(1) ಮುಖ್ಯ ಆಯುಕ್ತರು, ಸಂಬಂಧಪಟ್ಟ ಸ್ಮಾಯಿ ಸಮಿತಿಯ ಪೂರ್ವ ಮಂಜೂರಾತಿ ಪಡೆದು 5 ವರ್ಷಗಳಿಗೆ ಮೀರದ ಅವಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಮಿರಾಸ್ತಿಗಳನ್ನು ಗುತ್ತಿಗೆಗೆ ನೀಡಬಹುದು. ಸ್ಮಾಯಿ ಸಮಿತಿಯು, ಅದು ಸೂಕ್ತವೆಂದು ಭಾವಿಸಬಹುದಾದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಂದು ವರ್ಗ ಅಥವಾ MOM) ಅಥವಾ ಎಲ್ಲಾ ಸ್ವತ್ತುಗಳಿಗೆ ಮಂಜೂರಾತಿಯನ್ನು ನೀಡಬಹುದು.
(2) ಮುಖ್ಯ ಆಯುಕುರು, ಪರಿಷತ್ತಿನ ಪೂರ್ವ ಮಂಜೂರಾತಿ ಪಡೆದು, ಐದು ವರ್ಷಗಳಿಗಿಂತ ಹೆಚ್ಚಿನ ಆದರೆ, ಹದಿನೈದು ವರ್ಷಗಳನ್ನು ಮೀರದ ಅವಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಮಿರಾಸ್ತಿಗಳನ್ನು ಗುತ್ತಿಗೆಗೆ ನೀಡಬಹುದು. ಪರಿಷತ್ತು, ಅದು ಸೂಕ್ತವೆಂದು ಭಾವಿಸಬಹುದಾದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಒಂದು ವರ್ಗ ಅಥವಾ ಗುಂಪು ಅಥವಾ ಎಲ್ಲಾ ಆಸ್ತಿಗಳಿಗೆ ಸಂಬಂಧಿಸಿದಂತೆ ಮಂಜೂರಾತಿಯನ್ನು ನೀಡಬಹುದು.
(3) ಮುಖ್ಯ ಆಯುಕ್ತರು, ಸರ್ಕಾರದ ಪೂರ್ವಾನುಮೋದನೆಯೊಂ೦ದಿಗೆ ಮಾತ್ರ ಹದಿನೈದು ವರ್ಷಗಳಿಗಿಂತ ಹೆಚ್ಚು ಆದರೆ ಮೂವತ್ತು ವರ್ಷಗಳನ್ನು ಮೀರದ ಅವಧಿಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಿರಾಸ್ತಿಗಳನ್ನು ಗುತ್ತಿ. ನೀಡಬಹುದು.
(4) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಥಿರಾಸ್ತಿಗಳ ಗುತ್ತಿಗೆಯನ್ನು ಮೂವತ್ತು ವರ್ಷಗಳಿಗೆ ಮೀರಿದ ಅವಧಿಗೆ ನೀಡತಕ್ಕದ್ದಲ್ಲ.
(5) ನಿರ್ಮಾಣ, ನವೀಕರಣ, ನಿರ್ವಹಣೆ, ಕಾರ್ಯನಿರ್ವಹಣೆ ಮತ್ತು ವರ್ಗಾವಣೆ ಆಧಾರ ಮುಂತಾದವುಗಳಿಗೆ ನೀಡಲಾದ ರಿಯಾಯಿತಿಯನ್ನು ಒಳಗೊಂಡಂತೆ,. ಈ ಹಿಂದೆ ಯಾವುದೇ ವಿಧಾನದ ಅಡಿಯಲ್ಲಿ ಗುತ್ತಿಗೆಗೆ ಒಂದು ಬಾರಿ ನೀಡಲಾಗಿದ್ದ ಗುತ್ತಿಗೆ ವಿಸ್ತರಣೆಯನ್ನು, ಸಂದರ್ಭಾನುಸಾರ ಕಳೆದ ಗುತ್ತಿಗೆಯ ಅಥವಾ ಕಳೆದ ವಿಸ್ತರಣಾ ಗುತ್ತಿಗೆಯ ನಿಬಂಧನೆ ಮತ್ತು ಅವಧಿಯನ್ನು ಮೀರದಂತೆ ಆದರೆ, ಈ ಬಗ್ಗೆ ತೊಂಬತ್ತೊಂಭತ್ತು ವರ್ಷಗಳ ಗರಿಷ್ಠ ಮಿತಿಗೆ ಒಳಪಟ್ಟು, ಗರಿಷ್ಠ ಇನ್ನೊಂದು ಅವಧಿಗಾಗಿ ವಿಸ್ತರಣೆಯನ್ನು ನೀಡಬಹುದು. ವಿಸ್ತರಣೆಯನ್ನು ಅನುಮೋದಿಸುವ ಪ್ರಾಧಿಕಾರವು ಈ ನಿಯಮಗಳ ಅಡಿಯಲ್ಲಿನ ಅದೇ ನಿಬಂಧನೆ ಅಥವಾ ಅವಧಿಗೆ ಸಂಬಂಧಿಸಿದಂತೆ ಹೊಸ ಗುತ್ತಿಗೆ ನೀಡುವುದಕ್ಕಾಗಿ ನಿರ್ದಿಷ್ಟಪಡಿಸಿದಂಥ ರೀತಿಯಲ್ಲಿಯೇ ವಿಸ್ತರಣೆಯನ್ನು ನೀಡತಕ್ಕದ್ದು.
ಪರಂತು, ಈಗಾಗಲೇ ಯಾವ ಸ್ವತ್ತುಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದೆಯೋ ಆ ಸ್ವತ್ತುಗಳ ಸಂದರ್ಭದಲ್ಲಿ ಆದರೆ, ಗುತ್ತಿಗೆದಾರನು ಯಾವುದೇ ವಿಸ್ತರಣೆಯಿಲ್ಲದೆ ಆ ಸ್ವತ್ತಿನ ಸ್ವಾಧೀನದಲ್ಲಿ ಮುಂದುವರೆದಿದ್ದರೆ, ಆಗ ಕಳೆದ ಸಿಂಧುವಾದ ಗುತ್ತಿಗೆ ಅಥವಾ ಕಳೆದ ವಿಸ್ತರಣಾ ಗುತ್ತಿಗೆಯ ನಿಬಂಧನೆ. ಅಥವಾ ಅವಧಿಯನ್ನು ಮೀರದಂತೆ ಅದೇ ಅವಧಿಗಾಗಿ ಈ ನಿಯಮಗಳ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ವಿಸ್ತರಣೆಯನ್ನು ನೀಡಬಹುದು. ಈ ನಿಯಮಗಳ ಅಧಿಸೂಚನೆಯ ದಿನಾಂಕದವರೆಗೆ ಮುಕ್ತಾಯವಾದ ಗುತ್ತಿಗೆಗೆ. ಸಂಬಂಧಿಸಿದಂತೆ. ಅದೇ ನಿಬಂಧನೆಗಳು. ಮತ್ತು ಷರತ್ತುಗಳ ಮೇಲೆ ಅನಧಿಕೃತ ಅಧಿಭೋಗದ ಅವಧಿಯನ್ನು ಕ್ರಮಬದ್ಧಗೊಳಿಸತಕ್ಕದ್ದು.
ಮತ್ತು BOOS, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ಣ ಮತ್ತು ಇಂದಿನವರೆಗಿನ ಎಲ್ಲಾ ಬಾಕಿಗಳನ್ನು ಗುತ್ತಿಗೆದಾರರು ಸಂದಾಯ ಮಾಡಿದ ಹೊರತು ಯಾವುದೇ ವಿಸ್ತರಣೆಯನ್ನು ನೀಡತಕ್ಕದ್ದಲ್ಲ.
ಉದಾಹರಣೆಗಳು:
(i) 'ಎ' ಎಂಬುವವನಿಗೆ ಒಂದು ಸ್ಥಿರಾಸ್ತಿಯನ್ನು ಐದು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ ಮತ್ತು ಅದು ಮುಕ್ತಾಯಗೊಳ್ಳುತ್ತಿದೆ. ನಂತರ, 'ಎ' ನು ಐದು ವರ್ಷಗಳ ಇನ್ನೊಂದು ಅವಧಿಗೆ ವಿಸ್ತರಣೆಯನ್ನು ಪಡೆಯಬಹುದು.
(ii) 'ಬಿ' ಎಂಬುವವನಿಗೆ ಒಂದು ಸ್ಥಿರಾಸ್ತಿಯನ್ನು ಹನ್ನೆರಡು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದೆ. ಆದರೆ, ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ ಮತ್ತು 3 ಅವಧಿಗಳಿಗೆ ವಿಸ್ತರಣೆಯನ್ನು ನೀಡಲಾಗಿರುತ್ತದೆ. ಈಗ, 'ಬಿ' ಎಂಬುವವರು ಮತ್ತೊಮ್ಮೆ ಮೂರು ವರ್ಷಗಳವರೆಗೆ ಗುತ್ತಿಗೆ ಅವಧಿ ವಿಸ್ತರಣೆ ಪಡೆಯಲು ಅರ್ಕರಿರುತ್ತಾರೆ.
(iii) ‘A ಎಂಬುವವನಿಗೆ ಒಂದು ಸ್ಥಿರಾಸ್ತಿಯನ್ನು ಏಳು ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದ್ದು, ಅದರ ಅವಧಿಯು ಮುಕ್ತಾಯಗೊಂ೦ಡಿರುತ್ತದೆ ಮತ್ತು ‘A’ ಯು ವಿಸ್ತರಣೆ ಪಡೆಯದೇ ಅನಧಿಕೃತವಾಗಿ ಅಧಿಭೋಗವನ್ನು ಮುಂದುವರಿಸಿರುತ್ತಾರೆ. ಆಗ, ‘A’ ಎಂಬುವವನಿಗೆ ಈ ನಿಯಮಗಳ ಅಧಿಸೂಚನೆಯ ದಿನಾಂಕದಿಂದ ಮುಂದಿನ ಏಳು ವರ್ಷಗಳವರೆಗೆ ಇನ್ನೊಮ್ಮೆ ವಿಸ್ತರಣೆ ಪಡೆಯಲು ಅರ್ಕರಾಗಿರುತ್ತಾನೆ.
(6) ಪ್ರಸ್ತುತ ಚಾಲ್ತಿಯಲ್ಲಿರುವ ಗುತ್ತಿಗೆಯು ಮೂವತ್ತು ವರ್ಷಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿದ್ದರೆ, ಸರ್ಕಾರದ ಪೂರ್ವಾನುಮತಿ ಪಡೆದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮೂವತ್ತು ವರ್ಷಗಳ ಅವಧಿ ಮೀರದಂತೆ ಗುತ್ತಿಗೆಯನ್ನು ಇನ್ನೊಮ್ಮೆ ನವೀಕರಿಸಬಹುದು.
(7 ಗುತ್ತಿಗೆ ಅವಧಿ ಅಥವಾ ವಿಸ್ತರಿಸಿದ ಗುತ್ತಿಗೆ ಅವಧಿ ಏನಾದರೂ ಇದ್ದರೆ, ಅವುಗಳನ್ನು ಮುಕ್ತಾಯವಾದ ಕೂಡಲೇ ಸ್ಥಿರಾಸ್ತಿಯು ಯಣಭಾರ ಮುಕ್ತವಾಗಿ ತನ್ನಿಂತಾನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿಹಿತವಾಗತಕ್ಕದ್ದು.
(8) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಮಿರಾಸ್ತಿಗಳ ಗುತ್ತಿಗೆಯನ್ನು TR, ಕಾಯ್ದಿರಿಸಿದ ಒಂದು ಬಾರಿ ಠೇವಣಿ ಇರಿಸಿದ,-
(i) ರಾಜ್ಯ ಸರ್ಕಾರಕ್ಕೆ;
(1). ಕೇಂದ್ರ ಸರ್ಕಾರಕ್ಕೆ;
(iii) = ವಯೋವೃದ್ಧರು ಅಥವಾ ನಿರಾಶಿತರು. ಅಥವಾ ವಿಶೇಷಚೇತನ ವ್ಯಕ್ತಿಗಳಿಗಾಗಿ ನಿರ್ಮಿಸಲಾದ ಲಾಭರಹಿತ ಗೃಹ/ ಆಶ್ರಮಗಳಿಗೆ;
(iv) ಧಾರ್ಮಿಕ ಉದ್ದೇಶಗಳಿಗೆ ಅಥವಾ ಮರಗಳಿಗೆ ಮತ್ತು ಶಿಕ್ಷಣ ಮತ್ತು ಆರೋಗ್ಯ ಉದ್ದೇಶಗಳಿಗಾಗಿ ಲಾಭರಹಿತ ಸಂಸ್ಥೆಗಳಿಗೆ; ಮತ್ತು
(v) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸರ್ಕಾರದ ಪೂರ್ವಾನುಮೋದನೆ ಪಡೆದು ತೀರ್ಮಾನಿಸಬಹುದಾದಂಥ ಇತರೆ ಪ್ರವರ್ಗ ಅಥವಾ ವ್ಯಕ್ತಿಗಳ ವರ್ಗಕ್ಕೆ - ಮಾತ್ರ ನೀಡಬಹುದು.
ಪರಂತು, ರಾಜ್ಯ ಸರ್ಕಾರವು ಸಾರ್ವಜನಿಕ ಹಿತದೃಷ್ಟಿಯಿಂದ ಭಾಗಶಃವಾಗಿಯಾಗಲಿ, ಪೂರ್ಣವಾಗಿಯಾಗಲಿ, ಅನ್ವ್ಪಯವಾಗಬಹುದಾದ ಒಂದು ಬಾರಿ ಠೇವಣಿ. ಹಾಗೂ ಅನ್ವಯವಾಗಬಹುದಾದ ಮಾಸಿಕ ಬಾಡಿಗೆ ಅಥವಾ ಗುತ್ತಿಗೆ ಮೊತ್ತದ ಮೇಲೆ ರಿಯಾಯಿತಿಯನ್ನು ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿರುತ್ತದೆ.
(9) ಈ ನಿಯಮಗಳ ಅಡಿಯಲ್ಲಿ ಗುತ್ತಿಗೆ ವಿಸ್ತರಣೆಯ ಸಂದರ್ಭದಲ್ಲಿ, ಗುತ್ತಿಗೆದಾರನು ವಿಸ್ತರಣೆಯನ್ನು ಪಡೆಯಲು ಬಡ್ಡಿರಹಿತವಾದ ಠೇವಣಿಯ ರೂಪದಲ್ಲಿ ಕನಿಷ್ಠ ಕಾಯ್ದಿರಿಸಿದ ಒಂದು ಬಾರಿ ಠೇವಣಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಡತಕ್ಕದ್ದು.
(10 ಪ್ರತಿಯೊಂದು ಇತರೆ ಪ್ರಕರಣದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇ- ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮುಖಾಂತರ ಸಾರ್ವಜನಿಕ ಟೆಂಡರ್ ಅಥವಾ ಹರಾಜನ್ನು ಆಧಾರಿಸಿ, ಯಶಸ್ವಿ ಬಿಡ್ನುದಾರನು ಬಡ್ಡಿರಹಿತ ಠೇವಣಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇರಿಸಿದ ಮೇಲೆ ತನ್ನ ಸ್ಮಿರಾಸ್ತಿಗಳ ಗುತ್ತಿಗೆಯನ್ನು ನೀಡತಕ್ಕದ್ದು ಮತ್ತು ಗುತ್ತಿಗೆದಾರರು ಪಾವತಿಸಬೇಕಾದ ಮಾಸಿಕ ಬಾಡಿಗೆಯನ್ನು ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕದಿಂದ ಅಥವಾ ಈ ನಿಯಮಗಳ ಅಧಿಸೂಚನೆಯ ದಿನಾಂಕದಿಂದ ಯಾವುದು ನಂತರವೋ ಆ ದಿನಾಂಕದಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಶೇಕಡ ೧೦ರಷ್ಟು ಮಾಸಿಕ ಬಾಡಿಗೆ ಹೆಚ್ಚಿಸುವ ಷರತ್ತಿಗೆ ಒಳಪಟ್ಟೆರುತ್ತದೆ.
ಪರಂತು, ಯಾವುದೇ ಅಸ್ತಿತ್ವದಲ್ಲಿರುವ ಗುತ್ತಿಗೆಗಳು ಚಾಲ್ತಿಯಲ್ಲಿರುವ ಒಪ್ಪಂದಗಳ ನಿಬಂಧನೆ ಮತ್ತು ಷರತ್ತುಗಳ ಪ್ರಕಾರ ಕಾರ್ಯಾಚರಣೆಯಲ್ಲಿರುವುದು ಮುಂದುವರೆಯತಕ್ಕದ್ದು ಹಾಗೂ ಅದನ್ನು ಉಳಿಸಿಕೊಳ್ಳಲಾಗುತ್ತದೆ.
(11) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ಮಿರಾಸ್ತಿಯ ಯಾವುದೇ ಅನಧಿಕೃತ ಅನುಭೋಗವನ್ನು ಕರ್ನಾಟಕ ಸಾರ್ವಜವಿಕ ಆವರಣಗಳ (ಅನಧಿಕೃತ ಅನುಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974 ರ ಉಪಬಂ೦ಧಗಳಿಗನುಸಾರವಾಗಿ ತೆರವುಗೊಳಿಸತಕ್ಕದ್ದು.