(1) ಈ ಅಧ್ಯಾದೇಶವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧ್ಯಾದೇಶ, 2009 ಎಂದು ಕರೆಯತಕ್ಕದ್ದು.
(2) ಇದು 22ನೇ ನವೆಂಬರ್ 2008 ರಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧ್ಯಾದೇಶ, 2009, Agriculture Department
2009 · PDF page 3
Hover any section to copy its link or text, ask Copilot about it, or bookmark it.
ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(1) "ವಿದ್ಯಾವಿಷಯಕ ಪರಿಷತ್ತು (ಅಕಾಡಮಿಕ್ ಕೌನ್ಸಿಲ್)" ಎಂದರೆ, ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತು.
(2) "ಸಂಯೋಜಿತ ಕಾಲೇಜು" ಎಂದರೆ, ವಿಶ್ವವಿದ್ಯಾಲಯದ ಅಧಿಕಾರ ಕ್ಷೇತ್ರದಲ್ಲಿ ಬರುವ ಮತ್ತು ನಿಯಮಿಸಲಾದ ಶಾಸನಗಳಿಗೆ ಅನುಸಾರವಾಗಿ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡ ಹಾಗೂ ವಿಶ್ವವಿದ್ಯಾಲಯದ ಪದವಿಗಳು, ಡಿಪ್ಲೋಮಾಗಳು ಅಥವಾ ಇತರ ಶೈಕ್ಷಣಿಕ ಪ್ರಶಸ್ತಿಗಳಿಗಾಗಿ ನಡೆಸುವ ಪರೀಕ್ಷೆಗಳಿಗೆ ಪ್ರವೇಶ ಪಡೆಯಲು ಅವಶ್ಯವಾದ ವ್ಯಾಸಂಗ ಕ್ರಮವನ್ನು ಒದಗಿಸುವ ಒಂದು ಕಾಲೇಜು ಅಥವಾ ಒಂದು ಸಂಸ್ಥೆ.
(3) "ಕೃಷಿ" ಎಂಬುದು,
(ಎ) ಪ್ರಾಕೃತಿಕ ಸಂಪನ್ಮೂಲ ನಿರ್ವಹಣೆ.
(ಬಿ) ಭೂಸಾರ ಮತ್ತು ಜಲನಿಧಿ ನಿರ್ವಹಣೆ.
(ಸಿ) ಬೆಳೆ ಉತ್ಪಾದನೆ ಮತ್ತು ಸಂರಕ್ಷಣೆಯು ಸೇರಿದಂತೆ ಬೆಳೆ ಸುಧಾರಣೆ.
(ಡಿ) ತೋಟಗಾರಿಕೆ ಹಣ್ಣುಗಳು, ತರಕಾರಿಗಳು, ಪುಷ್ಪಕೃಷಿ, ಸಾಂಬಾರ ಪದಾರ್ಥಗಳು, ಔಷಧೀಯ ಸಸ್ಯಗಳು, ಸುಗಂಧ ಸಸ್ಯಗಳು ಮತ್ತು ನೆಡುತೋಪು ಬೆಳೆಗಳನ್ನು ಬೆಳೆಯುವುದು.
(ಇ) ಕೋಳಿ ಸಾಕಾಣಿಕೆ ಸೇರಿದಂತೆ ಪಶುವೈದ್ಯ ಮತ್ತು ಪ್ರಾಣಿ ವಿಜ್ಞಾನಗಳು.
(ಎಫ್) ಹೈನುಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ.
(ಜಿ) ಮೀನು ಕೃಷಿ ಮತ್ತು ಮೀನುಗಾರಿಕೆ ನಿರ್ವಹಣೆ.
(ಎಚ್) ವನ ವಿಜ್ಞಾನ, ಫಾರಂ ವನ ವಿಜ್ಞಾನ, ಅರಣ್ಯ ಮತ್ತು ವನ್ಯಜೀವಿ ನಿರ್ವಹಣೆ ಹಾಗೂ ವೃಕ್ಷ ಕೃಷಿ.
(ಐ) ಕೃಷಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ.
(ಜೆ) ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ.
(ಕೆ) ವ್ಯವಸಾಯೋತ್ಪನ್ನ ಮಾರಾಟ ಹಾಗೂ ಸಹಕಾರ ಮತ್ತು ಕೃಷಿ ವ್ಯವಹಾರ ನಿರ್ವಹಣೆ.
(ಎಲ್) ಕೃಷಿಗೆ ಸಂಬಂಧಿಸಿದ ಮೂಲಭೂತ ವಿಜ್ಞಾನಗಳು ಮತ್ತು ಮಾನವಿಕ ಶಾಸ್ತ್ರಗಳು.
(ಎಂ) ಕೃಷಿ ಜೈವಿಕ ತಂತ್ರಜ್ಞಾನ.
(ಎನ್) ವ್ಯವಸಾಯೋತ್ಪನ್ನದ ಸಂಸ್ಕರಣೆಯು ಸೇರಿದಂತೆ ಸುಗ್ಗಿ ತರುವಾಯದ ತಂತ್ರಜ್ಞಾನಗಳು.
(ಒ) ಭೂಬಳಕೆ ಯೋಜನೆ ಮತ್ತು ನಿರ್ವಹಣೆ.
(ಪಿ) ಉಪ್ಪುನೇರಳೆ ಕೃಷಿಯೂ ಸೇರಿದಂತೆ ರೇಷ್ಮೆ ವ್ಯವಸಾಯ.
(ಕ್ಯೂ) ಜೇನು ಸಾಕಾಣಿಕೆ.
(ಆರ್) ಗೃಹ ವಿಜ್ಞಾನ.
(ಎಸ್) ಕೃಷಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ.
(ಟಿ) ಕೃಷಿ ಅರ್ಥ ಶಾಸ್ತ್ರ ; ಹಾಗೂ
(ಯು) ಬೇಸಾಯ ಜಮೀನುಗಳ ಬಳಕೆ ಯೋಜನೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಯಾವುದೇ ಇತರ ವಿಷಯ.
(5) "ಪ್ರಾಧಿಕಾರ" ಎಂದರೆ, 11ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದಂಥ ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರ.
(6) "ಮಂಡಳಿ" ಎಂದರೆ, ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ.
(7) "ಅಧ್ಯಯನ ಮಂಡಳಿ" ಎಂದರೆ, ಫ್ಯಾಕಲ್ಟಿ ಹಂತದಲ್ಲಿ ವಿದ್ಯಾ ವ್ಯವಹಾರಗಳ ಸಮಿತಿ.
(8) "ಕಾಲೇಜು" ಎಂದರೆ, ವಿಶ್ವವಿದ್ಯಾಲಯದ ನೇರ ನಿಯಂತ್ರಣದಲ್ಲಿರುವ ಮತ್ತು ವ್ಯವಸ್ಥಾಪನೆಯ ಅಡಿಯಲ್ಲಿ ಬರುವ ಕೇಂದ್ರ ಕಾರ್ಯಸ್ಥಾನದಲ್ಲಿರುವ, ಕ್ಯಾಂಪಸ್ನಲ್ಲಿರುವ ಅಥವಾ ಇತರೆಡೆ ಇರುವ ಘಟಕ ಕಾಲೇಜು;
(9) "ಕುಲಾಧಿಪತಿ" ಎಂದರೆ, ವಿಶ್ವವಿದ್ಯಾಲಯದ ಕುಲಾಧಿಪತಿ;
(10) "ಲೆಕ್ಕ ನಿಯಂತ್ರಕ" ಎಂದರೆ, ವಿಶ್ವವಿದ್ಯಾಲಯದ ಲೆಕ್ಕ ನಿಯಂತ್ರಕರು;
(11) "ಡೀನ್" ಎಂದರೆ, ವಿಶ್ವವಿದ್ಯಾಲಯದ ಘಟಕ ಕಾಲೇಜಿನ ಅಥವಾ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರು;
(12) "ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್" ಎಂದರೆ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ, ಸಲಹೆ ನೀಡಿಕೆ ಮತ್ತು ವಿದ್ಯಾರ್ಥಿಗಳ ಉದ್ಯೋಗ ನಿಯೋಜನೆಯ ಡೀನ್;
(13) "ನಿರ್ದೇಶಕ" ಎಂದರೆ, ವಿದ್ಯಾ ನಿರ್ದೇಶಕರು, ಸಂಶೋಧನಾ ನಿರ್ದೇಶಕರು ಮತ್ತು ವಿಸ್ತರಣಾ ನಿರ್ದೇಶಕರು;
(14) "ವಿಸ್ತರಣಾ ಪರಿಷತ್ತು" ಎಂದರೆ, ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ಪರಿಷತ್ತು;
(15) "ಫ್ಯಾಕಲ್ಟಿ" ಎಂದರೆ, ಈ ಅಧ್ಯಾದೇಶದಲ್ಲಿ ಮತ್ತು ಶಾಸನಗಳಲ್ಲಿ ನಿರ್ದಿಷ್ಟಪಡಿಸಿದ ವಿಶ್ವವಿದ್ಯಾಲಯದ ಫ್ಯಾಕಲ್ಟಿ.
(16) "ವಿಭಾಗದ ಮುಖ್ಯಸ್ಥರು" ಎಂದರೆ, ವಿಶ್ವವಿದ್ಯಾಲಯದ ಮತ್ತು ಘಟಕ ಕಾಲೇಜುಗಳ ವಿಭಾಗ ಮುಖ್ಯಸ್ಥರು'
(17) ‘‘ವಿದ್ಯಾರ್ಥಿನಿಲಯ'' ಎಂದರೆ, ವಿಶ್ವವಿದ್ಯಾಲಯವು ನಿರ್ವಹಿಸುತ್ತಿರುವ ಅಥವಾ ವಿಶ್ವವಿದ್ಯಾಲಯದ ಒಂದು ಭಾಗವಾಗಿ ಅಥವಾ ಪ್ರತ್ಯೇಕವಾಗಿ ನಿರ್ವಹಿಸಿಕೊಂಡು ಬಂದ ಮತ್ತು ವಿಶ್ವವಿದ್ಯಾಲಯವು ಮನ್ನಣೆ ನೀಡಿದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಇರುವ ವಾಸಸ್ಥಳ;
(18) "ಅಧಿಕಾರಿ" ಎಂದರೆ, ಪರಿನಿಯಮಗಳಲ್ಲಿ ಅಥವಾ ಶಾಸನಗಳಲ್ಲಿ ನಿರ್ದಿಷ್ಟವಾಗಿ ಹೇಳಿರುವ ವಿಶ್ವವಿದ್ಯಾಲಯದ ಅಧಿಕಾರಿ;
(19) ‘‘ನಿಯಮಿಸಲಾದುದು'' ಎಂದರೆ, ವಿಶ್ವವಿದ್ಯಾಲಯದ ಶಾಸನಗಳಿಂದ ನಿಯಮಿಸಲಾದುದು;
(20) "ಕುಲಸಚಿವ" ಎಂದರೆ, ವಿಶ್ವವಿದ್ಯಾಲಯದ ಕುಲಸಚಿವ;
(21) ‘‘ವಿನಿಯಮಗಳು'' ಎಂದರೆ, 54ನೇ ಪ್ರಕರಣದ ಅಡಿಯಲ್ಲಿ ರಚಿಸಲಾದ ವಿನಿಯಮಗಳು;
(22) "ಸಂಶೋಧನಾ ಪರಿಷತ್ತು" ಎಂದರೆ, ವಿಶ್ವವಿದ್ಯಾನಿಲಯದ ಸಂಶೋಧನಾ ಪರಿಷತ್ತು;
(23) "ಶಾಸನಗಳು" ಎಂದರೆ, ಈ ಅಧ್ಯಾದೇಶದ ಅಡಿಯಲ್ಲಿ ರಚಿಸಲಾದ ನೀತಿಗಳು, ಕಾರ್ಯವಿಧಾನಗಳು ಮುಂತಾದ ಅಂಶಗಳನ್ನು ಕುರಿತು ರಚಿಸಲಾದ ವಿಶ್ವವಿದ್ಯಾಲಯದ ಶಾಸನಗಳು;
(24) "ವಿದ್ಯಾರ್ಥಿ" ಎಂದರೆ, ವಿಶ್ವವಿದ್ಯಾಲಯದಲ್ಲಿ ಕ್ರಮಬದ್ಧವಾಗಿ ಸ್ಥಾಪಿಸಲಾದ ಪದವಿ, ಡಿಪ್ಲೊಮಾ ಅಥವಾ ಇತರ ಶೈಕ್ಷಣಿಕ ಪ್ರಶಸ್ತಿಗಳನ್ನು ಪಡೆಯಲು ವ್ಯಾಸಂಗ ಕ್ರಮದಲ್ಲಿ ಅಧ್ಯಯನ ಮಾಡುವುದಕ್ಕಾಗಿ ವಿಶ್ವವಿದ್ಯಾಲಯದ ಘಟಕ ಕಾಲೇಜು ಮತ್ತು ಒಂದು ಸಂಯೋಜಿತ ಕಾಲೇಜಿನಲ್ಲಿ ಪ್ರವೇಶ ನೀಡಲಾಗಿರುವ ವಿದ್ಯಾರ್ಥಿಪಟ್ಟಿಯಲ್ಲಿ ಹೆಸರು ಸೇರಿಸಲಾಗಿರುವಂಥ ಒಬ್ಬ ವ್ಯಕ್ತಿ.
