(1) ಈ ನಿಯಮಗಳ ಅಡಿಯಲ್ಲಿ, ವಳಿಗೆಗಳನ್ನು ಗುತ್ತಿಗೆ ನೀಡುವ ಸಂದರ್ಭದಲ್ಲಿ, ಶೇ.17 ರಷ್ಟು ಮೀಸಲಾತಿಯನ್ನು ಪರಿಶಿಷ್ಠ ಜಾತಿಗೆ ಸೇರಿರುವ ಸದಸ್ಯರಿಗೂ ಹಾಗೂ ಶೇ.7 ರಷ್ಟು ಮೀಸಲಾತಿಯನ್ನು ಪರಿಶಿಷ್ಠ ಪಂಗಡಕ್ಕೆ ಸೇರಿದ ಸದಸ್ಯರಿಗೂ ಮೀಸಲಿಡತಕ್ಕದ್ದು. ಈ ಹಂಚಿಕೆಯು ಅರ್ಹತೆ ಹೊಂದಿರುವ ಸದರಿ ಪ್ರವರ್ಗದ ವ್ಯಕ್ತಿಗಳ ನಡುವೆ ಬಹಿರಂಗ ಟಿಂಡರು ಅಥವಾ ಹರಾಜಿನ ಮೂಲಕವೇ ನಡೆಸತಕ್ಕದ್ದು.
(2) ಈ ನಿಯಮಗಳ ಅಡಿಯಲ್ಲಿ ಗುತ್ತಿಗೆ ನೀಡುತ್ತಿರುವ ಮಳಿಗೆಗಳ ಶೇ.2ರಷ್ಟು ಮಳಿಗೆಗಳನ್ನು ಶೇ.40ಕ್ಕಿಂತ ಕಡಿಮೆಯಿಲ್ಲದ ಅಂಗವೈಕಲ್ಯತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಮೀಸಲಿಡತಕ್ಕದ್ದು. ಈ ನಿಯಮಗಳ ಅಡಿಯಲ್ಲಿನ ಈ ಹಂಚಿಕೆಯು, ಅರ್ಹತೆ ಹೊಂದಿರುವ ಸದರಿ ಪ್ರವರ್ಗದ ವ್ಯಕ್ತಿಗಳ ನಡುವೆ ಬಹಿರಂಗ ಟೆಂಡರು ಅಥವಾ ಹರಾಜಿನ ಮೂಲಕವೇ ನಡೆಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ (ನಂದಕುಮಾರ್ ಬಿ.) ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ-2 ಮತ್ತು ಸಮನ್ವಯ).
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು