ಸದರಿ ನಿಯಮಗಳ XXIV ನೇ ಅನುಸೂಚಿಯ ತರುವಾಯ, ಈ ಕೆಳಕಂಡದ್ದನ್ನು ಇಪ್ಪತ್ತಾರನೇ ಮಾರ್ಚ್, 2012 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ ಎಂದು ಭಾವಿಸತಕ್ಕದ್ದು, ಎಂದರೆ:-
[ಅನುಸೂಚಿ XXV]
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ
ಎ. ಅಲ್ಪಸಂಖ್ಯಾತರ ಕಲ್ಯಾಣ 1. ಭಾಷಾ ಅಲ್ಪಸಂಖ್ಯಾತರುಗಳಿಗೆ ಸಂಬಂಧಪಟ್ಟ ವಿಷಯಗಳು. 2. ಧಾರ್ಮಿಕ ಅಲ್ಪಸಂಖ್ಯಾತರುಗಳಿಗೆ ಸಂಬಂಧಪಟ್ಟ ವಿಷಯಗಳು. 3. ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ಸಂಬಂಧಪಟ್ಟ ವಿಷಯಗಳು. 4. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಸಂಬಂಧಪಟ್ಟ ವಿಷಯಗಳು. 5. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ, 1994 (1994 ರ ಕರ್ನಾಟಕ ಅಧಿನಿಯಮ 31) ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳು. ಬಿ. ಹಜ್ ಮತ್ತು ವಕ್ಫ್ 1. ವಕ್ಫ್ ಮತ್ತು ಹಜ್ ಸಮಿತಿ.
ಸಿ. ಸಾಹಿತ್ಯಿಕ ಮತ್ತು ಸಂಸ್ಕೃತಿಕ ಅಭಿವೃದ್ಧಿಗಾಗಿ ಅಕಾಡೆಮಿ 1. ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ
ಡಿ. ಸಂಹಿತೆಗಳು ಮತ್ತು ಕೈಪಿಡಿಗಳು 1. ಇದರ ಆಡಳಿತ ನಿಯಂತ್ರಣದಲ್ಲಿರುವ ಇಲಾಖೆಗಳಿಗೆ ಸಂಬಂಧಿಸಿದ ಸಂಹಿತೆಗಳು ಮತ್ತು ಕೈಪಿಡಿಗಳನ್ನು ಸಿದ್ದಪಡಿಸುವುದು.
ಇ. ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಾತಿಗಳು 1. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಸೇವೆಗಳು ಮತ್ತು ಹುದ್ದೆಗಳಿಗೆ ಸಂಬಂಧಿಸಿದ ನೌಕರಿ ಭರ್ತಿ ನಿಯಮಗಳು. 2. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಅಡಿಯಲ್ಲಿ ಬರುವವರನ್ನು ಹೊರತುಪಡಿಸಿ, ಇದರ ಆಡಳಿತ ನಿಯಂತ್ರಣದಲ್ಲಿರುವ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೇಮಕಾತಿಗಳು, ಸ್ಥಳ ನಿಯುಕ್ತಿಗಳು, ವರ್ಗಾವಣೆಗಳು, ರಜೆ ಮೊದಲಾದವುಗಳು”.