(25) "ಅಧ್ಯಾಪಕರು" ಎಂದರೆ, ಸಹಾಯಕ ಪ್ರಾಧ್ಯಾಪಕರ ದರ್ಜೆಗೆ ಕಡಿಮೆಯಿಲ್ಲದ ಬೋಧನೆ ನೀಡುವ ಅಥವಾ ಸಂಶೋಧನೆ ಮತ್ತು /ಅಥವಾ ವಿಸ್ತರಣಾ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವ ಮತ್ತು ಅದಕ್ಕೆ ಮಾರ್ಗದರ್ಶನ ನೀಡುವ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯದಿಂದ ನೇಮಕಗೊಂಡ ಅಥವಾ ಮಾನ್ಯತೆ ಪಡೆದ ಒಬ್ಬ ವ್ಯಕ್ತಿ ಮತ್ತು ಇದು ಅಧ್ಯಾಪಕನೆಂದು ಶಾಸನಗಳ ಮೂಲಕ ಘೋಷಿಸಲ್ಪಡಬಹುದಾದ ಇತರೆ ಯಾವುದೇ ವ್ಯಕ್ತಿಯನ್ನು ಒಳಗೊಳ್ಳಬಹುದು.
(26) "ತಂತ್ರಜ್ಞಾನ ವರ್ಗಾವಣೆ ಘಟಕಗಳು'" (ಟಿಓಟಿ) ಎಂದರೆ, ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ವಿಸ್ತರಣಾ ಶಿಕ್ಷಣ ಘಟಕಗಳು (ಇಇಯು), ಸಿಬ್ಬಂದಿ ತರಬೇತಿ ಘಟಕಗಳು (ಎಸ್ಟಿಯು), ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಎಚ್ಟಿಐಸಿ). ಬೇಕರಿ ತರಬೇತಿ ಘಟಕ (ಬಿಟಿಯು) ಮತ್ತು ವಿಶ್ವವಿದ್ಯಾಲಯವು ಸ್ಥಾಪಿಸಿದಂಥ ಇತರ ಕೇಂದ್ರಗಳು.
(27) ‘‘ವಿಶ್ವವಿದ್ಯಾಲಯ'' ಎಂದರೆ, 3ನೇ ಪ್ರಕರಣದ ಅಡಿಯಲ್ಲಿ ಸ್ಥಾಪಿತವಾದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ;
(28) "ಕುಲಪತಿ" ಎಂದರೆ, ವಿಶ್ವವಿದ್ಯಾಲಯದ ಕುಲಪತಿ.