ಸದರಿ ನಿಯಮಗಳ XIX ಎ ಅನುಸೂಚಿಯ ತರುವಾಯ, ಹದಿನಾಲ್ಕನೇ ಅಕ್ಟೋಬರ್, 2011 ರಿಂದ ಜಾರಿಗೆ ಬರುವಂತೆ ಈ ಕೆಳಕಂಡದ್ದನ್ನು ಸೇರಿಸಲಾಗಿದೆಯೆಂದು ಭಾವಿಸತಕ್ಕದ್ದು.
[ಅನುಸೂಚಿ XIX- ಬಿ]
ಪ್ರವಾಸೋದ್ಯಮ ಇಲಾಖೆ
ಎ. ಪ್ರವಾಸೋದ್ಯಮ 1. ಪ್ರವಾಸೋದ್ಯಮ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ. 2. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ. ಬಿ. ಸಂಹಿತೆಗಳು ಮತ್ತು ಕೈಪಿಡಿಗಳು 1. ಇದರ ಆಡಳಿತ ನಿಯಂತ್ರಣದಲ್ಲಿರುವ ಇಲಾಖೆಗಳಿಗೆ ಸಂಬಂಧಿಸಿದ ಸಂಹಿತೆಗಳು ಮತ್ತು ಕೈಪಿಡಿಗಳ ಸಿದ್ಧತೆ ಮಾಡುವುದು.
ಸಿ. ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಾತಿಗಳು 1. ಪ್ರವಾಸೋದ್ಯಮ ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಸೇವೆಗಳು ಮತ್ತು ಹುದ್ದೆಗಳಿಗೆ ಸಂಬಂಧಪಟ್ಟ ನೌಕರಿ ಭರ್ತಿ ನಿಯಮಗಳು. 2. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಅಡಿಯಲ್ಲಿ ಬರುವವರನ್ನು ಹೊರತುಪಡಿಸಿ, ಪ್ರವಾಸೋದ್ಯಮ ಇಲಾಖೆಯ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ನೇಮಕಾತಿಗಳು, ಸ್ಥಳ ನಿಯುಕ್ತಿಗಳು, ವರ್ಗಾವಣೆಗಳು, ರಜೆ ಮುಂತಾದವುಗಳು.”
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಡಾ|| ಮಂಗಳ ಜಿ.ಎಸ್.
ಸರ್ಕಾರದ ಅಧೀನಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ.
(ಸೇವಾ ನಿಯಮಗಳು-1)