ಸದರಿ ನಿಯಮಗಳ XIXಎ ಅನುಸೂಚಿಯಲ್ಲಿ, “ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ” ಎಂಬ ಶೀರ್ಷಿಕೆ ಅಡಿಯಲ್ಲಿ, “,ವಾರ್ತಾ ಮತ್ತು ಪ್ರವಾಸೋದ್ಯಮ” ಎಂಬ ವಿರಾಮ ಚಿಹ್ನೆ ಮತ್ತು ಪದಗಳಿಗೆ ಬದಲಿಯಾಗಿ “ಮತ್ತು ವಾರ್ತಾ” ಎಂಬ ಪದಗಳನ್ನು ಹದಿನಾಲ್ಕನೆಯ ಅಕ್ಟೋಬರ್, 2011 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು.
(i) ಹಾಗೇ ಪ್ರತಿಯೋಜಿಸಲಾದ ಶೀರ್ಷಿಕೆಯನ್ನು ಹಾಗೂ ಎಚ್. ಪ್ರವಾಸೋದ್ಯಮ” ಎಂಬ ಉಪ-ಶೀರ್ಷಿಕೆಯನ್ನು ಮತ್ತು ಅದರ ಅಡಿಯಲ್ಲಿ ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಹದಿನಾಲ್ಕನೇ ಅಕ್ಟೋಬರ್, 2011ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆಯೆಂದು ಭಾವಿಸತಕ್ಕದ್ದು.
(ii) “ಜೆ. ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಾತಿಗಳು” ಎಂಬ ಉಪ-ಶೀರ್ಷಿಕೆಯಲ್ಲಿ, (1)ನೇ ಖಂಡದಲ್ಲಿ, “,ವಾರ್ತಾ ಮತ್ತು ಪ್ರವಾಸೋದ್ಯಮ” ಎಂಬ ವಿರಾಮ ಚಿಹ್ನೆ ಮತ್ತು ಪದಗಳಿಗೆ ಬದಲಿಯಾಗಿ “ಮತ್ತು ವಾರ್ತಾ” ಎಂಬ ಪದಗಳನ್ನು ಹದಿನಾಲ್ಕನೇ ಅಕ್ಟೋಬರ್, 2011 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು.