(1) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಿರಾಸ್ತಿಗಳ ಮಾರಾಟವನ್ನು ರಾಜ್ಯ ಅಥವಾ ಕೇಂದ್ರ ಸರ್ಕಾರದ ಇಲಾಖೆಗಳಿಗೆ ಅಥವಾ ರಾಜ್ಯ ಅಥವಾ ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಸಾರ್ವಜನಿಕ ವಲಯ ಉದ್ಯಮಗಳು ಅಥವಾ ಸಂಸ್ಥೆಗಳು ಅಥವಾ ನಿಕಾಯಗಳಿಗೆ ಮಾತ್ರ ಸರ್ಕಾರದ ಪೂರ್ವಾನುಮತಿ ಪಡೆದು ಮಾರಾಟ ಮಾಡತಕ್ಕದ್ದು, ಇನ್ನಿತರೆ ಯಾರಿಗೂ ಮಾರಾಟ ಮಾಡುವಂತಿಲ್ಲ.
(2) ಮಾರಾಟವು ಕರ್ನಾಟಕ ಮುದ್ರಾಂಕ ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 34) ರ ಪ್ರಕರಣ 45ಬಿ ಅಡಿಯಲ್ಲಿ, ಕಾಲಕಾಲಕ್ಕೆ, ಕಂದಾಯ ಇಲಾಖೆಯಿಂದ ಹೊರಡಿಸಿದ ಅಧಿಸೂಚನೆಯ ಪ್ರಕಾರ ಸ್ವತ್ತಿನ ಮಾರ್ಗಸೂಚಿ ದರಕ್ಕೆ ಅನುಸಾರವಾಗಿರತಕ್ಕದ್ದು.
BOOS), ರಾಜ್ಯ ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ಭಾಗಶಃವಾಗಿಯಾಗಲಿ ಅಥವಾ ಪೂರ್ಣವಾಗಿಯಾಗಲಿ.. ಅದರ ಮೇಲೆ... ರಿಯಾಯಿತಿಯನ್ನು ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ.