಿಗೆಯ ಗುತ್ತಿಗೆಯ ಅವಧಿಯನ್ನು ಮತ್ತೆ ಐದು ವರ್ಷಗಳ ಅವಧಿಯವರೆಗೆ ವಿಸ್ತರಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕೋರಬಹುದು.
ಅವನು 10.6.2024 ರಂದು ಮತ್ತೆ ಐದು ವರ್ಷಗಳ ಅವಧಿಯ ವಿಸ್ತರಣೆಯನ್ನು ಕೋರಿದರೆ, (ಡಿ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 15.7.2024 ಐದು ವರ್ಷಗಳ ಅವಧಿಯ ವಿಸ್ತರಣೆಗೆ ಅನುಮತಿಸಿದರೆ, ಪ್ರಸ್ತುತ ಗುತ್ತಿಗೆಯು 14.7.2024 ರಂದು ತಂತಾ ಅವಧಿಪೂರ್ವ ಮುಕ್ತಾಯಗೊಳ್ಳುತ್ತದೆಂದು ಭಾವಿಸತಕ್ಕದ್ದು ಮತ್ತು ಐದು ವರ್ಷಗಳ ಅವಧಿಗೆ ವಿಸ್ತರಣೆಗೊಂಡ ಗುತ್ತಿಗೆಯು 15.7.2024 ರಿಂದ ಪ್ರಾರಂಭವಾಗಿ 14.7.2029 ರವರೆಗೆ ಜಾರಿಯಲ್ಲಿರತಕ್ಕದ್ದು. 147.2029ರ ನಂತರ ವಿಸ್ತರಿಸಿದ ಗುತ್ತಿಗೆಗೆ ಮತ್ತೆ ವಿಸ್ತರಣೆಯನ್ನು ನೀಡತಕ್ಕದ್ದಲ್ಲ. ಆದರೆ, ಎ ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ತಿ ಅಥವಾ ಮಳಿಗೆಯ ಬಹಿರಂಗ ಟೆಂಡರ್ ಅಥವಾ ಹರಾಜಿನಲ್ಲಿ ಭಾಗವಹಿಸಿ, ಇನ್ನೊಂದು ಗುತ್ತಿಗೆಯನ್ನು ಅಥವಾ ಬಾಡಿಗೆಯನ್ನು ಪಡೆಯಲು ಅರ್ಹನಾಗಿರತಕ್ಕದ್ದು.
ದೃಷ್ಟಾಂತ 2:
(ಎ) ‘od’ ನು 1.4.2018 ರಿಂದ ಪ್ರಾರಂಭವಾಗಿ ಮೂರು ವರ್ಷಗಳ ಅವಧಿಗೆ ಒಂದು ಮಳಿಗೆಯನ್ನು ಗುತ್ತಿಗೆಗೆ ಪಡೆದಿರುತ್ತಾನೆ ಮತ್ತು ಅದು 31.3.202180 ಮುಕ್ತಾಯಗೊಂ೦ಡಿರುತ್ತದೆ. ಆದರೆ, ಎ ನು ಅವನ ಗುತ್ತಿಗೆಯ ಅವಧಿ ವಿಸ್ತರಣೆ ಪಡೆಯದೇ ಅಧಿಭೋಗದಲ್ಲಿ ಮುಂದುವರಿಯುತ್ತಿರುತ್ತಾನೆ.
(ಬಿ) 'ಎ' ನು ಈಗಲೂ ಕೂಡ ಅಧಿಭೋಗದಲ್ಲಿ ಮುಂದುವರಿಯುತ್ತಿದ್ದಾನೆ ಮತ್ತು ಯಾವ ವ್ಯವಹಾರಕ್ಕೆ ಗುತ್ತಿಗೆ ನೀಡಲಾಗಿತ್ತೋ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.
(ಸಿ. 'ಎ' ನು ಆ ಮಳಿಗೆಯ ಅನಧಿಕೃತ ಅಧಿಭೋಗದಲ್ಲಿದ್ದಾನೆ ಮತ್ತು ಈ ವರ್ಷಗಳಲ್ಲಿ ಬಾಡಿಗೆಯನ್ನು ಪಾವತಿಸಿರುವುದಿಲ್ಲ.
(ಡಿ) 'ಎ' ನು ಈ ನಿಯಮಗಳು ಅಧಿಸೂಚನೆಯ ದಿನಾಂಕದಿಂದ ಮೂರು ತಿಂಗಳೊಳಗೆ ಮುಕ್ತಾಯಗೊಂಡ ಗುತ್ತಿಗೆಯ ಒಂದು ಬಾರಿಯ ವಿಸ್ತರಣೆಗಾಗಿ ಅರ್ಜಿ ಸಲ್ಲಿಸಲು ಅರ್ಹನಾಗಿದ್ದಾನೆ.
(ಇ) 'ಎ' ನು ಇಂದಿನವರೆಗಿನ ಬಾಡಿಗೆ, ಬಡ್ಡಿ ಮತ್ತು ದಂಂಡನೆಗಳೇನಾದರೂ ಇದ್ದಲ್ಲಿ ಅವುಗಳನ್ನು ಪಾವತಿಸಿದಾಗ ಮಾತ್ರ ಒಂದು ಬಾರಿಯ ವಿಸ್ತರಣೆಗಾಗಿ ಪರಿಗಣಿಸಲು ಅರ್ಹನಾಗಿರತಕ್ಕದ್ದು.
(ಎಫ್) 'ಎ' ನು ಹಿಂದಿನ ಎಲ್ಲಾ ಬಾಕಿಗಳು, ಬಾಡಿಗೆ, ಬಡ್ಡಿ ಹಾಗೂ ಇಂದಿನವರೆಗಿನ ಇತರೆ ಬಾಕಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಪಾವತಿಸಿದರೆ ಮಾತ್ರ ಮೂರು ವರ್ಷಗಳ ಅವಧಿಯ ಒಂದು ಬಾರಿಯ ವಿಸ್ತರಣೆಗಾಗಿ ಅರ್ಹನಾಗತಕ್ಕದ್ದು. ಅದು ಹಿಂದಿನ ಸಿಂಧುವಾದ ಗುತ್ತಿಗೆಯ ವಿಬಂಧನೆಗಳಿಗನುಸಾರವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೊರಡಿಸಿದ ವಿಸ್ತರಣಾ ಆದೇಶದ ದಿನಾಂಕದಿಂದ ಜಾರಿಯಾಗತಕ್ಕದ್ದು.
(ಜಿ) ಇಂದಿನವರೆಗೆ ಎಲ್ಲಾ ಮತ್ತು ಸಂಪೂರ್ಣ ಬಾಕಿಗಳನ್ನು ಪಾವತಿಸಿದ ತರುವಾಯ, ಮೂರು ವರ್ಷಗಳ ಅವಧಿಯವರೆಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಆದೇಶವನ್ನು ಹೊರಡಿಸಿದ ಮೇಲೆ ಅನಧಿಕೃತ ಅಧಿಭೋಗದ ಅವಧಿಯನ್ನು ಸಕ್ರಮಗೊಳಿಸತಕ್ಕದ್ದು.
(ಎಚ್) ಮೂರು ವರ್ಷಗಳ ಅವಧಿಗೆ ವಿಸ್ತರಣಾ ಆದೇಶವನ್ನು ದಿನಾಂಕ: 19.7.2024 ರಂದು ಹೊರಡಿಸಲಾಗಿದ್ದ ಸಂದರ್ಭದಲ್ಲಿ, ಅದು ದಿನಾಂಕ 18.7.2027 ರವರೆಗೆ ಸಿಂಧುವಾಗಿರತಕ್ಕದ್ದು. 18.7.2027ರ ತರುವಾಯ ವಿಸ್ತರಿಸಿದ ಗುತ್ತಿಗೆಗೆ ಮತ್ತೆ ಯಾವುದೇ ವಿಸ್ತರಣೆ ನೀಡತಕ್ಕದ್ದಲ್ಲ. ಆದರೆ, ಎ ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಸ್ತಿ ಅಥವಾ ಮಳಿಗೆಯ ಬಹಿರಂಗ ಟಿಂಡರ್ ಅಥವಾ ಹರಾಜಿನಲ್ಲಿ ಭಾಗವಹಿಸಿ, ಇನ್ನೊಂದು ಗುತ್ತಿಗೆಯನ್ನು ಅಥವಾ ಬಾಡಿಗೆಯನ್ನು ಪಡೆಯಲು ಅರ್ಹನಾಗಿರತಕ್ಕದ್ದು.
