(1) ಸದರಿ ನಿಯಮಗಳ XVI ಬಿ ಅನುಸೂಚಿಯಲ್ಲಿ, “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ” ಎಂಬ ಶೀರ್ಷಿಕೆಯ ಅಡಿಯಲ್ಲಿ,-
(i) “ಎ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ” ಎಂಬ ಉಪ-ಶೀರ್ಷಿಕೆಯ ಅಡಿಯಲ್ಲಿ 11ನೇ ಬಾಬು ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳಿಗೆ, ಈ ಕೆಳಕಂಡದ್ದನ್ನು ಹದಿನೇಳನೆಯ ಮೇ, 2011 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು. ಎಂದರೆ:-
“11. ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ನಿರ್ದೇಶನಾಲಯಕ್ಕೆ ಸಂಬಂಧಪಟ್ಟ ವಿಷಯಗಳು”.
(ii) “ಎಎ. ವಯೋವೃದ್ಧ ವ್ಯಕ್ತಿಗಳು/ ಹಿರಿಯ ನಾಗರೀಕರು” ಎಂಬ ಉಪ-ಶೀರ್ಷಿಕೆಯನ್ನು ಮತ್ತು ಅದಕ್ಕೆ ಸಂಬಂಧಪಟ್ಟ ನಮೂದುಗಳನ್ನು ಹದಿನೇಳನೆಯ ಮೇ, 2011 ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ ಎಂದು ಭಾವಿಸತಕ್ಕದ್ದು.
(2) “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ” ಎಂಬ ಶೀರ್ಷಿಕೆಯ ಬದಲಿಯಾಗಿ “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ” ಎಂಬ ಶೀರ್ಷಿಕೆಯನ್ನು ಎರಡನೇ ಜೂನ್, 2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು.
(3) 1ನೇ ಬಾಬುವಿನಲ್ಲಿ “ಸಿ ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಾತಿಗಳು” ಎಂಬ ಉಪ-ಶೀರ್ಷಿಕೆಯ ಅಡಿಯಲ್ಲಿ, “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ” ಎಂಬ ಪದಗಳಿಗೆ ಬದಲಿಯಾಗಿ, “ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ” ಎಂಬ ಪದಗಳನ್ನು ಎರಡನೇ ಜೂನ್, 2012 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆಯೆಂದು ಭಾವಿಸತಕ್ಕದ್ದು.