(1) ಟಿಂಡರು ಅಥವಾ ಹರಾಜಿನ ಅವಧಿಯಲ್ಲಿ ಯಾವುದೇ ಆಸ್ತಿಗಳಿಗೆ ಸಂಬಂಧಿಸಿದಂತೆ ಯಶಸ್ವಿ ಬಿಡ್ ಅನ್ನು ನೀಡಲು ವಿಫಲವಾದ ಸಂದರ್ಭದಲ್ಲಿ, ಅಂತಹ ಆಸ್ತಿಗಳ ಟೆಂಡರು ಅಥವಾ ಹರಾಜನ್ನು, ಮೊದಲ ಬಹಿರಂಗ ಟಿಂಡರು ಅಥವಾ ಹರಾಜಿನ ಸಮಯದಲ್ಲಿ ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳೂಂದಿಗೆ, ಸೂಕ್ತ ನೋಟೀಸು ಮತ್ತು ಪ್ರಚಾರದೊಂದಿಗೆ ಎರಡನೇ ಬಾರಿಗೆ ಹರಾಜು ಪ್ರಕ್ರಿಯೆಯನ್ನು ನಡೆಸತಕ್ಕದ್ದು.
(2) ಎರಡನೇ ಬಾರಿ ಟಿಂಡರು ಅಥವಾ ಹರಾಜಿನ ಸಮಯದಲ್ಲಿ ಯಾವುದೇ ಆಸ್ತಿಗಳಿಗೆ ಸಂಬಂಧಿಸಿದಂತೆ ಯಾವುದೇ ಯಶಸ್ವಿ ಬಿಡ್ ಅನ್ನು ಪಡೆಯಲು ವಿಫಲವಾದ ಸಂದರ್ಭದಲ್ಲಿ, ಆ ಸ್ವತ್ತಿನ ಕನಿಷ್ಠ ಮರುಪಾವತಿಸಬಹುದಾದ ಒಂದು ಬಾರಿ ಠೇವಣಿ (ಓಟಿಡಿ) ಮೊತ್ತದೊಂದಿಗೆ ಮತ್ತು ಟಿಂಡರು ಹಾಗೂ ಹರಾಜಿನಲ್ಲಿ ನಿಗದಿಪಡಿಸಿದ BAIR, ಬೆಲೆಯು, ಮೊದಲನೇ ಬಾರಿಯ ಬಹಿರಂಗ ಟಿಂಡರು ಅಥವಾ ಹರಾಜಿನ ಅವಧಿಯಲ್ಲಿ ಸಂಬಂಧಪಟ್ಗ್ನ ಆಸ್ತಿಗೆ ಸಂಬಂಧಿಸಿದ ಟಿಂಡರು ಅಥವಾ ಹರಾಜಿನ ನಿಗದಿತ ಕನಿಷ್ಠ ಬೆಲೆಯ ಶೇ. 90ರಷ್ಟನ್ನು ವಿಗದಿಪಡಿಸಿ, ಅಂತಹ ಆಸ್ತಿಗಳ ಟೆಂಡರು ಅಥವಾ ಹರಾಜನ್ನು, ಸೂಕ್ತ ನೋಟೀಸು ನೀಡಿ ಮತ್ತು ಪ್ರಚಾರದೊಂದಿಗೆ ಮೂರನೇ ಬಾರಿಗೆ ಹರಾಜು ಪ್ರಕ್ರಿಯೆಯನ್ನು ನಡೆಸತಕ್ಕದ್ದು.
(3) ಮೂರನೇ ಬಾರಿ ಟಿಂಡರು ಅಥವಾ ಹರಾಜಿನ ಸಮಯದಲ್ಲಿ ಯಾವುದೇ ಆಸ್ತಿಗಳಿಗೆ ಸಂಬಂಧಿಸಿದಂತೆ ಯಾವುದೇ ಯಶಸ್ವಿ ಬಿಡ್ ಅನ್ನು ಪಡೆಯಲು ವಿಫಲವಾದ ಸಂದರ್ಭದಲ್ಲಿ, ಆ ಸ್ವತ್ತಿನ ಕನಿಷ್ಠ ಮರುಪಾವತಿಸಬಹುದಾದ ಒಂದು ಬಾರಿ ಠೇವಣಿ (ಓಟಿಡಿ) ಮೊತ್ತದೊಂದಿಗೆ ಮತ್ತು ಟಿಂಡರು ಹಾಗೂ ಹರಾಜಿನಲ್ಲಿ ನಿಗದಿಪಡಿಸಿದ ಕನಿಷ್ಠ ಬೆಲೆಯು, ಮೊದಲನೇ ಬಾರಿಯ ಬಹಿರಂಗ ಟಿಂಡರು ಅಥವಾ ಹರಾಜಿನ ಅವಧಿಯಲ್ಲಿ ಸಂಬಂಧಪಟ್ಗ್ನ ಆಸ್ತಿಗೆ ಸಂಬಂಧಿಸಿದ ಟಿಂಡರು ಅಥವಾ ಹರಾಜಿನ ನಿಗದಿತ ಕನಿಷ್ಠ ಬೆಲೆಯ ಶೇ. 80ರಷ್ಟನ್ನು ವಿಗದಿಪಡಿಸಿ, ಅಂತಹ ಆಸ್ತಿಗಳ ಟೆಂಡರು ಅಥವಾ ಹರಾಜನ್ನು, ಸೂಕ್ತ ನೋಟೀಸು ನೀಡಿ ಮತ್ತು ಪ್ರಚಾರದೊಂ೦ದಿಗೆ ನಾಲ್ಕನೇ ಬಾರಿಗೆ ಹರಾಜು ಪ್ರಕ್ರಿಯೆಯನ್ನು ನಡೆಸತಕ್ಕದ್ದು.
(4) ಆದಾಗ್ಯೂ, ನಾಲ್ಕನೇ ಬಾರಿಯ ಟಿಂಡರು ಅಥವಾ ಹರಾಜಿನಲ್ಲಿಯೂ ಸಹ, ಟಿಂಡರ್ ಅಥವಾ ಹರಾಜು ವಿಫಲವಾದಲ್ಲಿ, ಸದರಿ ವಿಷಯವನ್ನು, ಮುಖ್ಯ ಆಯುಕರಿಗೆ ಸೂಕ್ತ ವಿವರಣೆಗಳೂಂದಿಗೆ ವರದಿ ಮಾಡತಕ್ಕದ್ದು ಮತ್ತು ಮುಂದಿನ ನಿರ್ಧಾರವನ್ನು ಮುಖ್ಯ ಆಯುಕ್ತರು ತೆಗೆದುಕೊಳ್ಳತಕ್ಕದ್ದು.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297