(3) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿಗಳನ್ನು ಅವುಗಳು ಇದ್ದ ಸ್ಥಿತಿಯಲ್ಲಿಯೇ ಗುತ್ತಿಗೆ ನೀಡಲು ತೀರ್ಮಾನಿಸಿದರೆ, ಮಾರುಕಟ್ಟೆ ಅಥವಾ ಆಸ್ತಿಗಳ ಪ್ರಭಾರ ಹೊಂದಿರುವ ವಿಶೇಷ ಆಯುಕ್ತರು ಅಥವಾ ವಲಯ ಆಯುಕರು ಯಾವ ವಳಿಗೆಗಳಿಗೆ ಹಾಲಿ ಇರುವ ಗುತ್ತಿಗೆದಾರನು. ಗುತ್ತಿಗೆಯ wom ಬಾರಿಯ ವಿಸ್ತರಣೆಯನ್ನು ಪಡೆಯಲು ಆಯ್ಕೆ ಮಾಡಿಕೊಳ್ಳುವುದಿಲ್ಲವೋ ಅಂ೦ತವುಗಳಿಗೆ.. ಚಾಲ್ತಿಯಲ್ಲಿರುವ ಗುತ್ತಿಗೆಯ ಅವಧಿಯು ಮುಕ್ತಾಯಗೊಳ್ಳುವುದಕ್ಕಿಂತ ಕನಿಷ್ಠಪಕ್ಷ ಮೂರು Bony ಮುಂಚಿತವಾಗಿಯೇ ಹೊಸ ಗುತ್ತಿಗೆದಾರನನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ನಿಯಮ 7ರ ಅಡಿಯಲ್ಲಿನ ಕಾರ್ಯವಿಧಾನಗಳಿಗೆ ಅನುಸಾರವಾಗಿ ಮರು ಟಿಂಡರ್ ಅಥವಾ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸತಕ್ಕದ್ದು. ಪುನರ್ನಿರ್ಮಾಣ ಯೋಜನೆ ಹೊಂದಿದ್ದಾದಲ್ಲಿ, ತೆರವುಗೊಳಿಸುವಿಕೆ ಮತ್ತು ಕೆಡಹುವಿಕೆಯ ನಂತರ ಯಾವುದೇ ಸೂಕ್ತ ಸಮಯದಲ್ಲಿ ನೂತನ ಸ್ವತ್ತಿನ ಟೆಂಡರ್ ಅಥವಾ ಹರಾಜು ನಡೆಸಬಹುದು.
(4) ಹಾಲಿ ಇರುವ ಗುತ್ತಿಗೆದಾರನು ಬಹಿರಂಗ ಟಿಂಡರ್ ಅಥವಾ ಹರಾಜಿನಲ್ಲಿ ಭಾಗವಹಿಸಲು ಇಚ್ಮಿಸಿದರೆ, ಹೊಸ ಗುತ್ತಿಗೆ ಮತ್ತು ಟೆಂಡರ್ ಅಥವಾ ಹರಾಜಿಗೆ ಅನ್ವಯವಾಗಬಹುದಾದಂಥ ನಿಯತ ಕಾರ್ಯವಿಧಾನವು ಅನ್ವಯವಾಗತಕ್ಕದ್ದು. ಆದಾಗ್ಯೂ, ಹಾಲಿ ಗುತ್ತಿಗೆದಾರನು ಒಂದು ಬಾರಿಯ ವಿಸ್ತರಣೆಯನ್ನು ಆಯ್ಕೆ ಮಾಡಿಕೊಂಡರೆ, ಅಂತಹ ಆಸ್ತಿಗೆ ನಿಗದಿಪಡಿಸಿರುವ ಒಂದು ಬಾರಿಯ ಕನಿಷ್ಕ ಠೇವಣಿಯ ಶೇಕಡ 100ರಷ್ಟಕ್ಕೆ ಸಮನಾಗಿರುವ ಒಂದು ಬಾರಿಯ ಠೇವಣಿಯನ್ನು ಠೇವಣಿ ಇರಿಸತಕ್ಕದ್ದು. ಗುತ್ತಿಗೆದಾರನು BIR, ಒಂದು ಬಾರಿಯ ಕನಿಷ್ಕ ಠೇವಣಿಯ ಶೇಕಡ 100ರಷ್ಟು ಹಣವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ವಿಸ್ತರಣೆಗೆ ಅನುಮತಿಸಿದ ಹದಿನೈದು ದಿನಗಳೊಳಗಾಗಿ ಠೇವಣಿ ಇರಿಸತಕ್ಕದ್ದು.
(5) ಠೇವಣಿ ಇರಿಸಲು ವಿಫಲವಾದಲ್ಲಿ, ವಿಸ್ತರಣಾ ಅನುಮತಿಯು ಸ್ವಯಂಚಾಲಿತವಾಗಿ ಕೂಡಲೇ ರದ್ದಾಗತಕ್ಕದ್ದು ಮತ್ತು ಅಂಥ ಗುತ್ತಿಗೆದಾರನನ್ನು ಸುಸ್ತಿದಾರನೆಂದು ಪರಿಗಣಿಸತಕ್ಕದ್ದು ಹಾಗೂ ಆ ಆಸ್ತಿಯನ್ನು ಬಹಿರಂಗ ಟೆಂಡರ್ ಅಥವಾ ಹರಾಜಿಗೆ ಇಡತಕ್ಕದ್ದು ಮತ್ತು ಗುತ್ತಿಗೆದಾರನು ವಿಸ್ತರಣೆ ಪಡೆಯುವ ಹಕ್ಕನ್ನು ಕಳೆದುಕೊಳ್ಳತಕ್ಕದ್ದು. ಆದಾಗ್ಯೂ, ಅಂಥ ಗುತ್ತಿಗೆದಾರನು ಬಿಡ್ಗಾಗಿ ಅಥವಾ ಬಹಿರಂಗ ಟೆಂಡರ್ ಅಥವಾ ಹರಾಜಿನಲ್ಲಿ ಭಾಗವಹಿಸಲು ಅರ್ಹನಾಗಿರತಕ್ಕದ್ದು.